ಸ್ಲೋ ಟ್ರಾಫಿಕ್ ವರದಿ ಫ್ಯಾಕ್ಟ್ ಚೆಕ್ : ಬೆಂಗಳೂರಿನಲ್ಲಿ10 ಕಿಮೀ ಪ್ರಯಾಣಕ್ಕೆ 60 ನಿಮಿಷ.!

ಬೆಂಗಳೂರು ಜಾಗತಿಕವಾಗಿ ಪ್ರಸಿದ್ದ ಪಡೆದ ನಗರ. ಆದರೆ ಇಲ್ಲಿನ ಟ್ರಾಫಿಕ್ ಸಮಸ್ಯೆಯು ಐಟಿ ನಗರಿಗೆ ಕಪು ಚುಕ್ಕಿ ಇಟ್ಟಂತೆ . ನಾವು ಸಾಮಾನ್ಯವಾಗಿ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ತೆರಳುವುದಾದರೆ ಕಿ.ಮೀ ಲೆಕ್ಕಾಚಾರ ಹಾಕುತ್ತೇವೆ. ಆದರೆ ಬೆಂಗಳೂರಿನಲ್ಲಿ ಮಾತ್ರ ಇತರ ನಗರಗಳಂತೆ ಕಿಲೋಮೀಟರ್‌ಗಳಲ್ಲಿ ಅಂತರವನ್ನು ಅಳೆಯುವುದಿಲ್ಲ. ಯಾಕೆಂದರೆ ಇಲ್ಲಿ ಪ್ರಯಾಣದ ಸಮಯವೇ ದೂರದ ಮಾಪನ.!

ಟಾಮ್‌ಟಾಮ್ ಟ್ರಾಫಿಕ್ ಇಂಡೆಕ್ಸ್‌ನ ಇತ್ತೀಚಿನ ವರದಿಯ ಪ್ರಕಾರ, ಬೆಂಗಳೂರಿನಲ್ಲಿ ಕೇವಲ 10 ಕಿಮೀ ಪ್ರಯಾಣಿಸಲು ಸರಾಸರಿ 34 ನಿಮಿಷ 10 ಸೆಕೆಂಡ್‌ಗಳು ಸಮಯ ಹೋಗುತ್ತದೆ. ಇದರಿಂದ ಬೆಂಗಳೂರು ವಿಶ್ವದ ಮೂರನೇ ನಿಧಾನಗತಿಯ ನಗರ ಎಂಬ ಹೇಳಿದೆ. ಆದರೆ ಬೆಂಗಳೂರಿನ ಜನರು ಈ ಶ್ರೇಯಾಂಕದ ಬಗ್ಗೆ ಭಿನ್ನಾಭಿಪ್ರಾಯವನ್ನು ಹೊಂದಿದ್ದಾರೆ.

ಫ್ಯಾಕ್ಟ್ ಚೆಕ್ : ಬೆಂಗಳೂರಿನಲ್ಲಿ10 ಕಿಮೀ ಪ್ರಯಾಣಕ್ಕೆ 60 ನಿಮಿಷ.!

ಬೆಂಗಳೂರು ಸಂಚಾರ ಪೊಲೀಸರು ಟಾಮ್‌ಟಾಮ್ ವರದಿಯನ್ನು "ಅವಾಸ್ತವಿಕ" ಎಂದು ತಳ್ಳಿಹಾಕಿದರೂ, ಮೊಬಿಲಿಟಿ ತಜ್ಞರು ಸರಾಸರಿ ಪ್ರಯಾಣ ಸಮಯವನ್ನು ಲೆಕ್ಕಾಚಾರ ಮಾಡಿದ ವಿಧಾನದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ಮತ್ತೊಂದೆಡೆ,ಪ್ರಯಾಣಿಕರು ಪ್ರತಿದಿನದ ಪ್ರಯಾಣವು 34 ನಿಮಿಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂದು ಹತಾಶರಾಗಿ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರಿಗೆ ಮೂರನೇ ಸ್ಥಾನ.!

ನೆದರ್ಲೆಂಡ್‌ನ ಲೋಕೇಷನ್ ಟೆಕ್ನಾಲಜಿಯ ಟಾಮ್ ಟಾಮ್ ಸಂಸ್ಥೆ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ನಿಧಾನಗತಿಯ ಸಂಚಾರ ಹೊಂದಿರುವ ನಗರಗಳ ಪಟ್ಟಿಯಲ್ಲಿ ವಿಶ್ವದಲ್ಲೇ ಬೆಂಗಳೂರು ಮೂರನೇ ಸ್ಥಾನದಲ್ಲಿದೆ. ಇಷ್ಟೇ ಅಲ್ಲದೇ ಬೆಂಗಳೂರಿನ ಸಂಚಾರ ದಟ್ಟಣೆ ಕುರಿತು ಹಲವು ಅಂಶಗಳನ್ನು ಉಲ್ಲೇಖಿಸಿದ್ದು ಬೆಂಗಳೂರಿನ ಜನರು ವರ್ಷದಲ್ಲಿ ಐದು ದಿನಗಳಷ್ಟು ಸಮಯವನ್ನು ಸಂಚಾರ ದಟ್ಟಣೆಯಲ್ಲೇ ಕಳೆಯುತ್ತಿದ್ದಾರೆ ಎಂದು ಎಂದು ಹೈಲೈಟ್ ಮಾಡಿದೆ.

ಟಾಮ್ ಸಂಸ್ಥೆಯ ವರದಿ ಬಹಿರಂಗವಾದ ಮೇಲೆ ರಾಜಧಾನಿಯಲ್ಲಿ ವಾಹನ ದಟ್ಟಣೆ ನಿಯಂತ್ರಣ ಮಾಡುವಲ್ಲಿಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಬಿಜೆಪಿ ಟೀಕಿಸಿತ್ತು. 'ಬೆಂಗಳೂರು ಅಂದ್ರೆ ಉದ್ಯಾನ ನಗರಿ ಎನ್ನುವ ಘನತೆ ಇತ್ತು. ಈಗ ವಾಹನ ದಟ್ಟಣೆಗೆ ಸಿಲುಕಿ ನರಳುವ ನಗರವಾಗಿದೆ' ಎಂದು ವ್ಯಂಗ್ಯವಾಡಿತ್ತು.

ಕೋಲ್ಕತ್ತಾ ಅತ್ಯಂತ ದಟ್ಟಣೆಯುಳ್ಳ ನಗರ

ಭಾರತದೊಳಗೆ, ಕೋಲ್ಕತ್ತಾ ಅತ್ಯಂತ ದಟ್ಟಣೆಯುಳ್ಳ ನಗರವಾಗಿ ಹೊರಹೊಮ್ಮಿದೆ, ಬೆಂಗಳೂರು ಎರಡನೇ ಅತಿ ದಟ್ಟಣೆಯುಳ್ಳ ನಗರವಾಗಿದೆ. 2023 ರಲ್ಲಿ, ಬೆಂಗಳೂರಿನಲ್ಲಿ 10 ಕಿಲೋಮೀಟರ್‌ಗಳ ಸರಾಸರಿ ಪ್ರಯಾಣದ ಸಮಯವು 28 ನಿಮಿಷ 10 ಸೆಕೆಂಡ್‌ಗಳಾಗಿತ್ತು, ಇದು ಕಾಲಾನಂತರದಲ್ಲಿ ನಿರಂತರವಾಗಿ ಹದಗೆಡುತ್ತಾ ಬಂದಿದೆ. 2022 ರಲ್ಲಿ ಕೋಲ್ಕತ್ತಾ ನಗರವು ವಿಶ್ವದ ಎರಡನೇ ನಿಧಾನವಾದ ನಗರವಾಗಿತ್ತು, ಸರಾಸರಿ ಪ್ರಯಾಣದ ಸಮಯವು 29 ನಿಮಿಷ 9 ಸೆಕೆಂಡ್‌ಗಳು ಮತ್ತು ಸರಾಸರಿ ವೇಗವು ಕೇವಲ 18 ಕಿಮೀ/ಗಂಟೆ.

ಜಾಗತಿಕವಾಗಿ ಲಂಡನ್ ದಟ್ಟಣೆ ಇನ್ನೂ ಹೆಚ್ಚು

ಜಾಗತಿಕವಾಗಿ, ಲಂಡನ್ ಅತ್ಯಂತ ದಟ್ಟಣೆಯುಳ್ಳ ನಗರವಾಗಿ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ, ಸರಾಸರಿ ವೇಗವು ಕೇವಲ 14 ಕಿಮೀ/ಗಂಟೆ. ಡಬ್ಲಿನ್ (16 ಕಿಮೀ/ಗಂಟೆ), ಮಿಲನ್ (17 ಕಿಮೀ/ಗಂಟೆ), ಲಿಮಾ (17 ಕಿಮೀ/ಗಂಟೆ) ಮತ್ತು ಟೊರೊಂಟೊ (18 ಕಿಮೀ/ಗಂಟೆ) ಮುಂತಾದ ಇತರ ನಗರಗಳು ಸಹ ನಿಧಾನವಾದ ವಾಹನ ಸಂಚಾರ ವೇಗವನ್ನು ಹೊಂದಿದೆ.

ಬೆಂಗಳೂರು ಟ್ರಾಫಿಕ್ ನ ನೈಜ ಸ್ಥಿತಿ ಇದು.!

ಈ ವಿಷಯದ ಪರಿಶೀಲಿಸಲು, ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ಸುಮಾರು 40 ಲಕ್ಷ ಬೆಂಗಳೂರಿಗರಿಗೆ ಜೀವಾಳವಾಗಿರುವ ಬಿಎಂಟಿಸಿ ಬಸ್‌ಗಳ ಮೂಲಕ ನೇರವಾಗಿ ರಸ್ತೆಗಳನ್ನು ಸಂಚರಿಸಿ, ವಾಸ್ತವದ ಪ್ರಯಾಣ ಅನುಭವವನ್ನು ಪಡೆಯಲು ನಿರ್ಧರಿಸಿ ವರದಿ ತಯಾರಿಸಿದೆ. ನಗರದ ದಟ್ಟಣೆಯನ್ನು ಪರಿಶೀಲಿಸಲು ವಾರದ ದಿನಗಳಲ್ಲಿ ಪೀಕ್ ಮತ್ತು ನಾನ್-ಪೀಕ್ ಸಮಯಗಳಲ್ಲಿ ಪ್ರಯಾಣಿಸಲು ಐದು ಜನದಟ್ಟಣೆಯ ಮಾರ್ಗಗಳನ್ನು ಆಯ್ಕೆ ಮಾಡಲಾಯಿತು. ಇದರ ಫಲಿತಾಂಶ ನಿಜಕ್ಕೂ ಅಚ್ಚರಿದಾಯಕವಾಗಿತ್ತು. ಯಾಕೆಂದರೆ 10 ಕಿಮೀ ಕ್ರಮಿಸಲು ತೆಗೆದುಕೊಂಡ ಪ್ರಯಾಣದ ಸಮಯವು 34 ನಿಮಿಷಗಳಿಗಿಂತ ಹೆಚ್ಚು ಇತ್ತು, ಕೆಲವು ಮಾರ್ಗಗಳಲ್ಲಿ 60 ನಿಮಿಷ ಅಂದ್ರೆ ಬರೋಬ್ಬರಿ 1 ಗಂಟೆ ತೆಗೆದುಕೊಂಡಿತ್ತು ಅಂದ್ರೆ ನಂಬಲೇಬೇಕು.! ಹೀಗಾಗಿ ಟಾಮ್‌ಟಾಮ್ ನೀಡಿದ ವರದಿ ಸಂಪೂರ್ಣ ಉಲ್ಟಾಪಲ್ಟಾ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+