ತಿಂಗಳ ಸಗಟು ದರ ಹಣದುಬ್ಬರದ (WPI) ಆಧಾರದಲ್ಲಿ ವಾರ್ಷಿಕ ಹಣದುಬ್ಬರ ದರವು ಆಗಸ್ಟ್ 2020ರಲ್ಲಿ 0.16 ಪರ್ಸೆಂಟ್ ಹೆಚ್ಚಳವಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 1.17% ಇತ್ತು. ಜುಲೈ ತಿಂಗಳ WPI -0.58 ಪರ್ಸೆಂಟ್ ಇತ್ತು. ಸತತವಾಗಿ ನಾಲ್ಕು ತಿಂಗಳು ನೆಗೆಟಿವ್ ಇತ್ತು: ಏಪ್ರಿಲ್ (-) 1.57%, ಮೇ (-) 3.37%, ಜೂನ್ (-) 1.81% ಮತ್ತು ಜುಲೈ (-) 0.58% ಇತ್ತು.
ಈ ವಿಭಾಗದಲ್ಲಿ ಬರು ಹದಿನೇಳು ಉತ್ಪನ್ನಗಳ ಪೈಕಿ ಹತ್ತರಲ್ಲಿ ಬೆಲೆ ಹೆಚ್ಚಳವಾಗಿದೆ. ಆಹಾರ ಉತ್ಪನ್ನ, ಫಾರ್ಮಾಸ್ಯುಟಿಕಲ್ಸ್, ಸಿಮೆಂಟ್, ಮೂಲ ಲೋಹಗಳ ಬೆಲೆಗಳಲ್ಲಿ ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಹೆಚ್ಚಳವಾಗಿವೆ ಎಂದು ಸೋಮವಾರ ಬಿಡುಗಡೆ ಮಾಡಿದ ಸರ್ಕಾರದ ಅಂಕಿ- ಅಂಶಗಳಿಂದ ಬಯಲಾಗಿದೆ.
ಆಹಾರ ಪದಾರ್ಥಗಳ ಹಣದುಬ್ಬರ ಆಗಸ್ಟ್ ನಲ್ಲಿ 3.84% ಇತ್ತು. ಆಲೂಗಡ್ಡೆ ಬೆಲೆ ಹೆಚ್ಚಳ 82.93 ಪರ್ಸೆಂಟ್ ಇತ್ತು. ತರಕಾರಿಗಳ ಬೆಲೆ ಹೆಚ್ಚಳ 7.03% ಇತ್ತು. ಈರುಳ್ಳಿ (-) 34.48% ಇತ್ತು. ತೈಲ ಹಾಗೂ ವಿದ್ಯುತ್ ಹಣದುಬ್ಬರ ಆಗಸ್ಟ್ ನಲ್ಲಿ 9.68%ಗೆ ಕುಸಿದಿದೆ. ಕಳೆದ ತಿಂಗಳು 9.84% ಇತ್ತು. ಉತ್ಪಾದನಾ ವಸ್ತುಗಳ ಹಣದುಬ್ಬರ ಆಗಸ್ಟ್ ನಲ್ಲಿ 1.27% ಇದ್ದರೆ, ಜುಲೈನಲ್ಲಿ 0.51% ಇತ್ತು.

ಆಗಸ್ಟ್ 2020ರ WPI ಸರಾಸರಿ 76%ಗೆ ಲೆಕ್ಕ ಹಾಕಲಾಗಿದೆ. 2020ರ ಜೂನ್ ತಿಂಗಳ ಸರಾಸರಿ 88%. WPI ಸಂಖ್ಯೆ ತಾತ್ಕಾಲಿಕವಾಗಿದ್ದು, ಈ ಬಗ್ಗೆ ನೀತಿ ಅಂತಿಮವಾದಂತೆ ಪರಿಷ್ಕರಣೆ ಆಗಲಿದೆ. ಈ ದತ್ತಾಂಶವನ್ನು ಆಯ್ದ ಸಾಂಸ್ಥಿಕ ಮೂಲಗಳು ಹಾಗೂ ಕ್ಕೈಗಾರಿಕೆ ಸಂಸ್ಥೆಗಳಿಂದ ಪಡೆಯಲಾಗಿದೆ. ವೆಬ್ ಆದಃಆರಿತ ನ್ಯಾಷನಲ್ ಇನ್ಫರ್ಮೇಷನ್ ಸೆಂಟರ್ (NIC) ಇದರ ನಿರ್ವಹಣೆ ಮಾಡುತ್ತದೆ ಎಂದು ಹೇಳಿಕೆಯಲ್ಲಿ ಕೈಗಾರಿಕಾ ಇಲಾಖೆ ತಿಳಿಸಿದೆ.


Click it and Unblock the Notifications