ಎಕ್ಸ್ ಆಪ್ ಬಳಕೆದಾದರಿಗೆ ಸಿಹಿಸುದ್ದಿ..ಸಾಮಾಜಿಕ ಮಾಧ್ಯಮ ದೈತ್ಯ ಎಲಾನ್ ಮಸ್ಕ್ ಒಡೆತನದ ಎಕ್ಸ್, ಭಾರತೀಯ ಬಳಕೆದಾರರಿಗೆ ತನ್ನ ಚಂದಾದಾರಿಕೆ ಶುಲ್ಕದಲ್ಲಿ ಕಡಿಮೆ ಮಾಡಲಾಗಿದೆ ಎಂದು ಘೋಷಣೆಯನ್ನು ಮಾಡಿದೆ. ಬೇಸಿಕ್, ಪ್ರೀಮಿಯಂ ಮತ್ತು ಪ್ರೀಮಿಯಂ ಪ್ಲಸ್ ಯೋಜನೆಗಳಲ್ಲಿ ಶೇ. 48 ವರೆಗೆ ಬೆಲೆಗಳನ್ನು ಕಡಿತಗೊಳಿಸಲಾಗಿದೆ. ನವೀಕರಿಸಿದ ಬೆಲೆಗಳು ಈಗ ಎಲೋನ್ ಮಸ್ಕ್‌ನ ಎಕ್ಸ್ ಪೋರ್ಟಲ್‌ನಲ್ಲಿ ಲೈವ್ ಆಗಿದ್ದು, ಮೊಬೈಲ್ ಮತ್ತು ವೆಬ್ ಚಂದಾದಾರಿಕೆಗಳಿಗೆ
ಇದು ಅನ್ವಯವಾಗುತ್ತದೆ.

ಎಕ್ಸ್ ಪ್ರೀಮಿಯಂ ಚಂದಾದಾರಿಕೆ ಬೆಲೆ ಕಡಿತ
ಮೊಬೈಲ್ ಅಪ್ಲಿಕೇಶನ್‌ಗಳಲ್ಲಿನ ಎಕ್ಸ್ ಪ್ರೀಮಿಯಂ ಚಂದಾದಾರಿಕೆಯು ಗರಿಷ್ಠ ಬೆಲೆ ಕಡಿತವನ್ನು ಕಂಡಿದೆ. ಒಂದು ತಿಂಗಳ ಚಂದಾದರಿಕೆ ವೆಚ್ಚವು ಶೇ.48ರಷ್ಟು ಕಡಿಮೆಯಾಗಿದೆ. ತಿಂಗಳಿಗೆ 900 ರೂಪಾಯಿಗಳು ಇದ್ದದ್ದು ಈಗ 470 ರೂ ಆಗಿದೆ. ಮೊಬೈಲ್‌ನಲ್ಲಿನ ಈ ಬೆಲೆ ವ್ಯತ್ಯಾಸವು ಹೆಚ್ಚುವರಿ ಅಪ್ಲಿಕೇಶನ್ ಸ್ಟೋರ್ ಶುಲ್ಕಗಳಿಂದ ಉಂಟಾಗಿದೆ.
ಎಕ್ಸ್ ಪ್ರೀಮಿಯಂಗೆ ಚಂದಾದಾರರಾಗುವ ಬಳಕೆದಾರರು ಪರಿಶೀಲನಾ ಗುರುತು (ಚೆಕ್‌ಮಾರ್ಕ್), ಪೋಸ್ಟ್ ಆದ್ಯತೆ, ಕಡಿಮೆ ಜಾಹೀರಾತುಗಳು ಮತ್ತು ಹೆಚ್ಚುವರಿ ಪರಿಕರಗಳಿಗೆ ಪ್ರವೇಶವನ್ನು ಪಡೆಯುತ್ತಾರೆ.ಈ ಆವೃತ್ತಿಯಲ್ಲಿ ಕೆಲವು ಜಾಹೀರಾತುಗಳು ಇರುತ್ತವೆ ಮತ್ತು ಸೂಪರ್‌ಗ್ರೋಕ್‌ನಂತಹ ಕೃತಕ ಬುದ್ಧಿಮತ್ತೆ (AI) ವೈಶಿಷ್ಟ್ಯಗಳಿಗೆ ಪ್ರವೇಶವಿರುವುದಿಲ್ಲ.
ವೆಬ್ ಚಂದಾದಾರಿಕೆ ಶುಲ್ಕಗಳು ಸಹ ಕಡಿಮೆಯಾಗಿವೆ. ಎಕ್ಸ್ ತನ್ನ ವೆಬ್ ಚಂದಾದಾರಿಕೆ ಶುಲ್ಕವನ್ನು ಕಡಿತಗೊಳಿಸಿದೆ. ವೆಬ್‌ನಲ್ಲಿನ ಪ್ರೀಮಿಯಂ ಯೋಜನೆಯು ತಿಂಗಳಿಗೆ 650 ರೂಪಾಯಿ ಇದ್ದದ್ದು ಈಗ 427 ರೂ ಆಗಿದೆ. ಇದು ಸುಮಾರು ಶೇ. 34ರಷ್ಟು ಕಡಿತವಾಗಿದೆ. ಎಕ್ಸ್ ಚಂದಾದಾರಿಕೆಯ ಮೂಲ ಶ್ರೇಣಿಯು ಈಗ ತಿಂಗಳಿಗೆ 170 ರೂ. ಆಗಿದ್ದು, ಈ ಯೋಜನೆಯು ಪೋಸ್ಟ್‌ಗಳನ್ನು ಸಂಪಾದಿಸಲು, ದೀರ್ಘ ವಿಷಯವನ್ನು ಪೋಸ್ಟ್ ಮಾಡಲು, ವೀಡಿಯೊಗಳನ್ನು ಡೌನ್‌ಲೋಡ್ ಮಾಡಲು ಮತ್ತು ಹಿನ್ನೆಲೆ ವೀಡಿಯೊ ಪ್ಲೇಬ್ಯಾಕ್‌ನಂತಹ ವೈಶಿಷ್ಟ್ಯಗಳನ್ನು ಕೂಡ ಬದಗಿಸಲಾಗುತ್ತದೆ. ಈ ಹಿಂದೆ ಈ ಯೋಜನೆಗೆ ತಿಂಗಳಿಗೆ 243.75 ರೂ.ಗಳಷ್ಟು ಶುಲ್ಕ ವಿಧಿಸಲಾಗುತ್ತಿತ್ತು, ಅಂದರೆ ಈಗ ಸುಮಾರು ಶೇ. 30ರಷ್ಟು ಬೆಲೆ ಕಡಿಮೆಯಾಗಿದೆ.
ಎಕ್ಸ್ ಗಾಗಿ ವಾರ್ಷಿಕ ಮೂಲ ಚಂದಾದಾರಿಕೆ ಶುಲ್ಕವನ್ನು ಶೇ. 34ರಷ್ಟು ಕಡಿಮೆ ಮಾಡಲಾಗಿದೆ, ಬಳಕೆದಾರರು ಈಗ ವರ್ಷಕ್ಕೆ 2,590.48ರೂ.ಗಳ ಬದಲಿಗೆ 1,700 ರೂ.ಗಳನ್ನು ಪಾವತಿಸಬೇಕಾಗುತ್ತದೆ.
ಎಕ್ಸ್ ಪ್ರೀಮಿಯಂ ಪ್ಲಸ್‌ನಲ್ಲಿ ಶೇ.26 ರಷ್ಟು ಬೆಲೆ ಇಳಿಕೆ
ಎಕ್ಸ್ ಜಾಹೀರಾತು-ಮುಕ್ತ ಅನುಭವವನ್ನು ನೀಡುವ ಎಕ್ಸ್‌ನಲ್ಲಿನ ಪ್ರೀಮಿಯಂ ಪ್ಲಸ್ ಯೋಜನೆಯನ್ನು ಸಹ ಪರಿಷ್ಕರಣೆಯನ್ನು ಮಾಡಿದೆ.ವೆಬ್ ಬಳಕೆದಾರರಿಗೆ ಮಾಸಿಕ ಚಂದಾದಾರಿಕೆ ಶುಲ್ಕವು 3,470 ರೂ. ಇದ್ದದ್ದು ಈಗ 2,570 ರೂ ಆಗಿದೆ. ಅಂದರೆ ಸುಮಾರು ಶೇ. 26 ರಷ್ಟು ಕಡಿಮೆಯಾಗಿದೆ.
ಪ್ರೀಮಿಯಂ ಪ್ಲಸ್‌ನ ಮೊಬೈಲ್ ಆವೃತ್ತಿಯ ಬೆಲೆಯು ತಿಂಗಳಿಗೆ 5,100 ರೂ.ಇದ್ದದ್ದು ಈಗ 3,000 ರೂ. ಆಗಿದೆ. ಬಳಕೆದಾರರು ಈಗ ಶೇ. 41 ರಷ್ಟು ರಿಯಾಯಿತಿಯನ್ನು ಪಡೆಯಬಹುದು.
ಒಟ್ಟಾರೆಯಾಗಿ, ಎಕ್ಸ್ ತನ್ನ ಚಂದಾದಾರಿಕೆ ಶುಲ್ಕವನ್ನು ಗಣನೀಯವಾಗಿ ಕಡಿಮೆ ಮಾಡಿ ಭಾರತೀಯ ಬಳಕೆದಾರರಿಗೆ ಕೈಗೆಟುಕುವ ದರದಲ್ಲಿ ಎಕ್ಸ್ ಚಂದಾದರಿಕೆ ಸಿಗುತ್ತದೆ.


Click it and Unblock the Notifications