ಶಿಯೋಮಿ Mi 11 ಮತ್ತು Mi 11 ಪ್ರೊ ಮೊಬೈಲ್ ಬಿಡುಗಡೆಗೂ ಮುನ್ನ ಫೀಚರ್ಸ್ ಏನಿರಬಹುದು?

ಶಿಯೊಮಿ ಕಂಪನಿಯು Mi 11 ಮತ್ತು Mi 11ಪ್ರೊ ಎರಡು ಹೊಸ ಸ್ಮಾರ್ಟ್‌ಫೋನ್‌ಗಳ ಬಿಡುಗಡೆ ಸಿದ್ಧತೆ ನಡೆಸಿದೆ. ಡಿಸೆಂಬರ್ ಅಂತ್ಯಕ್ಕೆ ಬಿಡುಗಡೆಯಾಗಬಹುದು ಎನ್ನಲಾಗಿರುವ ಈ ಮೊಬೈಲ್‌ಗಳ ಕುರಿತು ಕೆಲವು ಫೀಚರ್ಸ್‌ ಏನಿರಬಹುದು ಎಂದು ಅಂದಾಜಿಸಲಾಗಿದೆ.

ಎರಡು ವಿಶೇಷ ಮೊಬೈಲ್‌ಗಳು ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಬಹುದು ಎಂದು ಸ್ಮಾರ್ಟ್‌ಫೋನ್‌ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಹೊಸ ಫೋನ್ ಸರಣಿಯ ಕುರಿತು ಕೆಲವು ಮಾಹಿತಿ ಈ ಕೆಳಗಿದೆ ಓದಿ.

108 ಮೆಗಾಪಿಕ್ಸಲ್ ಕ್ಯಾಮೆರಾ ಸೆನ್ಸಾರ್

108 ಮೆಗಾಪಿಕ್ಸಲ್ ಕ್ಯಾಮೆರಾ ಸೆನ್ಸಾರ್

ಶಿಯೊಮೆ ಕಂಪನಿಯು Mi 11 ಮೊಬೈಲ್ 6 ಇಂಚಿನ QHD+ AMOLED ಡಿಸ್‌ಪ್ಲೇ ಹೊಂದಿದ್ದು, ಇದು 120Hz ರಿಫ್ರೆಶ್ ದರವನ್ನು ಹೊಂದಿರುತ್ತದೆ. ಈ ಫೋನ್‌ನಲ್ಲಿ ಕಂಪನಿಯು ಟ್ರಿಪಲ್ ಕ್ಯಾಮೆರಾ ಸೆಟಪ್ ನೀಡಿದೆ. ಈ ಸೆಟಪ್‌ನ ಮೊದಲ ಕ್ಯಾಮೆರಾ 108 ಮೆಗಾಪಿಕ್ಸೆಲ್‌ಗಳಾಗಿದ್ದರೆ, ಎರಡನೇ ಕ್ಯಾಮೆರಾ 13 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆ್ಯಂಗಲ್ ಲೆನ್ಸ್‌ನೊಂದಿಗೆ ಬರಲಿದೆ.

ಟ್ರಿಪಲ್ ಕ್ಯಾಮೆರಾ ಸೆಟಪ್

ಟ್ರಿಪಲ್ ಕ್ಯಾಮೆರಾ ಸೆಟಪ್

Mi 11 ಪ್ರೊ ಕುರಿತು ಮಾತನಾಡುತ್ತಾ, ಕಂಪನಿಯು ಆ ಫೋನ್‌ನಲ್ಲಿ 50 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ನೀಡಬಹುದು. ಅದು ಆ ಫೋನ್‌ನ ಪ್ರಾಥಮಿಕ ಕ್ಯಾಮೆರಾ ಆಗಿರುತ್ತದೆ. ಇದಲ್ಲದೆ ಕಂಪನಿಯು ಈ ಫೋನ್‌ನಲ್ಲಿ 48 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಕ್ಯಾಮೆರಾ ಸಹ ನೀಡಲಿದ್ದು, ಮೂರನೇ ಕ್ಯಾಮರಾ 48 ಮೆಗಾಪಿಕ್ಸೆಲ್ ಆಗಿರುತ್ತದೆ.

ಹೆಚ್ಚಿನ RAM ಮತ್ತು ಸ್ಟೋರೇಜ್

ಹೆಚ್ಚಿನ RAM ಮತ್ತು ಸ್ಟೋರೇಜ್

ಎಂಐ ಎರಡು ಕ್ಯಾಮೆರಾಗಳು ಉತ್ತಮವಾಗಿರುವ ಸಾಧ್ಯತೆಯನ್ನು ಹೊಂದಿದೆ. ಈ ಎರಡೂ ಫೋನ್‌ಗಳಲ್ಲಿ ಕಂಪನಿಯು 8 ಜಿಬಿ ಎಲ್‌ಪಿಡಿಡಿಆರ್ಎಸ್ RAM ಮತ್ತು 128 ಜಿಬಿ ಸ್ಟೋರೇಜ್ ಸಹ ಒದಗಿಸುತ್ತದೆ.

ಈ ಎರಡು ಫೋನ್‌ಗಳ ಸಂಭಾವ್ಯ ಬೆಲೆ

ಈ ಎರಡು ಫೋನ್‌ಗಳ ಸಂಭಾವ್ಯ ಬೆಲೆ

ಈ ಎರಡೂ ಫೋನ್‌ಗಳಲ್ಲಿ, ಕಂಪನಿಯು ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್‌ಗಳನ್ನು ನೀಡುತ್ತದೆ. ಅದೇ ಸಮಯದಲ್ಲಿ, ಈ ಫೋನ್‌ನಲ್ಲಿ 20 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಸಹ ನೀಡಬಹುದು. ಈ ಫೋನ್‌ನ ಬೆಲೆಯ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಇಲ್ಲ ಆದರೆ Mi 11 ಮೊಬೈಲ್ ಅಂದಾಜು ಬೆಲೆ 45,000 ರಿಂದ 50,000 ರೂಪಾಯಿ ಆಗಿರಬಹುದು. Mi 11 ಪ್ರೊ ಬೆಲೆಯು 60,000 ದಿಂದ 62,000 ರೂಪಾಯಿವರೆಗೆ ಇರಬಹುದು ಎಂದು ನಂಬಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+