Yamaha Blue Square: ರಾಜ್ಯ ರಾಜಧಾನಿಯಲ್ಲಿ ಯಮಹಾದ ಮೂರು ಹೊಸ 'ಬ್ಲೂ ಸ್ಕ್ವೇರ್' ಔಟ್‌ಲೆಟ್‌ಗಳು ಆರಂಭ

ಇಂಡಿಯಾ ಯಮಹಾ ಮೋಟಾರ್ (ಐವೈಎಂ) ಪ್ರೈವೇಟ್ ಲಿಮಿಟೆಡ್ ಬೆಂಗಳೂರಿನಲ್ಲಿ ಮೂರು ಹೊಸ ಅತ್ಯಾಧುನಿಕ "ಬ್ಲೂ ಸ್ಕ್ವೇರ್" ಔಟ್‌ಲೆಟ್‌ಗಳ ಉದ್ಘಾಟನೆಯ ಘೋಷಣೆ ಮಾಡಿದೆ. ಬೆಂಗಳೂರಿನ ಸುತ್ತಮುತ್ತ ಪ್ರದೇಶಗಳಾದ ಕೆಆರ್ ಪುರಂನಲ್ಲಿ, ಹೊಸಕೋಟೆಯಲ್ಲಿ, ಮಂಡ್ಯ ಸಮೀಪದಲ್ಲಿ ಮೂರು ಹೊಸ ಎಕ್ಸ್‌ಕ್ಲೂಸಿವ್‌ ಔಟ್‌ಲೆಟ್‌ಗಳನ್ನು ಯಮಹಾ ತೆರೆದಿದೆ.

ಕೆಆರ್ ಪುರಂನಲ್ಲಿ 8,945 ಚದರ ಅಡಿ ವಿಸ್ತಾರದ 'ಐ ಆಟೋಮೊಬೈಲ್ಸ್ ಪ್ರೈ. ಲಿಮಿಟೆಡ್', ಹೊಸಕೋಟೆಯಲ್ಲಿ 4,071 ಚದರ ಅಡಿ ಜಾಗದ 'ಗರುಡ ವೀಲ್ಸ್', ಮಂಡ್ಯದಲ್ಲಿ 5,800 ಚದರ ಅಡಿ ಜಾಗದಲ್ಲಿ 'ಚಿರಾಗ್ ಮೋಟಾರ್ಸ್' ಎಂಬ 'ಬ್ಲೂ ಸ್ಕ್ವೇರ್' ಔಟ್‌ಲೆಟ್‌ಗಳು ಯಮಹಾ ಆರಂಭಿಸುತ್ತಿದೆ.

 ರಾಜ್ಯ ರಾಜಧಾನಿಯಲ್ಲಿ ಯಮಹಾದ 'ಬ್ಲೂ ಸ್ಕ್ವೇರ್' ಔಟ್‌ಲೆಟ್‌ಗಳು ಆರಂಭ

ಯಮಹಾ ಬ್ಲೂ ಸ್ಕ್ವೇರ್ ಔಟ್‌ಲೆಟ್‌ಗಳನ್ನು ಬ್ರ್ಯಾಂಡ್‌ನ ನಿಜವಾದ ಚೈತನ್ಯವನ್ನು ತಲುಪಿಸುವಂತೆ ಮತ್ತು ಗ್ರಾಹಕರಿಗೆ ಸಂಪೂರ್ಣ ಉತ್ತಮವಾದ ಅನುಭವ ಒದಗಿಸುವಂತೆ ನಿಖರವಾಗಿ ವಿನ್ಯಾಸ ಮಾಡಲಾಗಿದೆ. ಅಲ್ಲಿ ವೈಯಕ್ತೀಕರಿಸಿದ ವಿಧಾನದ ಮೂಲಕ ಪ್ರತಿಯೊಬ್ಬ ಗ್ರಾಹಕರು ಮೌಲ್ಯಯುತ ಮತ್ತು ತೃಪ್ತಿದಾಯಕ ಸೇವೆ ಪಡೆಯಲಿದ್ದಾರೆ ಎಂದು ಸಂಸ್ಥೆಯು ತಿಳಿಸಿದೆ.

ಈ ಪ್ರೀಮಿಯಂ ಔಟ್‌ಲೆಟ್‌ಗಳ ಪ್ರತಿಯೊಂದು ವಿಭಾಗವನ್ನೂ ಅಂತರರಾಷ್ಟ್ರೀಯ ಮೋಟಾರ್‌ಸ್ಪೋರ್ಟ್‌ಗಳಲ್ಲಿ ಆಳವಾಗಿ ತೊಡಗಿಸಿಕೊಂಡಿರುವ ಈ ಜಾಗತಿಕ ಬ್ರ್ಯಾಂಡ್‌ ಜೊತೆಗೆ ಸಂಬಂಧ ಹೊಂದುವಂತೆ ರಚಿಸಲಾಗಿದೆ. ಈ ಫಿಲಾಸಫಿಯಿಂದ ಮಾರ್ಗದರ್ಶನ ಪಡೆದಿರುವ ಯಮಹಾ, ಬ್ರ್ಯಾಂಡ್‌ನ ಹೆಮ್ಮೆಯ ರೇಸಿಂಗ್ ಪರಂಪರೆಯನ್ನು ಪ್ರತಿನಿಧಿಸುವ "ಬ್ಲೂ(ನೀಲಿ)" ಬಣ್ಣ ಮತ್ತು ಗ್ರಾಹಕರು ಯಮಹಾದ ಹರ್ಷದಾಯಕ, ಸ್ಪೋರ್ಟಿ ಮತ್ತು ಸೊಗಸಾದ ಶ್ರೇಣಿಯ ದ್ವಿಚಕ್ರ ವಾಹನಗಳೊಂದಿಗೆ ಸಂಪರ್ಕ ಸಾಧಿಸಲು ರಚಿಸಲಾದ ಪ್ಲಾಟ್‌ಫಾರ್ಮ್ ಅನ್ನು ಸಂಕೇತಿಸುವ "ಸ್ಕ್ವೇರ್" ಸಂಯೋಜನೆಯ ಮೂಲಕ ಗ್ರಾಹಕರೊಂದಿಗೆ ತ್ವರಿತ ಸಂಪರ್ಕವನ್ನು ಸಾಧಿಸಿದೆ ಎಂದು ಯಮಹಾ ಹೇಳಿದೆ.

ಬ್ಲೂ ಸ್ಕ್ವೇರ್ ಔಟ್‌ಲೆಟ್‌ಗಳೇನು?

ಈ ಬ್ಲೂ ಸ್ಕ್ವೇರ್ ಔಟ್‌ಲೆಟ್‌ಗಳು ಬ್ಲೂ ಸ್ಟ್ರೀಕ್ಸ್ ರೈಡರ್‌ಗಳಿಗೆ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತವೆ. ಜೊತೆಗೆ ಉದ್ಯಮ-ಪ್ರಧಾನ ಅನುಭವವನ್ನು ಒದಗಿಸುತ್ತದೆ. ಯಮಹಾದ ವಿಶೇಷ ಬೈಕರ್ ಸಮುದಾಯದ ಸವಾರರು ಇತರ ಸವಾರರನ್ನು ಭೇಟಿ ಮಾಡಲು ಮತ್ತು ಸಂವಹನ ನಡೆಸಲು ಅನುವು ಮಾಡಿಕೊಡುತ್ತದೆ.

ಎರಡು ಹೊಸ ಔಟ್‌ಲೆಟ್‌ಗಳನ್ನು ಒಳಗೊಂಡಂತೆ, ಯಮಹಾ ಈಗ ಕರ್ನಾಟಕ ಮಾರುಕಟ್ಟೆಯಲ್ಲಿ ಒಟ್ಟಾಗಿ 20 ವಿಶೇಷ ಬ್ಲೂ ಸ್ಕ್ವೇರ್ ಶೋರೂಮ್‌ಗಳನ್ನು ಹೊಂದಿದೆ. ಒಟ್ಟಾರೆಯಾಗಿ ಭಾರತದಲ್ಲಿ ಯಮಹಾ 270 ಔಟ್‌ಲೆಟ್‌ಗಳನ್ನು ಹೊಂದಿದೆ. ಯಮಹಾದ ಮ್ಯಾಕ್ಸಿ-ಸ್ಪೋರ್ಟ್ಸ್ ಏರಾಕ್ಸ್ 155 ಸ್ಕೂಟರ್ ಅನ್ನು ಬ್ಲೂ ಸ್ಕ್ವೇರ್ ಶೋರೂಮ್‌ಗಳ ಮೂಲಕ ವಿಶೇಷವಾಗಿ ಮಾರಾಟ ಮಾಡಲಾಗುತ್ತದೆ.

ಪ್ರೀಮಿಯಂ ದ್ವಿಚಕ್ರ ವಾಹನಗಳನ್ನು ಪ್ರದರ್ಶನ

ಈ ಪ್ರೀಮಿಯಂ ಔಟ್‌ಲೆಟ್‌ಗಳಲ್ಲಿ ವೈಝಡ್‌ಎಫ್‌-ಆರ್‌15 ವಿ4 (155ಸಿಸಿ), ವೈಝಡ್‌ಎಫ್‌-ಆರ್15ಎಸ್‌ ವಿ3 (155ಸಿಸಿ), ಎಂಟಿ-15 ವಿ2 (155ಸಿಸಿ), ಬ್ಲೂಕೋರ್ ತಂತ್ರಜ್ಞಾನ ಆಧರಿತ ಮಾದರಿಗಳಾದ ಎಫ್‌ಝಡ್‌ಎಸ್‌-ಎಫ್‌ಐ ವರ್ಷನ್ 4.0 (149ಸಿಸಿ), ಎಫ್‌ಝಡ್‌ಎಸ್‌-ಎಫ್‌ಐ ವರ್ಷನ್ 3.0 (149ಸಿಸಿ), ಎಫ್‌ಝಡ್‌-ಎಫ್‌ಐ ವರ್ಷನ್ 3.0 (149ಸಿಸಿ), ಎಫ್‌ಝಡ್‌-ಎಕ್ಸ್ (149ಸಿಸಿ), ಮತ್ತು ಸ್ಕೂಟರ್‌ಗಳಾದ ಫ್ಯಾಸಿನೋ 125 ಎಫ್‌ಐ ಹೈಬ್ರಿಡ್‌ (125ಸಿಸಿ), ರೇ ಝಡ್‌ಐರ್‌ 125 ಎಫ್‌ಐ ಹೈಬ್ರಿಡ್ (125ಸಿಸಿ), ರೇ ಝಡ್‌ಐರ್‌ ಸ್ಟ್ರೀಟ್ ರ್‍ಯಾಲಿ 125 ಎಫ್‌ಐ ಹೈಬ್ರಿಡ್ (125ಸಿಸಿ) ಸೇರಿದಂತೆ ನವೀಕರಿಸಲ್ಪಟ್ಟ 2023ನೇ ಸಾಲಿನ ಪ್ರೀಮಿಯಂ ದ್ವಿಚಕ್ರ ವಾಹನಗಳನ್ನು ಪ್ರದರ್ಶಿಸಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+