ಬೆಂಗಳೂರಿಗೆ ಮಳೆ ಕಾಟ.. 15 ಜಿಲ್ಲೆಗಳಲ್ಲಿ ಭಾರೀ ಮಳೆ(Rain) ಸಾಧ್ಯತೆ.. ಹೌದು, ಮುಂದಿನ ವಾರ ರಾಜ್ಯದ ವಿವಿಧ ಭಾಗಗಳಲ್ಲಿ 40-50 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದ್ದು,ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) 18 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ(Yellow Alert) ಮಾಡಿದೆ.
ಆಂಧ್ರಪ್ರದೇಶದ ಕರಾವಳಿ ಮಧ್ಯ ಭಾಗಗಳು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ, ಸಮುದ್ರ ಮಟ್ಟದಿಂದ 0.9ಕಿ.ಮೀ ಎತ್ತರದಲ್ಲಿ ಮೇಲ್ಮಟ್ಟದ ವಾಯು ಚಂಡಮಾರುತದ ಪ್ರಸರಣವಿದ್ದು, ಇದರ ಪರಿಣಾಮವಾಗಿ, ರಾಜ್ಯದ ಹಲವು ಭಾಗಗಳಲ್ಲಿ ಮಳೆ ಮುಂದುವರಿಯುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ.

ಯಾವೆಲ್ಲಾ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್?
ರಾಯಚೂರು, ಕೊಪ್ಪಳ, ಗದಗ, ಧಾರವಾಡ, ಹಾವೇರಿ, ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಬೆಂಗಳೂರು ನಗರ, ತುಮಕೂರು ಮತ್ತು ಕೋಲಾರದಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಇಂದು ವಿವಿಧೆಡೆಯಲ್ಲಿ ಮಳೆ
ಹವಾಮಾನ ಇಲಾಖೆಯ ಸೂಚನೆಯ ಪ್ರಕಾರ ಇಂದು ಕೆಲವು ಜಿಲ್ಲೆಗಳಲ್ಲಿ
ಭಾರೀ ಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆಯಿದೆ. ಮಂಗಳವಾರವೂ ಬೆಂಗಳೂರು ನಗರ ಸೇರಿದಂತೆ 15 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು. ದಕ್ಷಿಣ ಒಳನಾಡಿನ ಹೆಚ್ಚಿನ ಪ್ರದೇಶಗಳಲ್ಲಿ ಮಳೆಯಾಗುವ ನಿರೀಕ್ಷೆಯಿದೆ.
ಮುಂದಿನ ವಾರ ಎಲ್ಲಿಲ್ಲೆ ಮಳೆ?
ಮುಂದಿನ ವಾರ ಕರಾವಳಿ ಮತ್ತು ಉತ್ತರ ಒಳನಾಡಿನ ಕರ್ನಾಟಕದ ಹೆಚ್ಚಿನ ಜಿಲ್ಲೆಗಳಲ್ಲಿ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ.
ಕಲಬುರಗಿ, ಯಾದಗಿರಿ ಮತ್ತು ಬೀದರ್‌ನಲ್ಲಿ ಒಣ ಹವಾಮಾನದ ನಿರೀಕ್ಷೆಯಿದೆ ಎಂದು ಐಎಂಡಿ ತಿಳಿಸಿದೆ.
24 ಗಂಟೆಗಳ ಅವಧಿಯಲ್ಲಿ ಬೆಂಗಳೂರು ನಗರದಲ್ಲಿ 4.3 ಮಿ.ಮೀ ಮಳೆಯಾಗಿದ್ದು, ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ 2.6 ಮಿ.ಮೀ ಮಳೆಯಾಗಿದೆ. ದೊಡ್ಡಬಳ್ಳಾಪುರದಲ್ಲಿ 6.5 ಮಿ.ಮೀ ಮಳೆಯಾಗಲಿದೆ ಎಂದು ತಿಳಿಸಿದೆ.
ಒಟ್ಟಿನಲ್ಲಿ ಬಿಸಿಲಿನ ನಡುವೆಯೇ ಹಲವೆಡೆ ಮುಂಗಾರು ಪೂರ್ವ ಮಳೆ ಮುಂದುವರೆದಿದೆ. ಆಗ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಆಗಲಿದೆ ಎಂದು ಮುನ್ಸೂಚನೆಯನ್ನೂ ಕೂಡ ನೀಡಿದೆ.
ಬೆಂಗಳೂರಿಗೆ ಮಳೆ ಕಾಟ!
ಬೆಂಗಳೂರಿನಲ್ಲಿ ಇನ್ನೂ ಕೆಲವು ಗಂಟೆಗಳಲ್ಲಿ ಮಳೆಯಾಗುವ ನಿರೀಕ್ಷೆ ಇದೆ. ಸಂಚಾರ ದಟ್ಟಣೆಯಾಗಿ ಬೆಂಗಳೂರಿಗೆ ಮಳೆ ಕಾಟ ಎದುರಾಗಬಹುದು.
ಇನ್ನೂ ಕೆಲವೇ ತಿಂಗಳುಗಳಲ್ಲಿ ಮುಂಗಾರು ಮಳೆಯ ಆರಂಭವಾಗಲಿದೆ.
ಮಳೆಯಿಂದ ಪಾರಾಗಲು ಕೆಲವು ಸರಳ ಸಲಹೆಗಳನ್ನು ಅನುಸರಿಸಿ
1. ಹೆಚ್ಚು ಸುರಕ್ಷಿತ ಸ್ಥಳವನ್ನು ಹುಡುಕಿ
ಮಳೆಯ ಸಮಯದಲ್ಲಿ ತಕ್ಷಣವೇ ಶೆಡ್, ಅಂಗಡಿ ಅಥವಾ ಬಸ್ ನಿಲ್ದಾಣದಲ್ಲಿ ಆಶ್ರಯ ಪಡೆಯಿರಿ.ಬೀದಿ ಬದಿಯಲ್ಲಿ ನಿಲ್ಲಬೇಡಿ.
2. ರೇನ್‌ಕೋಟ್ ಅಥವಾ ಛತ್ರಿ ಬಳಸಿ
ಯಾವಾಗಲೂ ನಿಮ್ಮ ಜೊತೆ ಒಂದು ರೇನ್‌ಕೋಟ್ ಅಥವಾ ಛತ್ರಿ ಇರಿಸಿಕೊಳ್ಳಿ
3. ವಾಟರ್‌ಪ್ರೂಫ್ ಬ್ಯಾಗ್ ಅಥವಾ ಕವರ್
ಮಳೆ ಬರುವ ಸಾಧ್ಯತೆ ಇರುವ ಸಮಯದಲ್ಲಿ ನಿಮ್ಮ ಎಲೆಕ್ಟ್ರಾನಿಕ್ ಸಾಧನಗಳು, ಪುಸ್ತಕಗಳು ಇತ್ಯಾದಿಗಳನ್ನು ಪ್ಲಾಸ್ಟಿಕ್ ಕವರ್ ಅಥವಾ ವಾಟರ್‌ಪ್ರೂಫ್ ಬ್ಯಾಗ್‌ನಲ್ಲಿ ಇಡಿ.
4. ರಸ್ತೆ ಸ್ಥಿತಿ ಬಗ್ಗೆ ಎಚ್ಚರ ವಹಿಸಿ
ಮಳೆಯ ಸಮಯದಲ್ಲಿ ರಸ್ತೆಗಳು ಇಳಿಜಾರಾಗಿರಬಹುದು ಅಥವಾ ಜಾರಬಹುದಾದವು.ಎಚ್ಚರಿಕೆಯಿಂದ ಹೋಗಿ.ವಾಹನ ಚಲಾಯಿಸುವಾಗ ನಿಧಾನವಾಗಿ ಚಲಾಯಿಸಿ.
5. ಹವಾಮಾನ ಮುನ್ಸೂಚನೆ ನೋಡಿ
ಹೊರಗೆ ಹೋಗುವ ಮೊದಲು ಹವಾಮಾನ ಮುನ್ಸೂಚನೆ ನೋಡಿರಿ. ಮಳೆ ಬರುವ ಸಾಧ್ಯತೆ ಇದ್ದರೆ ಅಗತ್ಯ ಬದಲಾವಣೆಯನ್ನು ಮಾಡಿಕೊಳ್ಳಿ
6. ಮಳೆಗಾಲದ ಲಭ್ಯವಿರುವ ಆಹಾರ, ಔಷಧಿ ಸಿದ್ಧಮಾಡಿಕೊಳ್ಳಿ:
ಭಾರಿ ಮಳೆ ಸಮಯದಲ್ಲಿ ಮನೆಯಲ್ಲೇ ಉಳಿಯುವ ಸಾಧ್ಯತೆ ಇರುತ್ತದೆ, ಆದ್ದರಿಂದ ಅಗತ್ಯವಿರುವ ವಸ್ತುಗಳನ್ನು ಮುಂಚಿತವಾಗಿ ಖರೀದಿಸಿ.


Click it and Unblock the Notifications