ಬೆಂಗಳೂರು, ಏಪ್ರಿಲ್ 1: ಮನೆಯಲ್ಲಿ ಇದ್ದರೇ ಚಿನ್ನ, ಚಿಂತೆಯು ಏತಕೆ ಇನ್ನಾ ಎಂಬ ಮಾತು ಈಗ ನಿಜವಾಗಿದೆ ನೋಡಿ. ಪ್ರತಿಯೊಬ್ಬರೂ ತಮ್ಮ ದುಡಿಮೆಯ ಒಂದಷ್ಟು ಭಾಗವನ್ನು ಉಳಿತಾಯ ಮಾಡೋದು ಅಥವಾ ಹೂಡಿಕೆ ಮಾಡೋದು ಕಷ್ಟಕಾಲಕ್ಕೆ ಆ ಹಣ ಅಥವಾ ಹೂಡಿಕೆ ನಮಗೆ ನೆರವಾಗಲಿ ಅಂತ. ಒಂದುವೇಳಿ ನಮ್ಮ ಬಳಿ ಹಣವಿಲ್ಲದಿದ್ರೂ ನಮ್ಮ ಹೂಡಿಕೆಗಳು ನಮ್ಮನ್ನ ಕೈ ಹಿಡಿಯಬಲ್ಲವು. ಆದ್ರೆ ನಾವು ಯಾವುದರ ಮೇಲೆ ಹೂಡಿಕೆ ಮಾಡಿರ್ತೀವಿ ಎಂಬುದು ಮುಖ್ಯವಾಗುತ್ತೆ.
ಹೀಗಾಗಿ ಹೂಡಿಕೆದಾರರ ಬಹು ನೆಚ್ಚಿನ ಆಯ್ಕೆಗಳು ಅಂದ್ರೆ, ಯಾವುದು ಅತೀ ಬೇಗ ತನ್ನ ಬೆಲೆಯನ್ನ ಹೆಚ್ಚಿಸಿಕೊಳ್ಳುತ್ತೆ ಮತ್ತು ಎಂದೆಂದಿಗೂ ಬೆಲೆ ಕುಗ್ಗಿ ನಷ್ಟ ಉಂಟಾಗಬಾರದ್ದು, ಅಂಥ ಆಯ್ಕೆಗಳು ಜನರ ಹೂಡಿಕೆಗೆ ಅಚ್ಚುಮೆಚ್ಚು. ಈ ಸಾಲಿನಲ್ಲಿ ಅಗ್ರಸ್ಥಾನದಲ್ಲಿ ನಿಲ್ಲೋದು ಮತ್ತು ಬಹಳ ಸಹಜ ಹಾಗೂ ಸರಳವಾಗಿ ಜನರಿಗೆ ಅರ್ಥವಾಗಬಲ್ಲ ವ್ಯವಹಾರ ಅಂದ್ರೆ ಅದು ಭೂಮಿ ಮೇಲಿನ ಹೂಡಿಮೆ, ಬಿಟ್ರೆ ಚಿನ್ನಾಭರಣ.

ಭೂಮಿ ಮೇಲೆ ಹೂಡಿಕೆ ಮಾಡಿದ್ರೆ ಎಂದಿಗೂ ಮೋಸವೇ ಇಲ್ಲ ಅನ್ನೋದು ಸತ್ಯ. ಭೂಮಿಯ ಬೆಲೆ ಹೆಚ್ಚಾಗುತ್ತಲೇ ಮುಂದುವರೆಯುತ್ತೆ ಹೊರತು ಎಂದಿಗೂ ಕಡಿಮೆಯಾಗೋದಿಲ್ಲ. ಹಾಗೇ ಭೂಮಿ ಹೊಂದಿದವರು ತಮ್ಮ ಕಷ್ಟಕಾಲದಲ್ಲಿ ಒಂದೋ ಅದನ್ನ ಮಾರಾಟ ಮಾಡಿ ಕಷ್ಟ ನೀಗಿಸಿಕೊಳ್ಳಬಹುದು ಅಥವಾ ಅದರ ಮೇಲೆ ಲೀನ್ ಮಾಡಿ ಕಷ್ಟಗಳನ್ನ ಪರಿಹರಿಸಿಕೊಳ್ಳಬಹುದು. ಆದ್ರೆ ಎಲ್ಲರೂ ಕೂಡ ರಿಯಲ್ ಎಸ್ಟೇಟ್ನಲ್ಲಿ ಹೂಡಿಕೆ ಮಾಡುವಷ್ಟು ಧನಿಕರಾಗಿರುವುದಿಲ್ಲ. ಹೀಗಾಗಿ ಗೋಲ್ಡ್ ಲೋನ್ ಬಹಳ ಪ್ರಖ್ಯಾತಿ ಪಡೆದುಕೊಂಡಿದೆ.
ಚಿನ್ನದ ಸಾಲಕ್ಕೆ ಬಡ್ಡಿ ದರ ಕಡಿಮೆ
ಅತಿ ಪ್ರೀತಿಯಿಂದ ಮಾಡಿಸಿಕೊಳ್ಳುವ ಚಿನ್ನದ ಆಭರಣಗಳು ಕೇವಲ ಅಲಂಕಾರಕ್ಕಷ್ಟೇ ಸೀಮಿತವಾಗಿರದೆ ನಮ್ಮ ಕಷ್ಟದ ಸಂದರ್ಭದಲ್ಲೂ ನಮ್ಮ ಕೈಹಿಡಿಯಬಲ್ಲ ಉತ್ತಮ ಹೂಡಿಕೆಯಾಗಿದೆ. ಭಾರತೀಯರಂತೂ ಹೇಳಿ ಕೇಳಿ ಚಿನ್ನದ ಪ್ರಿಯರು. ಏನೇ ಎಷ್ಟೇ ಕಷ್ಟಗಳಿದ್ದರೂ ಆ ಎಲ್ಲದರ ಮಧ್ಯೆಯೂ ಒಂದಿಷ್ಟು ಆಭರಣಗಳನ್ನ ಮಾಡಿಸಿ ಕೂಡಿಟ್ಟುಕೊಂಡಿರ್ತಾರೆ. ಮದುವೆ, ಮುಂಜಿ, ನಾಮಕರಣ, ನಿಶ್ಚಿತಾರ್ಥ ಹೀಗೆ ಏನೇ ಕಾರ್ಯಕ್ರಮಕ್ಕಾದ್ರೂ ಚಿನ್ನ ಖರೀದಿ ನಮ್ಮ ಜನರಿಗೆ ಅಚ್ಚು-ಮೆಚ್ಚು. ಇದನ್ನೇ ಬಂಡವಾಳ ಮಾಡಿಕೊಂಡ ಬ್ಯಾಂಕ್ಗಳು ಚಿನ್ನದ ಮೇಲೆ ಸಾಲ ಕೊಡುವ ಯೋಜನೆಯನ್ನೂ ಈಗಾಗಲೇ ಜಾರಿಗೆ ತಂದಿವೆ. ಆದ್ರೆ ಇದೀಗ ಸಾಲದ ಬಡ್ಡಿಯೂ ಇನ್ನಷ್ಟು ಕುಗ್ಗಲಿದೆ.
ಚಿನ್ನದ ಬೆಲೆ ಕೇಳಿದ್ರೆ ತಲೆ ಗಿರ್ ಅನ್ನುತ್ತೆ. ಹಿಂದೆ ಬೆಲೆ ಕಡಿಮೆ ಇದ್ದಾಗಲೇ ಚಿನ್ನ ಮಾಡಿಸಿಟ್ಟುಕೊಂಡವರೇ ಪುಣ್ಯವಂತರು. ಈಗಂತೂ ಚಿನ್ನ ಕೊಳ್ಳುವ ಯೋಚನೆ ಮಾಡಲೂ ಧೈರ್ಯ ಬೇಕು. ಹೀಗೆ ಚಿನ್ನದ ಬೆಲೆ ಏರುತ್ತಲೇ ಹೋಗುತ್ತದೆ ಹೊರತು ಕುಗ್ಗುವುದಿಲ್ಲ. ಇದೇ ಕಾರಣಕ್ಕೆ ಚಿನ್ನದ ಹೂಡಿಕೆ ಸೇಫ್. ಸೋ ಕಷ್ಟ ಎದುರಾದಾಗ ನಿಮ್ಮ ಬಳಿ ಚಿನ್ನ ಇದ್ರೆ , ನೀವು ಸಾಲ ಪಡೆಯೋದು ಬಹಳ ಸುಲಭ.
ಈ ಗೋಲ್ಡ್ ಲೋನ್ಗಳು ನಿಮ್ಮ ಬಳಿ ಇರುವ ಚಿನ್ನವನ್ನ ಅಡಮಾನಕ್ಕೆ ಇರಿಸಿಕೊಂಡು ಕಡಿಮೆ ಬಡ್ಡಿಯ ಮೊತ್ತಕ್ಕೆ ಸಾಲಗಳನ್ನ ನೀಡುತ್ತಾರೆ. ನಿಮ್ಮ ಬಳಿ ಇರುವ ಚಿನ್ನದ ಮೇಲೆ ಸಾಲ ಪಡೆಯುವುದು ಬಹಳ ಸರಳವಾಗಿದೆ ಕೂಡ. ಒಂದು ನಿಮ್ಮ ಸಿಬಿಲ್ ಮತ್ತು ಸಂಬಳ ಹಾಗೂ ಖಾತೆಯ ಹೆಚ್ಚು ವಿವರಗಳ ಪರಿಶೀಲನೆಗೆ ಬ್ಯಾಂಕ್ ಮುಂದಾಗೊದಿಲ್ಲ. ಚಿನ್ನ ಸ್ವೀಕರಿಸಿ ಕ್ಷಣಮಾತ್ರದಲ್ಲಿ ಲೋನ್ ಕೊಡ್ತಾರೆ. ಮತ್ತೊಮದು ದೊಡ್ಡ ಅಡ್ವಾಂಟೇಜ್ ಅಂದ್ರೆ ಈ ಸಾಲಕ್ಕೆ ಕಡಿಮೆ ಬಡ್ಡಿ ದರ ಅನ್ನೋದು. ಇದೀಗ ಈ ಬಡ್ಡಿ ದರ ಮತ್ತಷ್ಟು ಕಡಿಮೆಯಾಗಿದೆ.
ನೀವು ಪರ್ಸನಲ್ ಲೋನ್ ತಗೊಂಡ್ರೆ ಕಮ್ಮಿ ಅಂದರೂ 12ರಿಂದ 14 ಪರ್ಸೆಂಟ್ ವರೆಗೆ ಬಡ್ಡಿ ದರ ಇರುತ್ತೆ. ಆದ್ರೆ ಚಿನ್ನದ ಸಾಲದಲ್ಲಿ ಕೇವಲ 8 ಪರ್ಸೆಂಟ್ ಗೆ ಸಾಲ ಸಿಗುತ್ತೆ ಮತ್ತು ಇದು ಯಾವುದೇ ರೀತಿ ನಿಮ್ಮ ಸಿಬಿಲ್ ಮೇಲೆ ಪರಿಣಾಮ ಬಿರುವುದಿಲ್ಲ ಕೂಡ. ನಾನಾ ರೀತಿಯ ಬ್ಯಾಂಕ್ಗಳು 2 ವರ್ಷದ 5 ಲಕ್ಷದ ಚಿನ್ನದ ಸಾಲಕ್ಕೆ ಬೇರೆ ಬೇರೆ ಬಡ್ಡಿ ದರಗಳನ್ನ ನಿಗದಿ ಮಾಡಿದ್ದು , ಕನಿಷ್ಠ 8 ರಿಂದ ಗರಿಷ್ಠ ಅಂದ್ರೆ 10 ಪರ್ಸೆಂಟ್ ಬಡ್ಡಿಗೆ ಸಾಲ ಸುಲಭವಾಗಿ ನಿಮ್ಮ ಕೈಸೇರಲಿದೆ. ಹಾಗಾಗಿ ಪರ್ಸನಲ್ ಲೋನ್ ಕೊಳ್ಳುವ ಮುನ್ನ ಒಮ್ಮೆ ಗೋಲ್ಡ್ ಲೋನ್ ಬಗ್ಗೆ ವಿಚಾರಿಸಿ , ಬಡ್ಡಿಯ ಸುಳಿಗೆ ಸಿಲುಕದೆ ಸಾಲ ತೀರಿಸಿಕೊಳ್ಳಿ.


Click it and Unblock the Notifications