For Quick Alerts
ALLOW NOTIFICATIONS  
For Daily Alerts

ಸೋನಿ ಇಂಡಿಯಾ ಜೊತೆಗೆ ವಿಲೀನಗೊಳ್ಳಲಿದೆ ಜೀ ಎಂಟರ್‌ಟೈನ್‌ಮೆಂಟ್: ಜೀ ಷೇರು 20% ಜಿಗಿತ

|

ಜೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್‌ ಲಿಮಿಟೆಡ್, ಮನರಂಜನಾ ಕ್ಷೇತ್ರದ ಬಹುದೊಡ್ಡ ಸಂಸ್ಥೆ ಸೋನಿ ಪಿಕ್ಚರ್ಸ್ ನೆಟ್‌ವರ್ಕ್ಸ್‌ ಇಂಡಿಯಾದೊಂದಿಗೆ (ಎಸ್‌ಪಿಎನ್‌ಐ) ವಿಲೀನಗೊಳ್ಳಲಿದೆ. ಈ ಕುರಿತಾಗಿ ಮಂಡಳಿಯು ತಾತ್ವಿಕ ಒಪ್ಪಿಗೆಯನ್ನು ನೀಡಿರುವುದಾಗಿ ಜೀ ಎಂಟರ್‌ಟೈನ್‌ಮೆಂಟ್ ಬುಧವಾರ ತಿಳಿಸಿದೆ.

ಪ್ರೈಸ್ ವಾರ್ ಗೆ ಮುನ್ನುಡಿ ಬರೆಯುತ್ತಿದೆ ಓಲಾ ಎಲೆಕ್ಟ್ರಿಕ್ ವೆಹಿಕಲ್ !ಪ್ರೈಸ್ ವಾರ್ ಗೆ ಮುನ್ನುಡಿ ಬರೆಯುತ್ತಿದೆ ಓಲಾ ಎಲೆಕ್ಟ್ರಿಕ್ ವೆಹಿಕಲ್ !

ಸೋನಿಯೊಂದಿಗೆ ಜೀ ಎಂಟರ್‌ಟೈನ್‌ಮೆಂಟ್ ವಿಲೀಗೊಳ್ಳುತ್ತಿದೆ ಎಂದು ಸುದ್ದಿ ಹೊರಬಿದ್ದ ಕೂಡಲೇ ಜೀ ಎಂಟರ್‌ಟೈನ್‌ಮೆಂಟ್ ಷೇರುಗಳು ಶೇಕಡಾ 20ಕ್ಕಿಂತ ಹೆಚ್ಚು ಅಥವಾ ಸುಮಾರು 55.65 ರೂಪಾಯಿ ಹೆಚ್ಚಾಗಿ 311.35 ರೂಪಾಯಿಗೆ ತಲುಪಿದೆ.

ಡಿಜಿಟಲ್ ಪ್ರಸಾರದ ಜೊತೆಗೆ ಮೀಡಿಯಾದಲ್ಲಿ ಜೀ ಟೀವಿ ಬ್ರ್ಯಾಂಡ್ ಮೂಲಕ ಗುರುತಿಸಿಕೊಂಡಿದೆ. ಸಾಲದ ಒತ್ತಡದ ನಡುವೆ ಜೀ ಸಂಸ್ಥೆಯ ಆಡಳಿತ ಮಂಡಳಿಯಲ್ಲಿ ಬದಲಾವಣೆ ಮಾಡುವಂತೆ ಪ್ರಮುಖ ಹೂಡಿಕೆದಾರರು ಒತ್ತಡವನ್ನು ಹೇರಿದ್ದರು. ಇದರ ಜೊತೆಗೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪುನೀತ್ ಗೋಯೆಂಕಾ ಅವರನ್ನು ಮಂಡಳಿಯಿಂದ ಹೊರಗಿಡುವಂತೆ ಒತ್ತಾಯ ಕೇಳಿಬಂದಿತ್ತು.

ಆದರೆ ಈಗ ಜೀ ಮತ್ತು ಎಸ್‌ಪಿಎನ್ಐ ನೆಟ್‌ವರ್ಕ್, ಡಿಜಿಟಲ್ ಸ್ವತ್ತುಗಳು ನಿರ್ವಹಣಾ ಕಾರ್ಯಾಚರಣೆಗಳು ಹಾಗೂ ಕಾರ್ಯಕ್ರಮ ಸಂಗ್ರಹಗಳನ್ನು ವಿಲೀನಗೊಳಿಸುವ ಒಪ್ಪಂದಕ್ಕೆ ಬರಲಾಗಿದೆ.

ಈ ಒಪ್ಪಂದದ ಪ್ರಕಾರ ಜೀ ಸಂಸ್ಥೆಯ ಹೂಡಿಕೆಗಳು ಶೇಕಡಾ 47.07ಕ್ಕೆ ಉಳಿದಿದೆ ಉಳಿದ ಷೇರುಗಳು ಸೋನಿ ಇಂಡಿಯಾ ನೆಟ್‌ವರ್ಕ್‌ ಹೂಡಿಕೆದಾರರ ಒಡೆತನಕ್ಕೆ ಸೇರಿದೆ. ಸೋನಿ ಸುಮಾರು 1.57 ಬಿಲಿಯನ್ ಡಾಲರ್ ಅಥವಾ 11,571 ಕೋಟಿ ಹೂಡಿಕೆ ಮಾಡಲಿದೆ. ಈ ಮೂಲಕ ಶೇಕಡಾ 52.93ರಷ್ಟು ಷೇರು ಪಾಲು ಪಡೆಯಲಿದೆ.

ದೇಶದ ಅತಿದೊಡ್ಡ ಮನರಂಜನಾ ನೆಟ್‌ವರ್ಕ್

ದೇಶದ ಅತಿದೊಡ್ಡ ಮನರಂಜನಾ ನೆಟ್‌ವರ್ಕ್

ಜೀ ಎಂಟರ್‌ಟೈನ್‌ಮೆಂಟ್ ಹಾಗೂ ಸೋನಿ ಇಂಡಿಯಾ ನೆಟ್‌ವರ್ಕ್‌ ವಿಲೀನದೊಂದಿಗೆ ಎರಡು ಕಂಪನಿಗಳು ಒಟ್ಟಾಗಿ ಭಾರತದಲ್ಲಿ ಅತಿದೊಡ್ಡ ಮನರಂಜನಾ ಜಾಲವನ್ನು ರಚಿಸಲಿದ್ದು, ಶೇಕಡಾ 26ರಷ್ಟು ವೀಕ್ಷಣೆಯ ಹಂಚಿಕೆಯನ್ನು ಹೊಂದಿದ್ದು, ಜೀ ಜೊತೆ ಶೇಕಡಾ 18ರಷ್ಟು ವೀಕ್ಷಕರ ಪಾಲು ಮತ್ತು ಸೋನಿ ಶೇಕಡಾ 8ರಷ್ಟು ವೀಕ್ಷಕರ ಪಾಲು ಹೊಂದಿದೆ.

ಬರೋಬ್ಬರಿ 75 ಚಾನಲ್‌ಗಳು

ಬರೋಬ್ಬರಿ 75 ಚಾನಲ್‌ಗಳು

ಎರಡು ಕಂಪನಿ ವಿಲೀನದೋಂದಿಗೆ ಬರೋಬ್ಬರಿ 75 ಚಾನೆಲ್‌ಗಳ ನೆಟ್‌ವರ್ಕ್ ಅನ್ನು ಹೊಂದಲಿದೆ. SPNI ಆಪರೇಟಿಂಗ್ 26 ಚಾನೆಲ್‌ಗಳೊಂದಿಗೆ ಕಾರ್ಯನಿರ್ವಹಿಸುತ್ತದೆ ಮತ್ತು ಕ್ರೀಡಾ ಪ್ರಕಾರದಲ್ಲಿ ಎರಡು ಹೊಸ ಚಾನೆಲ್‌ಗಳು ಸೇರಿದೆ. ಇನ್ನು ಜೀ ಎಂಟರ್‌ಟೈನ್‌ಮೆಂಟ್ 49 ಚಾನೆಲ್‌ಗಳನ್ನು ಸೇರಿಸುತ್ತದೆ.

ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ 2021: ಅಕ್ಟೋಬರ್ 7ರಿಂದ ಪ್ರಾರಂಭಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ 2021: ಅಕ್ಟೋಬರ್ 7ರಿಂದ ಪ್ರಾರಂಭ

Array

Array

ಸೋನಿ ಹಾಗೂ ಜೀ ವಿಲೀನಗೊಳ್ಳುವ ಮೊದಲು ಅತಿದೊಡ್ಡ ನೆಟ್‌ವರ್ಕ್ ಆಗಿ ಗುರುತಿಸಿಕೊಂಡಿದ್ದು ಸ್ಟಾರ್ ಹಾಗೂ ಡಿಸ್ನಿ ಆಗಿದೆ. ಈ ಎರಡು ಕಂಪನಿಗಳು ಒಟ್ಟಾಗಿ 60 ಕ್ಕೂ ಹೆಚ್ಚು ಚಾನೆಲ್‌ಗಳನ್ನು ಹೊಂದಿರುವ ಮತ್ತೊಂದು ದೊಡ್ಡ ನೆಟ್‌ವರ್ಕ್ ಆಗಿದೆ. ಸ್ಟಾರ್ ಮತ್ತು ಡಿಸ್ನಿ ಇಂಡಿಯಾ ಸುಮಾರು 18 ರಿಂದ 20 ಪ್ರತಿಶತದಷ್ಟು ವೀಕ್ಷಕರ ಪಾಲನ್ನು ಹೊಂದಿವೆ.

173 ದೇಶಗಳಲ್ಲಿದೆ ಜೀ ನೆಟ್‌ವರ್ಕ್

173 ದೇಶಗಳಲ್ಲಿದೆ ಜೀ ನೆಟ್‌ವರ್ಕ್

ಇದರ ಜೊತೆಯಲ್ಲಿ, ಜೀ 173 ಕ್ಕೂ ಹೆಚ್ಚು ದೇಶಗಳಲ್ಲಿ ಮತ್ತು ಪ್ರಪಂಚದಾದ್ಯಂತ 1.3 ಶತಕೋಟಿಗೂ ಹೆಚ್ಚು ಜನರನ್ನು ತಲುಪಿದೆ. ಪ್ರತಿ ವಾರ ಭಾರತದಲ್ಲಿ 600 ದಶಲಕ್ಷಕ್ಕೂ ಹೆಚ್ಚು ಜನರನ್ನು ಜೀ ತಲುಪುತ್ತಿದೆ. ಆದರೆ ಸೋನಿ ಭಾರತದಲ್ಲಿ 700 ಮಿಲಿಯನ್ ವೀಕ್ಷಕರನ್ನು ತಲುಪುತ್ತದೆ ಮತ್ತು 167 ದೇಶಗಳಲ್ಲಿ ಲಭ್ಯವಿದೆ .

ವೀಡಿಯೋ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌

ವೀಡಿಯೋ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌

ಎರಡೂ ನೆಟ್‌ವರ್ಕ್‌ಗಳು ವೀಡಿಯೋ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳನ್ನು ಹೊಂದಿವೆ. ZEE5 ಮತ್ತು SonyLIV ಪ್ರತ್ಯೇಕ ಸ್ಟ್ರೀಮಿಂಗ್ ಹೊಂದಿದ್ದು, ಚಾನೆಲ್‌ಗಳ ಜೊತೆಗೆ ಒಟಿಟಿ ಮೂಲಕ ಜನರನ್ನು ಹೆಚ್ಚಾಗಿ ತಲುಪಲಿದೆ.

English summary

Zee Entertainment Announces Merger Deal With Sony India

Zee Entertainment Enterprises Limited (ZEEL) on Wednesday announced a merger with Sony Pictures Networks India (SPNI). After the merger, Sony will invest $1.57 billion and will be the majority shareholder with 52.93% controlling stake.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X