ಆನ್‌ಲೈನ್ ಮೂಲಕ ದಿನಸಿ ವಿತರಣೆ ಸೇವೆಯನ್ನು ನೀಡುವ ಸಂಸ್ಥೆಯಾದ ಜೆಪ್ಟೊ ಫಂಡ್ ರೈಸಿಂಗ್ ಮೂಲಕ 200 ಮಿಲಿಯನ್ ಡಾಲರ್ ಅನ್ನು ಸಂಗ್ರಹ ಮಾಡಿದೆ. ಈ ಮೂಲಕ ಸಂಸ್ಥೆಯ ಮೌಲ್ಯವು 1.4 ಬಿಲಿಯನ್ ಡಾಲರ್ ಆಗಿದೆ. ಇದಾದ ಬಳಿಕ ಸಂಸ್ಥೆಯು 2023 ರ ಮೊದಲ ಯುನಿಕಾರ್ನ್ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ನಿಧಿಸಂಗ್ರಹಣೆಯ ನೇತೃತ್ವವನ್ನು ಸ್ಟೆಪ್‌ಸ್ಟೋನ್ ಗ್ರೂಪ್ ನಂತರ ಕ್ಯಾಲಿಫೋರ್ನಿಯಾ ಮೂಲದ ವಿಸಿ ಸಂಸ್ಥೆ ಗುಡ್‌ವಾಟರ್ ಕ್ಯಾಪಿಟಲ್ ನಡೆಸಿದೆ. ಭಾರತದಲ್ಲಿ ಕೊರೊನಾ ಸಾಂಕ್ರಾಮಿಕವು ಕಾಣಿಸಿಕೊಂಡಾಗ ದುಬೈನಲ್ಲಿ ಬೆಳೆದ ಇಬ್ಬರು ಬಾಲ್ಯದ ಸ್ನೇಹಿತರು ಆನ್‌ಲೈನ್ ಮೂಲಕ ದಿನಸಿಯನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ನಿರ್ಧಾರ ಮಾಡಿದ್ದಾರೆ. ಅದೀಗ ಯುನಿಕಾರ್ನ್ ಆಗಿ ಬೆಳೆದಿದೆ.

ಕಿರಾನಾ (ಕಿರಾಣಿ ಅಂಗಡಿಗಳು) ಗಳೊಂದಿಗೆ ಸಹಭಾಗಿತ್ವವನ್ನು ಹೊಂದಿದ್ದ ಅವರ ಇಂಟರ್ನೆಟ್ ವಿತರಣಾ ಸೇವೆಯು ಕಿರಣಕಾರ್ಟ್ ಎಂಬ ಹೆಸರಿನಲ್ಲಿ ಆರಂಭವಾಗಿದೆ. ನವೆಂಬರ್ 2021 ರಲ್ಲಿ, ಇದು ಜೆಪ್ಟೊ ಹೆಸರಿನಲ್ಲಿ ಫಂಡ್ ರೈಸಿಂಗ್ ಮೂಲಕ 60 ಮಿಲಿಯನ್ ಡಾಲರ್ ನಿಧಿಸಂಗ್ರಹವನ್ನು ಪಡೆದುಕೊಂಡಿದೆ.
10 ನಿಮಿಷಗಳಲ್ಲಿ ದಿನಸಿ ವಿತರಣೆ ಭರವಸೆಯನ್ನು ನೀಡುವ ಈ ಸಂಸ್ಥೆ ಡಿಸೆಂಬರ್‌ನಲ್ಲಿ ಹೆಚ್ಚುವರಿ 100 ಮಿಲಿಯನ್ ಡಾಲರ್ ನಿಧಿಸಂಗ್ರಹವನ್ನು ಪಡೆದುಕೊಂಡಿತು. ಈ ಮೂಲಕ ಅದರ ಮೌಲ್ಯವು 570 ಮಿಲಿಯನ್ ಡಾಲರ್‌ಗೆ ಏರಿಕೆಯಾಯಿತು. ಜೆಪ್ಟೊ ಈ ವರ್ಷದ ಮೇ ತಿಂಗಳಲ್ಲಿ 200 ಮಿಲಿಯನ್ ಡಾಲರ್ ಫಂಡ್ ರೈಸಿಂಗ್ ಮೂಲಕ ಪಡೆದುಕೊಂಡಿದೆ. ಇದರಿಂದಾಗಿ ಸಂಸ್ಥೆಯ ಮೌಲ್ಯವು 900 ಮಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ.
ಕಂಪನಿಯ ಮೌಲ್ಯಮಾಪನದಲ್ಲಿ ಶೇಕಡ 50ಕ್ಕಿಂತ ಅಧಿಕ ಏರಿಕೆಯಿಂದಾಗಿ ಭಾರತದ ಶ್ರೀಮಂತ ಕ್ಲಬ್‌ಗೆ ಜೆಪ್ಟೊ ಸಂಸ್ಥಾಪಕರು ಸೇರ್ಪಡೆಯಾಗಿದ್ದಾರೆ. ಇದರಿಂದಾಗಿ ಜೆಪ್ಟೊ, ವೊಹ್ರಾ, ಪಲಿಚಾ ಸಂಸ್ಥಾಪಕರು ಭಾರತದ ಶ್ರೀಮಂತ ಕ್ಲಬ್‌ನ ಅತ್ಯಂತ ಕಿರಿಯ ಸದಸ್ಯರಾಗಿದ್ದಾರೆ. ತ್ವರಿತ ದಿನಸಿ ವಿತರಣಾ ಸ್ಟಾರ್ಟಪ್ ಆದ ಜೆಪ್ಟೊ ದೇಶಾದ್ಯಂತ ವಿತರಣಾ ಕೇಂದ್ರಗಳ ಜಾಲದ ಮೂಲಕ 6,000 ದಿನಸಿ ಉತ್ಪನ್ನಗಳನ್ನು ತಲುಪಿಸುತ್ತದೆ.
"ಈ ನಿಧಿಸಂಗ್ರಹವು ಒಂದು ದಶಕದಲ್ಲಿ ಬಂಡವಾಳ ಮಾರುಕಟ್ಟೆಗಳಲ್ಲಿನ ಕುಸಿತದ ಮಧ್ಯೆ ಜೆಪ್ಟೊ ಅತ್ಯುತ್ತಮ-ವರ್ಗದ ಕಾರ್ಯಾಚರಣಾ ಶಿಸ್ತನ್ನು ಹೊಂದಿರುವುದಕ್ಕೆ ಸಾಕ್ಷಿಯಾಗಿದೆ. ಇಬಿಐಟಿಡಿಎ ಪಾಸಿಟಿವ್ ಆಗಿದೆ. 12 ರಿಂದ 15 ತಿಂಗಳುಗಳಲ್ಲಿ ಇದು ಪಾಸಿಟಿವ್ ಆಗಿದೆ. ಜೆಪ್ಟೊ ವೇಗವಾಗಿ ಬೆಳೆಯುತ್ತಿರುವಾಗ ಲಾಭವು ಅಧಿಕವಾಗಿದೆ," ಎಂದು ಜೆಪ್ಟೊ ಹೇಳಿಕೆಯಲ್ಲಿ ತಿಳಿಸಿದೆ.
ಜೆಪ್ಟೊ ವರ್ಷದಿಂದ ವರ್ಷಕ್ಕೆ ಮಾರಾಟದಲ್ಲಿ ಶೇಕಡ 300 ರಷ್ಟು ಜಿಗಿತ ಕಂಡಿದೆ. ಮುಂದಿನ ಕೆಲವು ತ್ರೈಮಾಸಿಕಗಳಲ್ಲಿ ವಾರ್ಷಿಕ ಮಾರಾಟದಲ್ಲಿ 1 ಬಿಲಿಯನ್ ಡಾಲರ್‌ಗೆ ತಲುಪುವ ನಿರೀಕ್ಷೆಯಿದೆ ಎಂದು ಸಂಸ್ಥೆ ಹೇಳಿದೆ.


Click it and Unblock the Notifications