ಹೆಸರಾಂತ ಆನ್‌ಲೈನ್ ಫುಡ್ ಡೆಲಿವರಿ ಸಂಸ್ಥೆ ಜೊಮ್ಯಾಟೊ ಷೇರುಗಳು ಇಂದು ಸೆನ್ಸೆಕ್ಸ್ 30 ಷೇರುಗಳ ಪಟ್ಟಿಗೆ ಸೇರ್ಪಡೆಯಾಗಿದೆ. ಆದರೆ ಷೇರುಪೇಟೆಯಲ್ಲಿ ಲಿಸ್ಟ್ ಆದ ಬೆನ್ನಲ್ಲೇ ಜೊಮ್ಯಾಟೊ ಷೇರು ಇಳಿಕೆಯಾಗಿದೆ. ಹಾಗಿದ್ರೆ ಇಂದಿನ ಷೇರು ಮಾರುಕಟ್ಟೆಯಲ್ಲಿ ಜೊಮ್ಯಾಟೊ ಸ್ಟಾಕ್ ಎಷ್ಟು ಪರ್ಸೆಂಟ್ ಕಡಿಮೆಯಾಗಿದೆ ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ.
BSE ಸೂಚ್ಯಂಕ್ಕೆ ಸೇರ್ಪಡೆಗೊಂಡ ಮೊದಲ ಹೊಸ ಯುಗದ ಟೆಕ್ ಸ್ಟಾಕ್ ಜೊಮ್ಯಾಟೊ ಆಗಿದೆ. ಹೊಸ ಯುಗದ ಟೆಕ್ ಸ್ಟಾಕ್ ಸೆನ್ಸೆಕ್ಸ್ 30ರ ಷೇರುಗಳ ಪಟ್ಟಿಯಲ್ಲಿ ಜೊಮ್ಯಾಟೊ ಸ್ಥಾನ ಪಡೆದುಕೊಂಡಿದೆ. ಇಂದು (ಡಿಸೆಂಬರ್ 23)ರಂದು ಜೆಎಸ್‌ಡಬ್ಲ್ಯೂ ಸ್ಟೀಲ್ ಸ್ಟಾಕ್ ಜಾಗಕ್ಕೆ ಜೊಮ್ಯಟೊ ಸ್ಟಾಕ್ ಸೇರ್ಪಡೆಯಾಗಿವೆ. ಜೊಮ್ಯಾಟೊ ಷೇರು ಸೆನ್ಸೆಕ್ಸ್‌ನಲ್ಲಿ ಸೇರ್ಪಡೆಯಿಂದಾಗಿ $513 ಮಿಲಿಯನ್ ಒಳಹರಿವು ಕಾಣಬಹುದು ಎಂದು ನುವಾಮ ಆಲ್ಟರ್ನೇಟಿವ್ & ಕ್ವಾಂಟಿಟೇಟಿವ್ ರಿಸರ್ಚ್ ಹೇಳಿದೆ.

ಜೊಮ್ಯಾಟೊ ಷೇರು ಕುಸಿತ
ಸೇರ್ಪಡೆಗೊಂಡ ಮೊದಲ ದಿನವೇ (ಡಿ. 23 ಸೋಮವಾರ) ಮಧ್ಯಾಹ್ನದ ಹೊತ್ತಿಗೆ ಜೊಮ್ಯಾಟೊ ಷೇರುಗಳ ಕುಸಿದಿವೆ. ಇದು ಷೇರು ಮಾರುಕಟ್ಟೆಯಲ್ಲಿ ಮಧ್ಯಾಹ್ನ 1.35ಕ್ಕೆ ಜೊಮ್ಯಾಟೊ ಷೇರು ಶೇ.2.50 ಅಥವಾ 7.10 ರೂಪಾಯಿ ಇಳಿಕೆಗೊಂಡು 275 ರೂಪಾಯಿಗಳಲ್ಲಿ ವಹಿವಾಟು ನಡೆಸುತ್ತಿದೆ. ಬಿಎಸ್‌ಇನಲ್ಲಿ ಶೇ.2.39 ಅಥವಾ 6.75 ರೂಪಾಯಿ ಕುಸಿದು 275.10 ರೂಪಾಯಿಗಳಲ್ಲಿ ವಹುವಾಟು ಇದೆ. ಜೊಮ್ಯಾಟೊ ಸ್ಟಾಕ್ ಇಂದು ಶೇಕಡಾ 3ರಷ್ಟು ಇಳಿಕೆ ಕಂಡಿವೆ.
ಝೊಮಾಟೊದ ಇಲ್ಲಿಯವರಿಗಿನ ಆರ್ಥಿಕ ಸಾಧನೆಯು ಷೇರು ಮಾರುಕಟ್ಟೆಯಲ್ಲಿ ಏರಿಕೆಗೆ ಕಾರಣವಾಗುತ್ತವೆ. Q2 FY25 ರಲ್ಲಿ, ಕಂಪನಿಯು ರೂ 176 ಕೋಟಿಗಳ ಏಕೀಕೃತ ನಿವ್ವಳ ಲಾಭವನ್ನು ವರದಿ ಮಾಡಿದೆ. ಇದು ಕಳೆದ ವರ್ಷದ ಮೂರುತಿಂಗಳಲ್ಲಿ 36 ಕೋಟಿಯಿಂದ ವರ್ಷದಿಂದ ವರ್ಷಕ್ಕೆ (YoY) 389% ಬೆಳವಣಿಗೆಯನ್ನು ಕಂಡಿದೆ.
ಜೊಮ್ಯಾಟೊ ಷೇರು ಈ ವರ್ಷದಲ್ಲಿ ಹೇಗಿದೆ?
ಜೊಮ್ಯಾಟೊ ಷೇರುಗಳು ಈ ವರ್ಷದಲ್ಲಿ ಹೆಚ್ಚಿನ ಷೇರನ್ನು ಪಡೆದುಕೊಂಡಿದೆ. ಕಳೆದ ಆರು ತಿಂಗಳಿನಲ್ಲಿ ಜೊಮ್ಯಾಟೊ ಷೇರು ಶೇ. 43 ನಷ್ಟು ಏರಿಕೆಕೊಂಡಿತ್ತು. ವರ್ಷದಿಂದ ವರ್ಷಕ್ಕೆ ಜೊಮ್ಯಾಟೊ ಷೇರುಗಳು ಶೇಕಡಾ 126ರಷ್ಟು ಏರಿಕಗೊಂಡಿದ್ದು ಕಳೆದ ಎರಡು ವರ್ಷದಲ್ಲಿ ಶೇಕಡಾ 350ರಷ್ಟು ಜಿಗಿತವನ್ನು ಸಾಧಿಸಿದೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications