ಸೆಲ್ಫ್ ಮೇಡ್ ಉದ್ಯಮಿಗಳ ಪಟ್ಟಿಯಲ್ಲಿ ಆಹಾರ ಡೆಲಿವರಿ ಕಂಪನಿ ಜೊಮ್ಯಾಟೊ ಸಿಇಒ ದೀಪಿಂದರ್ ಗೋಯಲ್ ಭಾರತದ ಎರಡನೇಅತಿದೊಡ್ಡ ಸೆಲ್ಫ್ ಮೇಡ್ ಗಟ್ಟಿಸಿಕೊಂಡು ಶ್ರೇಯಸ್ಸು ಉದ್ಯೋಗಿಯಾಗಿದ್ದಾರೆ. ಹಾಗಿದ್ರೆ ಮೊದಲ ಸ್ಥಾನದಲ್ಲಿ ಯಾರಿಗೆ ಸಿಕ್ಕಿದೆ ಸ್ಥಾನ? ದೀಪಿಂದರ್ ಗೋಯಲ್ ಸಂಪತ್ತು ಎಷ್ಟಿದೆ? ಇಲ್ಲಿದೆ ಹೆಚ್ಚಿನ ಮಾಹಿತಿ
ಹೌದು, ಷೇರು ಮಾರುಕಟ್ಟೆಯಲ್ಲಿ ಜೊಮ್ಯಾಟೊ ಮಾರುಕಟ್ಟೆ ಬಂಡವಾಳವು ಶೇಕಡಾ 190 ರಷ್ಟು ಏರಿಕೆಯಾಗಿ 2,51,900 ಕೋಟಿ ರೂಪಾಯಿ ತಲುಪಿದೆ. ಈ ಸಂದರ್ಭದಲ್ಲಿ ಹುರುನ್ ಇಂಡಿಯಾ ಪಟ್ಟಿ ಬಿಡುಗಡೆಯಾಗಿದ್ದು, ಜೊಮ್ಯಾಟೊ ಸಿಇಒ ದೀಪಿಂದರ್ ಗೋಯಲ್ ದೇಶದ ಎರಡನೇ ಅತಿದೊಡ್ಡ ಸೆಲ್ಫ್ ಮೇಡ್ ಬಿಲಿಯನೇರ್ ಆಗಿದ್ದಾರೆ. ದೀಪಿಂದರ್ ಗೋಯಲ್ ನಂತರದ ಸ್ಥಾನದಲ್ಲಿ ಸ್ವಿಗ್ಗಿಯ ಶ್ರೀಹರ್ಷ ಮಜೆಟಿ ಹಾಗೂ ನಂದನ್ ರೆಡ್ಡಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಹುರುನ್ ಪ್ರಕಾರ ಸ್ವಿಗ್ಗಿ ಷೇರು ಮಾರುಕಟ್ಟೆಗೆ ಪ್ರವೇಶಿಸಿದ ಬಳಿಕ ಕಳೆದ ವರ್ಷದಲ್ಲಿ ಮೌಲ್ಯವು ಶೇ.52 ಏರಿಕೆಗೊಂಡಿದ್ದು, 1 ಲಕ್ಷ ಕೋಟಿ ರೂಪಾಯಿ ದಾಟಿದೆ.
ಅವೆನ್ಯೂ ಸೂಪರ್ ಮಾರ್ಟ್ಸ್ ಮಾಲೀಕನಿಗೆ ಮೊದಲ ಸ್ಥಾನ
ಅವೆನ್ಯೂ ಸೂಪರ್ ಮಾರ್ಟ್ಸ್ ಮಾಲೀಕ ರಾಧಾಕಿಶನ್ ದಮಾನಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಐಡಿಎಫ್ಸಿ ಫಸ್ಟ್ ಪ್ರೈವೇಟ್ ಅಥವಾ ಹುರುನ್ ಇಂಡಿಯಾ ಟಾಪ್ 200 ಸೆಲ್ಫ್ ಮೇಡ್ ಉದ್ಯಮಿಗಳ ಪಟ್ಟಿ 2024 ಪ್ರಕಾರ ರಾಧಾಕಿಶನ್ ದಮಾನಿ ಮೊದಲ ಸ್ಥಾನದಲ್ಲೇ ಉಳಿದಿದ್ದಾರೆ. ಇವರ ಕಂಪನಿಯ ಮಾರುಕಟ್ಟೆ ಮೌಲ್ಯವು 3.4 ಲಕ್ಷ ಕೋಟಿ ರೂಪಾಯಿನಷ್ಟಿದೆ.ಕಳೆದ ವರ್ಷದಲ್ಲಿ ಮಾರುಕಟ್ಟೆ ಮೌಲ್ಯವು ಶೇಕಡಾ 44ರಷ್ಟು ಹೆಚ್ಚಾಗಿದೆ.
4ನೇ ಸ್ಥಾನದಲ್ಲಿ ಮೇಕ್ಮೈಟ್ರಿಪ್ ಸಂಸ್ಥಾಪಕರು
ಮೇಕ್ ಮೈ ಟ್ರಿಪ್ನ ದೀಪ್ ಕರ್ಲ್ರಾ ಮತ್ತು ರಾಜೇಶ್ ಮಗೋವ್ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದು, ಮಾರುಕಟ್ಟೆ ಮೌಲ್ಯವು 99,300 ಕೋಟಿ ರೂಪಾಯಿನಷ್ಟಿದೆ. ಇವರಲ್ಲದೆ 96,100 ಕೋಟಿ ಮೌಲ್ಯದೊಂದಿಗೆ,ಮ್ಯಾಕ್ಸ್ ಹೆಲ್ತ್ಕೇರ್ ಇನ್ಸ್ಟಿಟ್ಯೂಟ್ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಭಯ್ ಸೋಯಿ ಅವರು ಲಿಸ್ಟ್ ನಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಪಾಲಿಸಿ ಬಜಾರ್ನ ಸಂಸ್ಥಾಪಕರಾದ ಯಶಿಶ್ ದಹಿಯಾ ಮತ್ತು ಅಲೋಕ್ ಬನ್ಸಾಲ್ ಕೂಡ ಟಾಪ್ 10ನಲ್ಲಿ ಸ್ಥಾನ ಪಡೆದಿದ್ದಾರೆ. ಇವರ ಮಾರುಕಟ್ಟೆ ಮೌಲ್ಯವು 78,600 ಕೋಟಿ ರೂಪಾಯಿನಷ್ಟಿದ್ದು, ಮಾರುಕಟ್ಟೆ ಮೌಲ್ಯವು 128 ಪರ್ಸೆಂಟ್ ಹೆಚ್ಚಾಗಿದೆ.ಇವರ ಆದಾಯವು ಶೇಕಡಾ 36ರಷ್ಟು ಏರಿಕೆಯಾಗಿದೆ.


Click it and Unblock the Notifications