For Quick Alerts
ALLOW NOTIFICATIONS  
For Daily Alerts

ಜೊಮ್ಯಾಟೊ ಐಪಿಒ: 8,250 ಕೋಟಿ ರೂಪಾಯಿ ಸಂಗ್ರಹದ ಗುರಿ

|

ಆನ್‌ಲೈನ್ ಆಹಾರ ವಿತರಣಾ ವೇದಿಕೆ ಜೊಮ್ಯಾಟೊ ಷೇರು ಮಾರುಕಟ್ಟೆ ಪ್ರವೇಶಿಸಲು ನಿರ್ಧರಿಸಿದ್ದು, ಐಪಿಒ (ಆರಂಭಿಕ ಷೇರು ಕೊಡುಗೆ) ಅರ್ಜಿ ಸಲ್ಲಿಸಿದೆ. ಚೀನಾದ ಆಂಟ್‌ ಗ್ರೂಪ್‌ ಬೆಂಬಲಿತ ಜೊಮ್ಯಾಟೊ ಷೇರು ಮಾರಾಟದ ಮೂಲಕ 8,250 ಕೋಟಿ ರೂ. (1.11 ಬಿಲಿಯನ್‌ ಡಾಲರ್‌) ಸಂಗ್ರಹಿಸಲು ಮುಂದಾಗಿದೆ.

ಮಂಗಳವಾರ, ನೌಕ್ರಿ ಡಾಟ್ ಕಾಮ್‌ನ ಮೂಲ ಕಂಪನಿಯಾದ ಇನ್ಫೋ ಎಡ್ಜ್, ಜೊಮ್ಯಾಟೊ ಮುಂಬರುವ ಐಪಿಒಗೆ ಅರ್ಜಿ ಸಲ್ಲಿಸುವುದಾಗಿ ತಿಳಿಸಿತು. ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ ಆನ್‌ಲೈನ್‌ ಡಿಲಿವರಿಗೆ ಬೇಡಿಕೆ ಹೆಚ್ಚಿದ್ದು, ಇದೇ ಸಂದರ್ಭದಲ್ಲಿ ದೊಡ್ಡ ಮಟ್ಟಿನ ಐಪಿಒ ಪ್ರಾರಂಭಿಸಲು ಜೊಮ್ಯಾಟೊ ಮುಂದಾಗಿದೆ.

ಜೊಮ್ಯಾಟೊ ಐಪಿಒ: 8,250 ಕೋಟಿ ರೂಪಾಯಿ ಸಂಗ್ರಹದ ಗುರಿ

''ಮುಂಬರುವ ಜೊಮ್ಯಾಟೊ ಐಪಿಒ 'ದೋಷಪೂರಿತ ಚಿಂತನೆ'ಯನ್ನು ದೂರ ಮಾಡುತ್ತಿದೆ. ನೀವು ಭಾರತದಿಂದ ಹೊರಗೆ ನಿಧಿ ಸಂಗ್ರಹದ ರೀತಿಯಲ್ಲಿಯೇ, ಭಾರತದಲ್ಲಿಯೂ ಹಣ ಸಂಗ್ರಹಿಸಬಹುದು'' ಎಂದು ಮಣಿಪಾಲ್ ಗ್ಲೋಬಲ್ ಎಜುಕೇಶನ್ ಅಧ್ಯಕ್ಷ ಟಿವಿ ಮೋಹನ್‌ದಾಸ್ ಪೈ ಫೈನಾನ್ಷಿಯಲ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

2020 ರಲ್ಲಿ ಏಪ್ರಿಲ್ 1 ರಿಂದ ಡಿಸೆಂಬರ್ 31 ರವರೆಗಿನ ಅವಧಿಯಲ್ಲಿ ಕಂಪನಿಯ ಆದಾಯ 1,367.65 ಕೋಟಿ ರೂ. ಆಗಿದೆ.

2019-20ರ ಹಣಕಾಸು ವರ್ಷದಲ್ಲಿ ಜೊಮ್ಯಾಟೊ ಆದಾಯ 2,742.74 ಕೋಟಿ ರೂ.ಗಳಾಗಿದ್ದರೆ, 2020-21ರ ಆರ್ಥಿಕ ವರ್ಷದ ಮೊದಲ 9 ತಿಂಗಳಲ್ಲಿ ಕಂಪನಿಯ ಆದಾಯದಲ್ಲಿ ತೀವ್ರ ಕುಸಿತ ಕಂಡುಬಂದಿದೆ.

ಐಪಿಒದಲ್ಲಿ ಹೊಸದಾಗಿ 7,500 ಕೋಟಿ ರೂ. ಮೊತ್ತದ ಷೇರುಗಳನ್ನು ಜೊಮ್ಯಾಟೊ ಬಿಡುಗಡೆ ಮಾಡಲಿದ್ದು, ಈಗಾಗಲೇ ಇರುವ ಹೂಡಿಕೆದಾರರು 750 ಕೋಟಿ ರೂ. ಮೊತ್ತದ ಷೇರುಗಳನ್ನು ಮಾರಲಿದ್ದಾರೆ. ಕಂಪನಿಯಲ್ಲಿ ಅತೀ ಹೆಚ್ಚು ಷೇರುಗಳನ್ನು ಹೊಂದಿರುವ ಇನ್ಫೋ ಎಡ್ಜ್‌ 750 ಕೋಟಿ ರೂ. ಮೊತ್ತದ ಷೇರುಗಳನ್ನು ಮಾರಲಿದೆ.

English summary

Zomato Files For $1.11 Billion IPO As Food Delivery Surges In Pandemic Times

Zomato has filed its Draft, kicking off one of India's most anticipated internet initial public offerings (IPOs) in a tumultuous year.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X