For Quick Alerts
ALLOW NOTIFICATIONS  
For Daily Alerts

ಜೊಮ್ಯಾಟೊ ಐಪಿಒ ಜುಲೈ 14ಕ್ಕೆ ಪ್ರಾರಂಭ: ಆರಂಭಿಕ ಬೆಲೆ 72 ರಿಂದ 76 ರೂಪಾಯಿ ನಿಗದಿ

|

ಜೊಮ್ಯಾಟೊ ಲಿಮಿಟೆಡ್ ತನ್ನ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಆಫರ್ ಬೆಲೆಯನ್ನು. 72 ರಿಂದ 76 ರೂಪಾಯಿಗೆ ನಿಗದಿಪಡಿಸಿದ್ದು, ಜುಲೈ 14 ರಂದು ತೆರೆಯಲಿದ್ದು, ಜುಲೈ 16 ರಂದು ಮುಚ್ಚಲಿದೆ ಎಂದು ಸಂಸ್ಥೆ ಹೇಳಿದೆ. ಈ ಮೂಲಕ ಅಂದಾಜಿಗಿಂತ ಮೊದಲೇ ಜೊಮ್ಯಾಟೊ ಐಪಿಒ ಸಂಚಿಕೆಯನ್ನು ತೆರೆಯಲಿದೆ.

 

ಪೆಟ್ರೋಲ್, ಡೀಸೆಲ್ ದರ ಮತ್ತಷ್ಟು ಜಿಗಿತ: ಜುಲೈ 08ರ ಲೇಟೆಸ್ಟ್ ಮಾಹಿತಿಪೆಟ್ರೋಲ್, ಡೀಸೆಲ್ ದರ ಮತ್ತಷ್ಟು ಜಿಗಿತ: ಜುಲೈ 08ರ ಲೇಟೆಸ್ಟ್ ಮಾಹಿತಿ

ಹೋಟೆಲ್, ರೆಸ್ಟೋರೆಂಟ್‌ಗಳಿಂದ ಆಹಾರವನ್ನು ಮನೆಬಾಗಿಲಿಗೆ ತಲುಪಿಸುವ ಸೇವೆ ನೀಡುವ ಜೊಮ್ಯಾಟೊ ಕಂಪನಿಯು ಷೇರುಗಳನ್ನು ಸಾರ್ವಜನಿಕ ಖರೀದಿಗೆ ಮುಕ್ತಗೊಳಿಸುವ (ಐಪಿಒ) ಪ್ರಕ್ರಿಯೆಗೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ(ಸೆಬಿ) ಇತ್ತೀಚೆಗಷ್ಟೇ ಒಪ್ಪಿಗೆ ನೀಡಿತ್ತು.

 
ಜೊಮ್ಯಾಟೊ ಐಪಿಒ: ಆರಂಭಿಕ ಬೆಲೆ 72 ರಿಂದ 76 ರೂಪಾಯಿ ನಿಗದಿ

ಈ ಸಂಚಿಕೆಯು 375 ಕೋಟಿಗಳ ಹೊಸ ಸಂಚಿಕೆ ಮತ್ತು ಅದರ ಪ್ರಸ್ತುತ ಪ್ರವರ್ತಕ ಇನ್ಫೋ ಎಡ್ಜ್ ಇಂಡಿಯಾ ಲಿಮಿಟೆಡ್‌ನಿಂದ, 9,000 ಕೋಟಿಗಳ ಮಾರಾಟದ ಪ್ರಸ್ತಾಪವನ್ನು ಒಳಗೊಂಡಿದೆ. ನೌಕರರ ಮೀಸಲಾತಿಯನ್ನು 6.5 ಮಿಲಿಯನ್ ಷೇರುಗಳಲ್ಲಿ ಇಡಲಾಗಿದೆ.

"ಇದು ಭಾರತೀಯ ಮಾರುಕಟ್ಟೆಗಳಲ್ಲಿ ಒಂದು ಅದ್ಭುತ ಕ್ಷಣವಾಗಿದೆ. ಜೊಮ್ಯಾಟೊ ಪಟ್ಟಿಮಾಡಿದ ಮೊದಲ ಪ್ರಮುಖ ಸ್ಟಾರ್ಟ್‌ಅಪ್ ಕಂಪನಿಯಾಗಿದೆ. ಇದು ಇತರ ಹಲವು ಸ್ಟಾರ್ಟ್‌ಅಪ್‌ಗಳಿಗೆ ದಾರಿ ಮಾಡಿಕೊಡುತ್ತದೆ " ಎಂದು ಜೆಎಸ್‌ಟಿ ಇನ್ವೆಸ್ಟ್‌ಮೆಂಟ್ಸ್‌ನ ಸಿಒಒ ಆದಿತ್ಯ ಕೊಂಡಾವರ್ ಹೇಳಿದ್ದಾರೆ.

ಅವರ ಪ್ಲಾಟ್‌ಫಾರ್ಮ್‌ನಲ್ಲಿನ ಆರ್ಡರ್‌ಗಳ ಸಂಖ್ಯೆ ಹಣಕಾಸು ವರ್ಷ 2018 ರಲ್ಲಿ 3.06 ಕೋಟಿಯಿಂದ ಹಣಕಾಸು ವರ್ಷ 2020 ರಲ್ಲಿ 40.31 ಕೋಟಿ ರೂಪಾಯಿ ಮತ್ತು ಹಣಕಾಸು ವರ್ಷದ 2021 ರಲ್ಲಿ 15.52 ಕೋಟಿ ಹೆಚ್ಚಾಗಿದೆ. ಸರಾಸರಿ ಆರ್ಡರ್ ಮೌಲ್ಯವು ಹಣಕಾಸು ವರ್ಷ 2019-20 ರಲ್ಲಿ 279 ರಿಂದ ಹಣಕಾಸು ವರ್ಷ 2020-21 ರಲ್ಲಿ 398 ಕೋಟಿ ರೂಪಾಯಿಗೆ ಏರಿಕೆಯಾಗಿದೆ.

English summary

Zomato IPO To Open On 14 July: Offer Price Start At Rs 72 to 76 apiece

Zomato Ltd has set the offer price for its initial public offering at Rs 72-76 a share.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X