ಜೊಮಾಟೊ ಲಿಮಿಟೆಡ್ ಗುರುವಾರ 2023-24ರ ಏಪ್ರಿಲ್-ಜೂನ್ ತ್ರೈಮಾಸಿಕದ ನಿವ್ವಳ ಲಾಭವನ್ನು ಘೋಷಣೆ ಮಾಡಿದೆ. ಈ ತ್ರೈಮಾಸಿಕದಲ್ಲಿ ಜೊಮಾಟೊ ಲಾಭ ಮೊದಲ ಬಾರಿಗೆ 2 ಕೋಟಿ ರೂಪಾಯಿಗೆ ಜಿಗಿತ ಕಂಡಿದೆ. ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ ಜೊಮಾಟೊ ಸಂಸ್ಥೆಯು ನಷ್ಟವನ್ನು ಕಂಡಿತ್ತು. ರೆಗ್ಯೂಲೆಟರಿ ಫೈಲಿಂಗ್ ಪ್ರಕಾರ ಜೊಮಾಟೊ ನಿವ್ವಳ ನಷ್ಟವು 186 ಕೋಟಿ ರೂಪಾಯಿ ಆಗಿತ್ತು.
ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಕಾರ್ಯಾಚರಣೆಗಳಿಂದ ಗಳಿಸಿದ ಆದಾಯವು 2,416 ಕೋಟಿ ರೂಪಾಯಿಗಳಷ್ಟಾಗಿದೆ. ಆದರೆ ಹಿಂದಿನ ವರ್ಷದ ಇದೇ ಅವಧಿಯಲ್ಲಿ ಆದಾಯವು 1,414 ಕೋಟಿ ರೂಪಾಯಿಗಳಷ್ಟಾಗಿತ್ತು. ಈ ನಡುವೆ ಒಟ್ಟು ವೆಚ್ಚವು ಹೆಚ್ಚಳವಾಗಿದೆ. ಒಂದು ವರ್ಷದ ಹಿಂದೆ ಇದೇ ತ್ರೈಮಾಸಿಕದಲ್ಲಿ 1,768 ಕೋಟಿ ರೂಪಾಯಿಯಷ್ಟಿದ್ದ ವೆಚ್ಚವು ಈ ವರ್ಷದಲ್ಲಿ 2,612 ಕೋಟಿ ರೂಪಾಯಿ ಆಗಿದೆ.

ಷೇರುದಾರರಿಗೆ ಬರೆದ ಪತ್ರದಲ್ಲಿ, ಜೊಮಾಟೊ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ದೀಪಿಂದರ್ ಗೋಯಲ್, ಕಂಪನಿಯು ತನ್ನ ವ್ಯವಹಾರವನ್ನು ಸರಳಗೊಳಿಸಲು, ಇದಕ್ಕಾಗಿ ಶ್ರಮಿಸುತ್ತಿದೆ," ಎಂದು ಹೇಳಿದ್ದಾರೆ. ಇನ್ನು ಮುಂದಿನ ನಾಲ್ಕು ತ್ರೈಮಾಸಿಕಗಳಲ್ಲಿ ಕಂಪನಿಯು ಸಂಪೂರ್ಣ ವ್ಯವಹಾರದಿಂದ ಲಾಭವನ್ನು ಸಾಧಿಸುವ ವಿಶ್ವಾಸವಿದೆ ಎಂದು ಮೇ ತಿಂಗಳಿನಲ್ಲಿ ತಿಳಿಸಿದ್ದರು.
ಜೊಮಾಟೊದ ಆಹಾರ ವಿತರಣಾ ವ್ಯವಹಾರದ ಹೊಂದಾಣಿಕೆಯ ಆದಾಯವು ಮೊದಲ ತ್ರೈಮಾಸಿಕದಲ್ಲಿ 1,742 ಕೋಟಿ ರೂಪಾಯಿ ಆಗಿದ್ದು, ಹಿಂದಿನ ತ್ರೈಮಾಸಿಕದಿಂದ 1,530 ಕೋಟಿ ರೂಪಾಯಿ ಹೆಚ್ಚಳವಾಗಿದೆ. ಹಾಗೆಯೇ ಹಿಂದಿನ ವರ್ಷದ ಅವಧಿಗೆ ಹೋಲಿಕೆ ಮಾಡಿದಾಗ 1,470 ಕೋಟಿ ರೂಪಾಯಿ ಆಗಿದೆ.
ಒಟ್ಟು ಆರ್ಡರ್ ಮೌಲ್ಯವು (ಜಿಒವಿ) ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಶೇಕಡ 10ರಷ್ಟು ಏರಿಕೆಯಾಗಿದ್ದು, 6,569 ಕೋಟಿ ರೂಪಾಯಿಯಿಂದ 7,318 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ವಾರ್ಷಿಕ ಆಧಾರದಲ್ಲಿ ಜಿಒವಿ 6,423 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಇನ್ನು ಬ್ಲಿಂಕಿಟ್‌ನ ಆದಾಯವು 384 ಕೋಟಿ ರೂಪಾಯಿ ಆಗಿದ್ದು, ಈ ಹಿಂದಿನ ವರ್ಷದ ಇದೇ ತ್ರೈಮಾಸಿಕದ ಆದಾಯಕ್ಕಿಂತ ಹೆಚ್ಚಳವಾಗಿದೆ. ಈ ಹಿಂದಿನ ಆದಾಯವು 164 ಕೋಟಿ ರೂಪಾಯಿ ಆಗಿತ್ತು.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಸಾವರಿನ್ ಗೋಲ್ಡ್ ಬಾಂಡ್ ಹೂಡಿಕೆದಾರರೇ, ಇಂದೇ ನಗದೀಕರಿಸಿಕೊಳ್ಳಿ ನಿಮ್ಮ ಲಾಭ!



Click it and Unblock the Notifications