ಹೆಸರಾಂತ ಫುಡ್ ಡೆಲಿವರಿ ಆ್ಯಪ್ ಜೊಮಾಟೊ (Zomato) ಷೇರು ಇಂದಿನ ವಹಿವಾಟವಿನಲ್ಲಿ ಶೇ.5 ರಷ್ಟು ಕುಸಿತ ಕಂಡಿದೆ. 2024 ರಲ್ಲಿ ಜೊಮಾಟೊ ಷೇರುಗಳು ಮೌಲ್ಯದಲ್ಲಿ ಡಬಲ್ ಆದ ನಂತರ, ಜೆಫರೀಸ್‌ನ ಆರ್ಥಿಕ ವಿಶ್ಲೇಷಕ ಪ್ರಕಾರ 2025ಕ್ಕೆ ಹೂಡಿಕೆದಾರರರಿಗೆ ಬಲತುಂಬುತ್ತದೆ. ಆದ್ರೆ ಇಂದು ಜೊಮಾಟೊ ಷೇರುಪೇಟೆಯಲ್ಲಿ ಕುಸಿತ ಕಂಡಿದೆ.
ಜೆಫರೀಸ್ ಜೊಮಾಟೊಗೆ ತನ್ನ ದರ ಟಾರ್ಗೇಟ್ ಶೇ.18ರಷ್ಟು ಕಡಿಮೆಗೊಳಿಸಿದೆ. ಇಂದಿನ ಜೊಮಾಟೊ ಷೇರುಗಳು ಇಂದಿನ ವಹಿವಾಟುವಿನಲ್ಲಿ 275 ರೂ ಗಳು ವ್ಯಾಪಾರವಿತ್ತು. ಝೊಮಾಟೊ ಷೇರುಗಳು ಎನ್‌ಎಸ್‌ಇಯಲ್ಲಿ 254.90 ರೂ.ನಲ್ಲಿ ಕುಸಿತ ಕಂಡಿವೆ. ಇಂದಿನ ಸೆಷನ್‌ನಲ್ಲಿನ ನಷ್ಟದೊಂದಿಗೆ ಕ್ಲೋಸ್ ಆಗಿದೆ.

ಭಾರತೀಯ ಷೇರು ಮಾರುಕಟ್ಟೆಯಲ್ಲಿ ಕಳೆದ ತಿಂಗಳಲ್ಲಿ ಜೊಮಾಟೊ ಷೇರುಗಳು ಅದರ ಮೌಲ್ಯದ ಸುಮಾರು ಶೇ.16ರಷ್ಟು ಷೇರುಗಳ ನಷ್ಟವನ್ನು ಕಳೆದುಕೊಂಡಿತ್ತು.
ಬ್ರೋಕರೇಜ್ ಅದರ ಟಾರ್ಗೆಟ್ ತಲುಪಲು ಅವಕಾಶಗಳನ್ನು ಅತಿ ಹೆಚ್ಚಾಗಿ ಬಳಸಿಕೊಳ್ಳುತ್ತಿದ್ದಾರೆ. ಷೇರು ಪೇಟೆಯ ಮೌಲ್ಯ ಮಾಪನಗಳು ಅತಿಯಾಗಿ ದುಬಾರಿ ಎಂದು ಸೇರ್ಪಡೆಯಾಗಿದೆ. ಆದರೆ ಹೆಚ್ಚಿತ್ತಿರುವ ವಾಣಿಜ್ಯಗಳಿ ಹೆಚ್ಚುತ್ತಿರುವ ಪೈಪೋಟಿಯ ಅವರನ್ನು ಚಿಂತೆ ಮಾಡುವಂತೆ ಮಾಡುತ್ತದೆ ಎಂದು ಹೇಳಿದ್ದಾರೆ.
ಮಾರುಕಟ್ಟೆಯಲ್ಲಿ ಆರಂಭವಾಗುತ್ತಿರುವ ಹೊಸ ಹೊಸ ತಂತ್ರಗಳು ಮತ್ತು ಹೊಸ ಹೂಡಿಕೆದಾರರ ಪ್ರವೇಶದಿಂದ ಹೆಚ್ಚಿನ ರಿಯಾಯಿತಿಗೆ ಕಾರಣವಾಗಬಹುದು ಎಂದು ಬ್ರೋಕರೇಜ್ ಎಚ್ಚರಿಕೆ ನೀಡಿದೆ.
ಜೊಮಾಟೊನ ಮಧ್ಯಮ ಅವಧಿಯ ಲಾಭದಾಯಕತೆಯೂ ಹೆಚ್ಚಿನ ಅಪಾಯವನ್ನುಂಟು ಮಾಡಹುದು. ಜೊಮಾಟೊನ ಬ್ಲಿಂಕಿಟ್ ಜೊತೆಗೆ ಹಾಗೂ ಸ್ವಿಗ್ಗಿನ Instamart, Zepto, Amazon ಮತ್ತು ಇತರ ಸ್ಪರ್ಧಿಗಳು ವಾಣಿಜ್ಯ ಮಾರುಕಟ್ಟೆಯ ಪಾಲನ್ನು ಪಡೆಯಲು ಸ್ಪರ್ಧಿಸುತ್ತಿವೆ. ಇವುಗಳ ಪರಿಣಾಮಗಳಿಂದಾಗಿ ಜೆಫರೀಸ್ FY26-27 ಗಾಗಿ ಬ್ಲಿಂಕಿಟ್ ನ EBITDA ಮುನ್ಸೂಚನೆಯನ್ನು ಕಡಿಮೆ ಮಾಡಿದೆ.ಮತ್ತು ಬ್ಲಿಂಕಿಟ್ ಗಾಗಿ ಅದರ ಟಾರ್ಗೇಟ್‌ನ್ನು 6x ಗೆ ಅರ್ಧದಷ್ಟು ಕಡಿಮೆ ಮಾಡಿದೆ.
ಒಟ್ಟಾರೆಯಾಗಿ ಹೇಳವುದಾದರೆ ಜೊಮಾಟೊನಗಾಗಿ, ಬ್ರೋಕರೇಜ್ ತನ್ನ EBITDA ಅಂದಾಜುಗಳನ್ನು FY26 ಗೆ ಶೇ.12 ಮತ್ತು FY25 ಗೆ ಶೇ.15ರಷ್ಟು ಕಡಿಮೆ ಮಾಡಿದೆ. ಇದರ ಜೊತೆಗೆ ಅದರ ಲಾಭದಾಯಕತೆಯ ಅಂದಾಜುಗಳು FY26 ಗೆ ಶೇ. 17ರಷ್ಟು ಮತ್ತು FY27 ಗೆ ಶೇ.18ರಷ್ಟು ಕಡಿಮೆಯಾಗಿದೆ. ಪ್ರತಿ ಷೇರಿಗೆ ಗಳಿಕೆಗಳು EPSನಲ್ಲಿ FY26 ಗೆ ಶೇ.20 ಮತ್ತು FY27 ಗೆ ಶೇ.21ರಷ್ಟು ಕಡಿಮೆಗೊಳಿಸಿದೆ.
ಮೋರ್ಗಾನ್ ಸ್ಟಾನ್ಲಿ ಜೊಮಾಟೊದಲ್ಲಿ ತನ್ನ ರೇಟಿಂಗ್ ಅನ್ನು ಪುನಃ ಆರಂಭಿಸಿತು.ಷೇರು ಮಾರುಕಟ್ಟೆಯಲ್ಲಿ 335 ರೂಗಳನ್ನು ಹೊಂದಿದೆ. ಇತ್ತೀಚಿನ ದಿನಮಾನಗಳಲ್ಲಿ ಬ್ರೋಕರೇಜ್ ಜೊಮಾಟೊವನ್ನು ಭಾರತದ ಇಂಟರ್ನೆಟ್ ವಲಯದಲ್ಲಿ ಉನ್ನತ ಆಯ್ಕೆ ಎಂದು ಗುರುತಿಸಿದೆ.
ಮೋರ್ಗಾನ್ ಸ್ಟಾನ್ಲಿಯು ಜೊಮಾಟೊದ ಲಾಭದಾಯಕತೆಯ ಮೇಲೆ ಹೆಚ್ಚಿನ ನಿರೀಕ್ಷಿಯನ್ನು ಹೊಂದಿದ್ದರು.ಮತ್ತು ಷೇರು ಮಾರುಕಟ್ಟೆಯಲ್ಲಿ ಹೆಚ್ಚಿತ್ತಿರುವ ಪೈಪೋಟಿ ಹೊರತಾಗಿಯೂ FY25-27 ಕ್ಕಿಂತ ಶೇ.33 ಆದಾಯ CAGR ಅನ್ನು ಹೆಚ್ಚಿಸಲು ಅದರ ಬೆಳವಣಿಗೆಯನ್ನು ಹೆಚ್ಚು ಮಾಡುತ್ತಿದೆ.
ಜೊಮಾಟೊನ ಆದಾಯದ ಲಾಭಗಳು ದಾಖಲೆ ಮತ್ತು ಸಕ್ರಿಯ ಬಳಕೆದಾರರಲ್ಲಿ ಅದರ ಸ್ಥಿರ ಬೆಳವಣಿಗೆಯಲ್ಲಿ ಸಂಸ್ಥೆಯು ಹೆಚ್ಚಿನ ವಿಶ್ವಾಸವನ್ನು ಹೊಂದಿದೆ.
ಬ್ರೋಕರೇಜ್ ಸಂಸ್ಥೆ ಜೆಫರೀಸ್ ಸ್ಟಾಕ್ ಅನ್ನು ಖರೀದಿಯಿಂದ ಹೋಲ್ಡ್ ರೇಟಿಂಗ್‌ಗೆ ಇಳಿಸಿದ ನಂತರ ಭಾರೀ ಬದಲಾವಣೆಯಾಗೊದೆ. ಪರಿಣಾಮ, ಜೊಮಾಟೊ ಷೇರುಗಳು ಮಂಗಳವಾರ ಬಿಎಸ್‌ಇಯಲ್ಲಿ ಶೇ.4.8 ರಷ್ಟು ಕುಸಿದಿದ್ದು, 252.05 ರೂ.ನಲ್ಲಿ ಮುಕ್ತಾಯಗೊಂಡಿದೆ.
ಹೆಸರಾಂತ ಇ-ಕಾಮರ್ಸ್ ಫ್ಲಾಟ್ಫಾರ್ಮ್ಗಳಾದ ಅಮೆಜಾನ್ ( Amazon, Flipkart) ಮತ್ತು , ಫ್ಲಿಪ್ಕಾರ್ಟ್ (Flipkart)ಸಂಕಷ್ಟ ಶುರುವಾಗಿದೆ. ಅಮೆಜಾನ್, ಫ್ಲಿಪ್ಕಾರ್ಟ್ ಅವ್ಯವಹಾರಗಳ ಕುರಿತು ಸಿಸಿಐ ನಡೆಸುತ್ತಿರುವ ತನಿಖೆಗೆ ನೀಡಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ಸುಪ್ರೀಂಕೋರ್ಟ್ ಕರ್ನಾಟಕದ ಹೈಕೋರ್ಟ್ಗೆ ವರ್ಗಾವಣೆ ಮಾಡಿದೆ.
ನ್ಯಾಯಾಲಯದ ಮುಂದೆ ಇಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಅಭಯ್ ಎಸ್. ಓಕಾ ಮತ್ತು ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರಿದ್ದ ಪೀಠದ ಮುಂದೆ ಈ ಅರ್ಜಿಗಳ ವಿಚಾರಣೆಯನ್ನು ಇಂದು ನಡೆಸಲಾಗಿತು. ನ್ಯಾಯೋಚಿತ ವ್ಯಾಪಾರ ನಿಯಂತ್ರಕ ಸಂಸ್ಥೆಯಾದ ಸಿಸಿಐ ತನ್ನ ವಿರುದ್ಧ ಸಲ್ಲಿಸಲಾದ ಅರ್ಜಿಗಳ ವಿರುದ್ಧ ವಾದವನ್ನು ಮಂಡಿಸಿದ್ದರು.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?



Click it and Unblock the Notifications