ಬಿಗ್‌ಬಾಸ್ ಮನೆಯಲ್ಲಿ ಗಿಲ್ಲಿ ಕ್ರೇಜ್ ಶುರುವಾಗಿದ್ದು ಯಾವಾಗ? ಫಿನಾಲೆವರೆಗೆ ಕರೆದುಕೊಂಡು ಬಂದ ಡೈಲಾಗ್ ಯಾವುದು?

ಗಿಲ್ಲಿ.. ಗಿಲ್ಲಿ.. ಗಿಲ್ಲಿ.. ಎಲ್ಲೆಲ್ಲೂ ಗಿಲ್ಲಿ ಹವಾ ಜೋರಾಗಿದೆ. ಬಿಗ್‌ಬಾಸ್ 12 ಟ್ರೋಫಿ ಗೆದ್ದು ಬೀಗಿದ ಗಿಲ್ಲಿಗೆ ಭವ್ಯ ಸ್ವಾಗತ ಸಿಕ್ಕಿದೆ. ಎರಡು ದಿನಗಳಿಂದ ಸಂಭ್ರಮಾಚರಣೆಯಲ್ಲೇ ಮುಳುಗಿಬಿಟ್ಟಿದ್ದಾರೆ. ಈ ಹಿಂದಿಯ ಯಾವುದೇ ಬಿಗ್‌ಬಾಸ್ ಸ್ಪರ್ಧಿಗೆ ಸಿಗದ ಕ್ರೇಜ್ ಗಿಲ್ಲಿಗೆ ಸಿಕ್ಕಿಬಿಟ್ಟಿದೆ. ಬರೀ ಮಾತಲ್ಲೇ ಗಿಲ್ಲಿ ಜಾದೂ ಮಾಡಿದ್ದಾರೆ.

ಅದೊಂದು ಪ್ರೋಮೊ, ಅದೊಂದು ಡೈಲಾಗ್ ಗಿಲ್ಲಿ ನಟನನ್ನು ವೀಕ್ಷಕರ ಮನಸ್ಸಿಗೆ ಹತ್ತಿರವಾಗುವಂತೆ ಮಾಡಿಬಿಡ್ತು. ಬಳಿಕ ಗಿಲ್ಲಿ ಆಡಿದ ಮಾತುಗಳೆಲ್ಲಾ ಸದ್ದು ಮಾಡಲು ಆರಂಭಿಸಿತು. ಸಹ ಸ್ಪರ್ಧಿಗಳು ಕೂಡ ಗಿಲ್ಲಿ ಜಾಣ್ಮೆ ಮೆಚ್ಚಿಕೊಂಡರು. ಶೋ ಶುರುವಾದ ನಾಲ್ಕೈದು ದಿನಗಳಲ್ಲಿ ಅಶ್ವಿನಿ ಹಾಗೂ ಗಿಲ್ಲಿ ನಡುವೆ ಸಂಘರ್ಷ ಶುರುವಾಯಿತು. ಅದೇ ಆತನಿಗೆ ಪ್ಲಸ್ ಆಗುತ್ತಾ ಹೋಗಿತ್ತು.


ಬಿಗ್‌ಬಾಸ್ ಮನೆಯಲ್ಲಿ ಗಿಲ್ಲಿ ಕ್ರೇಜ್ ಶುರುವಾಗಿದ್ದು ಯಾವಾಗ? ಫಿನಾಲೆವರೆಗೆ ಕರೆದುಕೊಂಡು ಬಂದ ಡೈಲಾಗ್ ಯಾವುದು?

ಗಿಲ್ಲಿ ಕಾಮಿಡಿ ವೀಕ್ಷಕರಿಗೆ ಹೊಸದೇನು ಆಗಿರಲಿಲ್ಲ. ಅದಾಗಲೇ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ವೀಡಿಯೋಗಳಿಂದ ಗಿಲ್ಲಿ ಗಮನ ಸೆಳೆದಿದ್ದರು. ಬಳಿಕ 'ಕಾಮಿಡಿ ಕಿಲಾಡಿಗಳು' ಶೋನಲ್ಲಿ ತಮ್ಮ ಕಾಮಿಡಿ ಟೈಮಿಂಗ್‌ನಿಂದ ರನ್ನರ್ ಆಗಿದ್ದರು. ಬಳಿಕ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೇರಿ ಕೆಲ ಶೋಗಳಲ್ಲಿ ಪ್ರಾಪರ್ಟಿ ಕಾಮಿಡಿ ಹೆಸರಿನಲ್ಲಿ ಗಿಲ್ಲಿ ವೀಕ್ಷಕರನ್ನು ರಂಜಿಸಿದ್ದರು.

ಬಿಗ್‌ಬಾಸ್ 12 ಶೋ ಶುರುವಾದಾಗ ಗಿಲ್ಲಿಗಿಂತ ಕಾಕ್ರೋಚ್ ಸುಧೀ, ಅಶ್ವಿನಿ ಗೌಡ ಟಫ್ ಕಾಂಪಿಟೇಟರ್ ಎನಿಸಿಕೊಂಡಿದ್ದರು. ಆದರೆ ಗಿಲ್ಲಿ ಎಂಟರ್‌ಟೈನ್‌ಮೆಂಟ್ ಮುಂದೆ ಎಲ್ಲರೂ ಸೈಲೆಂಟ್ ಆಗಿಬಿಟ್ಟರು. ಸುಧೀ 7ನೇ ವಾರಕ್ಕೆ ಬಿಗ್‌ಬಾಸ್ ಜರ್ನಿ ಮುಗಿಸಿಬಿಟ್ಟರು. ವೈಲ್ಡ್ ಕಾರ್ಡ್ ಎಂಟ್ರಿ ಸ್ಪರ್ಧಿಗಳು ಕೂಡ ಗಿಲ್ಲಿ ಮುಂದೆ ಥಂಡಾ ಹೊಡೆದುಬಿಟ್ಟರು.

ಅಶ್ವಿನಿ ಒಂಟಿ ಸ್ಪರ್ಧಿಯಾಗಿ ದೊಡ್ಮನೆ ಒಳಗೆ ಹೋಗಿದ್ದರು. ಗಿಲ್ಲಿ ಹಾಗೂ ಕಾವ್ಯಾ ಜಂಟಯಾಗಿ ಹೋಗುವಂತೆ ಆಗಿತ್ತು. ಶೋ ಶುರುವಾದ 4 ದಿನಕ್ಕೆ ಅಶ್ವಿನಿ ಹಾಗೂ ಗಿಲ್ಲಿ ನಡುವೆ ಕಿರಿಕ್ ಶುರುವಾಗಿತ್ತು. ಬಳಿಕ ನಿಮ್ಮ ಕಾಲಿಗೆ ಬೀಳ್ತೀನಿ ಎಂದು ಗಿಲ್ಲಿ ಹೇಳಿದ್ದರು. ಒಂಟಿ ಸ್ಪರ್ಧಿಯಾಗಿದ್ದ ಅಶ್ವಿನಿ ಹೇಳಿದಂತೆ ಜಂಟಿ ಸ್ಪರ್ಧಿಗಳಾದ ಕಾವ್ಯಾ, ಗಿಲ್ಲಿ ಕೇಳುವಂತಹ ಟಾಸ್ಕ್ ಇತ್ತು. ನಾಮಿನೇಷನ್ ವಿಚಾರಕ್ಕೆ ಮೂವರ ನಡುವೆ ಗಲಾಟೆ ಆಗಿತ್ತು.

ನಿಮ್ಮ ಮೇಲೆ ಗೌರವ ಇದೆ, ಅದಕ್ಕೆ ಮೇಡಂ ಅಂತ ಕರಿತ್ತಿದ್ದೀನಿ. ಇಲ್ಲ ಅಂದ್ರೆ ಹೋಗೆ ಬಾರೆ ಅನ್ನುತ್ತಿದ್ದೆ ಎಂದು ಗಿಲ್ಲಿ ಹೇಳಿದ್ದರು. ಬಳಿಕ ನನ್ನ ನೀನು ಗೆಲ್ಲಲಾರೆ ಎಂದು ಹಾಡು ಹಾಡಿದ್ದರು. ಅಶ್ವಿನಿ ರಾಜಮಾತೆಯಾಗಿ ಬಂದಾಗ ಗಿಲ್ಲಿ ಟಿಶ್ಯೂ ಪೇಪರ್ ತೆಗೆದು ಡಸ್ಟ್‌ಬಿನ್‌ಗೆ ಹಾಕಿದ್ದರು. ಅದು ಆಕೆಯ ಆಕ್ರೋಶಕ್ಕೆ ಕಾರಣವಾಗಿತ್ತು. ಅಲ್ಲಿಂದ ಅಶ್ವಿನಿ ಅವರನ್ನು ಗಿಲ್ಲಿ ರೋಸ್ಟ್ ಮಾಡಲು ಆರಂಭಿಸಿದರು.

ರಾಜಮಾತೆಯಾಗಿ ಅಶ್ವಿನಿ ಕೆಲಸ ಕೊಟ್ಟಷ್ಟು ಗಿಲ್ಲಿ ಉರಿಸೋಕೆ ಆರಂಭಿಸಿದ್ದರು. ಅದೇ ಸಮಯದಲ್ಲಿ 'ರಾಜಾಹುಲಿ' ಡೈಲಾಗ್ ಅನ್ನು ಗಿಲ್ಲಿ ಹೇಳಿದ್ದರು. ಆ ಚಿತ್ರದಲ್ಲಿ ಯಶ್ ಅತ್ತೆ ಮಗಳ ಪಾತ್ರದಲ್ಲಿ ಅಶ್ವಿನಿ ನಟಿಸಿದ್ದರು. "ನನ್ನ ಅತ್ತೆ ಮಗಳಿಗೆ ಯಾವಾಗಲೂ ಕಣ್ಣು ಹೊಡೆಯುತ್ತೀನಿ, ನಮ್ಮನ್ಯಾರು ಕೇಳೋರು?" ಎಂದು ಗಿಲ್ಲಿ ರಿಪೀಟ್ ಮಾಡಿದ್ದರು. ಅದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಅದು ವೀಕ್ಷಕರ ಗಮನ ಸೆಳೆದಿತ್ತು. ಅಲ್ಲಿಂದ ಮುಂದೆ ಗಿಲ್ಲಿ ಮಾತಿನ ಮೇಲೆ ವೀಕ್ಷಕರ ಗಮನ ಹರಿಯಿತು.

ಬಳಿಕ ದೊಡ್ಡಮ್ಮ‌.. ದೊಡ್ಡಮ್ಮ ದ್ವಾಸೆ ಕೊಡು.. ಅನ್ನೋ ಹಾಡು ಹಾಡಿ ಗಿಲ್ಲಿ ಮೋಡಿ ಮಾಡಿದ್ದರು. ಅಬಾಲವೃದ್ಧರಾಗಿ ಎಲ್ಲರಿಗೂ ಅದು ಇಷ್ಟವಾಗಿತ್ತು. ಹೊರಗಡೆ ಕೆಲವರು ಅದನ್ನು ರೀಮಿಕ್ಸ್ ಮಾಡಿ ವೈರಲ್ ಮಾಡಿಬಿಟ್ಟರು. ಅಲ್ಲಿಂದ ಮುಂದೆ ಗಿಲ್ಲಿ ಕಾಮಿಡಿ ಪಂಚ್‌ಗಳೆಲ್ಲಾ ಕ್ಲಿಕ್ ಆಗಲು ಶುರುವಾಯಿತು. ಉಗ್ರಂ ಮಂಜು, ರಜತ್, ಚೈತ್ರಾ ಅತಿಥಿಗಳಾಗಿ ಮನೆ ಒಳಗೆ ಹೋದಾಗ ಕೂಡ ಗಿಲ್ಲಿ ಕ್ವಾಟ್ಲೆ ಕೊಟ್ಟಿದ್ದರು. ಒಂದು ಹಂತಕ್ಕೆ ಗಿಲ್ಲಿ ಕಾಮಿಡಿ ಭಾರೀ ಚರ್ಚೆ ಹುಟ್ಟಾಕಿಬಿಡ್ತು. ವೀಕೆಂಡ್ ಪಂಚಾಯ್ತಿಯಲ್ಲಿ ಸುದೀಪ್ ಕಿವಿ ಹಿಂಡಿದ್ದರು.

ಗಿಲ್ಲಿ ಮಂಡ್ಯ ಹಳ್ಳಿ ಶೈಲಿಯ ಭಾಷೆ, ರೀತಿ ರಿವಾಜು ಎಲ್ಲವೂ ವೀಕ್ಷಕರನ್ನು ಸೆಳೆದಿತ್ತು. ಮುಖ್ಯವಾಗಿ ಅಶ್ವಿನಿ ಹಾಗೂ ಜಾನ್ವಿ ಅವರನ್ನು ಗಿಲ್ಲಿ ಟಾರ್ಗೆಟ್ ಮಾಡಿ ಆಡಿದ್ದ ಮಾತುಗಳು, ಕಾಮಿಡಿ ಎಲ್ಲವೂ ಕ್ಲಿಕ್ ಆಗಿ ಪ್ಲಸ್ ಪಾಯಿಂಟ್ ಆಗಿಬಿಟ್ಟಿತ್ತು.

ಕಲರ್ಸ್ ಕನ್ನಡ ಈ ಬಾರಿ ಬಿಗ್‌ಬಾಸ್ ಕಂಟೆಂಟ್ ಅನ್ನು ಯಾರು ಬೇಕಾದರೂ ಬಳಸಲು ಅವಕಾಶ ಕೊಟ್ಟಿತ್ತು. ಜಿಯೋ ಹಾಟ್‌ಸ್ಟರ್‌ನಲ್ಲಿ 24 ಗಂಟೆ ಲೈವ್ ನೋಡಲು ಅವಕಾಶ ಸಿಕ್ಕಿತ್ತು. ಹಾಗಾಗಿ ಗಿಲ್ಲಿ ಫ್ಯಾನ್ಸ್ ಪೇಜ್‌ಗಳು ಕ್ರಿಯೇಟ್ ಆಗಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಗಿಲ್ಲಿ ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಎಬ್ಬಿಸಿತ್ತು. ಅದೆಲ್ಲವೂ ಗಿಲ್ಲಿ ಕ್ರೇಜ್ ಅನ್ನು ಹೆಚ್ಚಿಸಿತ್ತು. ವಿನ್ನರ್ ಪಟ್ಟಕ್ಕೆ ಹತ್ತಿರ ಕರೆದುಕೊಂಡು ಹೋಯಿತು. ಅವಿರೋಧ ಆಯ್ಕೆ ಎನ್ನುವಂತೆ ಗಿಲ್ಲಿ ಗೆದ್ದು ಬೀಗಿದರು.

Credit: Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+