ಚಿನ್ನದ ಬೆಲೆಯು ನಿರೀಕ್ಷೆಗೂ ಮೀರಿ ಹೆಚ್ಚಳವಾಗಿದೆ. ಜನವರಿ ಒಂದೇ ದಿನ ಬರೋಬ್ಬರಿ 11,000 ಸಾವಿರ ರೂಪಾಯಿ ಹೆಚ್ಚಳವಾಗಿದೆ. ಬೆಂಗಳೂರು ಹಾಗೂ ಭಾರತದ ವಿವಿಧ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆಯು ವಿದೇಶಗಳಿಗಿಂತಲೂ ಭಾರೀ ಹೆಚ್ಚಳವಾಗಿದೆ. ಗುರುವಾರ ಜನವರಿ 29ರಂದು ಚಿನ್ನದ ಬೆಲೆಯು ಬರೋಬ್ಬರಿ 11,770 ರೂ ಹೆಚ್ಚಳವಾಗಿದೆ. ಚಿನ್ನದ ಬೆಲೆಯು ಜನವರಿ 29ರಂದು 18 ಕ್ಯಾರೆಟ್, 22 ಕ್ಯಾರೆಟ್ ಹಾಗೂ 24 ಕ್ಯಾರೆಟ್‌ಗೆ ಎಷ್ಟಿದೆ. ಜನವರಿ 28ರಂದು ಚಿನ್ನ ಮತ್ತು ಬೆಳ್ಳಿಯ ಬೆಲೆ ಎಷ್ಟಿತ್ತು ಎನ್ನುವ ಸಂಪೂರ್ಣ ಹಾಗೂ ನಿಖರವಾದ ವಿವರ ಇಲ್ಲಿದೆ.
18 ಕ್ಯಾರೆಟ್ ಚಿನ್ನದ ಬೆಲೆ: ಜನವರಿ 29ರಂದು 18 ಕ್ಯಾರೆಟ್‌ನ 1 ಗ್ರಾಂ ಚಿನ್ನದ ಬೆಲೆಯು 13,414 ರೂ. ಆಗಿದೆ. 10 ಗ್ರಾಂನ ಚಿನ್ನದ ಬೆಲೆಯು 1,34,140 ರೂ. ಆಗಿದೆ. ಜನವರಿ 28ಕ್ಕೆ ಹೋಲಿಕೆ ಮಾಡಿದರೆ ಚಿನ್ನದ ಬೆಲೆಯು 18 ಕ್ಯಾರೆಟ್‌ನ ಮೇಲೆ 1 ಗ್ರಾಂಗೆ 883 ರೂಪಾಯಿ ಹಾಗೂ 10 ಗ್ರಾಂನ ಮೇಲೆ ಬರೋಬ್ಬರಿ 8,830 ರೂ. ಹೆಚ್ಚಳವಾಗಿದೆ.

22 ಕ್ಯಾರೆಟ್ ಚಿನ್ನದ ಬೆಲೆ: ಇನ್ನು 22 ಕ್ಯಾರೆಟ್‌ನ ಚಿನ್ನದ ಬೆಲೆಯಲ್ಲೂ ಭರ್ಜರಿ ಹೆಚ್ಚಳವಾಗಿದೆ. 22 ಕ್ಯಾರೆಟ್‌ನ 1 ಗ್ರಾಂ ಚಿನ್ನದ ಬೆಲೆಯು 16,395 ರೂ. ಆಗಿದೆ. 10 ಗ್ರಾಂನ ಬೆಲೆಯು 1,63,950 ರೂ. ಆಗಿದೆ. ಬುಧವಾರಕ್ಕೆ ಹೋಲಿಕೆ ಮಾಡಿದರೆ 22 ಕ್ಯಾರೆಟ್‌ನ ಚಿನ್ನದ ಬೆಲೆಯಲ್ಲಿ 1 ಗ್ರಾಂನ ಮೇಲೆ 1,080 ರೂ. ಹಾಗೂ 10 ಗ್ರಾಂನ ಮೇಲೆ 10,800 ರೂ. ಭರ್ಜರಿ ಹೆಚ್ಚಳವಾಗಿದೆ.
Silver Price Jan 28: ಬೆಳ್ಳಿ ಬೆಲೆ 4 ಲಕ್ಷ ರೂ. ಸಮೀಪ, ಬೆಳ್ಳಿ ಬೆಲೆ ಹೆಚ್ಚಳಕ್ಕೆ 5 ಕಾರಣಗಳು
24 ಕ್ಯಾರೆಟ್ ಚಿನ್ನದ ಬೆಲೆ: ಜನವರಿ 29ರಂದು 18, 22 ಕ್ಯಾರೆಟ್ ಚಿನ್ನಗಳಿಗಿಂತಲೂ 24 ಕ್ಯಾರೆಟ್ ಚಿನ್ನದಲ್ಲಿ ಭಾರೀ ಹೆಚ್ಚಳವಾಗಿದೆ. 24 ಕ್ಯಾರೆಟ್‌ನ 1 ಗ್ರಾಂ ಚಿನ್ನದ ಬೆಲೆಯು 17,885 ರೂ. ಆಗಿದೆ. 10 ಗ್ರಾಂಗೆ 1,78,850 ರೂ. ಆಗಿದೆ. ಜನವರಿ 28ಕ್ಕೆ ಹೋಲಿಕೆ ಮಾಡಿದರೆ 1 ಗ್ರಾಂಗೆ 1,177 ರೂಪಾಯಿ ಆಗಿದೆ. 10 ಗ್ರಾಂನ ಬೆಲೆಯು ನೆನ್ನೆಗೆ ಹೋಲಿಕೆ ಮಾಡಿದರೆ ಬರೋಬ್ಬರಿ 11,770 ರೂ. ಹೆಚ್ಚಳವಾಗಿದೆ.

4 ಲಕ್ಷ ರೂ. ಗಡಿ ದಾಟಿದ ಬೆಳ್ಳಿ ಬೆಲೆ
ಇನ್ನು ಬೆಳ್ಳಿ ಬೆಲೆಯು 4 ಲಕ್ಷ ರೂ. ಗಡಿದಾಟಿದೆ. ಬೆಳ್ಳಿ ಬೆಲೆಯು 1 ಗ್ರಾಂಗೆ 410 ರೂಪಾಯಿ ಆಗಿದೆ. ಒಂದು ಕೆ.ಜಿ ಬೆಳ್ಳಿ ಬೆಲೆಯು 4,10,000 ರೂ. ಆಗಿದೆ. ನೆನ್ನೆಗೆ ಹೋಲಿಕೆ ಮಾಡಿದರೆ ಬೆಳ್ಳಿ ಬೆಲೆಯು 1 ಗ್ರಾಂಗೆ 30 ರೂಪಾಯಿ ಹಾಗೂ ಕೆ.ಜಿಗೆ ಬರೋಬ್ಬರಿ 30,000 ರೂ. ಹೆಚ್ಚಳವಾಗಿದೆ.
Gold: ಯಾವ ಕ್ಯಾರೆಟ್ ಚಿನ್ನ ಎಷ್ಟು ಪರಿಶುದ್ಧ? ಖರೀದಿಸುವ ಮುನ್ನ ಗಮನಿಸಬೇಕಾದ ಪ್ರಮುಖ ಅಂಶಗಳಿವು
Credit: Oneindia


Click it and Unblock the Notifications