Gold Rate Jan 09: ಚಿನ್ನ ಪ್ರಿಯರಿಗೆ ವಾರಾಂತ್ಯವೂ ಶಾಕ್: ಹೊಸ ದಾಖಲೆ ಬರೆದ ಚಿನ್ನದ ಬೆಲೆ, ಬೆಳ್ಳಿ ಇಳಿಕೆ

Gold Rate Jan 09: ಚಿನ್ನ ಪ್ರಿಯರಿಗೆ ಶುಕ್ರವಾರ ಮತ್ತೆ ಭಾರೀ ಶಾಕ್ ಎದುರಾಗಿದೆ. ಚಿನ್ನ ಮತ್ತು ಬೆಳ್ಳಿ ಬೆಲೆಯು ಜನವರಿ 09ರಂದು ಮತ್ತೆ ಭರ್ಜರಿ ಹೆಚ್ಚಳವಾಗಿದೆ. ಕಳೆದ ಕೆಲವು ದಿನಗಳಿಂದ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ನಿರಂತರವಾಗಿ ಹೆಚ್ಚಳವಾಗುತ್ತಿತ್ತು. ಗುರುವಾರ ಚಿನ್ನದ ಬೆಲೆಯಲ್ಲಿ ಭರ್ಜರಿ ಹೆಚ್ಚಳವಾಗಿದೆ. ಆದರೆ ಬೆಳ್ಳಿ ಬೆಲೆಯು ಇಳಿಕೆಯಾಗಿದೆ. ಆದರೆ ಇದೀಗ ಒಂದೇ ದಿನದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಮತ್ತೆ ಭರ್ಜರಿ ಹೆಚ್ಚಳ ಕಂಡಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯು ಹೆಚ್ಚಳ ಕಂಡಿದೆ. ಮುಖ್ಯವಾಗಿ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ವೆನುಜುವೆಲಾ ಮೇಲೆ ದಾಳಿ ಮಾಡಿದ್ದು, ರಷ್ಯಾದ ತೈಲ ಹಡಗನ್ನು ಅಮೆರಿಕಾದ ನೌಕಾಪಡೆ ವಶಕ್ಕೆ ಪಡೆದುಕೊಂಡಿದ್ದು ಸೇರಿದಂತೆ ಹಲವು ಕಾರಣಗಳಿಗೆ ಚಿನ್ನದ ಬೆಲೆ ಹೆಚ್ಚಳವಾಗುತ್ತಿದೆ.

ಡಾಲರ್‌ನ ಮುಂದೆ ರೂಪಾಯಿ ಮೌಲ್ಯವು ಕುಸಿಯುತ್ತಿರುವುದು ಹಾಗೂ ಜಾಗತಿಕವಾಗಿ ಅಮೆರಿಕಾ ತನ್ನ ಡಾಲರ್ ಮೌಲ್ಯ ಕಳೆದುಕೊಳ್ಳುತ್ತಿರುವುದು. ಕಚ್ಚಾ ತೈಲ ವಿಚಾರದಲ್ಲಿ ಸೃಷ್ಟಿಯಾಗಿರುವ ಗೊಂದಲಗಳು ಸೇರಿದಂತೆ ಹಲವು ಕಾರಣಗಳಿಗೆ ಚಿನ್ನದ ಮೇಲೆ ಹೂಡಿಕೆ ಮಾಡುವುದು ಹೆಚ್ಚಾಗಿದೆ. ಇದರಿಂದ ಸಹಜವಾಗಿಯೇ ಚಿನ್ನದ ಬೆಲೆ ಹೆಚ್ಚಾಗುತ್ತಿದೆ.


Gold Rate Jan 09: ಚಿನ್ನ ಪ್ರಿಯರಿಗೆ ವಾರಾಂತ್ಯವೂ ಶಾಕ್: ಹೊಸ ದಾಖಲೆ ಬರೆದ ಚಿನ್ನದ ಬೆಲೆ, ಬೆಳ್ಳಿ ಇಳಿಕೆ

24 ಕ್ಯಾರೆಟ್ ಚಿನ್ನದ ಬೆಲೆ: ಜನವರಿ 9ರಂದು 24 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು 13,871 ರೂಪಾಯಿ ಆಗಿದೆ. 10 ಗ್ರಾಂ ಚಿನ್ನದ ಬೆಲೆಯು 1,38,710 ರೂಪಾಯಿ ಆಗಿದೆ. ಗುರುವಾರಕ್ಕೆ ಹೋಲಿಕೆ ಮಾಡಿದರೆ ಒಂದು ಗ್ರಾಂ ಚಿನ್ನದ ಬೆಲೆಯು 71 ರೂಪಾಯಿ ಹಾಗೂ 10 ಗ್ರಾಂಗೆ 710 ರೂಪಾಯಿ ಆಗಿದೆ.

22 ಕ್ಯಾರೆಟ್ ಚಿನ್ನದ ಬೆಲೆ: ಇನ್ನು 22 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಭರ್ಜರಿ ಹೆಚ್ಚಳವಾಗಿದೆ. 22 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು 12,715 ರೂಪಾಯಿ ಆಗಿದೆ. 10 ಗ್ರಾಂ ಚಿನ್ನದ ಬೆಲೆಯು 1,27,150 ರೂಪಾಯಿ ಆಗಿದೆ. ಜನವರಿ 8ಕ್ಕೆ ಹೋಲಿಕೆ ಮಾಡಿದರೆ, ಒಂದು ಗ್ರಾಂ ಚಿನ್ನದ ಬೆಲೆಯು 65ರೂಪಾಯಿ ಹಾಗೂ 10 ಗ್ರಾಂ ಚಿನ್ನದ ಮೇಲೆ 650 ರೂಪಾಯಿ ಹೆಚ್ಚಳವಾದಂತೆ ಆಗಿದೆ.

18 ಕ್ಯಾರೆಟ್ ಚಿನ್ನದ ಬೆಲೆ: 24 ಹಾಗೂ 22 ಕ್ಯಾರೆಟ್ ಚಿನ್ನದ ಬೆಲೆಯೊಂದಿಗೆ ಇದೀಗ 18 ಕ್ಯಾರೆಟ್‌ನ ಚಿನ್ನದ ಬೆಲೆಯಲ್ಲೂ ಹೆಚ್ಚಳವಾಗಿದೆ. 18 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು 10,403 ರೂಪಾಯಿ ಆಗಿದೆ. 10 ಗ್ರಾಂನ ಚಿನ್ನದ ಬೆಲೆಯು 1,04,030 ರೂಪಾಯಿ ಆಗಿದೆ. 18 ಕ್ಯಾರೆಟ್‌ನಲ್ಲಿ ಒಂದು ಗ್ರಾಂ ಚಿನ್ನದ ಬೆಲೆಯು 53 ರೂಪಾಯಿ ಹಾಗೂ 10 ಗ್ರಾಂನ ಚಿನ್ನದ ಬೆಲೆಯು 530 ರೂಪಾಯಿ ಹೆಚ್ಚಳವಾಗಿದೆ.

ಬೆಳ್ಳಿ ಬೆಲೆ ಹೇಗಿದೆ ?

ಇನ್ನು ಅಚ್ಚರಿ ಎನ್ನುವಂತೆ ಬೆಳ್ಳಿ ಬೆಲೆಯಲ್ಲಿ ಜನವರಿ 09ರಂದು ಬೆಳ್ಳಿ ಬೆಲೆ ಭರ್ಜರಿ ಇಳಿಕೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ ಹೆಚ್ಚಾದರೂ ಬೆಳ್ಳಿ ಬೆಲೆಯಲ್ಲಿ ನಿರಂತರವಾಗಿ ಹೆಚ್ಚಳವಾಗುತ್ತಿತ್ತು. ಇದೀಗ ಚಿನ್ನದ ಬೆಲೆ ಹೆಚ್ಚಳವಾದರೂ ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗಿದೆ. ಇಂದಿನ ಬೆಳ್ಳಿ ಬೆಲೆಯು ಒಂದು ಗ್ರಾಂಗೆ 249 ರೂಪಾಯಿ ಆಗಿದೆ. ಒಂದು ಕೆ.ಜಿ ಬೆಳ್ಳಿ ಬೆಲೆಯು 2,49,000 ಸಾವಿರ ರೂಪಾಯಿ ಆಗಿದೆ. ಗುರುವಾರಕ್ಕೆ ಹೋಲಿಕೆ ಮಾಡಿದರೆ ಒಂದು ಗ್ರಾಂ ಬೆಳ್ಳಿ ಬೆಲೆಯು 3 ರೂಪಾಯಿ ಹಾಗೂ ಒಂದು ಕೆ.ಜಿಯ ಮೇಲೆ 3,000 ಸಾವಿರ ರೂಪಾಯಿ ಇಳಿಕೆಯಾಗಿದೆ.

Credit: Oneindia

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+