Gold Silver Rate : ಗಗನಕ್ಕೇರಿದ ಬಂಗಾರದ ಬೆಲೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ವಿವರ ಇಲ್ಲಿದೆ

ಮದುವೆ ಹಾಗೂ ಶುಭ ಸಮಾರಂಭಗಳ ಸೀಸನ್ ಭರದಿಂದ ಸಾಗುತ್ತಿರುವಾಗಲೇ ಆಭರಣ ಪ್ರಿಯರಿಗೆ ಚಿನ್ನದ ಮಾರುಕಟ್ಟೆಯಿಂದ ಬಿಗ್ ಶಾಕ್ ಎದುರಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ದಿಢೀರ್ ಆರ್ಥಿಕ ಬೆಳವಣಿಗೆಗಳು, ವಿಶೇಷವಾಗಿ ಅಮೆರಿಕದ ಹೊಸ ಸುಂಕ ನೀತಿಗಳ ಪರಿಣಾಮವಾಗಿ ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರ ಗಗನಕ್ಕೇರಿದೆ. ಮಂಗಳವಾರ, ಫೆಬ್ರವರಿ 24, 2026 ರಂದು ಚಿನ್ನದ ಬೆಲೆಯಲ್ಲಿ ನಿನ್ನೆಗಿಂತ ಭಾರಿ ಏರಿಕೆ ಕಂಡುಬಂದಿದ್ದು, ಚಿನ್ನದಂಗಡಿಗೆ ಹೋಗುವ ಗ್ರಾಹಕರ ಜೇಬಿಗೆ ಕತ್ತರಿ ಬೀಳುವುದು ಖಚಿತವಾಗಿದೆ. ಪ್ರಸ್ತುತ ಹೂಡಿಕೆದಾರರು ಷೇರುಪೇಟೆಗಿಂತ ಹೆಚ್ಚು ಸುರಕ್ಷಿತ ಹೂಡಿಕೆಯಾಗಿ ಚಿನ್ನದತ್ತ ಮುಖ ಮಾಡಿರುವುದರಿಂದ, ಮಾರುಕಟ್ಟೆಯಲ್ಲಿ ಹಳದಿ ಲೋಹಕ್ಕೆ ಬೇಡಿಕೆ ವಿಪರೀತವಾಗಿ ಹೆಚ್ಚಾಗಿ, ಬೆಲೆಯೂ ಆಕಾಶ ಮುಟ್ಟುವಂತಾಗಿದೆ.

ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್ (MCX) ಮಾರುಕಟ್ಟೆಯಲ್ಲಿಯೂ ಚಿನ್ನ ಮತ್ತು ಬೆಳ್ಳಿಯ ಭವಿಷ್ಯದ ಒಪ್ಪಂದಗಳ ದರದಲ್ಲಿ ಭಾರಿ ಏರಿಕೆ ಕಂಡುಬಂದಿದೆ. ವರದಿಗಳ ಪ್ರಕಾರ, ಏಪ್ರಿಲ್ 2026ರ ಒಪ್ಪಂದದ ಎಂಸಿಎಕ್ಸ್ ಚಿನ್ನದ ದರವು 10 ಗ್ರಾಮ್‌ಗೆ ಬರೋಬ್ಬರಿ 1,59,500 ರೂಪಾಯಿಗಳ ಗಡಿ ದಾಟಿ, 1,60,600 ರಿಂದ 1,61,500 ರೂಪಾಯಿಗಳ ಆಸುಪಾಸಿನಲ್ಲಿ ವಹಿವಾಟು ನಡೆಸುತ್ತಿದೆ. ಅದೇ ರೀತಿ ಬೆಳ್ಳಿಯ ದರವು ಕೂಡ ಎಂಸಿಎಕ್ಸ್ ಮಾರುಕಟ್ಟೆಯಲ್ಲಿ ಸಾರ್ವಕಾಲಿಕ ಹೊಸ ದಾಖಲೆ ಬರೆದಿದ್ದು, ಕೇವಲ ಒಂದೇ ದಿನದಲ್ಲಿ ಕೆಜಿ ಬೆಳ್ಳಿಯ ಮೇಲೆ ಬರೋಬ್ಬರಿ 25,000 ರೂಪಾಯಿಗಳ ಬೃಹತ್ ಏರಿಕೆಯಾಗಿದ್ದು, ಎಂಸಿಎಕ್ಸ್ (MCX) ಬೆಳ್ಳಿ ದರವು 3,00,000 (ಮೂರು ಲಕ್ಷ) ರೂಪಾಯಿಗಳ ಗಡಿಯನ್ನು ತಲುಪಿದೆ. ಹೂಡಿಕೆದಾರರಲ್ಲಿ ಅಚ್ಚರಿ ಹಾಗೂ ಗ್ರಾಹಕರಲ್ಲಿ ಆತಂಕವನ್ನೂ ಮೂಡಿಸಿದೆ. ಜಾಗತಿಕ ಮಟ್ಟದಲ್ಲಿ ವ್ಯಾಪಾರ ಸಮರ ಹಾಗೂ ಆರ್ಥಿಕ ಅನಿಶ್ಚಿತತೆಗಳು ಮುಂದುವರಿದಿರುವುದರಿಂದ ಮುಂಬರುವ ದಿನಗಳಲ್ಲಿ ಎಂಸಿಎಕ್ಸ್ ಚಿನ್ನದ ದರ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳು ದಟ್ಟವಾಗಿವೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.


ಮತ್ತೆ ಗಗನಕ್ಕೇರಿದ ಚಿನ್ನ: ಇಂದಿನ ದರಪಟ್ಟಿ ಇಲ್ಲಿದೆ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ. ಇಂದಿನ ಮಾರುಕಟ್ಟೆ ವರದಿ ಪ್ರಕಾರ, ಬೆಂಗಳೂರಿನಲ್ಲಿ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ 10 ಗ್ರಾಂಗೆ 1,46,100 ರೂಪಾಯಿ ಇದೆ. ಅಂದರೆ ಒಂದು ಗ್ರಾಂ 22K ಚಿನ್ನದ ಬೆಲೆ 14,610 ರೂಪಾಯಿಗಳಷ್ಟಿದೆ. ಎಂಟು ಗ್ರಾಂ (ಒಂದು ಸಾವರನ್) ಚಿನ್ನದ ಬೆಲೆ 1,16,880 ರೂಪಾಯಿಗಳಿಗೆ ನಿಗದಿಯಾಗಿದೆ.

Gold: ಚಿನ್ನ - ಬೆಳ್ಳಿಗೆ ಪಿಂಕ್ ಕಾಗದ ದಶಕಗಳಿಂದ ಆಸರೆ: ಏನಿದರ ವಿಶೇಷತೆ, ಹಿನ್ನೆಲೆ ವಿವರ ಇಲ್ಲಿದೆ

ಇನ್ನು, ಹೂಡಿಕೆಗೆ ಯೋಗ್ಯವಾದ ಶುದ್ಧ ಚಿನ್ನ ಅಂದರೆ 24 ಕ್ಯಾರೆಟ್ ಬಂಗಾರದ ದರ ಬೆಂಗಳೂರಿನಲ್ಲಿ 10 ಗ್ರಾಂಗೆ 1,59,380 ರೂಪಾಯಿ ದಾಖಲಾಗಿದೆ. ಅಂದರೆ 24K ಚಿನ್ನದ ಒಂದು ಗ್ರಾಂ ಬೆಲೆ 15,938 ರೂಪಾಯಿಗಳಷ್ಟಿದೆ. ಪ್ರತಿದಿನದ ಬಳಕೆಗೆ ಹಾಗೂ ಲೈಟ್ ವೆಯಿಟ್ ಆಭರಣಗಳ ತಯಾರಿಕೆಗೆ ಹೆಚ್ಚು ಖರೀದಿಸುವ 18 ಕ್ಯಾರೆಟ್ ಚಿನ್ನದ ದರ ಕೂಡ 10 ಗ್ರಾಂಗೆ 1,19,535 ರೂಪಾಯಿಗಳಷ್ಟಿದೆ (ಒಂದು ಗ್ರಾಂಗೆ 11,953.5 ರೂ.).

ಚಿನ್ನದ ಬೆಲೆ ಒಂದು ಕಡೆ ಬಲವಾಗಿ ಸಾಗುತ್ತಿದ್ದರೆ, ಬೆಳ್ಳಿಯ ಬೆಲೆ ಮಾತ್ರ ಗ್ರಾಹಕರಿಗೆ ಅಕ್ಷರಶಃ ಬೆವರಿಳಿಸಿದೆ. ಬೆಂಗಳೂರು ಸೇರಿದಂತೆ ದೆಹಲಿ, ಮುಂಬೈ, ಚೆನ್ನೈನಂತಹ ಪ್ರಮುಖ ನಗರಗಳಲ್ಲಿ ಒಂದು ಕೆಜಿ ಬೆಳ್ಳಿಯ ದರವು ಭಾರಿ ಏರಿಕೆ ಕಂಡು, ಬರೋಬ್ಬರಿ 3,00,000 (ಮೂರು ಲಕ್ಷ) ರೂಪಾಯಿಗಳಿಗೆ ತಲುಪಿದೆ. ಒಂದು ಗ್ರಾಂ ಬೆಳ್ಳಿಯ ಬೆಲೆ 300 ರೂಪಾಯಿ ಆಗಿದ್ದು, 10 ಗ್ರಾಂ ಬೆಳ್ಳಿಗೆ 3,000 ರೂಪಾಯಿ ನೀಡಬೇಕಿದೆ. ಇದು ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಬೆಳ್ಳಿ ಕಾಲುಂಗುರ, ಗೆಜ್ಜೆ ಸೇರಿದಂತೆ ಇತರ ಆಭರಣಗಳ ಖರೀದಿಯೂ ಕಷ್ಟಸಾಧ್ಯವಾಗಿ ಪರಿಣಮಿಸುವ ಹಂತಕ್ಕೆ ತಲುಪಿದೆ ಎಂದರೆ ತಪ್ಪಾಗಲಾರದು.

Gold Rate: ಮತ್ತೆ ಸತತ ಏರಿಕೆ ಕಂಡ ಚಿನ್ನ, ಬೆಳ್ಳಿ ದರ: ಫೆಬ್ರವರಿ 23ರ ಬೆಲೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ

ಚಿನ್ನದ ದರ ಈ ಮಟ್ಟಕ್ಕೆ ದಿಢೀರ್ ಏರಿಕೆಯಾಗಲು ಪ್ರಮುಖ ಕಾರಣ ಜಾಗತಿಕ ಆರ್ಥಿಕ ಬದಲಾವಣೆಗಳು. ಅಮೆರಿಕದ ಡಾಲರ್ ಮೌಲ್ಯದಲ್ಲಿನ ಏರಿಳಿತ, ಜಾಗತಿಕ ರಾಜಕೀಯ ಉದ್ವಿಗ್ನತೆ, ಮತ್ತು ವಿಶ್ವದ ಪ್ರಮುಖ ಸೆಂಟ್ರಲ್ ಬ್ಯಾಂಕ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಭೌತಿಕ ಚಿನ್ನವನ್ನು ಖರೀದಿಸಿ ಮೀಸಲಿಡುತ್ತಿರುವುದು ಮಾರುಕಟ್ಟೆಯ ಮೇಲೆ ನೇರ ಪ್ರಭಾವ ಬೀರಿದೆ.

Credit: Oneindia

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+