Honda Dio: ಯುವಕರ ಹಾಟ್ ಫೇವರೆಟ್ ಡಿಯೋ 125 X ಬಿಡುಗಡೆ: ಕಮ್ಮಿ ಬೆಲೆ, ವಿಶೇಷತೆಗಳೇನು?

ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿರುವ ಹೋಂಡಾ, ಭಾರತೀಯ ಮಾರುಕಟ್ಟೆಯಲ್ಲಿ ಡಿಯೋ 125 ಎಕ್ಸ್-ಎಡಿಷನ್ (Honda Dio 125 X Edition) ಬಿಡುಗಡೆ ಮಾಡಿದೆ. ಹೊಸ ಸ್ಪೆಷಲ್ ಎಡಿಷನ್‌ಗೆ ಬುಕಿಂಗ್‌ಗಳು ಈಗಾಗಲೇ ತೆರೆಯಲಾಗಿದ್ದು, ಫೆಬ್ರವರಿ ಎರಡನೇ ವಾರದಿಂದ ಹೋಂಡಾ ಡೀಲರ್‌ಶಿಪ್‌ಗಳ ಮೂಲಕ ವಿತರಣೆಗಳು ಪ್ರಾರಂಭವಾಗುತ್ತವೆ. ಹೊಸ ಡಿಯೊ 125 ಎಕ್ಸ್ ಆವೃತ್ತಿಯು ಯಾವುದೇ ಯಾಂತ್ರಿಕ ಬದಲಾವಣೆಗಳಿಲ್ಲದೆ ವಿಶಿಷ್ಟ ಡಿಸೈನ್ ಹಾಗೂ ಆಕರ್ಷಕ ಗ್ರಾಫಿಕ್ಸ್ ಹುಡುಕುತ್ತಿರುವವರಿಗೆ ಬೆಸ್ಟ್ ಆಯ್ಕೆಯಾಗಿದೆ. ವಿಶೇಷ ಬಣ್ಣದೊಂದಿಗೆ ಈಗ ಸ್ಕೂಟರ್ ಸ್ಪೋರ್ಟಿಯರ್ ಲುಕ್ ನೀಡುತ್ತದೆ.

ಹೊಸ ಹೋಂಡಾ ಡಿಯೋ 125 ಎಕ್ಸ್-ಎಡಿಷನ್ ಬೆಲೆಯು ರೂ. 87,733 (ಎಕ್ಸ್-ಶೋರೂಂ) ಇದೆ. ಹೊಸ ಆವೃತ್ತಿಯು ನವೀಕರಿಸಿದ ಗ್ರಾಫಿಕ್ಸ್ ಮತ್ತು ವಿನ್ಯಾಸ ಅಂಶಗಳೊಂದಿಗೆ ರಿಫ್ರೆಶ್ ಲುಕ್ ಬಯಸುವ ಸವಾರರನ್ನು ಗುರಿಯಾಗಿರಿಸಿಕೊಂಡಿದೆ. ಹೋಂಡಾ ಪರ್ಲ್ ಡೀಪ್ ಗ್ರೌಂಡ್ ಗ್ರೇ ಮತ್ತು ಪರ್ಲ್ ಸೈರನ್ ಬ್ಲೂ ಅನ್ನು ಸಂಯೋಜಿಸುವ ಡ್ಯುಯಲ್ - ಟೋನ್ ಬಣ್ಣದೊಂದಿಗೆ ಈಗೆ ಎಂಟ್ರಿ ಕೊಟ್ಟಿದೆ.


Honda Dio: ಯುವಕರ ಹಾಟ್ ಫೇವರೆಟ್ ಡಿಯೋ 125 X ಬಿಡುಗಡೆ: ಕಮ್ಮಿ ಬೆಲೆ

ಈ ಡ್ಯುಯಲ್-ಟೋನ್ ಬಣ್ಣವು ಬಾಡಿ ಪ್ಯಾನೆಲ್‌ಗಳ ಮೇಲೆ ಡಾರ್ಕ್ ಬ್ಲೂ ಬಣ್ಣವನ್ನು ಹೊಂದಿದ್ದು, ಏಪ್ರನ್ ಗ್ರೇ ಬಣ್ಣದಲ್ಲಿದೆ. ಸೈಬರ್ ಡ್ರಿಫ್ಟ್ ಥೀಮ್‌ನಿಂದ ಸ್ಫೂರ್ತಿ ಪಡೆದ ಈ ಬಣ್ಣವು ಸ್ಕೂಟರ್‌ಗೆ ಆಧುನಿಕ ಮತ್ತು ಪವರ್‌ಫುಲ್ ನಿಲುವನ್ನು ನೀಡುತ್ತದೆ. ಇದರ ಜೊತೆಗೆ ಸ್ಕೂಟರ್ ಬಾಡಿ ಪ್ಯಾನೆಲ್‌ಗಳಲ್ಲಿ ಅನ್ವಯಿಸಲಾದ ವಿಶೇಷ X ಎಡಿಷನ್ ಗ್ರಾಫಿಕ್ಸ್‌ ಎದ್ದು ಕಾಣುವಂತೆ ಮಾಡುತ್ತದೆ.

ಈ ಹೊಸ ಗ್ರಾಫಿಕ್ಸ್ ಡೆಕಲ್‌ಗಳು ಸ್ಕೂಟರ್‌ಗೆ ತೀಕ್ಷ್ಣವಾದ ಮತ್ತು ಹೆಚ್ಚು ಸ್ಪೋರ್ಟಿ ಲುಕ್ ನೀಡುತ್ತವೆ, ಸಾಮಾನ್ಯ ಡಿಯೋಗಿಂತ ಹೆಚ್ಚು ಸ್ಟೈಲಿಶ್ ಆಗಿ ಕಾಣುವಂತೆ ಮಾಡುತ್ತವೆ. ಯೌವ್ವನದ ನೋಟವನ್ನು ನೀಡುವ ಈ ಗ್ರಾಫಿಕ್ಸ್ ಜೊತೆಗೆ ಕೆಂಪು ಬಣ್ಣದ ರಿಮ್‌ಗಳು ಬಾಡಿ ಬಣ್ಣಗಳಿಗೆ ವ್ಯತಿರಿಕ್ತವಾಗಿದ್ದು, ನೋಡಲು ಉತ್ತಮವಾಗಿ ಹೊಂದಿಕೊಂಡಿದೆ. ಒಟ್ಟಾರೆ ಡಿಯೊ 125 ಎಕ್ಸ್-ಎಡಿಷನ್ ಸ್ಟ್ಯಾಂಡರ್ಡ್ ಡಿಯೊ 125 ಕ್ಕೆ ಹೋಲಿಸಿದರೆ ಪರಿಷ್ಕೃತ ವಿನ್ಯಾಸವನ್ನು ಪಡೆದುಕೊಂಡಿದೆ.


Honda Dio: ಯುವಕರ ಹಾಟ್ ಫೇವರೆಟ್ ಡಿಯೋ 125 X ಬಿಡುಗಡೆ: ಕಮ್ಮಿ ಬೆಲೆ

ಎಲ್ಲಕ್ಕಿಂತ ಮುಖ್ಯವಾಗಿ ಮ್ಯಾಟ್ ಫಿನಿಷ್ ಅಲಾಯ್ ವೀಲ್‌ಗಳು ಹೊಸ ಹೋಂಡಾ ಡಿಯೋ 125 ಎಕ್ಸ್-ಎಡಿಷನ್‌ಗೆ ಸ್ಪೋರ್ಟಿ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸಿವೆ. ಈ ಸ್ಕೂಟರ್ ಅನ್ನು ವಿಶೇಷವಾಗಿ ಜನರೇಷನ್ ಝಡ್ ಸವಾರರು ಮತ್ತು ಯುವಕರು ತಮ್ಮ ಸ್ಕೂಟರ್ ಪ್ರತ್ಯೇಕವಾಗಿ ಕಾಣಲು ಬಯಸುವವರಿಗಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಹೋಂಡಾ ಹೇಳಿದೆ.

ಎಂಜಿನ್ ವಿಷಯದಲ್ಲಿ ಡಿಯೋ 125 ಎಕ್ಸ್ ಎಡಿಷನ್ ಯಾವುದೇ ಬದಲಾವಣೆ ಪಡೆದಿಲ್ಲ, ಅದೇ 123.92 ಸಿಸಿ ಸಿಂಗಲ್-ಸಿಲಿಂಡರ್, ಫೋರ್-ಸ್ಟ್ರೋಕ್ SI ಎಂಜಿನ್‌ ಹೊಂದಿದ್ದು, 6,500 ಆರ್‌ಪಿಎಂನಲ್ಲಿ 8.1 ಎಚ್‌ಪಿ ಪವರ್ ಮತ್ತು 5,000 ಆರ್‌ಪಿಎಂನಲ್ಲಿ 10.5 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್ ಸೆಟಪ್ ಮತ್ತು ಮೈಲೇಜ್ ಸಾಮಾನ್ಯ ಡಿಯೋ 125 ರಂತೆಯೇ ಇರುತ್ತವೆ.


Honda Dio: ಯುವಕರ ಹಾಟ್ ಫೇವರೆಟ್ ಡಿಯೋ 125 X ಬಿಡುಗಡೆ: ಕಮ್ಮಿ ಬೆಲೆ

ಕಂಪನಿಯ ಪ್ರಕಾರ ಫೀಚರ್ಸ್ ವಿಷಯದಲ್ಲೂ X ಆವೃತ್ತಿಯು ಸಾಮಾನ್ಯ ಡಿಯೋದಂತೆಯೇ ಇರುತ್ತದೆ. ಹೋಂಡಾ ಡಿಯೋ 125ನ ಪ್ರಮುಖ ಗುಣಲಕ್ಷಣಗಳನ್ನು ಬದಲಾಯಿಸದೆಯೇ ಹೊಸ ಲುಕ್ ನೀಡಲಾಗಿದೆ ಅಷ್ಟೆ ಎಂದು ಹೋಂಡಾ ತಿಳಿಸಿದೆ. ಈ ಬಿಡುಗಡೆಯೊಂದಿಗೆ ಕಂಪನಿಯು ಸ್ಕೂಟರ್ ವಿಭಾಗದಲ್ಲಿ ತನ್ನ ಮಾಡಲ್‌ನ್ನು ಹೆಚ್ಚು ಸ್ಪರ್ಧಾತ್ಮಕವಾಗಿ ಇರಿಸುವ ಮೂಲಕ ತನ್ನ ಪ್ರತಿ ಸ್ಪರ್ಧಿಗಳಿಗೆ ಪೈಪೋಟಿ ಹೆಚ್ಚಿಸಲಿದೆ.

ಶೈನ್ 125 ಲಿಮಿಟೆಡ್ ಎಡಿಷನ್ ಬಿಡುಗಡೆ

ಡಿಯೋ 125 ಎಕ್ಸ್-ಎಡಿಷನ್ ಜೊತೆಗೆ ಕಂಪನಿಯು ಹೋಂಡಾ ಶೈನ್ 125 ಲಿಮಿಟೆಡ್ ಎಡಿಷನ್ ಅನ್ನು ಸಹ ಬಿಡುಗಡೆ ಮಾಡಿದೆ. ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅಥವಾ ಅಧಿಕೃತ ಡೀಲರ್‌ಶಿಪ್‌ಗಳಲ್ಲಿ ಆಫ್‌ಲೈನ್‌ನಲ್ಲಿ ಹೋಂಡಾ ಶೈನ್ 125 ಲಿಮಿಟೆಡ್ ಎಡಿಷನ್ ಅನ್ನು ಬುಕ್ ಮಾಡಬಹುದು. ಈ ಎರಡೂ ಮಾಡಲ್‌ಗಳು ಫೆಬ್ರವರಿ ಎರಡನೇ ವಾರದಿಂದ ಡೆಲಿವರಿಗೆ ಲಭ್ಯವಿರುತ್ತವೆ ಎಂದು ಕಂಪನಿ ಹೇಳಿದೆ.

Credit: Drivespark

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+