ಬಳ್ಳಾರಿ: ಬಳ್ಳಾರಿ ನಗರದಲ್ಲಿ ನಡೆದ ಬ್ಯಾನರ್ ಗಲಾಟೆ ಮತ್ತು ಗೋಲಿಬಾರ್ ಪ್ರಕರಣ ಇದೀಗ ರಾಜಕೀಯವಾಗಿ ಭಾರಿ ತಿರುವು ಪಡೆದುಕೊಂಡಿದೆ. ಫೈರಿಂಗ್ ನಿಂದ ಕಾಂಗ್ರೆಸ್ ಕಾರ್ಯಕರ್ತನ ಸಾವಿನ ನಂತರ ಬಳ್ಳಾರಿ ರಣರಂಗ ಆಗಿದ್ದು, ಇದರ ಬೆನ್ನಲ್ಲೇ ಮಾಜಿ ಸಚಿವರಾದ ಶ್ರೀರಾಮುಲು ಮತ್ತು ಶಾಸಕ ಜನಾರ್ದನ ರೆಡ್ಡಿ ಜಂಟಿ ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾಜಿ ಸಚಿವ ಶ್ರೀರಾಮುಲು ಅವರು ಮಾತನಾಡಿ, ಕೇವಲ ಗಲಾಟೆ ಅಷ್ಟೇ ಅಲ್ಲ, ಇದು ಜನಾರ್ದನ ರೆಡ್ಡಿ ಅವರನ್ನ ಮುಗಿಸೋಕೆ ನಡೆದಿದ್ದ ಸಂಚು. ಅಷ್ಟೇ ಅಲ್ಲ, ಅವರ ಮನೆ ಮೇಲೆ ಪೆಟ್ರೋಲ್ ಬಾಂಬ್ ಎಸೆಯೋಕೆ ಪ್ಲಾನ್ ನಡದಿತ್ತು ಅಂತ ಶ್ರೀರಾಮುಲು ಗಂಭೀರ ಆರೋಪ ಮಾಡಿದ್ದಾರೆ. ಆ ಗುಂಡು ಹಾರಿದ್ದು ಗಾಳಿಯಲ್ಲಿ ಅಲ್ಲ, ಅದು ಜನಾರ್ದನ ರೆಡ್ಡಿ ಅವರನ್ನೇ ಟಾರ್ಗೆಟ್ ಮಾಡಿ ಹಾರಿಸಿದ್ದು. ಆದ್ರೆ ದುರಾದೃಷ್ಟವಶಾತ್ ಒಬ್ಬ ಅಮಾಯಕ ಪ್ರಾಣ ಬಿಟ್ಟ ಅಂತ ಹೇಳಿದ್ದಾರೆ.

ಬಳ್ಳಾರಿಯಲ್ಲಿ ನಡೆದ ಘರ್ಷಣೆ ಹಿಂದೆ ಯುಪಿ,ಬಿಹಾರದಿಂದ ಬಂದ ಗನ್ ಮ್ಯಾನ್ ಗಳಿಂದ ಫೈರಿಂಗ್ ನಡೆದಿದೆ ಎಂದು ಮಾಜಿ ಸಚಿವ ಶ್ರೀರಾಮುಲು ಗಂಭೀರ ಆರೋಪ ಮಾಡಿದ್ದಾರೆ. ಬಳ್ಳಾರಿಯಲಿಯಲ್ಲಿ ಬ್ಯಾನರ್ ಕಟ್ಟುವ ವಿಚಾರಕ್ಕೆ ಸಂಬಂಧಪಟ್ಟಂತೆ ಘರ್ಷಣೆಯ ಗಲಾಟೆಯ ಸಂದರ್ಭದಲ್ಲಿ ಭರತ ರೆಡ್ಡಿ ಆಟೋಗಳಲ್ಲಿ ಪೆಟ್ರೋಲ್ ಬಾಂಬ್ ತಂದಿದ್ದರು ಎಂದು ಗಂಭೀರವಾಗಿ ಆರೋಪಿಸಿದರು. ಯಾರ ಬುಲೆಟ್ನಿಂದ ಸಾವು ಆಗಿದೆ ಅನ್ನೋದನ್ನ ಸ್ಪಷ್ಟಪಡಿಸಿ. ಈ ಬಗ್ಗೆ ಸಂಪೂರ್ಣ ತನಿಖೆ ಆಗಬೇಕು ಪೊಲೀಸ್ ಅಧಿಕಾರಿಗಳಿಗೆ ನಾನು ಮಾಡಿಕೊಳ್ಳುತ್ತೇನೆ ನಮ್ಮಿಂದ ಏನಾದರೂ ತಪ್ಪಾಗಿದ್ದರೆ ಕ್ರಮ ತೆಗೆದುಕೊಳ್ಳಲಿ ಯಾರೇ ತಪ್ಪು ಮಾಡಿದರು ಕೂಡ ಕ್ರಮ ಆಗಲಿ ಎಂದು ತಿಳಿಸಿದರು.
ಇನ್ನೂ ಬಳ್ಳಾರಿಯಲ್ಲಿ ಯುಪಿ,ಬಿಹಾರದಿಂದ ಬಂದ ಗನ್ ಮ್ಯಾನ್ ಗಳಿಂದ ಫೈರಿಂಗ್ ನಡೆದಿದೆ. ಮೇಲ್ನೋಟಕ್ಕೆ ಇದು 0.76 MM ಬುಲೆಟ್ ನಿಂದ ಫೈರ್ ಆಗಿದೆ. ಬಳ್ಳಾರಿ ಸುಟ್ಟು ಭಸ್ಮ ಮಾಡುತ್ತೇನೆ ಎಂದು ಭರತ್ ರೆಡ್ಡಿ ಹೇಳುತ್ತಾರೆ ಗಲಾಟೆಯ ಸಂದರ್ಭದಲ್ಲಿ ಪೆಟ್ರೋಲ್ ಬಾಂಬ್ ಸಹ ತಂದಿದ್ದರು. ಶಾಸಕ ಜನಾರ್ಧನ ರೆಡ್ಡಿ ಮನೆ ಸುಡುತ್ತಿದೆ ಅಂತ ಹೇಳುತ್ತಾರೆ ವಾಲ್ಮೀಕಿ ಪುತ್ತಳಿ ಅನಾವರಣಕ್ಕೆ ಬಿಡುತ್ತಿಲ್ಲ ಎಂದು ಹೇಳುತ್ತಾರೆ. ಪುತ್ತಳಿ ಅನಾವರಣಕ್ಕೆ ಬರುತ್ತೇವೆ ಇದರಲ್ಲಿ ರಾಜಕೀಯ ಏಕೆ? ಬಳ್ಳಾರಿ ಶಾಂತಿಯುತವಾಗಿದೆ ಅದನ್ನು ಹಾಳು ಮಾಡಬೇಡಿ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಶ್ರೀರಾಮುಲು ವಾಗ್ದಾಳಿ ನಡೆಸಿದರು.
ಶಾಸಕ ನಾರಾ ಭರತ್ ರೆಡ್ಡಿ ವಿರುದ್ಧ ಕೆಂಡಾಮಂಡಲವಾದ ಶ್ರೀರಾಮುಲು, ನಾವು ಎಲ್ದದನ್ನೂ ನೋಡಿದ್ದೀವಿ, ನಮ್ಮ ತಂಟೆಗೆ ಬರಬೇಡಿ. ಅಧಿಕಾರ ಇದೆ ಅಂತ ಏನ್ ಬೇಕಾದ್ರೂ ಮಾಡ್ತೀರಾ? ಅಂತ ಹೇಳಿದ್ರು. ಬಳ್ಳಾರಿ ಶಾಂತವಾಗಿ ಇರೋದು ಇವರಿಗೆ ಇಷ್ಟ ಇಲ್ಲ ಅಂತ ಕಿಡಿಕಾರಿದ್ದಾರೆ. ಗನ್ ತಂದಿದ್ದೇ ಅವರು, ಫೈರ್ ಮಾಡಿದ್ದು ಅವರೇ. ಬೇಕಿದ್ರೆ ಸಿಸಿಟಿವಿ ಚೆಕ್ ಮಾಡಿ, ಸರಿಯಾದ ತನಿಖೆ ಮಾಡಿ. ಸತ್ಯ ಏನೆಂದು ಜನರಿಗೆ ಗೊತ್ತಾಗಲಿ. ಪಾಯಿಂಟ್ ಜಾಗದಲ್ಲಿ ಇಟ್ಟು ಆ ಹುಡುಗನಿಗೆ ಗುಂಡು ಹೊಡೆದಿದ್ದಾರೆ ಎಂದು ಶ್ರೀರಾಮುಲು ಹೇಳಿದರು.
Credit: Oneindia


Click it and Unblock the Notifications