Gold Rate Jan 30: ಚಿನ್ನದ ಬೆಲೆ 8,230 ರೂ., ಬೆಳ್ಳಿ ಬೆಲೆ 15,000 ರೂ. ಕಡಿಮೆ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ

Gold Rate Jan 30: ಚಿನ್ನ ಪ್ರಿಯರಿಗೆ ಶುಕ್ರವಾರವು ಶುಭ ಶುಕ್ರವಾರವಾಗಿ ಬದಲಾಗಿದೆ. ನಿರಂತರವಾಗಿ ಏರಿಕೆ ಕಂಡಿದ್ದ ಹಾಗೂ ಗುರುವಾರ ಒಂದೇ ದಿನ 11,000 ಸಾವಿರ ರೂಪಾಯಿ ಹೆಚ್ಚಳವಾಗಿದ್ದ ಚಿನ್ನದ ಬೆಲೆಯು ಶುಕ್ರವಾರ / ಜನವರಿ 30ರಂದು ಭರ್ಜರಿ ಇಳಿಕೆ ಕಂಡಿದೆ. ಚಿನ್ನದ ಬೆಲೆಯು ಮಾರುಕಟ್ಟೆಯಲ್ಲಿ ಶುಕ್ರವಾರದಂದು ಬರೋಬ್ಬರಿ 8,230 ರೂಪಾಯಿ ಕಡಿಮೆಯಾಗಿದೆ. ಜನವರಿ 30ರ ಚಿನ್ನ ಮತ್ತು ಬೆಳ್ಳಿ ಬೆಲೆಯು ನಿಖರವಾದ ಮಾಹಿತಿ ಹಾಗೂ ನೆನ್ನೆಗಿಂತ ಇಂದು ಎಷ್ಟು ಕಡಿಮೆಯಾಗಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಜನವರಿ 30ರ ಚಿನ್ನ ಮತ್ತು ಬೆಳ್ಳಿ ಬೆಲೆಯು ಲೋಹ ಪ್ರಿಯರಲ್ಲಿ ನಿರಾಳ ಹಾಗೂ ಸಂತೋಷವನ್ನುಂಟು ಮಾಡಿದೆ. ಬರೋಬ್ಬರಿ 15 ದಿನಗಳ ನಂತರ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಭರ್ಜರಿ ಕಡಿಮೆ ಆಗಿದೆ. ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಅನುಕ್ರಮವಾಗಿ 8,230 ರೂಪಾಯಿ ಹಾಗೂ 15,000 ರೂ. ಕಡಿಮೆಯಾಗಿದೆ.


Gold Rate Jan 30: ಚಿನ್ನದ ಬೆಲೆ 8,230 ರೂ., ಬೆಳ್ಳಿ ಬೆಲೆ 15,000 ರೂ. ಕಡಿಮೆ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ

24 ಕ್ಯಾರೆಟ್ ಚಿನ್ನದ ಬೆಲೆ: 24 ಕ್ಯಾರೆಟ್‌ನ ಚಿನ್ನದ ಬೆಲೆಯು 1 ಗ್ರಾಂಗೆ 17,062 ರೂಪಾಯಿ ಆಗಿದೆ. 10 ಗ್ರಾಂನ ಚಿನ್ನದ ಬೆಲೆಯು 1,70,620 ರೂಪಾಯಿ ಆಗಿದೆ. ನೆನ್ನೆಗೆ ಹೋಲಿಕೆ ಮಾಡಿದರೆ 1 ಗ್ರಾಂನ ಚಿನ್ನದ ಬೆಲೆಯು 823 ರೂಪಾಯಿ ಕಡಿಮೆಯಾಗಿದೆ. 10 ಗ್ರಾಂನ ಚಿನ್ನದ ಮೇಲೆ 8,230 ರೂಪಾಯಿ ಕಡಿಮೆಯಾಗಿದೆ.

22 ಕ್ಯಾರೆಟ್ ಚಿನ್ನದ ಬೆಲೆ: 22 ಕ್ಯಾರೆಟ್‌ನ ಚಿನ್ನದ ಬೆಲೆಯಲ್ಲೂ ಭರ್ಜರಿ ಇಳಿಕೆಯಾಗಿದೆ. 22 ಕ್ಯಾರೆಟ್‌ನ 1 ಗ್ರಾಂ ಚಿನ್ನದ ಬೆಲೆಯು 15,640 ರೂ. ಆಗಿದೆ. 10 ಗ್ರಾಂನ ಚಿನ್ನದ ಬೆಲೆಯು 1,56,440 ರೂ. ಆಗಿದೆ. ಗುರುವಾರಕ್ಕೆ ಹೋಲಿಕೆ ಮಾಡಿದರೆ 22 ಕ್ಯಾರೆಟ್‌ನ 1 ಗ್ರಾಂ ಚಿನ್ನದ ಬೆಲೆಯು 755 ರೂ. ಆಗಿದೆ. 10 ಗ್ರಾಂ ಚಿನ್ನದ ಬೆಲೆಯು 7,550 ರೂ. ಕಡಿಮೆ ಆಗಿದೆ.

18 ಕ್ಯಾರೆಟ್ ಚಿನ್ನದ ಬೆಲೆ: 18 ಕ್ಯಾರೆಟ್‌ನ 1 ಗ್ರಾಂ ಚಿನ್ನದ ಬೆಲೆಯು 12,797 ರೂ. ಆಗಿದೆ. 10 ಗ್ರಾಂನ ಚಿನ್ನದ ಬೆಲೆಯು 1,27,970 ರೂ. ಆಗಿದೆ. ಗುರುವಾರಕ್ಕೆ ಹೋಲಿಕೆ ಮಾಡಿದರೆ 18 ಕ್ಯಾರೆಟ್‌ನ ಚಿನ್ನದ ಬೆಲೆಯಲ್ಲಿ 1 ಗ್ರಾಂನ ಮೇಲೆ 617 ರೂಪಾಯಿ ಹಾಗೂ 10 ಗ್ರಾಂನ ಮೇಲೆ 6,170 ರೂಪಾಯಿ ಕಡಿಮೆಯಾಗಿದೆ.

Gold Rate Jan 29: ಚಿನ್ನದ ಬೆಲೆ ಒಂದೇ ದಿನ 11,770 ರೂ. ಹೆಚ್ಚಳ: 4 ಲಕ್ಷ ರೂ. ಗಡಿದಾಟಿದ ಬೆಳ್ಳಿ ಬೆಲೆ ಜ.29ರ ಚಿನ್ನ - ಬೆಳ್ಳಿ

ಬೆಳ್ಳಿ ಬೆಲೆ ಹೇಗಿದೆ ?

ಇನ್ನು ಜನವರಿ 30ರಂದು ಬೆಳ್ಳಿ ಬೆಲೆಯಲ್ಲೂ ಭರ್ಜರಿ ಇಳಿಕೆಯಾಗಿದೆ. ಬೆಳ್ಳಿ ಬೆಲೆಯು 1 ಗ್ರಾಂಗೆ 395 ರೂಪಾಯಿ ಆಗಿದೆ. ಒಂದು ಕೆ.ಜಿ ಬೆಳ್ಳಿ ಬೆಲೆಯು 3,95,000 ರೂ. ಆಗಿದೆ. ಗುರುವಾರಕ್ಕೆ ಹೋಲಿಕೆ ಮಾಡಿದರೆ ಬೆಳ್ಳಿ ಬೆಲೆಯು ಪ್ರತಿ ಗ್ರಾಂಗೆ 15 ರೂಪಾಯಿ ಹಾಗೂ ಪ್ರತಿ ಕೆ.ಜಿಗೆ ಬರೋಬ್ಬರಿ 15,000 ರೂ. ಕಡಿಮೆಯಾಗಿದೆ.

ಚಿನ್ನ ಪ್ರಿಯರು ನಿರಾಳ

ಇನ್ನು ಚಿನ್ನದ ಬೆಲೆಯು ಏಕಾಏಕಿ ಇಳಿಕೆಯಾಗಿರುವುದು ಚಿನ್ನ ಪ್ರಿಯರಲ್ಲಿ ಸಂತೋಷವನ್ನುಂಟು ಮಾಡಿದೆ. ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆಯು ನಿರಂತರವಾಗಿ ಹೆಚ್ಚಳವಾಗುತ್ತಿತ್ತು. ಗುರುವಾರ ಒಂದೇ ದಿನ ಚಿನ್ನದ ಬೆಲೆಯು ಬರೋಬ್ಬರಿ 11,000 ರೂಪಾಯಿ ಹೆಚ್ಚಳವಾಗಿತ್ತು. ಇದನ್ನು ನೋಡಿದ್ದ ಚಿನ್ನ ಪ್ರಿಯರು ಚಿನ್ನದ ಬೆಲೆ ಈ ರೀತಿಯಾದರೆ ಚಿನ್ನ ಖರೀದಿ ತುಂಬಾ ಕಷ್ಟ ಎಂದೇ ಭಾವಿಸಿದ್ದರು.

Credit: Oneindia

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+