Lentil Price Hike: ಗ್ರಾಹಕರ ಜೇಬು ಸುಡುತ್ತಿದೆ ತೊಗರಿ ಬೇಳೆ: ದಿಢೀರ್ ಬೆಲೆ ಏರಿಕೆಗೆ, ಕಾರಣವೇನು

Lentil Price Hike: ಕರ್ನಾಟಕದಲ್ಲಿ ಬೇಸಿಗೆಗೆ ಮೊದಲೇ ತೊಗರಿ ಬೇಳೆ ಬೆಲೆ ಭರ್ಜರಿ ಹೆಚ್ಚಳವಾಗಿದೆ. ಮುಂದಿನ ದಿನಗಳಲ್ಲಿ ತೊಗರಿ ಬೇಳೆ ಬೆಲೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಬೇಸಿಗೆ ಪ್ರಾರಂಭವಾಗುವುದಕ್ಕಿಂತ ಮುಂಚೆಯೇ ಕರ್ನಾಟಕದಲ್ಲಿ ವಿವಿಧ ತಳಿಯ ತೊಗರಿ ಬೇಳೆ ಸೇರಿದಂತೆ ಬೇಳೆ, ಕಾಳುಗಳ ಬೆಲೆ ಹೆಚ್ಚಳವಾಗಿದೆ.

ಕರ್ನಾಟಕದಲ್ಲಿ ತೊಗರಿ ಬೇಳೆ ದರ ಏರಿಕೆಯಾಗಿದ್ದು, ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ ತೊಗರಿ ಬೇಳೆ ಬೆಲೆಯು 135 ರೂಪಾಯಿಯವರೆಗೆ ತಲುಪಿದೆ. ಬೇಸಿಗೆಯ ಆರಂಭಕ್ಕೂ ಮುನ್ನವೇ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ಮುಟ್ಟಿದಂತೆ ಆಗಿದೆ. ಕಲಬುರಗಿ, ವಿಜಯಪುರ ಸೇರಿದಂತೆ ವಿವಿಧ ಭಾಗದಲ್ಲಿ ಬೆಂಬಲ ಬೆಲೆ ಯೋಜನೆಯಡಿ ತೊಗರಿ ಬೇಳೆಗೆ ಕ್ವಿಂಟಾಲ್‌ಗೆ 8,000 ರೂ. ನಿಗದಿಪಡಿಸಲಾಗಿದೆ. ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್ ತೊಗರಿ ಬೇಳೆ ಬೆಲೆಯು ಕಳೆದ ಒಂದು ತಿಂಗಳ ಅವಧಿಯಲ್ಲೇ 1,300 ರೂಪಾಯಿಯಷ್ಟು ಹೆಚ್ಚಳವಾಗಿದೆ. ತೊಗರಿ ಬೇಳೆ ಬೆಲೆಯು ರೈತರಲ್ಲಿ ಮಂದಹಾಸ ಮೂಡಿಸಿದ್ದರೆ, ಗ್ರಾಹಕರಿಗೆ ಹೊರೆಯಾಗಿ ಬದಲಾಗಿದೆ.


Lentil Price Hike: ಗ್ರಾಹಕರ ಜೇಬು ಸುಡುತ್ತಿದೆ ತೊಗರಿ ಬೇಳೆ: ದಿಢೀರ್ ಬೆಲೆ ಏರಿಕೆಗೆ, ಕಾರಣವೇನು

ತೊಗರಿ ಬೇಳೆಯು ಕರ್ನಾಟಕದ ವಿವಿಧ ಭಾಗದಲ್ಲಿ ಪ್ರತಿ ಕೆಜಿಗೆ 110 ರೂಪಾಯಿಯಿಂದ 135 ರೂಪಾಯಿಗೆ ಹೆಚ್ಚಳವಾಗಿದೆ. ಕರ್ನಾಟಕ ಸರ್ಕಾರವು 2025 - 2026ನೇ ಸಾಲಿಗೆ ಪ್ರತಿ ಕ್ವಿಂಟಾಲ್ ತೊಗರಿಗೆ 7,550 ಕನಿಷ್ಠ ಬೆಂಬಲ ಬೆಲೆ ಹಾಗೂ 450 ರೂಪಾಯಿ ಹೆಚ್ಚುವರಿ ಪ್ರೋತ್ಸಾಹಧನ ಸೇರಿದಂತೆ ಒಟ್ಟು 8,000 ರೂಪಾಯಿ ನಿಗದಿಪಡಿಸಿದೆ. ತೊಗರಿ ಬೇಳೆಯ ಈ ಹಂಗಾಮಿನ ಕಟಾವು ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ಅಂತಿಮ ಹಂತಕ್ಕೆ ಬಂದಿದೆ. 2025ರ ಡಿಸೆಂಬರ್‌ನಿಂದಲೇ ಆವಕ ಶುರುವಾಗಿದೆ.

ಬೇಸಿಗೆಗೂ ಮುನ್ನವೇ ಬೆಲೆ ಏರಿಕೆ ಬಿಸಿ: ಅಕ್ಕಿ, ಬೇಳೆ ತುಟ್ಟಿ

ತೊಗರಿ ಬೇಳೆ ಬೆಲೆ ಹೆಚ್ಚಳಕ್ಕೆ ಕಾರಣವೇನು

ಇನ್ನು ತೊಗರಿ ಬೇಳೆ ಬೆಲೆಯು ಮಾರುಕಟ್ಟೆಯಲ್ಲಿ ಏಕಾಏಕಿ ಹೆಚ್ಚಳವಾಗಿರುವುದಕ್ಕೆ ಎರಡು ಕಾರಣಗಳಿವೆ. ಮೊದಲನೆಯದಾಗಿ ಈ ಬಾರಿ ತೊಗರಿ ಬೇಳೆ ಇಳುವರಿ ಕಡಿಮೆಯಾಗಿದೆ. ಅಲ್ಲದೇ ತೊಗರಿ ಬೇಳೆಗೆ ಈ ಬಾರಿ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯೂ ಇರುವುದರಿಂದ ಬೆಲೆ ಹೆಚ್ಚಳವಾಗುತ್ತಿದೆ. ಈಗಾಗಲೇ ವಿವಿಧ ಬೇಳೆಕಾಳುಗಳು ಹಾಗೂ ತರಕಾರಿಗಳ ಬೆಲೆಯೂ ಹೆಚ್ಚಳವಾಗಿದ್ದು, ಬೇಸಿಗೆಗೆ ಮೊದಲೇ ಗ್ರಾಹಕರ ಜೇಬು ಸುಡುತ್ತಿದೆ.

LPG Price: ಕೇಂದ್ರ ಬಜೆಟ್‌ 2026 ಮಂಡನೆಗೂ ಮನ್ನ ಎಲ್‌ಪಿಜಿ ಸಿಲಿಂಡರ್ ದರ ಭಾರಿ ಏರಿಕೆ

ತೊಗರಿ ಬೆಳೆಗೆ 12000 ಬೆಂಬಲ ಬೆಲೆ ನಿಗದಿಗೆ ಆಗ್ರಹ

ಇನ್ನು ಕರ್ನಾಟಕ ಸರ್ಕಾರವು 2025 - 2026ನೇ ಸಾಲಿನ ಬಜೆಟ್‌ನಲ್ಲಿ ತೊಗರಿ ಬೆಳೆಗಾರರಿಗೆ ಬಲ ತುಂಬುವ ಉದ್ದೇಶದಿಂದಾಗಿ ಹೆಚ್ಚುವರಿ ಪ್ರೋತ್ಸಾಹ ಧನವನ್ನು ನೀಡಿತ್ತು. ಕನಿಷ್ಠ ಬೆಂಬಲ ಬೆಲೆ ಯೋಜನೆಯ ಅಡಿಯಲ್ಲಿ ತೊಗರಿ ಬೇಳೆಯ ಪ್ರತಿ ಕ್ವಿಂಟಾಲ್‌ಗೆ 7,550 ರೂಪಾಯಿಯೊಂದಿಗೆ 450 ರೂಪಾಯಿ ಹೆಚ್ಚುವರಿ ಪ್ರೋತ್ಸಾಹ ಧನ ನಿಗದಿ ಮಾಡಲಾಗಿತ್ತು. ಅಲ್ಲದೇ ಇದಕ್ಕಾಗಿ ಬರೋಬ್ಬರಿ 138 ಕೋಟಿ ರೂಪಾಯಿ ಅನುದಾನ ಮೀಸಲಿರಿಸಿರುವುದಾಗಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದರು. ರೈತರು ಕಳೆದ ವರ್ಷವೇ ತೊಗರಿ ಬೇಳೆಗೆ ಕನಿಷ್ಠ 12,000 ಬೆಂಬಲ ಬೆಲೆ ನಿಗದಿ ಮಾಡಬೇಕು ಎಂದು ಆಗ್ರಹಿಸಿದ್ದರು. ಈಗಲೂ ರೈತರು ಕರ್ನಾಟಕ ಸರ್ಕಾರವು ತೊಗರಿ ಬೇಳೆಗೆ ನಿಗದಿ ಮಾಡಿರುವ ಬೆಂಬಲ ಬೆಲೆ ಸಾಕಾಗುತ್ತಿಲ್ಲ. ಕನಿಷ್ಠ 12,000 ರೂ.ರಿಂದ 12,500 ರೂ. ನಿಗದಿ ಮಾಡಬೇಕು ಎಂದು ರೈತರು ಆಗ್ರಹಿಸುತ್ತಿದ್ದಾರೆ.

Credit: Oneindia

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+