Mahindra: ರೂ.7.99 ಲಕ್ಷ.. 7-ಸೀಟರ್, ಮಹೀಂದ್ರಾ ಬೊಲೆರೊ ಬೆಲೆಗೆ ಸಿಗುವ ಇತರೆ 5 ಕಾರುಗಳಿವು.. ದರವೆಷ್ಟು, ವಿಶೇಷತೆಗಳೇನು?

ಮಹೀಂದ್ರಾ ಬೊಲೆರೊ (Mahindra Bolero) ಪ್ರಮುಖ ಫ್ಯಾಮಿಲಿ ಎಸ್‌ಯುವಿಯಾಗಿದೆ. ರೂ.7.99 ಲಕ್ಷದಿಂದ ರೂ.9.69 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಒಳಗೊಂಡಿದೆ. ಸ್ಟೆಲ್ತ್ ಬ್ಲ್ಯಾಕ್, ಡೈಮಂಡ್ ವೈಟ್, ಡಿಸ್ಯಾಟ್ ಸಿಲ್ವರ್ ಹಾಗೂ ರಾಕಿ ಬೀಜ್ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ. 183 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 2,680 ಎಂಎಂ ವೀಲ್‌ಬೇಸ್‌ನ್ನು ಪಡೆದಿದೆ. 7 ಆಸನಗಳನ್ನು ಹೊಂದಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಸಂಚಾರ ಮಾಡಬಹುದು.

ಈ ಕಾರು 1.5-ಲೀಟರ್ ಡೀಸೆಲ್ ಎಂಜಿನ್‌ನ್ನು ಒಳಗೊಂಡಿದೆ. 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನ್ನು ಹೊಂದಿದೆ. 14 ರಿಂದ 16 ಕಿಲೋಮೀಟರ್‌ವರೆಗೆ ಮೈಲೇಜ್ ಕೊಡುತ್ತದೆ. 125 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಪಡೆದಿದೆ. 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಸ್ಟೀರಿಂಗ್ ಮೌಂಟೆಡ್ ಆಡಿಯೋ ಕಂಟ್ರೋಲ್‌ಗಳು ಹಾಗೂ ಮ್ಯಾನುವಲ್ ಎಸಿ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ. ಸುರಕ್ಷತೆಗಾಗಿ ಡುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು ಹಾಗೂ ರೇರ್ ಪಾರ್ಕಿಂಗ್ ಸೆನ್ಸರ್‌ಗಳನ್ನು ಒಳಗೊಂಡಿದೆ.


Mahindra: ರೂ.7.99 ಲಕ್ಷ.. 7-ಸೀಟರ್, ಮಹೀಂದ್ರಾ ಬೊಲೆರೊ ಬೆಲೆಗೆ..

ನೀವು ಇದೇ 'ಬೊಲೆರೊ' ಬೆಲೆಗೆ ಈ 5 ಜನಪ್ರಿಯ ಕಾರುಗಳಾದ ಮಾರುತಿ ಸುಜುಕಿ ಎರ್ಟಿಗಾ, ರೆನಾಲ್ಟ್ ಟ್ರೈಬರ್, ಸಿಟ್ರನ್ ಸಿ3 ಏರ್‌ಕ್ರಾಸ್, ಮಹೀಂದ್ರಾ ಬೊಲೆರೊ ನಿಯೋ ಹಾಗೂ ಟೊಯೊಟಾ ರೂಮಿಯಾನ್ ಮಾಡೆಲ್‌ಗಳನ್ನು ಖರೀದಿಸಬಹುದು. ಬನ್ನಿ.. ಇವುಗಳ ಬೆಲೆ ಎಷ್ಟು, ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಕ್ಷಿಪ್ತವಾದ ವಿವರಗಳನ್ನು ತಿಳಿಯೋಣ.

ಮಾರುತಿ ಸುಜುಕಿ ಎರ್ಟಿಗಾ (Maruti Suzuki Ertiga):

ಇದು ಜನಪ್ರಿಯ ಎಂಪಿವಿಯಾಗಿದೆ. 'ಮಹೀಂದ್ರಾ ಬೊಲೆರೊ'ಗೆ ಪರ್ಯಾಯವಾಗಿ ಕೊಂಡುಕೊಳ್ಳಬಹುದು. ರೂ.8.80 ಲಕ್ಷದಿಂದ ರೂ.12.94 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 1.5-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಸಿಎನ್‌ಜಿ ಎಂಜಿನ್‌ನ್ನು ಹೊಂದಿದೆ. 20 ರಿಂದ 26 ಕಿಲೋಮೀಟರ್‌ವರೆಗೆ ಮೈಲೇಜ್ ನೀಡುತ್ತದೆ. 7 ಆಸನ ಆಯ್ಕೆಯನ್ನು ಒಳಗೊಂಡಿದೆ. 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಎಂಜಿನ್ ಸ್ಟಾರ್ಟ್/ ಸ್ಟಾಪ್ ಬಟನ್ ಮತ್ತು 6-ಏರ್‌ಬ್ಯಾಗ್‌ಗಳನ್ನು ಪಡೆದಿದೆ.


Mahindra: ರೂ.7.99 ಲಕ್ಷ.. 7-ಸೀಟರ್, ಮಹೀಂದ್ರಾ ಬೊಲೆರೊ ಬೆಲೆಗೆ..

ರೆನಾಲ್ಟ್ ಟ್ರೈಬರ್ (Renault Triber):

ಈ ಕಾರನ್ನು 'ಮಹೀಂದ್ರಾ ಬೊಲೆರೊ'ಗೆ ಬದಲಾಗಿ ಖರೀದಿಸಬಹುದು. ರೂ..5.76 ಲಕ್ಷದಿಂದ ರೂ.8.60 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. 1-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್‌ನ್ನು ಪಡೆದಿದೆ. 18 ರಿಂದ 19 ಕಿಲೋಮೀಟರ್‌ವರೆಗೆ ಮೈಲೇಜ್ ಕೊಡುತ್ತದೆ. 7 ಆಸನಗಳನ್ನು ಹೊಂದಿದೆ. 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಹಾಗೂ 6-ಏರ್‌ಬ್ಯಾಗ್‌ಗಳನ್ನು ಒಳಗೊಂಡಿದೆ.

ಸಿಟ್ರನ್ ಸಿ3 ಏರ್‌ಕ್ರಾಸ್ (Citroen C3 Aircross)

ಇದನ್ನು ಹೆಚ್ಚು-ಕಮ್ಮಿ 'ಮಹೀಂದ್ರಾ ಬೊಲೆರೊ' ದರಕ್ಕೆ ತೆಗೆದುಕೊಳ್ಳಬಹುದು. ರೂ.8.29 ಲಕ್ಷದಿಂದ ರೂ.13.69 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಮತ್ತು 1.2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್‌ನ್ನು ಒಳಗೊಂಡಿದೆ. 17.5 ರಿಂದ 18.5 ಕಿಲೋಮೀಟರ್‌ವರೆಗೆ ಮೈಲೇಜ್ ನೀಡುತ್ತದೆ. 5/ 7 ಆಸನ ಆಯ್ಕೆ ವ್ಯವಸ್ಥೆಯನ್ನು ಪಡೆದಿದೆ. 10.2-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು 6-ಏರ್‌ಬ್ಯಾಗ್‌ಗಳನ್ನು ಹೊಂದಿದೆ.


Mahindra: ರೂ.7.99 ಲಕ್ಷ.. 7-ಸೀಟರ್, ಮಹೀಂದ್ರಾ ಬೊಲೆರೊ ಬೆಲೆಗೆ..

ಮಹೀಂದ್ರಾ ಬೊಲೆರೊ ನಿಯೋ (Mahindra Bolero Neo):

ಈ ಕಾರನ್ನು ಸಹ 'ಬೊಲೆರೊ'ಗೆ ಪರ್ಯಾಯವಾಗಿ ಖರೀದಿಸಬಹುದು. ರೂ.8.49 ಲಕ್ಷದಿಂದ ರೂ.10.49 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. 1.5-ಲೀಟರ್ ಡೀಸೆಲ್ ಎಂಜಿನ್‌ನ್ನು ಹೊಂದಿದೆ. 17.29 ಕಿಲೋಮೀಟರ್‌ವರೆಗೆ ಮೈಲೇಜ್ ಕೊಡುತ್ತದೆ. 7 ಆಸನಗಳನ್ನು ತನ್ನದಾಗಿಸಿಕೊಂಡಿದೆ. 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಡುಯಲ್ ಫ್ರಂಟ್ ಏರ್‌ಬ್ಯಾಗ್‌ಗಳನ್ನು ಪಡೆದಿದೆ.


Mahindra: ರೂ.7.99 ಲಕ್ಷ.. 7-ಸೀಟರ್, ಮಹೀಂದ್ರಾ ಬೊಲೆರೊ ಬೆಲೆಗೆ..

ಟೊಯೊಟಾ ರೂಮಿಯಾನ್ (Toyota Rumion):

ಇದು ಪ್ರಮುಖ ಎಂಪಿವಿಯಾಗಿದೆ. 'ಮಹೀಂದ್ರಾ ಬೊಲೆರೊ'ಗೆ ಬದಲಾಗಿಯೂ ಮನೆಗೆ ತರಬಹುದು. ರೂ.10.44 ಲಕ್ಷದಿಂದ ರೂ.13.62 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 1.5-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಸಿಎನ್‌ಜಿ ಎಂಜಿನ್‌ನ್ನು ಒಳಗೊಂಡಿದೆ. 20 ರಿಂದ 26 ಕಿಲೋಮೀಟರ್‌ವರೆಗೆ ಮೈಲೇಜ್ ಕೊಡುತ್ತದೆ. 7 ಆಸನಗಳನ್ನು ಹೊಂದಿದೆ. 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಹಾಗೂ 6-ಏರ್‌ಬ್ಯಾಗ್‌ಗಳನ್ನು ಪಡೆದಿದೆ.

Credit: Drivespark

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+