Maruti: ಆಫೀಸ್‌ಗೆ ಹೋಗುವವರಿಗೆ ಪರ್ಫೆಕ್ಟ್ ಕಾರಿದು.. 34 ಕಿ.ಮೀ ಮೈಲೇಜ್.. ರೂ.4.70 ಲಕ್ಷ.. ಆದ್ರೂ ಜನ ಖರೀದಿಸುತ್ತಿಲ್ಲ!

ಮಾರುತಿ ಸುಜುಕಿ ಸೆಲೆರಿಯೊ (Maruti Suzuki Celerio) ಜನಪ್ರಿಯ ಹ್ಯಾಚ್‌ಬ್ಯಾಕ್ ಆಗಿ ಹೊರಹೊಮ್ಮಿದೆ. ಆದರೂ ಈ ಕಾರಿನ ಮಾರಾಟದಲ್ಲಿ ಹಾವು ಏಣಿ ಆಟ ಮುಂದಿವರಿದಿದೆ. ಕಳೆದ ತಿಂಗಳು (ಜನವರಿ - 2026) ಒಟ್ಟು 1,501 ಯುನಿಟ್‌ಗಳನ್ನು ಮಾತ್ರ ಗ್ರಾಹಕರಿಗೆ ವಿತರಿಸಲಾಗಿದೆ. 2025ರ ಇದೇ ಅವಧಿಯಲ್ಲಿ 1954 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿಅಂಶವನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ -23.18% ಕಡಿಮೆಯಾಗಿದೆ.

ಈ ಜನವರಿಯಲ್ಲಿ 'ಮಾರುತಿ ಸೆಲೆರಿಯೊ' ಮಾರಾಟ ಸಂಖ್ಯೆ ಇಳಿಕೆಯಾಗಲು ನಾನಾ ಕಾರಣಗಳಿವೆ. ಇದೇ ಕಾರಿನ ಬೆಲೆಗಿಂತ ಸ್ವಲ್ಪ ಹೆಚ್ಚಿನ ಹಣವನ್ನು ಪಾವತಿಸಿದರೆ, ಹೊಸದೊಂದು ಎಸ್‌ಯುವಿಯನ್ನು ಕೊಂಡುಕೊಳ್ಳಬಹುದು. ಜೊತೆಗಿದು ಪುಟ್ಟ ಗಾತ್ರದಲ್ಲಿದೆ. ಹೀಗಾಗಿ, ಸೆಲೆರಿಯೊ ಮಾರಾಟವು ಕುಸಿತವಾಗುತ್ತಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.


Maruti: ಆಫೀಸ್‌ಗೆ ಹೋಗುವವರಿಗೆ ಪರ್ಫೆಕ್ಟ್ ಕಾರಿದು..

'ಮಾರುತಿ ಸುಜುಕಿ ಸೆಲೆರಿಯೊ' ವಿಶೇಷತೆಗಳೇನು:

ಇದು ಅಗ್ಗದ ಬೆಲೆಯಲ್ಲಿಯೂ ಲಭ್ಯವಿದೆ. ರೂ.4.70 ಲಕ್ಷದಿಂದ ರೂ.6.73 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದ್ದು, ಶ್ರೀಸಾಮಾನ್ಯರು ಕೂಡ ಸುಲಭವಾಗಿ ಖರೀಸಬಹುದು. ಎಲ್ಎಕ್ಸ್ಐ, ವಿಎಕ್ಸ್ಐ, ಜಡ್ಎಕ್ಸ್ಐ ಮತ್ತು ಜಡ್ಎಕ್ಸ್ಐ ಪ್ಲಸ್ ಎಂಬ ಆಕರ್ಷಕವಾದ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ದೊರೆಯುತ್ತದೆ.

ನೂತನ 'ಸೆಲೆರಿಯೊ' ಹೆಚ್ಚು ಅತ್ಯಾಕರ್ಷಕವಾದ ವಿನ್ಯಾಸವನ್ನು ಹೊಂದಿದೆ. ತುಂಬಾ ಚೆನ್ನಾಗಿರುವ ಎಲ್ಇಡಿ ಹೆಡ್‌ಲೈಟ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಎಲ್ಇಡಿ ಟೈಲ್ ಲ್ಯಾಂಪ್‌ಗಳು ಮತ್ತು 15-ಇಂಚಿನ ಅಲಾಯ್ ವೀಲ್‌ಗಳನ್ನು ಒಳಗೊಂಡಿದೆ. ಆರ್ಕ್ಟಿಕ್ ವೈಟ್, ಕೆಫೀನ್ ಬ್ರೌನ್, ಪರ್ಲ್ ಬ್ಲೂಯಿಶ್ ಬ್ಲ್ಯಾಕ್, ಸಾಲಿಡ್ ಫೈರ್ ರೆಡ್ ಮತ್ತು ಗ್ಲಿಸ್ಟನಿಂಗ್ ಗ್ರೇ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ.


Maruti: ಆಫೀಸ್‌ಗೆ ಹೋಗುವವರಿಗೆ ಪರ್ಫೆಕ್ಟ್ ಕಾರಿದು..

ಈ ಕಾರು ಸಣ್ಣದಾಗಿದ್ದರೂ ಹೆಚ್ಚು ವಿಶಾಲವಾಗಿದೆ. 3,695 ಎಂಎಂ ಉದ್ದ, 1,655 ಎಂಎಂ ಅಗಲ ಮತ್ತು 1,555 ಎಂಎಂ ಎತ್ತರವಿದೆ. ಜೊತೆಗಿದು 170 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 2,435 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿದೆ. ಬರೋಬ್ಬರಿ 1,260 ಕೆಜಿ ತೂಕವಿದೆ.

ಇದು ಬೆಲೆಗೆ ತಕ್ಕಂತೆ ಶಕ್ತಿಶಾಲಿಯಾದ ಎರಡು ಪವರ್‌ಟ್ರೇನ್‌ನ್ನು ಒಳಗೊಂಡಿದೆ ಇದರ 1-ಲೀಟರ್ ಪೆಟ್ರೋಲ್ ಎಂಜಿನ್, 5,500 ಆರ್‌ಪಿಎಂನಲ್ಲಿ 66 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 3,500 ಆರ್‌ಪಿಎಂನಲ್ಲಿ 89 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಒಳಗೊಂಡಿದೆ.


Maruti: ಆಫೀಸ್‌ಗೆ ಹೋಗುವವರಿಗೆ ಪರ್ಫೆಕ್ಟ್ ಕಾರಿದು..

ಮತ್ತೊಂದು 1-ಲೀಟರ್ ಸಿಎನ್‌ಜಿ ಎಂಜಿನ್, 5,300 ಆರ್‌ಪಿಎಂನಲ್ಲಿ 56.7 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 3,400 ಆರ್‌ಪಿಎಂನಲ್ಲಿ 82.1 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. ಈ ಕಾರು ರೂಪಾಂತರಗಳಿಗೆ ಅನುಗುಣವಾಗಿ 5-ಸ್ಪೀಡ್ ಮ್ಯಾನುವಲ್ ಹಾಗೂ 5-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಪಡೆದಿದೆ. 24 ರಿಂದ 34 ಕಿಲೋಮೀಟರ್‌ವರೆಗೆ ಮೈಲೇಜ್ ಕೊಡುತ್ತದೆ. 150 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ.

ಹೊಸ 'ಮಾರುತಿ ಸೆಲೆರಿಯೊ' 5 ಆಸನ ಆಯ್ಕೆ ವ್ಯವಸ್ಥೆಯನ್ನು ಪಡೆದಿದೆ. ಪ್ರಯಾಣಿಕರು ಸುಲಭವಾಗಿ ಓಡಾಟ ನಡೆಸಬಹುದು. ಹೆಚ್ಚಿನ ಲಗೇಜ್ ಕೊಂಡೊಯ್ಯಲು 313 ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ಹೊಂದಿದೆ. 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಐಡಲ್ ಎಂಜಿನ್ ಸ್ಟಾರ್ಟ್/ಸ್ಟಾಪ್ ಸಿಸ್ಟಮ್, ಎಲೆಕ್ಟ್ರಿಕ್ ಪವರ್ ಸ್ಟೀರಿಂಗ್, ಏರ್ ಕಂಡಿಷನರ್, ಸೆಂಟ್ರಲ್ ಲಾಕಿಂಗ್, ಅಡ್ಜಸ್ಟಬಲ್ ಹೆಡ್‌ರೆಸ್ಟ್‌ಗಳು, ರೇರ್-ಎಸಿ ವೆಂಟ್‌ಗಳು ಮತ್ತು ಮ್ಯಾನುವಲ್ ಎಸಿಯಂತಹ ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ.

ಇದು ಸುರಕ್ಷತೆಯಿಂದಲೂ ಮನೆ ಮಾತಾಗಿದೆ. ಪ್ರಯಾಣಿಕರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆಯನ್ನು ಒದಗಿಸಬಲ್ಲದು. ಸ್ಟ್ಯಾಂಡರ್ಡ್ ಆಗಿ 6-ಏರ್‌ಬ್ಯಾಗ್‌, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಹಿಲ್-ಹೋಲ್ಡ್ ಅಸಿಸ್ಟ್‌, ಇಎಸ್‌ಪಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ) ಸೀಟ್ ಬೆಲ್ಟ್ ರಿಮೈಂಡರ್ಸ್, ಹಾಗೂ ರಿವರ್ಸ್ ಪಾರ್ಕಿಂಗ್ ಸೆನ್ಸರ್‌ಗಳನ್ನು ಪಡೆದಿದೆ.

Credit: Drivespark

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+