ಮಾರುತಿಯ ಮೊದಲ ಎಲೆಕ್ಟ್ರಿಕ್ ಕಾರು ಶೀಘ್ರದಲ್ಲೆ ಬಿಡುಗಡೆ: ಸಿಂಗಲ್ ಚಾರ್ಜ್, 500 ಕಿ.ಮೀ ರೇಂಜ್!

ಮಾರುತಿ ಸುಜುಕಿ ತನ್ನ ಮೊದಲ ಎಲೆಕ್ಟ್ರಿಕ್ SUV ಇ-ವಿಟಾರಾ (e VITARA) ವನ್ನು ಭಾರತದಲ್ಲಿ ಶೀಘ್ರದಲ್ಲೆ ಬಿಡುಗಡೆ ಮಾಡಲಿದೆ. ಅದಕ್ಕೂ ಮುನ್ನ ಮಾರುತಿ ಭಾರತದಾದ್ಯಂತ 1,500 ವಿದ್ಯುತ್ ವಾಹನ-ಸಿದ್ಧ ಸೇವಾ ಕಾರ್ಯಾಗಾರಗಳನ್ನು ಸಿದ್ಧಪಡಿಸಿದೆ. 2030ರ ವೇಳೆಗೆ, ವಿಶಾಲವಾದ, ರಾಷ್ಟ್ರವ್ಯಾಪಿ ಚಾರ್ಜಿಂಗ್ ನೆಟ್‌ವರ್ಕ್ ಮೂಲಕ ಗ್ರಾಹಕರಿಗೆ ಅನುಕೂಲಕರವಾಗಿಸುವ ಗುರಿಯನ್ನು ಮಾರುತಿ ಹೊಂದಿದೆ. ಅಲ್ಲದೆ ಎಲಕ್ಟ್ರಿಕ್ ವಾಹನಗಳ ಮಾಲೀಕತ್ವವನ್ನು ಸರಳಗೊಳಿಸಲು ಎಲ್ಲಾ ಮುಂಜಾಗ್ರತೆ ವಹಿಸುತ್ತಿದೆ. ಮಾರುತಿಯ ಮೊದಲ ಎಲೆಕ್ಟ್ರಿಕ್ SUV ಬಗ್ಗೆ ನಮಗೆ ಲಭ್ಯವಿರುವ ಪ್ರಮುಖ ಅಂಶಗಳು ಇಲ್ಲಿವೆ.

ಮಾರುತಿ ಇ-ವಿಟಾರಾ HEARTECT-e ಪ್ಲಾಟ್‌ಫಾರ್ಮ್ ನಲ್ಲಿ ನಿರ್ಮಾಣವಾಗುತ್ತಿದೆ. ಈ ದೃಢವಾದ ಪ್ಲಾಟ್‌ಫಾರ್ಮ್ 50% ಕ್ಕಿಂತ ಹೆಚ್ಚು ಹೈ-ಟೆನ್ಸೈಲ್ ಸ್ಟೀಲ್ ಅನ್ನು ಹೊಂದಿದೆ. ಪರ್ಫಾಮೆನ್ಸ್, ದಕ್ಷತೆ, ನಾವೀನ್ಯತೆಯನ್ನು ಸಂಯೋಜಿಸುವ ಒಂದು ನೆಲಮಟ್ಟದ ವಿನ್ಯಾಸವಾಗಿದೆ. -30°C ನಿಂದ 60°C ವರೆಗಿನ ತೀವ್ರ ತಾಪಮಾನದಲ್ಲಿ ಅಸಾಧಾರಣ ರೇಂಜ್ ಮತ್ತು ವಿಶ್ವಾಸಾರ್ಹತೆಯನ್ನು ನೀಡುತ್ತದೆ. ಇದು 120 ಲಿಥಿಯಂ-ಐಯಾನ್ ಆಧಾರಿತ ಸೆಲ್‌ಗಳನ್ನು ಹೊಂದಿರುವ ಹೆಚ್ಚಿನ ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.


ಮಾರುತಿಯ ಮೊದಲ ಎಲೆಕ್ಟ್ರಿಕ್ ಕಾರು ಶೀಘ್ರದಲ್ಲೆ ಬಿಡುಗಡೆ

ಇ-ವಿಟಾರಾ 49 kWh ಮತ್ತು 61 kWh ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಬರುತ್ತದೆ. ದೊಡ್ಡ 61 kWh ಬ್ಯಾಟರಿಯನ್ನು 2WD ಮತ್ತು 4WD ಎರಡೂ ಮಾಡಲ್‌ಗಳಲ್ಲಿ ಪಡೆಯಬಹುದು. ಇದು 172 bh ಪವರ್ ಮತ್ತು 189 Nm ಟಾರ್ಕ್ ನೀಡುತ್ತದೆ. 49 kWh ರೂಪಾಂತರವು 2WD ಮಾದರಿಯಾಗಿದ್ದು, ಒಂದೇ eAxle ಮೋಟಾರ್ 142 bh ಪವರ್ ಮತ್ತು 189 Nm ಟಾರ್ಕ್ ಉತ್ಪಾದಿಸುತ್ತದೆ. 61 kWh ರೂಪಾಂತರವು ಸಿಂಗಲ್ ಚಾರ್ಜ್‌ನಲ್ಲಿ 500 ಕಿ.ಮೀ ವರೆಗೆ ರೇಂಜ್ ನೀಡುತ್ತದೆ ಎಂದು ಕಂಪನಿ ಹೇಳಿದೆ.

ಸೇಫ್ಟಿ ವಿಚಾರಕ್ಕೆ ಬಂದರೆ 7 ಏರ್‌ಬ್ಯಾಗ್‌ಗಳು, 360 ವ್ಯೂ ಕ್ಯಾಮೆರಾ, SOS ಬಟನ್‌ನೊಂದಿಗೆ ತುರ್ತು ಕರೆ, ಅಕೌಸ್ಟಿಕ್ ವೆಹಿಕಲ್ ಅಲಾರ್ಮ್ ಸಿಸ್ಟಮ್ (AVAS), ಆಲ್ ವೀಲ್ ಡಿಸ್ಕ್ ಬ್ರೇಕ್‌ಗಳು, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ (EPB), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಅನ್ನು ಒದಗಿಸಲಾಗಿದೆ. ಇವಿಷ್ಟೇ ಅಲ್ಲದೇ ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ (ADAS ಲೆವೆಲ್ 2) ನೊಂದಿಗೆ ಸಜ್ಜುಗೊಂಡಿದೆ.


ಮಾರುತಿಯ ಮೊದಲ ಎಲೆಕ್ಟ್ರಿಕ್ ಕಾರು ಶೀಘ್ರದಲ್ಲೆ ಬಿಡುಗಡೆ

ಈ ಅತ್ಯಾಧುನಿಕ ADAS ವ್ಯವಸ್ಥೆಯು ಅಡಾಪ್ಟಿವ್ ಹೈ ಬೀಮ್ ಸಿಸ್ಟಮ್, ಬ್ಲೈಂಡ್ ಸ್ಪಾಟ್ ಮಾನಿಟರಿಂಗ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಕೀಪ್ ಅಸಿಸ್ಟ್ ಸೇರಿದಂತೆ ಇತರವುಗಳನ್ನು ಒಳಗೊಂಡಿದೆ. ಜೊತೆಗೆ ಕಾರಿನಲ್ಲಿ ಇಕೋ, ನಾರ್ಮಲ್ ಮತ್ತು ಸ್ಪೋರ್ಟ್ ಮೋಡ್‌ಗಳನ್ನು ಒದಗಿಸಲಾಗಿದೆ. ಹಿಮ ಮತ್ತು ಜಾರು ಮೇಲ್ಮೈಗಳಲ್ಲಿ ಎಳೆತವನ್ನು ಸುಧಾರಿಸಲು ಸ್ನೋ ಮೋಡ್‌ನೊಂದಿಗೂ ಬರುತ್ತದೆ.

ಈ ಎಲೆಕ್ಟ್ರಿಕ್ ಎಸ್‌ಯುವಿ HEARTECT-e ಪ್ಲಾಟ್‌ಫಾರ್ಮ್, ಪವರ್‌ಟ್ರೇನ್, ಸುರಕ್ಷತೆ ಮತ್ತು ಕಾರ್ಯಕ್ಷಮತೆಯನ್ನು ಹೊಂದಿದ್ದು, ತನ್ನ ವಿಭಾಗದಲ್ಲಿಯೇ ಅತ್ಯುತ್ತಮ ಹೈಟೆಕ್ ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ. ಇ-ವಿಟಾರಾದ ವಿನ್ಯಾಸ ವಿಷಯಕ್ಕೆ ಬಂದರೆ LED ಹೆಡ್‌ಲ್ಯಾಂಪ್‌ಗಳೊಂದಿಗೆ LED DRL ಗಳು ಮತ್ತು ಫ್ಯೂಚರಿಸ್ಟಿಕ್ ಫ್ರಂಟ್ & ರಿಯರ್ ಫ್ಯಾಸಿಯಾದಂತಹ ಸಿಗ್ನೇಚರ್ ಅಂಶಗಳನ್ನು ಒಳಗೊಂಡಿದೆ.


ಮಾರುತಿಯ ಮೊದಲ ಎಲೆಕ್ಟ್ರಿಕ್ ಕಾರು ಶೀಘ್ರದಲ್ಲೆ ಬಿಡುಗಡೆ

ಇ-ವಿಟಾರಾದ ಇಂಟೀರಿಯರ್ ವಿಷಯಕ್ಕೆ ಬಂದರೆ ಇದರ ಡಿಜಿಟಲ್ ಕಾಕ್‌ಪಿಟ್, ಸಾಫ್ಟ್-ಟಚ್ ಪ್ರೀಮಿಯಂ ಡ್ಯುಯಲ್-ಟೋನ್ ಒಳಾಂಗಣದೊಂದಿಗೆ ಸೌಕರ್ಯ, ಅನುಕೂಲತೆ ಮತ್ತು ಅತ್ಯಾಧುನಿಕ ಸಂಪರ್ಕವನ್ನು ಒಳಗೊಂಡಿದೆ. ಕ್ವಾಡ್ರುಪಲ್ ವರ್ಟಿಕಲ್ ಎಸಿ ವೆಂಟ್‌ಗಳು, ಪ್ಲಶ್ ಡೋರ್ ಆರ್ಮ್‌ರೆಸ್ಟ್ ಹಾಗೂ ಹೊಸ ಬೆಸ್ಪೋಕ್ ಸ್ಟೀರಿಂಗ್ ವೀಲ್ ಒಟ್ಟಾರೆ ಐಷಾರಾಮಿ ಅನುಭವ ನೀಡುತ್ತವೆ.

IR ಕಟ್ ತಂತ್ರಜ್ಞಾನದೊಂದಿಗೆ ಅಕೌಸ್ಟಿಕ್ ವಿಂಡ್‌ಶೀಲ್ಡ್, ಕ್ಯಾಬಿನ್ ಅನ್ನು ಪ್ರಶಾಂತವಾಗಿರಿಸುತ್ತದೆ. ಹೊಸ ಫ್ರಂಟ್ ಮ್ಯಾಕ್‌ಫರ್ಸನ್ ಸ್ಟ್ರಟ್ ಸಸ್ಪೆನ್ಷನ್ ಜೊತೆಗೆ ಹಿಂಭಾಗದ ಮಲ್ಟಿ-ಲಿಂಕ್ ಸಸ್ಪೆನ್ಷನ್ ಸೆಟಪ್‌ನೊಂದಿಗೆ ಸುಗಮ ಸವಾರಿಯನ್ನು ಒದಗಿಸುತ್ತದೆ. ಹೆಚ್ಚು ವಿಶಾಲವಾದ ಕ್ಯಾಬಿನ್, ಮುಂದಿನ ಸಾಲಿನ ವೆಂಟಿಲೇಟೆಡ್ ಸೀಟ್‌ಗಳು ಮತ್ತು 10-ವೇ ಪವರ್ ಅಡ್ಜಸ್ಟಬಲ್ ಟ್ರೈವರ್ ಸೀಟ್, ಹಿಂಭಾಗದ ಸೀಟ್‌ಗಳಲ್ಲಿ ಪ್ರಯಾಣಿಕರಿಗೆ ಸ್ಲೈಡಿಂಗ್ ಮತ್ತು ಒರಗಿಕೊಳ್ಳುವ ಸೌಕರ್ಯವನ್ನು ನೀಡಲಾಗಿದೆ.

Credit: Drivespark

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+