ಜೀವನೋಪಾಯಕ್ಕೆ ಕೂಲಿ ಕೆಲಸ ಮಾಡ್ತಿದ್ದಾರೆ ರಾಷ್ಟ್ರಪ್ರಶಸ್ತಿ ವಿಜೇತ ಕನ್ನಡ ಚಿತ್ರದ ಹೀರೋ

ಸಿನಿಮಾ ಎಲ್ಲರನ್ನು ಕೈಬೀಸಿ ಕರೆಯುತ್ತೆ. ಆದರೆ ಕೆಲವರನ್ನು ಮಾತ್ರ ಕೈ ಹಿಡಿದು ನಡೆಸುತ್ತದೆ. ಒಂದೇ ಒಂದು ಚಿತ್ರದಿಂದ ಗಮನ ಸೆಳೆದವರು ಬಳಿಕ ಮೂಲೆ ಗುಂಪಾಗಿರುವ ಸಾಕಷ್ಟು ಉದಾಹರಣೆಗಳಿವೆ. ಸಿನಿಮಾ ಎಲ್ಲರಿಗೂ ಅಲ್ಲ ಎನ್ನುವ ಮಾತಿದೆ. ಅದು ನಿಜ ಕೂಡ.

ಎಲ್ಲದಕ್ಕೂ ಸೈ, ನಾನು ಇಲ್ಲಿ ಏನಾದರೂ ಸಾಧಿಸಿಯೇ ತೀರುತ್ತೇನೆ ಎಂದು ಬಂದವರು ಗೆಲ್ಲುತ್ತಾರೆ. ಆ ರೀತಿ ಬಂದವರೆಲ್ಲಾ ಗೆದ್ದಿದ್ದಾರೆ ಅನ್ನುವುದಕ್ಕೆ ಸಾಧ್ಯವಿಲ್ಲ. ಪರಿಶ್ರಮದ ಜೊತೆಗೆ ಅದೃಷ್ಟ ಕೂಡ ಬೇಕು. ಬರೀ ಅದೃಷ್ಟದಿಂದಲೇ ಇಲ್ಲಿ ಸಾಧನೆ ಶಿಖರ ಏರಿದವರು ಇದ್ದಾರೆ. ಅದನ್ನೆಲ್ಲಾ ಪಕ್ಕಕ್ಕಿಟ್ಟರೆ ಇಲ್ಲೊಬ್ಬ ನಟ ಕೂಲಿ ಕೆಲಸ ಮಾಡುತ್ತಿದ್ದಾರೆ. ಈತ ರಾಷ್ಟ್ರಪ್ರಶಸ್ತಿ ವಿಜೇತ ಕನ್ನಡ ಚಿತ್ರದಲ್ಲಿ ಹೀರೊ ಆಗಿ ನಟಿಸಿದ್ದರು ಎನ್ನುವುದು ಅಷ್ಟೇ ನಿಜ. ಆ ಸಿನಿಮಾ ದೇಶ ವಿದೇಶಗಳಲ್ಲಿ ಸದ್ದು ಮಾಡಿತ್ತು.


ಜೀವನೋಪಾಯಕ್ಕೆ ಕೂಲಿ ಕೆಲಸ ಮಾಡ್ತಿದ್ದಾರೆ ರಾಷ್ಟ್ರಪ್ರಶಸ್ತಿ ವಿಜೇತ ಕನ್ನಡ ಚಿತ್ರದ ಹೀರೋ

ಏಕಾಏಕಿ ಇದೊಂದು ಚಿತ್ರದ ನಟನೆಯಿಂದ ಎಲ್ಲರ ಗಮನ ಸೆಳೆದು ಬಳಿಕ ಮತ್ತೆರಡು ಸಿನಿಮಾಗಳಲ್ಲಿ ಹೀರೊ ಆಗಿ ನಟಿಸಿದರೂ ಪ್ರಯೋಜನವಾಗಿರಲಿಲ್ಲ. ಹಾಗಾಗಿ ಸಿನಿಮಾ ಸಹವಾಸ ಬಿಟ್ಟು ಈಗ ಹಳ್ಳಿಯಲ್ಲಿ ಜೀವನೋಪಾಯಕ್ಕಾಗಿ ಕೂಲಿ ಕೆಲಸ ಮಾಡುತ್ತಿದ್ದಾರೆ. ವ್ಯವಸಾಯ ಮಾಡಿಕೊಂಡಿರುವ ನಟ ಮರ ಹೊರುವ ಕಷ್ಟದ ಕೆಲಸಗಳನ್ನು ಮಾಡುತ್ತಾರೆ. ಅಂದ ಹಾಗೆ ಈತ ಮತ್ಯಾರು ಅಲ್ಲ ತಿಥಿ ಚಿತ್ರದ ನಟ ಅಭಿಷೇಕ್ ಹೆಚ್‌. ಎನ್.

9 ವರ್ಷಗಳ ಹಿಂದೆ ತೆರೆಗೆ ಬಂದಿದ್ದ 'ತಿಥಿ' ಸಿನಿಮಾ ದಾಖಲೆ ಬರೆದಿತ್ತು. ಸಣ್ಣ ಹಳ್ಳಿಯಲ್ಲಿ ನಡೆಯುವ ಸಿಂಪಲ್ ಕಥೆಯ ಸಿನಿಮಾ ತೆರೆಮೇಲೆ ಮ್ಯಾಜಿಕ್ ಮಾಡಿತ್ತು. ಕರ್ನಾಟಕದ ಮಂಡ್ಯ ಜಿಲ್ಲೆಯ ಹಳ್ಳಿಗಳ ವೃತ್ತಿಪರರಲ್ಲದ ಕಲಾವಿದರು ಈ ಚಿತ್ರದಲ್ಲಿ ನಟಿಸಿ ಗೆದ್ದಿದ್ದರು. ಸೆಂಚುರಿ ಗೌಡ ಹಾಗೂ ಮಗ ಮೊಮ್ಮಕ್ಕಳ ಕಥೆ ಪ್ರೇಕ್ಷಕರಿಗೆ ಹೊಸ ಅನುಭವ ನೀಡಿತ್ತು. ವಿದೇಶದ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು ಸಿನಿಮಾ ಪ್ರಶಂಸೆ ಪಡೆದಿತ್ತು. ಚೀನಾದವರು ಸಿನಿಮಾ ನೋಡಿ ಪ್ರಶಸ್ತಿ ನೀಡಿದ್ದರು.

'ತಿಥಿ' ಚಿತ್ರದಲ್ಲಿ ಗಡ್ಡಪ್ಪ ಪಾತ್ರದಲ್ಲಿ ನಟಿಸಿದ್ದ ಚೆನ್ನೇಗೌಡ ಇತ್ತೀಚೆಗೆ ನಿಧನರಾಗಿದ್ದು ಗೊತ್ತೇಯಿದೆ. ಚಿತ್ರದಲ್ಲಿ ಅಭಿ ಹಾಗೂ ಕಾವೇರಿಯ ಸಣ್ಣ ಲವ್ ಟ್ರ್ಯಾಕ್ ಕೂಡ ಇದೆ. ಅಭಿ ಆಗಿ ಮಂಡ್ಯದ ಸುಣ್ಣದಕೊಪ್ಪಲು ಗ್ರಾಮದ ಅಭಿಷೇಕ್ ಹೆಚ್‌. ಎನ್ ನಟಿಸಿದ್ದರು. ಕಾವೇರಿಯಾಗಿ ಪೂಜಾ ಕಾಣಿಸಿಕೊಂಡಿದ್ದರು. ಈ ಸಿನಿಮಾ ಬಳಿಕ ಒಂದೆರಡು ಸಿನಿಮಾಗಳಲ್ಲಿ ನಟಿಸಿದ್ದ ಪೂಜಾ ಸದ್ಯ ಮದುವೆಯಾಗಿ ಫ್ಯಾಮಿಲಿ ಜೊತೆ ಕಾಲ ಕಳೆಯುತ್ತಿದ್ದಾರೆ.

ಅಂದಹಾಗೆ 'ತಿಥಿ' ಸಿನಿಮಾ ಬಳಿಕ ಸೆಂಚುರಿ ಗೌಡ, ಗಡ್ಡಪ್ಪ ಹಾಗೂ ಅಭಿ ಕಾಂಬಿನೇಷನ್‌ನಲ್ಲಿ ಒಂದೆರಡು ಸಿನಿಮಾಗಳು ಬಂದಿತ್ತು. 'ತರ್ಲೆ ವಿಲೇಜ್' ಎಂಬ ಮತ್ತೊಂದು ಚಿತ್ರದಲ್ಲಿ ಮೂವರು ಒಟ್ಟಿಗೆ ನಟಿಸಿದ್ದರು. ಆ ಸಿನಿಮಾಗಳಲ್ಲಿ ಒಂದಷ್ಟು ಡಬಲ್ ಮೀನಿಂಗ್ ಡೈಲಾಗ್ ಹೇಳಿಸಿ ಪ್ರೇಕ್ಷಕರನ್ನು ಸೆಳೆಯುವ ಪ್ರಯತ್ನ ನಡೆದಿತ್ತು. ಆದರೆ ಅದು ಸಕ್ಸಸ್ ಆಗಲಿಲ್ಲ. 'ತಿಥಿ' ಸಿನಿಮಾ ಮ್ಯಾಜಿಕ್ ಮತ್ತೆ ಪುನರಾವರ್ತನೆ ಆಗಲೇಯಿಲ್ಲ.

ಹೀಗೆ 3 ಸಿನಿಮಾಗಳಲ್ಲಿ ಹೀರೊ ಆಗಿ ನಟಿಸಿದ್ರು ಈಗ ಮರ ಹೊರುವ ಕೆಲಸ ಮಾಡುತ್ತಿದ್ದಾರೆ ಅಭಿ. ಈ ಬಗ್ಗೆ ಯಾರೋ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ತೇಲಿಬಿಟ್ಟಿದ್ದಾರೆ. ಕೋಟಿ ಕೋಟಿ ಹಾಕಿ ಸಿನಿಮಾ ನಿರ್ಮಿಸಿ ಹೀರೊ ಆಗಿ ನಟಿಸಿ ಗೆಲ್ಲುವ ಸಿಗದೇ ಕೆಲವರು ಪರದಾಡುತ್ತಿದ್ದಾರೆ. ಹಾಗಾಗಿ ಸಿನಿಮಾ ಎಲ್ಲರಿಗೂ ಅಲ್ಲ, ಅನ್ನೋದು ವಾಸ್ತವ. ಕೆಲವೊಮ್ಮೆ ಇದು ನಮ್ಮಿಂದ ಸಾಧ್ಯವಿಲ್ಲ ಎಂದು ಗೊತ್ತಾದಾಗ ಸಿಕ್ಕ ಕೆಲಸ ಮಾಡಿಕೊಂಡು ಇದ್ದುಬಿಡುವುದೇ ಉತ್ತಮ ಎನ್ನುವವರು ಇದ್ದಾರೆ.

Credit: Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+