Kia: ಬೆಲೆ ಇಷ್ಟೇನಾ! ಸದ್ದಿಲ್ಲದೇ ಹೊಸ ಕಿಯಾ ಎಸ್‌ಯುವಿ ಡೆಲಿವರಿ ಶುರು.. ವಿಶೇಷತೆಗಳೇನು?

ಈಚೆಗೆ ಹೊಸ ತಲೆಮಾರಿನ ಕಿಯಾ ಸೆಲ್ಟೋಸ್ (New Gen Kia Seltos) ಎಸ್‌ಯುವಿಯನ್ನು ಬಿಡುಗಡೆಗೊಳಿಸಲಾಯಿತು. ಈ ಕಾರು ನೋಡಲು ತುಂಬಾ ಚೆನ್ನಾಗಿದ್ದು, ಹತ್ತಾರು ಹೊಸತನಗಳಿಗೆ ಸಾಕ್ಷಿಯಾಗಿದೆ. ಬುಕ್ಕಿಂಗ್‌ನ್ನು ಪ್ರಾರಂಭಿಸಲಾಗಿದೆ. ಆಸಕ್ತರು ರೂ.25,000 ಮುಂಗಡ ಹಣವನ್ನು ಪಾವತಿಸುವುದರೊಂದಿಗೆ ಆರ್ಡರ್ ಮಾಡಬಹುದು. ಸದ್ಯ, ಈ ಕಾರಿನ ವಿತರಣೆಯನ್ನು ಕೂಡ ಶುರು ಮಾಡಲಾಗಿದೆ. ಅದಕ್ಕೆ ಸಂಬಂಧಿಸಿದ ಕಿರು ವಿಡಿಯೋವೊಂದು ಯೂಟ್ಯೂಬ್‍ನಲ್ಲಿ ಹರಿದಾಡುತ್ತಿದೆ.

ನೂತನ 'ಕಿಯಾ ಸೆಲ್ಟೋಸ್' ವಿಶೇಷತೆಗಳೇನು:

ಇದು ಕೈಗೆಟುಕುವ ಬೆಲೆಯಲ್ಲಿಯೂ ಸಿಗುತ್ತದೆ. ರೂ.10,99 ಲಕ್ಷದಿಂದ ರೂ.19,99 ಲಕ್ಷ (ಎಕ್ಸ್-ಶೋರೂಂ) ದರವನ್ನು ಹೊಂದಿದ್ದು, ಎಲ್ಲ ವರ್ಗದ ಜನರು ಸುಲಭವಾಗಿ ಕೊಂಡುಕೊಳ್ಳಲು ಸಾಧ್ಯವಾಗಲಿದೆ. ಹೆಚ್‌ಟಿಇ, ಹೆಚ್‌ಟಿಇ (ಒ), ಹೆಚ್‌ಟಿಕೆ, ಹೆಚ್‌ಟಿಕೆ (ಒ), ಹೆಚ್‌ಟಿಎಕ್ಸ್, ಹೆಚ್‌ಟಿಎಕ್ಸ್ (ಎ), ಜಿಟಿಎಕ್ಸ್ ಮತ್ತು ಜಿಟಿಎಕ್ಸ್ (ಎ) ರೂಪಾಂತರಗಳೊಂದಿಗೂ ಲಭ್ಯವಿದೆ.

ಈ ಕಾರು ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಒಳಗೊಂಡಿದೆ. ಉತ್ತಮವಾದ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಕನೆಕ್ಟ್ಡ್ ಎಲ್‌ಇಡಿ ಟೈಲ್ ಲ್ಯಾಂಪ್‌ಗಳು, ಫ್ಲಶ್-ಡೋರ್ ಹ್ಯಾಂಡಲ್‌ಗಳು ಮತ್ತು 18-ಇಂಚಿನ ಅಲಾಯ್ ವೀಲ್‌ಗಳನ್ನು ಹೊಂದಿದೆ. ಮ್ಯಾಗ್ಮಾ ರೆಡ್, ಐವರಿ ಸಿಲ್ವರ್ ಗ್ಲೋಸ್, ಪ್ಯೂಟರ್ ಆಲಿವ್, ಇಂಪೀರಿಯಲ್ ಬ್ಲೂ ಹಾಗೂ ಅರೋರಾ ಬ್ಲ್ಯಾಕ್ ಪರ್ಲ್ ಬಣ್ಣಗಳೊಂದಿಗೂ ಸಿಗುತ್ತದೆ.


Kia: ಬೆಲೆ ಇಷ್ಟೇನಾ! ಸದ್ದಿಲ್ಲದೇ ಹೊಸ ಕಿಯಾ ಎಸ್‌ಯುವಿ ಡೆಲಿವರಿ ಶುರು

ಹೊಸ 'ಕಿಯಾ ಸೆಲ್ಟೋಸ್' ಹೆಚ್ಚು ವಿಶಾಲವಾಗಿದೆ. 4,460 ಮಿ.ಮೀ ಉದ್ದ, 1,830 ಮಿ.ಮೀ ಅಗಲ ಹಾಗೂ 1,635 ಮಿ.ಮೀ ಎತ್ತರವಿದೆ. ಜೊತೆಗೆ 190 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಮತ್ತು 2,690 ಮಿ.ಮೀ ವೀಲ್‌ಬೇಸ್‌ನ್ನು ಒಳಗೊಂಡಿದೆ. ಸರಿ ಸುಮಾರು 1,343 ಕೆಜಿ ತೂಕವಿದೆ.

ಇದು 5 ಆಸನ ಆಯ್ಕೆ ವ್ಯವಸ್ಥೆಯನ್ನು ಹೊಂದಿದೆ. ಪ್ರಯಾಣಿಕರು ಸುಲಭವಾಗಿ ಓಡಾಟ ನಡೆಸಬಹುದು. ದೂರದ ಊರುಗಳಿಗೆ ಪ್ರವಾಸಕ್ಕೆ ತೆರಳುವಾಗ ಹೆಚ್ಚಿನ ಲಗೇಜ್ ಸಾಗಿಸಲು 447 ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ಪಡೆದಿದೆ. ಇನ್ಫೋಟೈನ್‌ಮೆಂಟ್‌ ಸಿಸ್ಟಮ್ - ಡ್ರೈವರ್ಸ್ ಡಿಸ್‌ಪ್ಲೇಗಾಗಿ ತಲಾ 12.3-ಇಂಚಿನ ಡುಯಲ್ ಸ್ಕ್ರೀನ್‌ ಸೆಟಪ್, ಪನೋರಮಿಕ್ ಸನ್‌ರೂಫ್, ಆಂಬಿಯೆಂಟ್ ಲೈಟಿಂಗ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ಡುಯಲ್-ಜೋನ್ ಕ್ಲೇಮೇಟ್ ಕಂಟ್ರೋಲ್ ಮತ್ತು ವೈರ್‌ಲೆಸ್ ಫೋನ್ ಚಾರ್ಜರ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.


Kia: ಬೆಲೆ ಇಷ್ಟೇನಾ! ಸದ್ದಿಲ್ಲದೇ ಹೊಸ ಕಿಯಾ ಎಸ್‌ಯುವಿ ಡೆಲಿವರಿ ಶುರು

ನೂತನ 'ಸೆಲ್ಟೋಸ್' ಎಸ್‌ಯುವಿಯು ಶಕ್ತಿಶಾಲಿಯಾದ 3 ಪವರ್‌ಟ್ರೇನ್‌ನ್ನು ಹೊಂದಿದೆ. ಇದರ 1.5-ಲೀ. ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್, 115 ಪಿಎಸ್ ಅಶ್ವ ಶಕ್ತಿ ಮತ್ತು 144 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಮತ್ತೊಂದು 1.5-ಲೀ. ಟರ್ಬೊ ಪೆಟ್ರೋಲ್ ಎಂಜಿನ್,160 ಪಿಎಸ್ ಅಶ್ವ ಶಕ್ತಿ ಹಾಗೂ 253 ಎನ್ಎಂ ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯವನ್ನು ಒಳಗೊಂಡಿದೆ.

ಇನ್ನೊಂದು 1.5-ಲೀ. ಡೀಸೆಲ್ ಎಂಜಿನ್, 116 ಪಿಎಸ್ ಅಶ್ವ ಶಕ್ತಿ ಮತ್ತು 250 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ರೂಪಾಂತರಗಳಿಗೆ ಅನುಗುಣವಾಗಿ 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮೆಟಿಕ್, 7-ಸ್ಪೀಡ್ ಡಿಸಿಟಿ ಹಾಗೂ ಸಿವಿಟಿ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 20 ಕಿಲೋಮೀಟರ್‌ವರೆಗೆ ಮೈಲೇಜ್‌ನ್ನು ನೀಡಬಲ್ಲದು ಎಂದು ಹೇಳಲಾಗಿದೆ.

ಈ ಕಾರು ಸುರಕ್ಷತೆಗೂ ಹೆಸರುವಾಸಿಯಾಗಿದೆ. ಪ್ರಯಾಣಿಕರ ರಕ್ಷಣೆಗಾಗಿ 6-ಏರ್‌ಬ್ಯಾಗ್‌ಗಳು, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಹಿಲ್-ಡಿಸೆಂಟ್ ಕಂಟ್ರೋಲ್, ಹಿಲ್ ಸ್ಟಾರ್ಟ್ ಅಸಿಸ್ಟ್ ಹಾಗೂ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್‌ನ್ನು ಪಡೆದಿದೆ.

ಇದಕ್ಕೆ ಸಾಲು - ಸಾಲು ಪ್ರತಿಸ್ಪರ್ಧಿಗಳಿವೆ. ಬಹುಮುಖ್ಯವಾಗಿ ಹ್ಯುಂಡೈ ಕ್ರೆಟಾ, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ, ಹೋಂಡಾ ಎಲಿವೇಟ್, ಮಾರುತಿ ಸುಜುಕಿ ವಿಕ್ಟೋರಿಸ್, ಟಾಟಾ ನೆಕ್ಸಾನ್, ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್, ಸ್ಕೋಡಾ ಕೈಲಾಕ್ ಹಾಗೂ ಹ್ಯುಂಡೈ ವೆನ್ಯೂ ಕಾರುಗಳು ಪ್ರಬಲವಾದ ಎದುರಾಳಿಯಾಗಿವೆ.

Source link: Youtube

Credit: Drivespark

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+