ಬಹುಭಾಷಾ ನಟಿ ರಾಧಿಕಾ ಆಪ್ಟೆ ಬಹುಶ: ಎಲ್ಲಾ ಸಿನಿಪ್ರಿಯರಿಗೂ ಗೊತ್ತಿದೆ. ಹೆಚ್ಚಾಗಿ ಬಾಲಿವುಡ್‌ನಲ್ಲಿ ಕಾಣಿಸಿಕೊಳ್ಳುವ ಈ ನಟಿ ದಕ್ಷಿಣ ಭಾರತದ ಸಿನಿಮಾಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ತಮ್ಮ ನಟನೆಯಿಂದ ಎಷ್ಟು ಜನಪ್ರಿಯರೋ.. ಅಷ್ಟೇ ಅವರು ಆಯ್ಕೆ ಮಾಡಿಕೊಳ್ಳುವ ವಿವಾದಾತ್ಮಕ ಪಾತ್ರಗಳಿಂದಲೂ ಸುದ್ದಿಯಾಗಿದ್ದು ಇದೆ. ಕೆಲವು ದೃಶ್ಯಗಳನ್ನು ಹೊರತು ಪಡಿಸಿದರೆ, ರಾಧಿಕಾ ಆಪ್ಟೆ ಅತ್ಯುತ್ತಮ ನಟಿ ಅನ್ನೋದರಲ್ಲಿ ಎರಡು ಮಾತಿಲ್ಲ.
ಇತ್ತೀಚೆಗೆ ರಾಧಿಕಾ ಆಪ್ಟೆ ನೀಡಿದ ಸಂದರ್ಶನವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ಸಂದರ್ಶನದಲ್ಲಿ ಹಿಂದಿ ಚಿತ್ರರಂಗದ ಬಗ್ಗೆ ಟೀಕೆ ಮಾಡಿದ್ದರೂ, ದಕ್ಷಿಣ ಭಾರತದ ಸಿನಿಮಾ ಮಂದಿಯ ಬಗ್ಗೆ ಮಾಡಿದ್ದು ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಅದರಲ್ಲೂ ಆರಂಭದ ದಿನಗಳಲ್ಲಿ ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸುವುದಕ್ಕೆ ಅಹಿತಕರ ಎನಿಸುತ್ತಿತ್ತು ಎಂದು ಹೇಳಿದ್ದಾರೆ.

ದಕ್ಷಿಣ ಭಾರತದ ಸಿನಿಮಾವೊಂದರ ಚಿತ್ರೀಕರಣದ ವೇಳೆ ಫಿಲ್ಮ್ ಮೇಕರ್ಸ್ ಹೆಚ್ಚು ಪ್ಯಾಡ್‌ಗಳನ್ನು ಧರಿಸುವಂತೆ ಒತ್ತಡ ಹಾಕುತ್ತಿದ್ದರು ಎಂದು ಹೇಳಿದ್ದರು. ಈ ಹೇಳಿಕೆ ಈಗ ಸೋಶಿಯಲ್ ಮೀಡಿಯಾದಲ್ಲಿ ಸಂಚಲವನ್ನು ಸೃಷ್ಟಿಸಿದೆ. ಅಷ್ಟೇ ಅಲ್ಲದೆ, ಕೆಲವು ಸಿನಿಮಾಗಳನ್ನು ಹಣ ಅಗತ್ಯಕ್ಕಾಗಿ ಒಪ್ಪಿಕೊಂಡಿದ್ದೆ ಎಂದೂ ಹೇಳಿಕೆ ಕೊಟ್ಟಿದ್ದಾರೆ. ಈ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ.
ರಾಧಿಕಾ ಆಪ್ಟೆ ನೇರೆ ನುಡಿಯ ನಟಿ. ತನಗೆ ಅನಿಸಿದ್ದನ್ನು ಮುಖಕ್ಕೆ ಹೊಡೆದಂತೆ ಹೇಳಿಬಿಡುತ್ತಾರೆ. ಹಾಗೇ ಅವರು ಆಯ್ಕೆ ಮಾಡಿಕೊಳ್ಳುವ ಪಾತ್ರಗಳು ಕೂಡ ಇರುತ್ತವೆ. ಆದರೆ, ಸಿನಿಮಾರಂಗ ಎಂಟ್ರಿ ಕೊಟ್ಟ ಹೊಸ್ತಿಲ್ಲಲ್ಲಿ ಕೆಲವು ಸಿನಿಮಾಗಳನ್ನು ಮಾಡಿದ್ದರು. ಆ ಸಿನಿಮಾಗಳಲ್ಲಿ ನಟಿಸಿದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ದಕ್ಷಿಣ ಭಾರತೀಯ ಚಿತ್ರರಂಗದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರೂ, ತಾನು ನಟಿಸಿದ ಒಂದು ಸಿನಿಮಾದ ಬಗ್ಗೆ ಅಸಮಧಾನ ಹೊರ ಹಾಕಿದ್ದಾರೆ.
ಸ್ಕ್ರೀನ್‌ಗೆ ನೀಡಿದ ಸಂದರ್ಶನದಲ್ಲಿ ದಕ್ಷಿಣ ಭಾರತದ ಚಿತ್ರರಂಗದ ಬಗ್ಗೆ ಓಪನ್ ಆಗಿದ್ದಾರೆ. ಈ ವೇಳೆ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಉತ್ತಮ ಸಿನಿಮಾಗಳು ಬರುತ್ತಿವೆ ಎಂದು ಒಪ್ಪಿಕೊಂಡಿದ್ದಾರೆ. ಹಾಗೇ ಆಕೆ ನಟಿಸಿದ ಒಂದು ಸಿನಿಮಾದಲ್ಲಿ ಎದೆ ಮತ್ತು ಹಿಂಭಾಗ ಎದ್ದು ಕಾಣುವುದಕ್ಕೆ ಪ್ಯಾಡ್ ಧರಿಸಲು ಒತ್ತಾಯಿಸಿದ್ದನ್ನು ರಿವೀಲ್ ಮಾಡಿದ್ದಾರೆ. "ದಕ್ಷಿಣ ಭಾರತದಲ್ಲಿ ಉತ್ತಮ ಸಿನಿಮಾಗಳು ರಿಲೀಸ್ ಆಗುತ್ತಿವೆ. ಆದರೆ, ನಾನು ನಟಿಸಿದ ಒಂದು ಸಿನಿಮಾ ಸೆಟ್‌ನಲ್ಲಿ ಅಹಿತಕರ ಅನುಭವ ಆಗಿತ್ತು. ಅದರಲ್ಲಿ ನನ್ನ ಮೈಮಾಟ ಎದ್ದು ಕಾಣಲು ನನ್ನ ಎದೆ ಹಾಗೂ ಹಿಂಭಾಗಕ್ಕೆ ಹೆಚ್ಚೆಚ್ಚು ಪ್ಯಾಡ್‌ಗಳನ್ನು ಧರಿಸುವಂತೆ ಒತ್ತಾಯಿಸಿದ್ದರು" ಎಂದು ಹೇಳಿದ್ದಾರೆ.

ಹಾಗೇ ಪ್ಯಾಡ್ ಧರಿಸುವಂತೆ ಮೇಕಪ್ ಮಾಡುತ್ತಿದ್ದಾಗ ಸಹಾಯಕ ನಿರ್ದೇಶಕರು ಬಂದು ಹೇಳಿದ್ದರೆಂದು ಹೇಳಿಕೊಂಡಿದ್ದಾರೆ. " ಅಮ್ಮ ಇನ್ನೂ ಹೆಚ್ಚು ಪ್ಯಾಡ್ ಹಾಕೊಳ್ಳಿ ಎನ್ನುತ್ತಿದ್ದರು. ಆಗ ನಾನು ಇನ್ನು ಎಷ್ಟು ಹಾಕಿಕೊಳ್ಳಬೇಕು. ಇನ್ನೆಷ್ಟು ದಪ್ಪಗೆ ಕಾಣುವಂತೆ ಮಾಡುತ್ತೀರಿ ಎಂದು ಕೇಳಿದೆ" ಎಂದು ಹೇಳಿದ್ದಾರೆ. ಈ ಹೇಳಿಕೆ ಬಳಿಕ ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಚರ್ಚೆ ಶುರುವಾಗಿದೆ. ರಾಧಿಕಾ ಆಪ್ಟೆ ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಾಗೇ ತೆಲುಗಿ ಕೆಲವು ಗ್ಲಾಮರಸ್ ಹಾಡುಗಳಲ್ಲಿ ಹೆಜ್ಜೆ ಹಾಕಿದ್ದಾರೆ. ಹೀಗಾಗಿ ಯಾರು ಇಂತಹ ಒತ್ತಡ ಹಾಕಿದರು? ಅಂತ ಚರ್ಚೆ ಮಾಡುತ್ತಿದ್ದಾರೆ.
ರಾಧಿಕಾ ಆಪ್ಟೆ ದಕ್ಷಿಣ ಭಾರತದ ಚಿತ್ರರಂಗ ಅಷ್ಟೇ ಅಲ್ಲ. ಹಿಂದಿ ಚಿತ್ರರಂಗ ಕೆಲವು ಕರಾಳ ಮುಖವನ್ನು ಬಿಚ್ಚಿಟ್ಟಿದ್ದಾರೆ. ಬಿಗ್ ಬಜೆಟ್ ಸಿನಿಮಾಗಳಲ್ಲಿ ಯಾಕೆ ಸಿನಿಮಾ ಮಾಡಿಲ್ಲ ಅನ್ನೋದನ್ನು ಹೇಳಿದ್ದಾರೆ. ರಾಧಿಕಾ ನಟಿಸಿರುವ ಕೆಲವು ಸಿನಿಮಾಗಳ ದೃಶ್ಯಗಳಿಗೆ ಹೋಲಿಕೆ ಮಾಡಿತ್ತಿದ್ದಾರೆ. ಅಂತಹ ದೃಶ್ಯಗಳ ಮುಂದೆ ದಕ್ಷಿಣ ಭಾರತದ ಸಿನಿಮಾ ಪ್ಯಾಡ್ ಧರಿಸಿದ್ದಕ್ಕೆ ಯಾಕೆ ಇಷ್ಟು ಟೀಕೆ? ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಮತ್ತೆ ಕೆಲವು ರಾಧಿಕಾ ಆಪ್ಟೆಯ ಟೀಕೆಗಳನ್ನು ಸಮರ್ಥಿಸಿಕೊಂಡಿದ್ದಾರೆ.
Credit: Filmibeat


Click it and Unblock the Notifications