₹9 ಕೋಟಿ ಸಾಲ.. ತಿಹಾರ್ ಜೈಲು ಸೇರಿದ ರಾಜ್‌ಪಾಲ್ ಯಾದವ್‌ ನೆರವಿಗೆ ಬಂದ ಸಲ್ಮಾನ್, ಅಜಯ್, ವರುಣ್

ಬಾಲಿವುಡ್ ಕಂಡ ಜನಪ್ರಿಯ ನಟ ರಾಜ್‌ಪಾಲ್ ಯಾದವ್. ತಮ್ಮ ಮ್ಯಾನರಿಸಂನಿಂದ ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸಿದ್ದ ಈ ಹಾಸ್ಯ ನಟ ಇಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿಂದೆ ಪಡೆದ ಹಣವನ್ನು ಹಿಂತಿರುಗಿಸಲಾಗದೆ, ಚೆಕ್ ಬೌನ್ಸ್ ಕೇಸ್‌ನಲ್ಲಿ ತಿಹಾರ್ ಜೈಲು ಸೇರುವಂತಾಗಿದೆ. ದೆಹಲಿ ಹೈಕೋರ್ಟ್ ಆದೇಶದ ಮೇರೆಗೆ ಹಾಸ್ಯ ನಟ ಸದ್ಯ ಜೈಲಿನಲ್ಲಿದ್ದು, ಬಾಲಿವುಡ್ ಮಂದಿ ನೆರವು ನೀಡುವುದಕ್ಕೆ ಮುಂದೆ ಬಂದಿದ್ದಾರೆ.

ರಾಜ್‌ಪಾಲ್ ಯಾದವ್ ಜೈಲು ಸೇರುತ್ತಿದ್ದಂತೆ ಮೊದಲ ಅವರ ನೆರವಿಗೆ ಬಂದಿದ್ದು ಸೋನು ಸೂದ್. ಇಲ್ಲಿಂದ ಬಾಲಿವುಡ್ ಮಂದಿ ಒಬ್ಬೊಬ್ಬರಾಗಿಯೇ ಸಹಾಯ ಹಸ್ತ ಚಾಚುವುಕ್ಕೆ ಮುಂದೆ ಬರುತ್ತಿದ್ದಾರೆ. ಸೋನು ಸೂದ್ ಅವರ ಮುಂದಿನ ಪ್ರಾಜೆಕ್ಟ್ ಒಂದರಲ್ಲಿ ರಾಜ್‌ಪಾಲ್ ಯಾದವ್‌ಗೆ ಅವಕಾಶ ಕೊಡಿಸಿ ಮುಂಗಡ ಹಣವನ್ನು ಕೊಡಿಸಿದ್ದಾರೆ. ಇವರ ಹಿಂದೆನೇ ಬಾಲಿವುಡ್‌ನ ಮತ್ತೊಬ್ಬ ನಟ ನವಾಜುದ್ದೀನಿ ಸಿದ್ಧಿಕಿ ಕೂಡ ನೆರವು ನೀಡಿದ್ದಾರೆ.


 ₹9 ಕೋಟಿ ಸಾಲ.. ತಿಹಾರ್ ಜೈಲು ಸೇರಿದ ರಾಜ್‌ಪಾಲ್ ಯಾದವ್‌ ನೆರವಿಗೆ ಬಂದ ಸಲ್ಮಾನ್, ಅಜಯ್, ವರುಣ್

ಬಾಲಿವುಡ್ ನಟ ರಾಜ್‌ಪಾಲ್ ಯಾದವ್ ಜನಪ್ರಿಯ ಹಾಸ್ಯನಟ. ಒಂದು ಕಾಲದಲ್ಲಿ ಬಾಲಿವುಡ್‌ನ ಬಹುಬೇಡಿಕೆಯ ನಟನಾಗಿ ಗುರುತಿಸಿಕೊಂಡಿದ್ದರು. ಅವರ ವೃತ್ತಿ ಬದುಕಿನಲ್ಲಿ ಮಾಡಿದ ಒಂದೇ ಒಂದು ತಪ್ಪು ಅವರನ್ನು ಈಗ ಜೈಲು ಸೇರುವಂತೆ ಮಾಡಿದೆ. ಸದ್ಯ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ನಟನಿಗೆ ಬಾಲಿವುಡ್‌ನ ದಿಗ್ಗಜರು ನೆರವಿಗೆ ಬರುತ್ತಿದ್ದಾರೆ.

ರಾಜ್‌ಪಾಲ್ ಯಾದವ್ ತಿಹಾರ್ ಜೈಲಿನ ಅಧಿಕಾರಿಗಳ ಮುಂದೆ ಹಾಜರು ಆದಾಗ ಆಡಿದ ಮಾತುಗಳು ಎಲ್ಲರನ್ನೂ ಭಾವುಕರನ್ನಾಗಿಸಿದೆ. "ನನ್ನ ಹತ್ತಿರ ಹಣವಿಲ್ಲ. ಏನು ಮಾಡುವುದು. ಸ್ನೇಹಿತರು, ಚಿತ್ರರಂಗದ ಸಹೋದ್ಯೋಗಿಗಳು ಅವರ ಕೆಲಸವನ್ನು ಅವರು ನೋಡಿಕೊಂಡಿದ್ದಾರೆ. ನನ್ನಿಂದ ಸಾಲ ತೀರಿಸಲು ಸಾಧ್ಯವಿಲ್ಲ" ಎಂದು ಹೇಳಿದ್ದಾಗಿ ವರದಿಯಾಗಿದೆ.

ಈ ಸುದ್ದಿ ವೈರಲ್ ಆಗುತ್ತಿದ್ದಂತೆ ಬಾಲಿವುಡ್ ಮಂದಿ ಸಹಾಯ ಹಸ್ತ ಚಾಚಿದ್ದಾರೆ. ಸೋನು ಸೂದ್ ಬಳಿಕ ಚಿತ್ರರಂಗವೇ ನೆರವಿಗೆ ಬಂದಿದೆ. ಅದರಲ್ಲೂ ಸಲ್ಮಾನ್ ಖಾನ್, ಅಜಯ್ ದೇವಗನ್ ಹಾಗೂ ವರುಣ್ ಧವನ್ ಅಂತ ನಟರು ಹಿರಿಯ ನಟ ರಾಜ್‌ಪಾಲ್ ಯಾದವ್ ಅವರ ನೆರವಿಗೆ ಬಂದಿದ್ದಾರೆ. ಹೀಗಾಗಿ ಆದಷ್ಟು ಬೇಗ ಜೈಲಿನಿಂದ ಹೊರಬರಲಿದ್ದಾರೆಂದು ಅವರ ಕುಟುಂಬ ಎದುರು ನೋಡುತ್ತಿದ್ದಾರೆ.

25 ವರ್ಷಗಳಿಂದ ರಾಜ್‌ಪಾಲ್ ಯಾದವ್ ಅವರ ಮ್ಯಾನೇಜರ್ ಆಗಿರುವ ಗೋಲ್ಡಿ ಜೈನ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, "ಚಿತ್ರರಂಗದ ಜನಪ್ರಿಯ ಸ್ಟಾರ್‌ಗಳು, ನಿರ್ದೇಶಕರು, ನಿರ್ಮಾಪಕರು ರಾಜ್‌ಪಾಲ್ ಯಾದವ್ ನೆರವಿಗೆ ಬಂದಿದ್ದಾರೆ. ಜನರು ಸಹಾಯ ಮಾಡುವುದಕ್ಕೆ ಮುಂದೆ ಬಂದಿದ್ದಾರೆ. ಸಲ್ಮಾನ್ ಖಾನ್, ಅಜಯ್ ದೇವಗನ್, ವರುಣ್ ಧವನ್ ಹಾಗೂ ಡೇವಿಡ್ ಧವನ್ ಅವರು ಫೋನ್ ಮಾಡಿದರು. ಅವರು ಯಾವ ರೀತಿ ಸಹಾಯ ಮಾಡಬಲ್ಲರು ಎಂಬುವುದು ಇನ್ನೂ ಗೊತ್ತಾಗಬೇಕಿದೆ. ಇವರೆಲ್ಲರೂ ರಾಜ್‌ಪಾಲ್ ಯಾದವ್ ಅವರಿಗೆ ಆತ್ಮೀಯರು" ಎಂದು ಹೇಳಿದ್ದಾರೆ.

ಇನ್ನು ರಾಜ್‌ಪಾಲ್ ಯಾದವ್ ಜೈಲು ಸೇರಿದ್ದು ಏಕೆ? ಎಂದು ನೋಡಿವುದಾರೇ, 2010ರಲ್ಲಿ ರಾಜ್‌ಪಾಲ್ ಯಾದವ್ ನಿರ್ದೇಶನಕ್ಕೆ ಮುಂದಾಗಿದ್ದರು. ಅವರು ನಿರ್ದೇಶಿಸಿದ 'ಅತಾ ಪತಾ ಲಾಪತಾ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೀನಾಯವಾಗಿ ಸೋತಿತ್ತು. ಈ ಸಿನಿಮಾಗಾಗಿ ಅವರು ಮುರಳಿ ಪ್ರಾಜೆಕ್ಟ್ ಪ್ರೈವೆಟ್ ಲಿಮಿಟೆಡ್ ಎಂಬ ಸಂಸ್ಥೆಯಿಂದ ₹5 ಕೋಟಿ ಸಾಲವನ್ನು ಪಡೆದಿದ್ದರು. ಹೀಗಾಗಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದರು. ಹೀಗಾಗಿ ಚೆಕ್ ಬೌನ್ಸ್ ಪ್ರಕರಣ ದಾಖಲಾಗಿ ಜೈಲು ಸೇರುವಂತಾಗಿದೆ.

Credit: Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+