ಮದುವೆಯಾಗಿ ಆರೇ ತಿಂಗಳಿಗೆ ಸಂಸಾರದಲ್ಲಿ ಬಿರುಕು ; ಎರಡು ವರ್ಷದ ನಂತರ ಮುರಿದು ಬಿತ್ತು ಮದುವೆ-ವಿಚ್ಛೇದನ ಘೋಷಿಸಿದ ನಟಿ

ಮದುವೆ ಎನ್ನುವುದು ಸಮರಸ ಜೀವನದ ಆರಂಭ. ಜೊತೆಗಾರ ಅಥವಾ ಜೊತೆಗಾರ್ತಿಯ ಆಯ್ಕೆಗೆ ಮದುವೆ ಎನ್ನುವುದು ಸಾಮಾಜಿಕ ಮನ್ನಣೆ ಪಡೆದಿರುವ ಅಡಿಪಾಯ. ಇನ್ನೂ ಮದುವೆ ಎನ್ನುವುದು ಸ್ವರ್ಗದಲ್ಲಿ ನಿಶ್ಚಯವಾಗಿ ಭೂಲೋಕದಲ್ಲಿ ನಡೆಯುವಂತಹದ್ದು ಎನ್ನುವುದು ಹಿರಿಯರ ನಂಬಿಕೆ. ಆದರೆ.. ಈಗೀಗ ಮದುವೆ ಕೇವಲ ಆಡಂಬರಕ್ಕೆ ಮಾತ್ರ ಸೀಮಿತವಾಗುತ್ತಿದೆ. ವೈಭವ ಮತ್ತು ಭವ್ಯತೆಗೆ ಮನಸೋತ ಅನೇಕರು ಮದುವೆಯ ಮಹತ್ವವನ್ನೇ ಮರೆಯುತ್ತಿದ್ದಾರೆ.

ಇನ್ನೂ.. ಬಣ್ಣದ ಲೋಕದಲ್ಲಿ ಈ ಮದುವೆ.. ಮನೆ.. ಜವಾಬ್ದಾರಿಗಳಿಂದ ನುಣುಚಿಕೊಳ್ಳುವ ಪ್ರಯತ್ನವನ್ನು ಹಲವರು ಮಾಡುತ್ತಲೇ ಇರುತ್ತಾರೆ. ಚಿಕ್ಕ ಚಿಕ್ಕ ವಿಚಾರಕ್ಕೆ ತಮ್ಮ ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳುತ್ತಾರೆ. ಇದಕ್ಕೆ ಕೈಗನ್ನಡಿ ಎಂಬಂತೆ ಕಳೆದ ಎರಡು ಮೂರು ವರ್ಷಗಳಲ್ಲಿ ಹಲವಾರು ತಾರೆಯರು ಈ ಮದುವೆಯ ಸಂಕೋಲೆಯಿಂದ ಮುಕ್ತರಾಗಿದ್ದಾರೆ. ಈ ಸಾಲಿಗೆ ಈಗ ''ಹರಿತಾ ನಾಯರ್'' ಸೇರಿಕೊಂಡಿದ್ದಾರೆ.


ಮದುವೆಯಾಗಿ ಆರೇ ತಿಂಗಳಿಗೆ ಸಂಸಾರದಲ್ಲಿ ಬಿರುಕು ; ಎರಡು ವರ್ಷದ ನಂತರ ಮುರಿದು ಬಿತ್ತು ಮದುವೆ-ವಿಚ್ಛೇದನ ಘೋಷಿಸಿದ ನಟಿ

ಹೌದು, ಹರಿತಾ ನಾಯರ್.. ಮಲಯಾಳಂನ ಚೆಲುವೆ. ''ಕಸ್ತೂರಿ ಮಾನ್'' ಧಾರಾವಾಹಿಯ ಮೂಲಕ 2017ರಲ್ಲಿ ಕಿರುತೆರೆ ಪ್ರವೇಶ ಮಾಡಿದ್ದ ಇವರು ಈ ಧಾರಾವಾಹಿ ಮೂಲಕ ಕೇರಳದಲ್ಲಿ ಶ್ರೀಕುಟ್ಟಿ ಎಂದೇ ಖ್ಯಾತರಾದರು.

ಆ ನಂತರ ''ತಿಂಗಳ್ಕಲಾಮಾನ್''.. ''ಸ್ನೇಹಪೂರ್ವಂ ಶ್ಯಾಮಾ''.. ''ಉಣ್ಣಿಮಾಯಾ''.. ಧಾರಾವಾಹಿಗಳಲ್ಲಿ ಕೂಡ ಕಾಣಿಸಿಕೊಂಡ ಹರಿತಾ ಜನಪ್ರಿಯತೆ ''ಶ್ಯಾಮಂಬರಂ'' ಧಾರಾವಾಹಿಯ ಮೂಲಕ ಇನ್ನೂ ಹೆಚ್ಚಾಯ್ತು.

2018ರಲ್ಲಿ ತೆರೆಗೆ ಬಂದ ''ಕಾರ್ಬನ್'' ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ಹರಿತಾ ಎರಡು ವರ್ಷದ ಹಿಂದೆ ಮೋಹನ್ ಲಾಲ್ ಅಭಿನಯದ ''ನೇರು'' ಚಿತ್ರದಲ್ಲಿ ಪ್ರಮುಖವಾದ ಪಾತ್ರವನ್ನು ಕೂಡ ನಿರ್ವಹಿಸಿದ್ದರು. ತಮ್ಮ ಅಭಿನಯದಿಂದ ಜನ ಮನ ಗೆದ್ದಿದ್ದರು.

ಇಂಥಾ ಹರಿತಾ ಸಾಗರ್ ಎರಡು ವರ್ಷದ ಹಿಂದೆ ನವೆಂಬರ್ 10-2023ರಂದು ವಿನಾಯಕ್ ಅವರನ್ನು ಮದುವೆಯಾಗಿದ್ದರು. ಚಿತ್ರರಂಗದಲ್ಲಿ ವಿನಾಯಕ್ ಸಂಕಲನಕಾರನಾಗಿ ಗುರುತಿಸಿಕೊಂಡಿದ್ದು ''ದೃಶ್ಯಂ 2''.. 12th ಮ್ಯಾನ್.. ನುಣಕ್ಕುಳಿ.. ನೆರಂ.. ಸೇರಿ ಹಲವು ಚಿತ್ರಗಳಿಗೆ ಕತ್ತರಿಯನ್ನು ಹಾಕಿದ್ದಾರೆ.


ಮದುವೆಯಾಗಿ ಆರೇ ತಿಂಗಳಿಗೆ ಸಂಸಾರದಲ್ಲಿ ಬಿರುಕು ; ಎರಡು ವರ್ಷದ ನಂತರ ಮುರಿದು ಬಿತ್ತು ಮದುವೆ-ವಿಚ್ಛೇದನ ಘೋಷಿಸಿದ ನಟಿ

ಇನ್ನೂ ವಿಶೇಷ ಅಂದರೆ ಹರಿತಾ ಮತ್ತು ವಿನಾಯಕ್ ಹೀಗೆ ಪರಿಚಯವಾಗಿ ಪ್ರೀತಿಯಲ್ಲಿ ಬಿದ್ದು ಮದುವೆಯಾದವರಲ್ಲ. ಬದಲಿಗೆ ಇಬ್ಬರು ಬಾಲ್ಯದ ಗೆಳೆಯರು. ಇವರ ಸ್ನೇಹಕ್ಕೆ 15 ವರ್ಷಗಳ ಇತಿಹಾಸ ಇದೆ. ಸ್ನೇಹಿತರಾಗಿದ್ದ ಇಬ್ಬರು ಮನೆಯವರ ಒಪ್ಪಿಗೆಯ ಮೇರೆಗೆ 2022ರ ಅಕ್ಟೋಬರ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆ ನಂತರ ಗುರು ಹಿರಿಯರ ಸಮ್ಮುಖದಲ್ಲಿ ನವೆಂಬರ್ 10-2023ರಲ್ಲಿ ಮದುವೆಯಾಗಿದ್ದರು. ಸಪ್ತಪದಿ ತುಳಿದಿದ್ದರು.

ಆದರೆ, ದುರ್ದೈವ ಮದುವೆಯಾದ ಆರೇ ತಿಂಗಳಿಗೆ ಇವರ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿತು. ಹೀಗಾಗಿ ಕಳೆದೊಂದುವರೆ ವರ್ಷದಿಂದ ಸತಿ ಪತಿಯಾಗಿದ್ದರು ಕೂಡ ಇಬ್ಬರು ದೂರ ದೂರ ಬದುಕುತ್ತಿದ್ದರು. ಆದರೆ ಈಗ ಇಬ್ಬರ ನಡುವೆ ಇರುವ ಈ ಅಂತರ ಇಬ್ಬರಿಗೂ ಸಾಕೆನಿಸಿದೆ. ಇನ್ನೂ ಗಂಡ ಹೆಂಡ್ತಿಯಂತೆ ಬದಲು ಸಾಧ್ಯ ಇಲ್ಲ ಎಂದೆನಿಸಿದೆ.

ಹೀಗಾಗಿಯೇ ಸೋಶಿಯಲ್ ಮೀಡಿಯಾ ಮೂಲಕ ತಾವು ಈಗಾಗಲೇ ದೂರವಾಗಿರುವ ಸುದ್ದಿಯನ್ನು ಹಂಚಿಕೊಂಡಿರುವ ಹರಿತಾ ಅಧಿಕೃತವಾಗಿ ನಾವು ಈಗ ವಿಚ್ಛೇದನ ಪಡೆದಿದ್ದೇವೆ ಎಂದು ಹೇಳಿದ್ದಾರೆ. ಈ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪತ್ರವನ್ನು ಹಂಚಿಕೊಂಡಿರುವ ಹರಿತಾ ನಾಯರ್, ಬಹುತೇಕ ಒಂದೂವರೆ ವರ್ಷ ದೂರ ಇದ್ದ ನಂತರ, ನಾನು ಮತ್ತು ವಿನಾಯಕ್ ನಮ್ಮ ದಾಂಪತ್ಯ ಜೀವನವನ್ನು ಆರೋಗ್ಯಕರ ಮತ್ತು ಶಾಂತಿಯುತ ರೀತಿಯಲ್ಲಿ ಕೊನೆಗೊಳಿಸಿದ್ದೇವೆ ಎಂದು ಹೇಳಿದ್ದಾರೆ.ನಮ್ಮ ಸ್ನೇಹ ಹೀಗೆ ಮುಂದುವರೆಯುತ್ತೆ ಎಂದು ಹೇಳಿರುವ ಹರಿತಾ ಮುಂಬರುವ ದಿನಗಳಲ್ಲಿ ಪರಸ್ಪರ ನಾವು ಶುಭ ಹಾರೈಸುವುದನ್ನು ಮುಂದುವರೆಸುತ್ತೇವೆ ಎಂದು ಹೇಳಿದ್ದಾರೆ.

ನಮ್ಮ ಈ ನಿರ್ಧಾರದ ಹಿಂದಿನ ಕಾರಣ ತುಂಬಾನೇ ವ್ಯೆಯಕ್ತಿಕವಾಗಿದ್ದು, ನಮ್ಮ ಇಬ್ಬರಿಗೆ ಮಾತ್ರ ನಾವ್ಯಾಕೇ ದೂರವಾಗುತ್ತಿದ್ದೇವೆ ಎನ್ನುವುದು ಗೊತ್ತು ಎಂದು ಹೇಳಿರುವ ಹರಿತಾ, ಈ ಕಷ್ಟಕರ ಸಮಯದಲ್ಲಿ ನಮ್ಮನ್ನು ಅರ್ಥ ಮಾಡಿಕೊಂಡು, ನಮಗೆ ಬೆಂಬಲ ನೀಡಿದ ನಮ್ಮ ಎರಡೂ ಕುಟುಂಬದ ಸದಸ್ಯರಿಗೆ ನಾವು ಚಿರಋಣಿ ಎಂದು ಹೇಳಿದ್ದಾರೆ. ನಮ್ಮ ಗೌಪತ್ಯೆಯನ್ನು ಗೌರವಿಸಿ ಎಂದು ಮಾಧ್ಯಮಗಳಲ್ಲಿ ಮತ್ತು ಶುಭ ಚಿಂತಕರಲ್ಲಿ ಮನವಿಯನ್ನು ಕೂಡ ಮಾಡಿಕೊಂಡಿದ್ದಾರೆ.

Credit: Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+