"ನಿಮ್ಮ ಗಂಡನಿಗಿಂತ ವಿಜಯ್ ವಾಸಿ" ಎಂದಿದ್ದಕ್ಕೆ ಗೊಳ್ ಎಂದು ನಕ್ಕುಬಿಟ್ಟಿದ್ರು ನಟಿ ಜ್ಯೋತಿಕಾ

ತಮಿಳು ನಟ ಟಿವಿಕೆ ಪಕ್ಷದ ನಾಯಕ ವಿಜಯ್ ಹಾಗೂ ಪತ್ನಿ ಸಂಗೀತಾ ಡಿವೋರ್ಸ್ ವಿಚಾರ ಭಾರೀ ಚರ್ಚೆ ಹುಟ್ಟು ಹಾಕಿದೆ. ಇದಕ್ಕೆಲ್ಲಾ ನಟಿ ತ್ರಿಶಾ ಕಾರಣ ಎನ್ನುವ ಆರೋಪ ಕೇಳಿ ಬರುತ್ತಿದೆ. ಡಿವೋರ್ಸ್ ಕೇಳಿ ಕೋರ್ಟ್ ಮೆಟ್ಟಿಲೇರಿರುವ ಸಂಗೀತಾ, ತಮ್ಮ ಪತಿಗೆ ನಟಿಯೊಬ್ಬಳ ಜೊತೆ ಅನೈತಿಕ ಸಂಬಂಧ ಇದೆ ಎಂದು ಆರೋಪಿಸಿದ್ದಾರೆ. ಇದು ಭಾರೀ ಸಂಚಲನ ಸೃಷ್ಟಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ಕೂಡ ಭಾರೀ ಚರ್ಚೆ ಹುಟ್ಟಾಕ್ಕಿದೆ.

27 ವರ್ಷಗಳ ಹಿಂದೆ ದಳಪತಿ ವಿಜಯ್ ಹಾಗೂ ಸಂಗೀತಾ ಪರಸ್ಪರ ಪ್ರೀತಿಸಿ ಮದುವೆ ಆಗಿದ್ದರು. ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ. ಸಿನಿಮಾ ಬಿಟ್ಟು ತಮಿಳುನಾಡು ರಾಜಕೀಯರಂಗಕ್ಕೆ ವಿಜಯ್ ಧುಮುಕಿದ್ದಾರೆ. ಟಿವಿಕೆ ಪಕ್ಷ ಸ್ಥಾಪಿಸಿ ಮುಂದಿನ ತಮಿಳುನಾಡು ಚುನಾವಣೆ ಮೇಲೆ ಕಣ್ಣಿಟ್ಟಿದ್ದಾರೆ. ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ. ಇಂತಹ ಸಮಯದಲ್ಲಿ ವೈಯಕ್ತಿಕ ಜೀವನದಲ್ಲಿ ಹಿನ್ನಡೆ ಎದುರಿಸುವಂತಾಗಿದೆ. ವಿಜಯ್- ಸಂಗೀತಾ ದಾಂಪತ್ಯದಲ್ಲಿ ಬಿರುಕು ಮೂಡಿರುವುದು ತಮಿಳುನಾಡು ರಾಜಕೀಯರಂಗದಲ್ಲೂ ಚರ್ಚೆಗೆ ಗ್ರಾಸವಾಗಿದೆ. ಇದೆಲ್ಲದ ನಡುವೆ ಅಂದು ನಟಿ ಜ್ಯೋತಿಕಾ ಮಾಡಿದ್ದ ಕಾಮೆಂಟ್ ಬಗ್ಗೆ ಚರ್ಚೆ ಆಗ್ತಿದೆ.


ಫೆಬ್ರವರಿ 27ರಂದು ಸಂಗೀತಾ ಚೆಂಗಲ್​ಪಟ್ಟು ಕೌಟುಂಬಿಕ ನ್ಯಾಯಾಲಯದಲ್ಲಿ ಡಿವೋರ್ಸ್ ಕೋರಿ ಅರ್ಜಿ ಸಲ್ಲಿಸಿದ್ದಾರೆ. ವಿಜಯ್ ಹಾಗೂ ತ್ರಿಶಾ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನುವ ಊಹಾಪೋಹ ಇಂದು ನಿನ್ನೆಯದ್ದಲ್ಲ. ಸೋಶಿಯಲ್ ಮೀಡಿಯಾದಲ್ಲಿ ಆಗಾಗ್ಗೆ ಈ ಬಗ್ಗೆ ಚರ್ಚೆ ಆಗುತ್ತಿತ್ತು. ಇಬ್ಬರೂ ಡಿವೋರ್ಸ್ ಪಡೆಯುತ್ತಾರೆ ಎನ್ನುವ ವದಂತಿ ಹರಿದಾಡುತ್ತಿತ್ತು. ಆಗ ತ್ರಿಶಾ ಹೆಸರನ್ನು ತಳುಕು ಹಾಕಲಾಗುತ್ತಿತ್ತು. ಇದೀಗ ಸಂಗೀತಾ ಡಿವೋರ್ಸ್ ಕೋರುತ್ತಿದ್ದಂತೆ ವದಂತಿಗಳೆಲ್ಲಾ ನಿಜ ಎನ್ನುವ ಚರ್ಚೆ ಶುರುವಾಗಿದೆ.

ತಮಿಳು ಚಿತ್ರರಂಗದಲ್ಲಿ ಸ್ಟಾರ್ ಜೋರಾಗಿದೆ. ಸ್ಟಾರ್‌ಗಳ ಫ್ಯಾನ್ಸ್ ನಡುವೆ ಕೂಡ ಸೋಶಿಯಲ್ ಮೀಡಿಯಾದಲ್ಲಿ ಕೆಸರೆರಚಾಟ ಸರ್ವೇ ಸಾಮಾನ್ಯ ಎನ್ನುವಂತಾಗಿದೆ. ಸೂರ್ಯ ನಟಿಸಿದ್ದ 'ಕಂಗುವ' ಸಿನಿಮಾ ಹೀನಾಯವಾಗಿ ಸೋತಿತ್ತು. ಕೆಲವರು ಬೇಕೆಂದೆ ಸಿನಿಮಾ ಬಗ್ಗೆ ನೆಗೆಟಿವ್ ಹಬ್ಬಿಸಿದರು ಎಂದು ಸೂರ್ಯ ಪತ್ನಿ ನಟಿ ಜ್ಯೋತಿಕಾ ಆರೋಪಿಸಿದ್ದರು. ಇದು ವಿಜಯ್ ಹಾಗೂ ಸೂರ್ಯ ಅಭಿಮಾನಿಗಳ ನಡುವೆ ಟ್ರೋಲ್ ವಾರ್‌ಗೆ ಕಾರಣವಾಗಿತ್ತು.

ನಟಿ ಜ್ಯೋತಿಕಾ ಪ್ರತಿಕ್ರಿಯಿಸಿ "ಕಂಗುವ' ಸಿನಿಮಾ ಆರಂಭದ ಅರ್ಧ ಗಂಟೆ ವರ್ಕೌಟ್ ಆಗಿಲ್ಲ. ಕೆಲ ಲೋಪದೋಷಗಳಿರುವುದು ನಿಜ. ಹಾಗಂತ ಇಡೀ ಸಿನಿಮಾ ಚೆನ್ನಾಗಿಲ್ಲ ಎನ್ನುವುದು ಸರಿಯಲ್ಲ" ಎಂದು ಪೋಸ್ಟ್ ಮಾಡಿದ್ದರು. ಹಾಗಾಗಿ ಕೆಲವರು ಆಕೆಯನ್ನು ಟ್ರೋಲ್ ಮಾಡಿದ್ದರು. ಬಿಳಿ ಶರ್ಟ್ ಹಾಗೂ ನೀಲಿ ಬಣ್ಣದ ಜೀನ್ಸ್ ಧರಿಸಿದ್ದ ಫೋಟೊಗಳನ್ನು ಹಂಚಿಕೊಂಡು ಜ್ಯೋತಿಕಾ ಪೋಸ್ಟ್ ಮಾಡಿದ್ದರು. ಅದಕ್ಕೆ ಕಾಮೆಂಟ್ ಬಾಕ್ಸ್‌ನಲ್ಲಿ ಟ್ರೋಲ್ ಮಾಡಿ ಕೆಲವರು ವಿಕೃತಿ ಮೆರೆದಿದ್ದರು. 'ಕಂಗುವ' ಸಿನಿಮಾ ವಿಚಾರ ಎಳೆದು ತಂದು ಸೂರ್ಯ ಕಾಲೆಳೆದ್ದಿದ್ದರು.

"ನಿಮ್ಮ ಗಂಡನಿಗಿಂತ ನಟ ಪ್ರದೀಪ್ ರಂಗನಾಥನ್ ವಾಸಿ" ಎಂದು ನೆಟ್ಟಿಗನೊಬ್ಬ ಕಾಮೆಂಟ್ ಮಾಡಿದ್ದ. ಅದಕ್ಕೆ ಪ್ರತಿಯಾಗಿ "ನಿಮ್ಮ ಗಂಡನಿಗಿಂತ ವಿಜಯ್ ವಾಸಿ" ಎಂದು ಮತ್ತೊಬ್ಬ ಕಾಮೆಂಟ್ ಮಾಡಿದ್ದು ವೈರಲ್ ಆಗಿತ್ತು. ಇದಕ್ಕೆ ಜ್ಯೋತಿಕಾ ಪ್ರತಿಕ್ರಿಯಿಸಿ ಗೊಳ್ ಎಂದು ನಗುವ ಎಮೋಜಿ ಪೋಸ್ಟ್ ಮಾಡಿದ್ದರು. ಬಳಿಕ ಡಿಲೀಟ್ ಕೂಡ ಮಾಡಿಬಿಟ್ಟಿದ್ದರು. ಆದರೆ ಸ್ಕ್ರೀನ್‌ ಶಾಟ್ ವೈರಲ್ ಆಗಿತ್ತು.

ಸದ್ಯ ವಿಜಯ್ ಹಾಗೂ ಸಂಗೀತಾ ಡಿವೋರ್ಸ್ ಸುದ್ದಿ ವಿಚಾರ ನಡುವೆ ಸೂರ್ಯ ಅಭಿಮಾನಿಗಳು ಅಂದು ಜ್ಯೋತಿಕಾ ಮಾಡಿದ್ದ ಕಾಮೆಂಟ್ ನೆನಪಿಸುತ್ತಿದ್ದಾರೆ. ಈಗ ಗೊತ್ತಾಯ್ತಾ ಜ್ಯೋತಿಕಾ ಅತ್ತಿಗೆ ಯಾಕೆ ಆ ಕಾಮೆಂಟ್ ನೋಡಿ ನಕ್ಕಿದ್ದರು ಎಂದು ಅಣಕವಾಡುತ್ತಿದ್ದಾರೆ.

ವಿಜಯ್ ಹಾಗೂ ತ್ರಿಶಾ ಮಾತ್ರವಲ್ಲ ವಿಜಯ್ ಹಾಗೂ ಜ್ಯೋತಿಕಾ ಜೋಡಿ ಕೂಡ ಕಾಲಿವುಡ್‌ನಲ್ಲಿ ಸೂಪರ್ ಹಿಟ್ ಆಗಿತ್ತು. 'ಖುಷಿ' ಹಾಗೂ 'ತಿರುಮಲೈ' ಚಿತ್ರಗಳಲ್ಲಿ ಇಬ್ಬರೂ ಒಟ್ಟಿಗೆ ನಟಿಸಿದ್ದರು. 2003ರಲ್ಲಿ ಬಂದಿದ್ದ 'ಖುಷಿ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಒಟ್ಟಾರೆ ವಿಜಯ್, ಸಂಗೀತಾ ಡಿವೋರ್ಸ್ ವಿಚಾರ ನಾನಾ ರೀತಿ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್‌ ಮಾಡಲು ಆಹಾರವಾಗುವಂತಾಗಿದೆ.

Credit: Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+