ಬೆಂಗಳೂರು ಎಷ್ಟು ಬೆಳವಣಿಗೆ ಹೊಂದಿದ್ದರೂ ಕೆಲವೊಂದು ಗ್ರಾಮೀಣ ಪ್ರದೇಶಗಳಲ್ಲಿ ನಿಯಮಿತವಾದ ಬಸ್‌ಗಳಿದೆ. ಈಗ ಬಿಎಂಟಿಸಿ ಅಂತಹ ಒಂದು ಪ್ರದೇಶದ ಜನರಿಗೆ ಸಿಹಿಸುದ್ದಿಯನ್ನು ನೀಡಿದೆ. ಬಿಎಂಟಿಸಿ ಭಾನುವಾರ ಅತ್ತಿಬೆಲೆ ಮತ್ತು ಹೊಸಕೋಟೆ ನಡುವೆ ವಜ್ರ ಬಸ್‌ಗಳನ್ನು ಪರಿಚಯಿಸಿದೆ.
ಹೊರ ವರ್ತುಲ ರಸ್ತೆ ಮತ್ತು ಸಮೀಪದ ಪ್ರದೇಶಗಳ ಉದ್ದಕ್ಕೂ ಇರುವ ಕಂಪನಿಗಳಲ್ಲಿ ಕೆಲಸ ಮಾಡುವ ಸಾವಿರಾರು ಟೆಕ್ಕಿಗಳಿಗೆ ಇದು ಸಹಾಯವಾಗಲಿದೆ ಎಂದು ವರದಿ ಹೇಳಿದೆ. ಮೊದಲ ಬಾರಿಗೆ, ಬಿಎಂಟಿಸಿ ಹವಾನಿಯಂತ್ರಿತ ಬಸ್‌ಗಳನ್ನು ಮಾರ್ಗ 328ಎಚ್‌ನಲ್ಲಿ ಪರಿಚಯಿಸಿದೆ.

ಹತ್ತು ಹವಾನಿಯಂತ್ರಿತ ವೋಲ್ವೋ ಬಸ್‌ಗಳು ದಕ್ಷಿಣದ ಅತ್ತಿಬೆಲೆಯಿಂದ ಪೂರ್ವದ ಹೊಸಕೋಟೆಯಿಂದ ಪ್ರತಿದಿನ 57 ಟ್ರಿಪ್‌ಗಳು ಸಾಗುತ್ತದೆ. ಅಂತ್ಯದಿಂದ ಕೊನೆಯವರೆಗೆ ದರವು ಟೋಲ್‌ಗೆ 5 ರೂಪಾಯಿ ಸೇರಿದಂತೆ 60 ರೂಪಾಯಿ ಆಗಿರುತ್ತದೆ. ಭಾನುವಾರ ಅತ್ತಿಬೆಲೆ ಬಸ್ ನಿಲ್ದಾಣದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದರು.
ಯಾವೆಲ್ಲ ಮಾರ್ಗದಲ್ಲಿ ಈ ಬಸ್ ಸಂಚಾರ?
ವೋಲ್ವೋ ಬಸ್‌ಗಳು ಇಂಡ್ಲಬೆಲೆ, ಬಿದರಗುಪ್ಪೆ, ಮೇಡಹಳ್ಳಿ, ಬಿಲ್ಲಾಪುರ, ಸರ್ಜಾಪುರ, ಸೋಮಾಪುರ, ಯೆಮರೆ, ದೊಮ್ಮಸಂದ್ರ, ಹೆಗ್ಗೊಂಡಹಳ್ಳಿ, ಗುಂಜೂರು, ವರ್ತೂರು, ವರ್ತೂರು ಕೋಡಿ, ವೈಟ್‌ಫೀಲ್ಡ್ ಅಂಚೆ ಕಚೇರಿ, ಹೋಪ್ ಫಾರ್ಮ್, ಕಾಡುಗೋಡಿ, ಬೆಳತ್ತೂರು, ಸೀಗೇಹಳ್ಳಿ, ಕಾಜಿ ಸೊಣ್ಣೇನಹಳ್ಳಿ, ಕಾಜಿ ಸೊಣ್ಣೇನಹಳ್ಳಿ, ಹೊಸಕೋಟೆ ಪ್ರೌಢಶಾಲೆ ಮಾರ್ಗವಾಗಿ ಈ ಹತ್ತು ವಜ್ರ ಬಸ್‌ಗಳು ಸಂಚಾರ ಮಾಡಲಿದೆ.
ಎಷ್ಟು ಸಮಯಕ್ಕೆ ಬಸ್?
ಎರಡೂ ದಿಕ್ಕಿನಲ್ಲಿ ಮೊದಲ ಬಸ್ ಬೆಳಿಗ್ಗೆ 6 ಗಂಟೆಗೆ ಮತ್ತು ಕೊನೆಯ ಬಸ್ ರಾತ್ರಿ 9.20 ಕ್ಕೆ ಪ್ರಾರಂಭವಾಗುತ್ತದೆ. ಅತೀ ಅಧಿಕ ಬೇಡಿಕೆಯಿರುವ ಸಮಯದಲ್ಲಿ 10-25 ನಿಮಿಷಗಳಲ್ಲಿ ಬಸ್ ಲಭ್ಯವಾಗಲಿದೆ. ಉಳಿದ ಸಮಯದಲ್ಲಿ 45-90 ನಿಮಿಷಗಳಿಗೊಂದು ಬಸ್ ಬರಲಿದೆ. ಈ ಮೊದಲು ಈ ಮಾರ್ಗದಲ್ಲಿ ಸಾಮಾನ್ಯ (ಬೆಂಗಳೂರು ಸರಿಗೆ) ಬಸ್‌ಗಳನ್ನು ಮಾತ್ರ ಕಾರ್ಯನಿರ್ವಹಣೆ ಮಾಡುತ್ತಿತ್ತು. 37 ಹವಾನಿಯಂತ್ರಿತವಲ್ಲದ ಬಸ್‌ಗಳು ದಿನಕ್ಕೆ 300 ಟ್ರಿಪ್‌ಗಳನ್ನು ಮಾಡುತ್ತಿದ್ದವು.


Click it and Unblock the Notifications