
ಈ ಕಾರ್ಡನ್ನು ಹೊಂದಿರುವವರು ತಮಗೆ ಬೇಕಾದ ವಸ್ತುಗಳು ಮತ್ತು ಸೇವೆಗಳಿಗೆ ತಕ್ಕ ಮೌಲ್ಯವನ್ನು ತೆರುವ ಭರವಸೆ ನೀಡುವ ಆಧಾರದಲ್ಲಿ ತಮಗೆ ಬೇಕಾಗುವ ಅಗತ್ಯ ವಸ್ತು ಮತ್ತು ಸೇವೆಗಳನ್ನು ಪಡೆಯಲು ಇದು ಅವಕಾಶ ನೀಡುತ್ತದೆ.
ಈ ಕಾರ್ಡನ್ನು ನೀಡುವವರು ಒಂದು ಆವರ್ತ ಖಾತೆಯನ್ನು ರಚಿಸಿಸುವ ಮೂಲಕ ಗ್ರಾಹಕರಿಗೆ (ಅಥವಾ ಬಳಕೆದಾರರಿಗೆ) ಒಂದು ಸೀಮಿತ ವ್ಯಾಪ್ತಿಯ ಸಾಲವನ್ನು (ಕ್ರೆಡಿಟ್) ಒದಗಿಸುತ್ತಾರೆಯಲ್ಲದೇ, ಇದರ ಮೂಲಕ ಬಳಕೆದಾರರು ವ್ಯಾಪಾರಿಗೆ ಅಥವಾ ಬಳಕೆದಾರನಿಗೆ ನಗದು ಮುಂಗಡವಾಗಿ ನೀಡಲು ಹಣವನ್ನು ತೆಗೆದುಕೊಳ್ಳಬಹುದಾಗಿದೆ.
ಕ್ರೆಡಿಟ್ ಕಾರ್ಡ್ vs ಚಾರ್ಜ್ ಕಾರ್ಡ್: ಚಾರ್ಜ್ ಕಾರ್ಡಿಗೆ ಪ್ರತಿ ತಿಂಗಳು ಹಣ ಪಾವತಿಸುವುದಕ್ಕಾಗಿ ಅದರಲ್ಲಿ ಪೂರ್ಣ ಪ್ರಮಾಣದ ಮೊತ್ತವಿರಬೇಕಾಗುತ್ತದೆ. ಇದಕ್ಕೆ ಪ್ರತಿಯಾಗಿ, ಕ್ರೆಡಿಟ್ ಕಾರ್ಡ್ ಗಳು ಗ್ರಾಹಕರು ಸೂಕ್ತವಾದ ಬಡ್ಡಿಯನ್ನು ವಿಧಿಸುವ ಮೂಲಕ ತಮ್ಮ ಸಾಲದ ಬಾಕಿಯನ್ನು ಮುಂದುವರೆಸಲು ಅವಕಾಶವಿದೆ.
ಹಾಗೆಯೇ ಈ ಕ್ರೆಡಿಟ್ ಕಾರ್ಡ್ ಕೂಡ ಕ್ಯಾಶ್ ಕಾರ್ಡ್(ನಗದು ಕಾರ್ಡ್) ಗಿಂತ ಭಿನ್ನವಾಗಿದ್ದು, ಇದನ್ನು ಕಾರ್ಡಿನ ಮಾಲೀಕರು ನಾಣ್ಯ ಪದ್ಧತಿ (ಕರೆನ್ಸಿ)ಯಾಗಿ ಕೂಡ ಬಳಸಬಹುದಾಗಿದೆ. ಹೆಚ್ಚಾಗಿ ಕ್ರೆಡಿಟ್ ಕಾರ್ಡ್‌ಗಳನ್ನು ಬ್ಯಾಂಕ್ ಗಳು ಅಥವಾ ಕ್ರೆಡಿಟ್ ಯೂನಿಯನ್ ಗಳಿಂದ ನೀಡಲಾಗುತ್ತದೆ.
ಕ್ರೆಡಿಟ್ ಕಾರ್ಡ್ ಸಾಲ ವ್ಯೂಹ ಹೇಗಿರುತ್ತೆ?: ಕ್ರೆಡಿಟ್ ಕಾರ್ಡ್ ನಿಂದ ಸಾಲ ನೀಡಿಕೆ, ಬಡ್ಡಿ ದರ ನಿಗದಿ ಬಗ್ಗೆ ಸ್ವಲ್ಪವಾದರೂ ಜ್ಞಾನ ಇರಬೇಕಾಗುತ್ತದೆ. ಇದು ನಿಮ್ಮ ವಿತ್ತೀಯ ಆರೋಗ್ಯಕ್ಕೆ ಒಳ್ಳೆಯದು:
* ಕೇವಲ 40 ರಿಂದ 50 ದಿನಗಳ ವರೆಗೆ ಕ್ರೆಡಿಟ್ ಕಾರ್ಡ್ ಉಚಿತವಾಗಿರುತ್ತದೆ.
* ನಂತರ ಪ್ರತಿ ತಿಂಗಳಿಗೆ ಅಂದಾಜು ಶೇ 3.5ರಷ್ಟು ಹಾಗೂ ವಾರ್ಷಿಕವಾಗಿ ಶೇ 40ರಷ್ಟು ಬಡ್ಡಿದರ ತೆರಬೇಕಾಗುತ್ತದೆ.
* ಸಾಲ ಪಾವತಿ ಕೊನೆ ದಿನಾಂಕಕ್ಕೂ ಮೊದಲೇ ಶೇ 90ರಷ್ಟು ಸಾಲ ಹಿಂತಿರುಗಿಸಿದರೂ ಕೆಲ ಕಂಪನಿಗಳು ಪೂರ್ತಿ ಮೊತ್ತದ ಮೇಲೆ ಬಡ್ಡಿ ಪಡೆಯುತ್ತದೆ.
* ಉದಾಹರಣೆಗೆ ನಿಮ್ಮ ಕಾರ್ಡ್ 25,000 ರು ಮಿತಿ ಹೊಂದಿದ್ದು ನೀವು 23,000 ರು ಪಾವತಿ ಕೊನೆ ದಿನಾಂಕಕ್ಕೂ ಮೊದಲೇ ನೀಡಿರುತ್ತೀರಿ. ಆದರೂ ಕಂಪನಿ ಮೊದಲಿಗೆ 25,000 ರು ಮೇಲೆ ಆ ತಿಂಗಳಿನ ಬಡ್ಡಿ ಪಡೆದು ನಂತರ ಉಳಿದ ಬಾಕಿ ಮೊತ್ತ 2,000 ರು ಮೇಲೆ ಬಡ್ಡಿ ಯನ್ನು ಬೇಡುತ್ತದೆ. ಒಟ್ಟಾರೆ ನೀವು 27,000 ರು ಪಾವತಿಸಿದ್ದಂತಾಗುತ್ತದೆ.
* ಕನಿಷ್ಠ ಪೇಮೆಂಟ್ ಮಾಡುವುದು ಯಾವತ್ತಿಗೂ ಒಳ್ಳೆಯದಲ್ಲ. ಇದರಿಂದ ಕೊನೆ ದಿನಾಂಕವಾದ ಮೇಲೆ ಕಟ್ಟಬೇಕಾದ ದಂಡವನ್ನು ಮಾತ್ರ ತಪ್ಪಿಸಬಹುದು.ಕನಿಷ್ಠ ಪಾವತಿ ಮಾಡಿ ಮುಂದೆ ಹೆಚ್ಚಿನ ಮೊತ್ತ ಪಾವತಿಸುತ್ತೇನೆ ಎಲ್ಲವೂ ಸರಿಯಾಗಿದೆ ಎಂದು ಮನಸ್ಸಿನಲ್ಲಿ ಲೆಕ್ಕಾಚಾರ ಹಾಕಿಕೊಂಡಿದ್ದರೆ ಅದು ನಿಮ್ಮ ತಪ್ಪುಗ್ರಹಿಕೆಯಾಗಿರುತ್ತದೆ. ಈ ರೀತಿ ಪಾವತಿಯಿಂದ ಕ್ರೆಡಿಟ್ ಕಾರ್ಡ್ ಕಂಪನಿಗೆ ಹೆಚ್ಚಿನ ಬಡ್ಡಿಯನ್ನು ನೀಡುವುದು ತಪ್ಪುವುದಿಲ್ಲ.
* ಕ್ರೆಡಿಟ್ ಕಾರ್ಡ್ ಮುಗಂಡ ನಗದು ಕೂಡಾ ಶೇ 30 ರಿಂದ 40ರಷ್ಟು ಬಡ್ಡಿ ದರವನ್ನು ಆಕರ್ಷಿಸುತ್ತದೆ. ಇದು ನಿಮ್ಮ ಯಾವುದೇ ವೈಯಕ್ತಿಕ ಸಾಲ(personal loans) ಗಿಂತ ಅಧಿಕ ಎಂಬುದು ನೆನಪಿರಲಿ.


Click it and Unblock the Notifications