10 ಲಕ್ಷಕ್ಕಿಂತ ಅಧಿಕ ಆದಾಯ, ಆನ್ ಲೈನ್ ಪಾವತಿ ಏಕೆ?

10 ಲಕ್ಷಕ್ಕಿಂತ ಆದಾಯ, ಆನ್ ಲೈನ್ ಪಾವತಿ ಏಕೆ?
ನವದೆಹಲಿ, ಜು.2: ರೂ 10 ಲಕ್ಷದ ಮೇಲೆ ವಾರ್ಷಿಕ ಆದಾಯವುಳ್ಳವರು 2011-12ನೆ ಸಾಲಿನ ತೆರಿಗೆ ಹಿಂಪಾವತಿಯನ್ನು ಎಲೆಕ್ಟ್ರಾನಿಕ್ ಮಾದರಿಯಲ್ಲಿ ದಾಖಲಿಸಬೇಕು. ಒಬ್ಬ ವ್ಯಕ್ತಿ ಅಥವಾ ಹಿಂದೂ ಅವಿಭಕ್ತ ಕುಟುಂಬದ ವಾರ್ಷಿಕ ಆದಾಯ ರೂ. 10 ಲಕ್ಷವನ್ನು ಮೀರಿದ್ದರೆ 2011-12ನೆ ವೌಲ್ಯ ಮಾಪನ ವರ್ಷದ ಬಳಿಕ ಇ -ಫೈಲಿಂಗನ್ನು ಕಡ್ಡಾಯಗೊಳಿಸಿ ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಅಧಿಸೂಚನೆ ಹೊರಡಿಸಿದೆ.

2010-11ರ ವರೆಗೆ ಅಂಥ ವೌಲ್ಯ ಮಾಪನಕ್ಕೆ ಇ -ಫೈಲಿಂಗ್ ಐಚ್ಛಿಕವಾಗಿತ್ತು. 2011-12ನೆ ಆರ್ಥಿಕ ವರ್ಷದಲ್ಲಿ ಆದಾಯ ತೆರಿಗೆ ಇಲಾ ಖೆಯ ರೂ. 1.64 ಕೋಟಿ ದಾಖಲೆ ಇ -ರಿಟರ್ಸ್‌ಗಳನ್ನು ಪಡೆದಿವೆ. ಪ್ರಸ್ತುತ ರೂ. 60 ಲಕ್ಷ ಆದಾಯವಿರುವ ‘ವ್ಯಾಪಾರ ಸಂಸ್ಥೆಗಳು' ಹಾಗೂ ರು. 15 ಲಕ್ಷ ವರಮಾನವಿರುವ ವೃತ್ತಿಪರರು ಮಾತ್ರ ತಮ್ಮ ರಿಟರ್ನ್‌ಗಳನ್ನು ಡಿಜಿಟಲ್ ಸಹಿಯೊಂದಿಗೆ ಕಡ್ಡಾಯವಾಗಿ ದಾಖಲಿಸಬೇಕಾಗಿದೆ. 2012 ಮಾ. 31 ಕ್ಕೆ ಅನುಗುಣವಾಗಿ 1,96,84,592 ತೆರಿಗೆದಾತರು ಇ -ಫೈಲಿಂಗ್‌ಗಾಗಿ ನೋಂದಣಿ ಮಾಡಿಸಿದ್ದಾರೆ.

ಇ-ಫೈಲಿಂಗ್, ತೆರಿಗೆ ರಿಟರ್ನ್‌ಗಳನ್ನು ದಾಖಲಿಸುವ ಸುಲಭ, ತ್ವರಿತ ಹಾಗೂ ಸುರಕ್ಷಿತ ಕ್ರಮವಾಗಿರುತ್ತದೆ. ಇ- ಫೈಲಿಂಗ್ ಮಾಡಿದ ರಿಟರ್ನ್‌ಗಳ ಪರಿಷ್ಕರಣೆ ತ್ವರಿತವಾಗಿದ್ದು, ತೆರಿಗೆ ದಾತರು ತಮಗೆ ಸಲ್ಲತಕ್ಕ ಮೊತ್ತವಿದ್ದರೆ ಬೇಗನೆ ಪಡೆಯಲು ಸಾಧ್ಯವಾಗುವುದೆಂದು ವಿತ್ತ ಸಚಿವಾಲಯ ಹೇಳಿದೆ.

ವಿದ್ಯುನ್ಮಾನೀಯವಾಗಿ ದಾಖಲಿಸಲ್ಪಟ್ಟ ರಿಟರ್ನ್‌ಗಳು ಬೆಂಗಳೂರಿನ ಕೇಂದ್ರೀಕೃತ ಪರಿಷ್ಕರಣ ಕೇಂದ್ರದಲ್ಲಿ ಪರಿಷ್ಕರಣೆಗೊಳ್ಳುತ್ತವೆ. ಆದಾಯ ತೆರಿಗೆ ಇಲಾಖೆಯು ಹಿಂಪಾವತಿಗಳನ್ನು ಪತ್ತೆ ಹಚ್ಚುವುದು ಹಾಗೂ ತೆರಿಗೆ ಪಾವತಿಯ ಸ್ಥಿತಿಗತಿಗಳನ್ನು ಪರಿಶೀಲಿಸುವುದು ಇತ್ಯಾದಿ ಕೆಲವು ವೌಲ್ಯವರ್ಧಿತ ಸೇವೆಗಳನ್ನು ಒದಗಿಸುತ್ತದೆ.

ಆನ್ ಲೈನ್ ಪಾವತಿ ಏಕೆ?: ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಆನ್ ಲೈನ್ ಪಾವತಿ ಸರಳ, ಸುಲಭ ವಿಧಾನವಾಗಿದೆ.ಆದರೆ, ಆನ್ ಲೈನ್ ಪಾವತಿ ಬಗ್ಗೆ ಅನೇಕ ಅಪ ನಂಬಿಕೆಗಳಿದೆ.

ನಂಬಿಕೆ1: ಇ ಫೈಲಿಂಗ್ ಮೂಲಕ ಆದಾಯ ತೆರಿಗೆ ಪಾವತಿ ಮಾಡಲು ಡಿಜಿಟಲ್ ಸಹಿ ಅವಶ್ಯ
ನೈಜತೆ: ವಾರ್ಷಿಕವಾಗಿ 100 ಲಕ್ಷ ಆದಾಯ ಹೊಂದಿರುವ ವ್ಯಕ್ತಿಗಳಿಗೆ ಮಾತ್ರ ಡಿಜಿಟಲ್ ಸಹಿ ಅತ್ಯವಶ್ಯಕವಾಗಿದೆ. ಸಹಿ ಹಾಕಿದ ITRV ಅರ್ಜಿಯನ್ನು ಬೆಂಗಳೂರಿನ CPC ಗೆ ಕಳಿಸಿದರೆ ಸಾಕು. ಇ ಫೈಲಿಂಗ್ ಮಾಡುವಾಗ ಡಿಜಿಟಲ್ ಸಹಿ ಅಗತ್ಯವಿರುವುದಿಲ್ಲ.

ನಂಬಿಕೆ2: ಎಲೆಕ್ಟ್ರಾನಿಕ್ ಮಾದರಿ ತೆರಿಗೆ ಪಾವತಿಯಲ್ಲಿ ಹೆಚ್ಚಿನ ಪರಿಶೀಲನೆ, ಎಚ್ಚರಿಕೆ ಅಗತ್ಯ
ನೈಜತೆ: ಈಗೊಂದು ಕಲ್ಪನೆ ಎಲ್ಲರಲ್ಲೂ ಇದ್ದೆ ಇರುತ್ತದೆ. ಪ್ರತಿ ವರ್ಷ ಆದಾಯ ತೆರಿಗೆ ಇಲಾಖೆ ಇಷ್ಟಬಂದಂತೆ ಪಟ್ಟಿಯಲ್ಲಿ ಯಾರಾದರು ಒಬ್ಬ ವ್ಯಕ್ತಿ ಹೆಸರು ತೆಗೆದು ಪರಿಶೀಲಿಸುವುದಿದೆ. ಆದರೆ, ಆ ವ್ಯಕ್ತಿ ಆದಾಯ ತೆರಿಗೆಯನ್ನು ಸಾಂಪ್ರದಾಯಿಕ ಶೈಲಿಯಲ್ಲಿ ಪಾವತಿಸಿದ್ದಾನೆ ಅಥವಾ ಎಲೆಕ್ಟ್ರಾನಿಕ್ ಮಾದರಿ ಬಳಸಿದ್ದಾನೆ ಎಂಬುದರ ಬಗ್ಗೆ ಇಲಾಖೆ ಗಮನ ಹರಿಸುವುದಿಲ್ಲ.

ಆನ್ ಲೈನ್ ಫೈಲಿಂಗ್ ಮೂಲಕ ಆಟೋಮ್ಯಾಟಿಕ್ ಆಗಿ ನಿಮ್ಮ ಪಾವತಿಯ ದಾಖಲಾತಿಗಳನ್ನು ತಾಳೆ ಹಾಕಿ ನೋಡುವ ಅನುಕೂಲ ಲಭ್ಯವಾಗುತ್ತದೆ. ನೀವಾಗಲಿ, ನಿಮ್ಮ ಸಂಸ್ಥೆ, ಬ್ಯಾಂಕ್ ಅಥವಾ ಆರ್ಥಿಕ ಸಂಸ್ಥೆಗಳಾಗಲಿ ಪಾವತಿಸಿದ ರಿಟರ್ನ್ಸ್ ವಿವರಗಳನ್ನು ತಾಳೆ ಹಾಕುವುದು ಸುಲಭ

ನಂಬಿಕೆ 3: ಇ ಫೈಲಿಂಗ್ ಗೆ ಹೆಚ್ಚಿನ ವೆಚ್ಚ ತಗುಲುತ್ತದೆ. ನೇರವಾಗಿ ಇಲಾಖೆಗೆ ತೆರಳಿ ಪಾವತಿಸಿದರೆ ವೆಚ್ಚ ತಗುಲುವುದಿಲ್ಲ.
ನೈಜತೆ: ಸರ್ಕಾರಿ ವೆಬ್ ತಾಣ ಇ-ಫೈಲಿಂಗ್ ತಾಣ ಹಾಗೂ www.taxyogi.com ವೆಬ್ ತಾಣ ಮೂಲಕ ಪಾವತಿ ಸಂಪೂರ್ಣ ಉಚಿತವಾಗಿದೆ.

ನಂಬಿಕೆ 4: ಇ ಫೈಲಿಂಗ್ ಮೂಲಕ ಪಾವತಿಸಿದರೆ ತಿದ್ದುಪಡಿ ಸಾಧ್ಯವಿಲ್ಲ
ನೈಜತೆ: ಸಾಂಪ್ರದಾಯಿಕ ಶೈಲಿಯಲ್ಲಿ ಹೇಗೆ ಪುನರ್ ಪರಿಶೀಲನೆ, ತಿದ್ದುಪಡಿ ಮಾಡಲು ಸಾಧ್ಯವೋ ಅದೇ ರೀತಿ ಇ ಫೈಲಿಂಗ್ ರಿಟರ್ನ್ಸ್ ನಲ್ಲೂ ಸಾಧ್ಯವಿದೆ. 2011-12 ಆರ್ಥಿಕ ವರ್ಷ ಹಾಗೂ ಹೆಚ್ಚುವರಿ ವರ್ಷ 2012-13ಕ್ಕೆ ಅನ್ವಯವಾಗುವಂತೆ ತಿದ್ದುಪಡಿಯುಳ್ಳ ರಿಟರ್ನ್ಸ್ ಗಳನ್ನು www.taxyogi.com ಮೂಲಕ ಪಾವತಿಸಬಹುದು.

ನಂಬಿಕೆ 5: ಇ ಫೈಲಿಂಗ್ ಸುರಕ್ಷಿತವಲ್ಲ
ನೈಜತೆ: ಇ ಫೈಲಿಂಗ್ ವೆಬ್ ತಾಣಗಳು ಅಧಿಕೃತ ಪ್ರಮಾಣ ಪತ್ರ ಪಡೆದಿರುತ್ತದೆ ಹಾಗೂ ಎಲ್ಲಾ ದಾಖಲಾತಿಯನ್ನು ಆದಾಯ ತೆರಿಗೆ ಇಲಾಖೆಗೆ ರವಾನಿಸಲಾಗುತ್ತದೆ. ಸರ್ಕಾರ ಉನ್ನತ ತಂತ್ರಜ್ಞಾನವುಳ್ಳ ತಂತ್ರಾಂಶಗಳನ್ನು ಬಳಸಿ ವೆಬ್ ತಾಣದ ಮೂಲಕ ವ್ಯವಹಾರವನ್ನು ಸುರಕ್ಷಿತಗೊಳಿಸಿದೆ. ಉದಾಹರಣೆಗೆ www.taxyogi.com ತಾಣ 128 ಬಿಟ್ encryption ಬಳಸಿ ಮಾಹಿತಿ ರವಾನಿಸುತ್ತದೆ. ಹ್ಯಾಕಿಂಗ್ ನಿಂದ ಮುಕ್ತವಾಗಿದ್ದು, ಸುರಕ್ಷಿತವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+