
www.trpscheme.com ವೆಬ್ ತಾಣಕ್ಕೆ ಭೇಟಿ ನೀಡಿ ನುರಿತ ವೃತ್ತಿಪರರಿಂದ ಆನ್ ಲೈನ್ ಅಥವಾ ಮನೆಗೆ ಕರೆಸಿಕೊಂಡು ಸಲಹೆ ಪಡೆಯಬಹುದು. ಮೇಲ್ಕಂಡ ಸೇವೆಗಳಲ್ಲಿ ಯಾವುದಾದರೂ ಒಂದನ್ನು ಒಮ್ಮೆಗೆ ಬಳಸಬಹುದು.
ಆನ್ ಲೈನ್ ನಲ್ಲಿ ನಿಮ್ಮ ತೆರಿಗೆ ಸಂಬಂಧಿಸಿದ ಮಾಹಿತಿಯನ್ನು ದಾಖಲಿಸಿ, ನಂತರ ನಿಮ್ಮ ಸಮಸ್ಯೆ ಬಗ್ಗೆ ತಿಳಿಸಬಹುದು. ಆನ್ ಲೈನ್ ಮನವಿ ಪಡೆದ ನಂತರ ಇಮೇಲ್ ಅಥವಾ ಫೋನ್ ಮೂಲಕ 24 ಗಂಟೆಯೊಳಗೆ ಉತ್ತರಿಸಲಾಗುತ್ತದೆ.
ಆನ್ ಲೈನ್ ಉತ್ತರ ಸಮಂಜಸ ಎನಿಸದಿದ್ದರೆ, ತೆರಿಗೆ ನಿಪುಣರನ್ನು ಮನೆಗೆ ಕರೆಸಿಕೊಳ್ಳಬಹುದು. Tax Return Preparer (TRP) ನಿಮ್ಮ ಮನೆಗೆ ಬಂದು ನಿಮಗೆ ಸೂಕ್ತ ಸಲಹೆ ನೀಡಲಿದ್ದಾರೆ. ತೆರಿಗೆ ಮಾಹಿತಿ, ತೆರಿಗೆ ಪಾವತಿ ಬಗ್ಗೆ ಸೂಕ್ತ ಮಾಹಿತಿ, ಸಲಹೆ ನೀಡಲು 250 ರು. ಶುಲ್ಕ ವಿಧಿಸಲಾಗುತ್ತದೆ.
ಸದ್ಯಕ್ಕೆ ಈ ಸೌಲಭ್ಯ ಬೆಂಗಳೂರು, ಚೆನ್ನೈ, ಗುವಹಾಟಿ, ಹೈದರಾಬಾದ್, ಜೈಪುರ, ಕೋಲ್ಕತ್ತಾ, ಲಖ್ನೋ, ಮುಂಬೈ, ನವದೆಹಲಿ ಹಾಗೂ ಪಟ್ನಾದಲ್ಲಿ ಲಭ್ಯವಿದೆ. ಮುಂದಿನ ಹಂತದಲ್ಲಿ ಇನ್ನಷ್ಟು ನಗರಗಳಿಗೆ ಇದನ್ನು ವಿಸ್ತರಿಸಲಾಗುತ್ತದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.
ಇದಲ್ಲದೆ TRP ಯೋಜನೆ ಫೋನ್ ಮೂಲಕ ಕೂಡಾ ಪಡೆಯಬಹುದು. 1800-10-23738ಕ್ಕೆ ಕರೆ ಮಾಡಿ ತೆರಿಗೆ ಸಂಬಂಧಿತ ಮಾಹಿತಿಯನ್ನು ಕೇಳಬಹುದು, ಹೆಚ್ಚಿನ ಮಾಹಿತಿ ಬೇಕಾದರೆ, ಆನ್ ಲೈನ್ ಮೂಲಕ ಮನವಿ ಸಲ್ಲಿಸಬೇಕಾಗುತ್ತದೆ.
ಪದವೀಧರ TRPಗಳು ಸ್ವೌದ್ಯೋಗಿಗಳಾಗಿದ್ದು ಆದಾಯ ತೆರಿಗೆ ಇಲಾಖೆಯಿಂದ ತರಬೇತಿ ಪಡೆದಿರುತ್ತಾರೆ. ವೈಯಕ್ತಿಕ ಹಾಗೂ ಸಂಸ್ಥೆಗೆ ಸಂಬಂಧಿಸಿದ ತೆರಿಗೆ ಪಾವತಿ ಮಾಹಿತಿ ಹಾಗೂ ಸಲಹೆಯನ್ನು ನೀಡುತ್ತಾರೆ.
ಐಟಿ ರಿಟರ್ನ್ಸ್ ಅಲ್ಲದೆ ತ್ರೈಮಾಸಿಕ TDS ಪಾವತಿಗೂ ಸಹಕರಿಸುತ್ತಾರೆ. TRPಗಳಿಗೆ 250 ರು ಶುಲ್ಕವನ್ನು ನಿರ್ವಹಣಾ ವೆಚ್ಚ ಎಂದು ನಿಗದಿಪಡಿಸಲಾಗಿದ್ದು, ಸಾರ್ವಜನಿಕರು ಯಾವುದೇ ಕಾರಣಕ್ಕೂ ಹೆಚ್ಚಿಗೆ ಹಣ ನೀಡುವ ಅಗತ್ಯತೆ ಇರುವುದಿಲ್ಲ. TRPಗಳು ಪಾವತಿಸುವ ಐಟಿ ರಿಟರ್ನ್ಸ್ ಆಧಾರದ ಮೇಲೆ ಆದಾಯ ತೆರಿಗೆ ಅವರಿಗೆ 1000 ರು ತನಕ ಭತ್ಯೆ ಕೂಡಾ ನೀಡುತ್ತದೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!



Click it and Unblock the Notifications