
ಕರ್ನಾಟಕ-ಗೋವಾ ವಲಯದ ಆದಾಯ ತೆರಿಗೆ ಇಲಾಖೆ ತೆರಿಗೆ ಸಂಗ್ರಹದಲ್ಲಿ ದೇಶದಲ್ಲೆ 3ನೆ ಸ್ಥಾನ ಪಡೆದಿದೆ ಎಂದು ಇಲಾಖೆಯ ಮುಖ್ಯ ಆಯುಕ್ತ ಸುರೇಶ್‌ಬಾಬು ತಿಳಿಸಿದ್ದಾರೆ..
ಆದಾಯ ತೆರಿಗೆ ಸಂಗ್ರಹದಲ್ಲಿ ಮುಂಬೈ ಮತ್ತು ದೆಹಲಿ ವಲಯ ನಂತರ ಕರ್ನಾಟಕ ವಲಯ ಮೂರನೇ ಸ್ಥಾನದಲ್ಲಿರುವ ಸುದ್ದಿ ಕೇಳಿ ಖುಷಿಯಾಗುತ್ತಿದೆ. ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಜುಲೈ 31ರ ವರೆಗೆ ಆದಾಯ ತೆರಿಗೆ ಮೇಳ ಹಮ್ಮಿಕೊಂಡಿರುವ ಮೇಳದ ಲಾಭ ಪಡೆಯಿರಿ ಎಂದು ರಾಹುಲ್ ಕರೆ ನೀಡಿದರು.
ಕ್ರಿಕೆಟಿಗರು, ಸಿನಿಮಾ ನಟರು ರಾಯಭಾರಿಗಳಾಗಿ ಪ್ರಚಾರ ನೀಡುತ್ತಿರುವುದರಿಂದ ತೆರಿಗೆ ಪಾವತಿದಾರರಿಗೆ ಸ್ಫೂರ್ತಿ ದೊರೆಯುತ್ತಿದ್ದು, ಮೇಳದಲ್ಲಿ 100 ಕೌಂಟರ್‌ಗಳನ್ನು ಸ್ಥಾಪಿಸಲಾಗಿದೆ. ಈ ಮೇಳದಲ್ಲಿ ಸಾಲುಗಟ್ಟಿ ನಿಲ್ಲುವ ತಾಪತ್ರಯವಿಲ್ಲ.
ಹಲವು ಜನರ ತೆರಿಗೆಯನ್ನು ಒಮ್ಮೆಲೆ ಪಾವತಿಸುವ ಏಜೆನ್ಸಿಗಳಿಗಾಗಿ ಪ್ರತ್ಯೇಕ 10, ಹಿರಿಯ ನಾಗರಿಕರಿಗೆ 3, ಮಾಹಿತಿ ಪರಿಶೀಲನೆಗೆ 16 ಕೌಂಟರ್‌ಗಳನ್ನು ಸ್ಥಾಪಿಸಲಾಗಿದೆ. ಜೊತೆಗೆ ಸಂಚಾರಿ ಎಟಿಎಂನ್ನು ಸಹ ಸ್ಥಾಪಿಸಲಾಗಿದೆ.
ಡೆಬಿಟ್ ಕಾರ್ಡ್ ಮೂಲಕವೂ ತೆರಿಗೆ ಪಾವತಿಗೆ ವ್ಯವಸ್ಥೆ ಮಾಡಲಾಗಿದೆ. ತಾತ್ಕಾಲಿಕವಾಗಿ ಕೆನರಾ ಬ್ಯಾಂಕ್ ಶಾಖೆ ತೆರೆಯಲಾಗಿದೆ. ತೆರಿಗೆ ಸಲಹೆಗಾರರು ಉಚಿತ ಸೇವೆ ಒದಗಿಸಲಿದ್ದಾರೆ.
ಬೆಳಿಗ್ಗೆ 9.30 ರಿಂದ ಸಂಜೆ 5 ಗಂಟೆವರೆಗೂ ಶನಿವಾರ, ಭಾನುವಾರವೂ ಸೇರಿದಂತೆ ಜುಲೈ 31 ರ ವರೆಗೆ ಮೇಳ ನಡೆಯಲಿದೆ ಎಂದು ವಿವರಿಸಿದರು.
ಈಗಾಗಲೆ ಬೆಂಗಳೂರು, ಮಂಗಳೂರು, ಹುಬ್ಬಳ್ಳಿಗಳಲ್ಲಿ ಸೇವಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಈ ವರ್ಷದಿಂದ ತುಮಕೂರು, ರಾಯಚೂರುಗಳಲ್ಲೂ ಕೇಂದ್ರ ಆರಂಭಿಸಲಾಗುವುದು. ಮುಂದಿನ ವರ್ಷದಿಂದ ಎಲ್ಲ ಜಿಲ್ಲೆಗಳಲ್ಲೂ ಸೇವಾ ಕೇಂದ್ರ ತೆರೆಯುವ ಯೋಜನೆಯಿದೆ.
ಕಳೆದ ವರ್ಷ 15 ದಿನ ತೆರಿಗೆ ಮೇಳ ನಡೆಸಲಾಗಿತ್ತು. ಈ ವರ್ಷ 8 ದಿನ ನಡೆಸುವ ಉದ್ದೇಶವಿದೆ. ಕರ್ನಾಟಕ ಮತ್ತು ಗೋವಾದಲ್ಲಿ 2009-10ನೆ ಸಾಲಿಗೆ 32,729 ಕೋಟಿ, 2010-11ರಲ್ಲಿ 40,195 ಕೋಟಿ, 2011-12ನೆ ಸಾಲಿನಲ್ಲಿ 45,819 ಕೋಟಿ ಆದಾಯ ತೆರಿಗೆ ಸಂಗ್ರಹಿಸಲಾಗಿದೆ.
ತೆರಿಗೆ ಗುರಿ: ಈ ವರ್ಷ 52,430 ಕೋಟಿ ರೂ. ಸಂಗ್ರಹದ ಗುರಿಯಿದ್ದು, ಮೂರು ತಿಂಗಳಲ್ಲಿ 8,870 ಕೋಟಿ ಸಂಗ್ರಹಿಸಲಾಗಿದೆ. ಅಖಿಲ ಭಾರತ ಮಟ್ಟದಲ್ಲಿ 5,70,000 ಕೋಟಿ ರೂ. ಸಂಗ್ರಹಿಸುವ ಗುರಿ ಇದ್ದು, ಈವರೆಗೆ 86,000 ಕೋಟಿ ರೂ. ಸಂಗ್ರಹಿಸಲಾಗಿದೆ.
ಇಲಾಖೆ ತೆಗೆದುಕೊಂಡಿರುವ ಹಲವಾರು ಸುಧಾರಣಾ ಕ್ರಮಗಳಿಂದ ತೆರಿಗೆ ಸಂಗ್ರಹಣಾ ವೆಚ್ಚ ಶೇ.0.64ರಷ್ಟು ಕಡಿಮೆಯಾಗಿತ್ತು. ಈ ವರ್ಷ ಮತ್ತಷ್ಟು ಸುಧಾರಣೆಗೊಳ್ಳುವ ನಿರೀಕ್ಷೆ ಇದೆ.
ಆದಾಯ ಮಿತಿಯನ್ನು 5 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ. ಅದಕ್ಕಿಂತಲೂ ಹೆಚ್ಚು ಆದಾಯ ಉಳ್ಳವರ ಸಂಖ್ಯೆ ಕರ್ನಾಟಕದಲ್ಲಿ 19.7೭ ಲಕ್ಷವಿದೆ
2010-11ರಲ್ಲಿ 14,000 ಕೋಟಿ ಟಿಡಿಎಸ್‌ನ್ನು ಪಾವತಿಸಲಾಗಿದೆ. ಕಳೆದ ವರ್ಷ 15 ಸಾವಿರ ಕೋಟಿ ಪಾವತಿಸಲಾಗಿತ್ತು. ಈ ವರ್ಷ 3 ತಿಂಗಳಲ್ಲಿ 5,000 ಕೋಟಿ ರೂ. ಪಾವತಿಸಲಾಗಿದೆ. ಭಾರತದ ಒಟ್ಟಾರೆ ಟಿಡಿಎಸ್‌ನಲ್ಲಿ ಕರ್ನಾಟಕದ ಪಾಲು ಶೇ.10 ಎಂದು ಹೇಳಿದ ಅವರು,
ರಾಜ್ಯಸರ್ಕಾರದ ಬಜೆಟ್‌ನ ಅರ್ಧಪಾಲು ಟಿಡಿಎಸ್‌ನ್ನು ಅವಲಂಬಿಸಿದೆ ಎಂದು ಹೇಳಿದರು. ವಿವಿಧ ಕ್ಷೇತ್ರಗಳಿಂದ ಆದಾಯ ತೆರಿಗೆ ಪಾವತಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅದರಲ್ಲೂ ಮಾಹಿತಿ ತಂತ್ರಜ್ಞಾನ ಕ್ಷೇತ್ರದಿಂದ ಶೇ.36, ಬ್ಯಾಂಕ್ ಕ್ಷೇತ್ರದಿಂದ ಶೇ.26 ಆದಾಯ ತೆರಿಗೆ ಪಾವತಿಯಾಗಿದೆ.
2009-10ನೆ ಸಾಲಿಗೆ 3,95,402 ಜನರಿಗೆ 4,232 ಕೋಟಿ ಹೆಚ್ಚುವರಿ ತೆರಿಗೆಯನ್ನು ಹಿಂದಿರುಗಿಸಲಾಗಿದೆ. 2010-11ನೆ ಸಾಲಿನಲ್ಲಿ 4,70,749 ಜನರಿಗೆ 5,000 ಕೋಟಿ, 2011-12ನೆ ಸಾಲಿಗೆ 5,13,141 ಜನರಿಗೆ 7,400 ಕೋಟಿ ಮರು ಪಾವತಿಸಲಾಗಿದೆ. 2011 ಎಂದು ಮುಖ್ಯ ಆಯುಕ್ತ ಸತ್ಯನಾರಾಯಣ ಹೇಳಿದರು.


Click it and Unblock the Notifications