
ಇಂಟರ್ನೆಟ್ ನಲ್ಲೇ ನಡೆಯುವ ಈ ಷೇರುಪೇಟೆ ಟ್ರೇಡಿಂಗ್ ನಲ್ಲಿ ಬ್ರೋಕರ್ ಮೂಲಕ ನಿಮ್ಮ ಆರ್ಡರ್ ಮುಂದಿಡಬಹುದು. ಹೂಡಿಕೆಗೂ ಮೊದಲು ಹೂಡಿಕೆದಾರು 10 ಮುನ್ನೆಚ್ಚರಿಕೆಗಳು ಹಾಗೂ ಸುರಕ್ಷತಾ ಕ್ರಮಗಳನ್ನು ಅನುಸರಿಸುವುದು ಒಳಿತು:
1. ಬ್ರೋಕರ್ ನಿಮಗೆ ಮೊದಲಿಗೆ ನೀಡಿದ ಪಾಸ್ ವರ್ಡ್ ಅನ್ನು ಆರ್ಡರ್ ನೀಡುವ ಮೊದಲಿಗೆ ಬದಲಾಯಿಸಿಬಿಡಿ.
2. ಯಾವುದೇ ಕಾರಣಕ್ಕೂ ಬದಲಾಯಿಸಿದ ಪಾಸ್ ವರ್ಡ್ ಅನ್ನು ಬ್ರೋಕರ್ ಅಥವಾ ಇತರರಿಗೆ ಹಂಚಬೇಡಿ. ಆಗಾಗ ಪಾಸ್ ವರ್ಡ್ ಬದಲಾಯಿಸುತ್ತಿರಿ
3. ಟ್ರೇಡಿಂಗ್ ಆರಂಭಿಸುವುದಕ್ಕೂ ಮುನ್ನ ನೀವು ಬಳಸುವ ಸಾಫ್ಟ್ ವೇರ್ ಬಗ್ಗೆ ಖಚಿತ ಮಾಹಿತಿ, ಅರಿವು ಇರುವುದು ಒಳ್ಳೆಯದು.
4. ಪ್ರತಿ ಆರ್ಡರ್ ನೀಡಿಕೆ ನಂತರ ಖಚಿತಪಡಿಸಿಕೊಳ್ಳಿ, ಇಮೇಲ್ ಕನ್ಫರ್ಮೇಷನ್ ಬರುವ ತನಕ ಕಾಯಿರಿ.
5. ಸೈಬರ್ ಕೆಫೆ ಅಥವಾ shared ನೆಟ್ವರ್ಕ್ ಇರುವ ಕಂಪ್ಯೂಟರ್ ಬಳಸಿ ಆನ್ ಲೈನ್ ಟ್ರೇಡಿಂಗ್ ಮಾಡಬೇಡಿ.
6. ಟ್ರೇಡಿಂಗ್ ಮಾಹಿತಿಯನ್ನು ಸೇವ್ ಮಾಡಬೇಡಿ. ಲಾಗ್ ಇನ್ ಸೇವ್ ಮಾಡುವುದು ಒಳ್ಳೆಯದಲ್ಲ. ಹಾಗೂ ಟ್ರೇಡಿಂಗ್ ಮುಗಿದ ಮೇಲೆ ಲಾಗ್ ಔಟ್ ಆಗುವುದನ್ನು ಮರೆಯಬೇಡಿ.
7. ಇದೇ ಅಭ್ಯಾಸವನ್ನು ನಿಮ್ಮ ಪರ್ಸನಲ್ ಕಂಪ್ಯೂಟರ್ ಅಲ್ಲದೆ ಲ್ಯಾಪ್ ಟಾಪ್ ಅಥವಾ ಇತರೆ ಪಿಸಿ ಬಳಸುವಾಗಲು ಅನುಸರಿಸಿ 'remember me' ಆಯ್ಕೆ ಬಳಸಬೇಡಿ.
8. ಟ್ರೇಡಿಂಗ್ ಮಾಡುವಾಗ ಇತರರು ನಿಮ್ಮ ಪಿಸಿ ಬಳಸಲು ಕೊಡಬೇಡಿ. ಬ್ರೌಸರ್ ನಲ್ಲೂ ಪಾಸ್ ವರ್ಡ್ ಉಳಿಕೆಯಾಗಿದ್ದರೆ ಅಳಿಸಿಬಿಡಿ.
9. ನಿಮ್ಮ ಪಿಸಿಯಲ್ಲಿ Anti ವೈರಸ್ ಹಾಗೂ ಫೈರ್ ವಾಲ್ ಇರುವುದು ಅವಶ್ಯಕ. ಇಲ್ಲದಿದ್ದರೆ. ಅತಿಕ್ರಮಿಗಳ ಕಾಟದಿಂದ ನಿಮ್ಮ ಮಾಹಿತಿ ಕಳೆದುಕೊಳ್ಳಬಹುದು ಅಥವಾ ಅನಗತ್ಯ ಕುಕೀಸ್ ನಿಂದ ಟ್ರೇಡಿಂಗ್ ಸಮಯ ಹಾಳಾಗಬಹುದು.
10. ನಿಮ್ಮ ಖಾತೆಯಲ್ಲಿ ಸಾಕಷ್ಟು ಹಣ ಹಾಗೂ ಸುರಕ್ಷತಾ ನಿಧಿ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಿ. ನಿಮ್ಮ ಟ್ರೇಡಿಂಗ್ ಸದಸ್ಯ (ಬ್ರೋಕರ್) ನಿಯಮಿತವಾಗಿ ಮಾರ್ಜಿನ್ ಪೇಮಂಟ್ ಮಾಡುವ ಬಗ್ಗೆ ಖಾತ್ರಿಪಡಿಸಿಕೊಳ್ಳಿ ಇಲ್ಲದಿದ್ದರೆ ಅಕೌಂಟ್ ಬ್ಲಾಕ್ ಆಗುವ ಅಪಾಯ ಇರುತ್ತದೆ.
ಗುಡ್ ರಿಟರ್ನ್ಸ್ .ಇನ್


Click it and Unblock the Notifications