
ನಿಮ್ಮ ಆದಾಯ ಗಳಿಕೆ ಮೂಲಗಳ ಬಗ್ಗೆ ಸ್ಪಷ್ಟ ಮಾಹಿತಿ ಇದ್ದರೆ ಆದಾಯ ತೆರಿಗೆ ಲೆಕ್ಕಾಚಾರ ಅತಿ ಸುಲಭ. ಗ್ರಾಹಕರಿಗೆ ತೆರಿಗೆ ಲೆಕ್ಕಾಚಾರ ಸುಲಭಗೊಳಿಸಲು ಆದಾಯ ತೆರಿಗೆ ಇಲಾಖೆ ಕ್ಯಾಲ್ಕುಲೆಟರ್ ಕೂಡಾ ನೀಡಿದೆ. ಇದರ ಮೂಲಕ ತೆರಿಗೆ ಲೆಕ್ಕಾಚಾರ, ತೆರಿಗೆಗೆ ಒಳಪಡುವ ಆದಾಯ ಲೆಕ್ಕ ಹಾಕಬಹುದು.
ಆದರೆ, ಆದಾಯ ತೆರಿಗೆ ಹಣದ ವಾಪಸಾತಿ (refund) ಸ್ಥಿತಿ ಗತಿ ಬಗ್ಗೆ ತಿಳಿಯುವುದು ಹೇಗೆ? ಎಂಬ ಸಮಸ್ಯೆಗೆ ಆನ್ ಲೈನ್ ಮೂಲಕ ಮೂರು ಸರಳ ವಿಧಾನಗಳು ಇಲ್ಲಿದೆ. ನಿಮ್ಮ PAN ಸಂಖ್ಯೆ ಬಳಸಿ ಆನ್ ಲೈನ್ ನಲ್ಲೇ ಹಣ ವಾಪಸಾತಿ ಬಗ್ಗೆ ತಿಳಿದುಕೊಳ್ಳಬಹುದು.
1, Income Tax site:
* ಆದಾಯ ತೆರಿಗೆ ಇಲಾಖೆ ವೆಬ್ ತಾಣಕ್ಕೆ ಭೇಟಿ ಕೊಡಿ
* ಸರ್ವೀಸ್ ವಿಭಾಗಕ್ಕೆ ತೆರಳಿ: CPC- refundable ಕ್ಲಿಕ್ ಮಾಡಿ
* ನಿಮ್ಮ ಗ್ರಾಹಕ ಸಂಖ್ಯೆ ನಮೂದಿಸಿ(PAN)
* ನಿಮ್ಮ ಹುಟ್ಟಿದ ದಿನಾಂಕ ಮಾಹಿತಿ ನೀಡಿ
* ಸಂಖ್ಯೆಗಳನ್ನು ಸೂಚಿಸಿದಂತೆ ದಾಖಲಿಸಿ
* Submit ಬಟನ್ ಕ್ಲಿಕ್ ಮಾಡಿ
2. Tax Information Network
* ತೆರಿಗೆ ಜಾಲ ಮರುಪಾವತಿ ವೆಬ್ ತಾಣಕ್ಕೆ ಭೇಟಿ ಕೊಡಿ
* ಇಲ್ಲಿ ಲಾಗ್ ಇನ್ ಅವಶ್ಯಕತೆ ಇರುವುದಿಲ್ಲ.
* PAN ವಿವರಗಳನ್ನು ದಾಖಲಿಸಿ
* Assessment ವರ್ಷ ದಾಖಲಿಸಿ
* Submit ಬಟನ್ ಕ್ಲಿಕ್ ಮಾಡಿ
3. ಸಹಾಯವಾಣಿಗೆ ಕರೆ ಮಾಡಿ
* ಆದಾಯ ತೆರಿಗೆ ಸಂಬಂಧಿತ ಪ್ರಶ್ನೆಗಳಿಗೆ 1800-180-1961
* ಸಮಸ್ಯೆ ಪರಿಹಾರ ಹಾಗೂ ಮರುಪಾವತಿ ಸಂಬಂಧಿತ ಸಮಸ್ಯೆಗಳಿಗೆ: 1800-425-2229
* ಆದಾಯ ತೆರಿಗೆ ಆನ್ ಲೈನ್ ಪಾವತಿ- ಇ-ಫಿಲ್ಲಿಂಗ್: 1800-425-0025
ಗುಡ್ ರಿಟರ್ನ್ಸ್ .ಇನ್


Click it and Unblock the Notifications