
'ಆಧಾರ್ ಸಂಖ್ಯೆಯನ್ನು ಪಡೆಯುವ ಪ್ರಕ್ರಿಯೆಗೆ ತಗಲುವ ಸಮಯವನ್ನು ಪರಿಗಣಿಸಿದರೆ ಇಪಿಎಫ್ ಸದಸ್ಯರು 2013 ಮಾರ್ಚ್ 1ರೊಳಗೆ ಆಧಾರ್ ಸಂಖ್ಯೆಯನ್ನು ಪಡೆಯಲು ಸಾಧ್ಯವಾಗದು. ಹಾಗಾಗಿ ನೂತನ ಇಪಿಎಫ್ ಸದಸ್ಯರಿಗೆ 2013 ಮಾರ್ಚ್ 1ರಿಂದ ಆಧಾರ್ ಸಂಖ್ಯೆಯನ್ನು ಕಡ್ಡಾಯಗೊಳಿಸದಿರಲು ನಿರ್ಧರಿಸಲಾಗಿದೆ' ಎಂದು Retirement fund body ಸಂಸ್ಥೆಯ ಆದೇಶದಲ್ಲಿ ಹೇಳಲಾಗಿದೆ.
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ)ಯ ನಿರ್ಧಾರಕ್ಕೆ ಕಳೆದ ತಿಂಗಳು ಕಾರ್ಮಿಕ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಈ ಹಿನ್ನೆಲೆಯಲ್ಲಿ ಸಂಸ್ಥೆ ತನ್ನ ನಿರ್ಧಾರವನ್ನು ತಡೆಹಿಡಿಯಲು ನಿರ್ಧರಿಸಿದೆ.
ಆದರೆ, ಈಗಾಗಲೇ ಆಧಾರ್ ಸಂಖ್ಯೆ ಹೊಂದಿರುವ ಸದಸ್ಯರ ಸಂಖ್ಯೆಯನ್ನು ಪಡೆದುಕೊಳ್ಳುವಂತೆ ಸಂಸ್ಥೆ ತನ್ನ ಸಿಬ್ಬಂದಿಗೆ ಸೂಚಿಸಿದೆ. ಎಲ್ಲ ಇಪಿಎಫ್ ಸದಸ್ಯರ ಕೋರ್ ಬ್ಯಾಂಕಿಂಗ್ ಖಾತೆ ಸಂಖ್ಯೆಗಳನ್ನು ಪಡೆದುಕೊಳ್ಳುವಂತೆಯೂ ಇಪಿಎಫ್ ಸಿಬ್ಬಂದಿಗೆ ಸೂಚಿಸಲಾಗಿದೆ.
ಆಧಾರ್ ಸಂಖ್ಯೆಯನ್ನು ಪಡೆದುಕೊಳ್ಳುವುದು ದೀರ್ಘ ಪ್ರಕ್ರಿಯೆಯಾಗಿದೆ ಹಾಗೂ ಈ ಯೋಜನೆ ಕೇವಲ 18 ರಾಜ್ಯಗಳಲ್ಲಿ ಮಾತ್ರ ಜಾರಿಯಲ್ಲಿದೆ ಎಂದು ಇಪಿಎಫ್‌ಒ ಆದೇಶ ಹೇಳಿದೆ.
ಉಳಿದ ರಾಜ್ಯಗಳಲ್ಲಿ ರಿಜಿಸ್ಟರ್ ಜನರಲ್ ಆಫ್ ಇಂಡಿಯಾವು ‘ರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟರ್' ಕಾರ್ಯಕ್ರಮವನ್ನು ಜಾರಿಗೊಳಿಸುತ್ತಿದೆ. ಇದು ದೇಶದ ನಿವಾಸಿಗಳ ಡಿಜಿಟಲ್ ಡಾಟಾಬೇಸ್ ಆಗಿದೆ.
ಇಪಿಎಫ್ ಸದಸ್ಯರು ತಮ್ಮ ಕೆಲಸಗಳನ್ನು ಬದಲಾಯಿಸುವಾಗ ಹಾಗೂ ಹಳೆಯ ಖಾತೆಯಲ್ಲಿರುವ ಹಣವನ್ನು ಹೊಸ ಖಾತೆಗೆ ಹಾಕುವಾಗ ಸಮಸ್ಯೆಗಳನ್ನು ಎದುರಿಸುತ್ತಾರೆ. ಈ ಸಮಸ್ಯೆಗಳನ್ನು ನಿವಾರಿಸುವುದಕ್ಕಾಗಿ ಸದಸ್ಯರ ಆಧಾರ್ ಸಂಖ್ಯೆಗಳನ್ನೇ ಅವರ ಇಪಿಎಫ್ ಖಾತೆಯ ಸಂಖ್ಯೆಗಳನ್ನಾಗಿ ಪರಿವರ್ತಿಸುವ ಯೋಜನೆಯನ್ನು ಭವಿಷ್ಯನಿಧಿ ಸಂಸ್ಥೆ ಕೈಗೆತ್ತಿಕೊಂಡಿತ್ತು.
ಈಗ ಭವಿಷ್ಯನಿಧಿ ಸಂಸ್ಥೆ ಕೇಂದ್ರೀಯ ಡಾಟಾ ಬೇಸನ್ನು ಸೃಷ್ಟಿಸುವ ಕಾರ್ಯದಲ್ಲಿ ತೊಡಗಿದೆ. ಇಲ್ಲಿ ಭವಿಷ್ಯನಿಧಿ ಸದಸ್ಯರು ಖಾಯಂ ಖಾತೆ ಸಂಖ್ಯೆಯನ್ನು ಹೊಂದುತ್ತಾರೆ ಹಾಗೂ ಉದ್ಯೋಗಗಳನ್ನು ಬದಲಿಸುವಾಗ ಪಿಎಫ್ ಖಾತೆಗಳನ್ನು ಬದಲಿಸುವ ಅಗತ್ಯವಿಲ್ಲ.(ಪಿಟಿಐ)


Click it and Unblock the Notifications