ಗೃಹ ಸಾಲ ಪಡೆಯಲು ಯಾವ ಬ್ಯಾಂಕ್ ಬೆಸ್ಟ್?

ಬೆಂಗಳೂರು, ಮಾ.18: ಕೇಂದ್ರ ಬಜೆಟ್ ನಂತರ ಬ್ಯಾಂಕ್ ಗಳ ಗೃಹ ಸಾಲ ಬಡ್ಡಿದರದಲ್ಲಿ ಏರುಪೇರಾಗಿದ್ದು, ಗ್ರಾಹಕರಿಗೆ ಯಾವ ಬ್ಯಾಂಕಿಗೆ ಕಾಲಿಡಬೇಕು ಎಂಬ ಗೊಂದಲ ಮೂಡಿದೆ. ಈಗಂತೂ ಗ್ರಾಹಕರ ಮನೆ ಬಾಗಿಲಿಗೆ ಗೃಹಸಾಲದ ಮಾಹಿತಿ ನೀಡುವ ವಿಶಿಷ್ಟ ವ್ಯವಸ್ಥೆಯನ್ನು ಕೆಲವು ಬ್ಯಾಂಕ್ ಗಳು ನೀಡುತ್ತಿವೆ.

2012-13ನೇ ಸಾಲಿನ ಮುಂಗಡ ಪತ್ರದಲ್ಲಿ ಮನೆಸಾಲದ ಮೇಲಿನ ತೆರಿಗೆ ವಿನಾಯಿತಿ ಮಿತಿಯನ್ನು 1.5 ಲಕ್ಷ ರು.ನಿಂದ 3 ಲಕ್ಷಕ್ಕೆ ಏರಿಸಲಾಗಿತ್ತು. 2013ರಲ್ಲಿ ಈ ಮಿತಿ ಇನ್ನಷ್ಟು ಹಿಗ್ಗಿದೆ. ಇದರಿಂದ ಗ್ರಾಹಕರಿಗೆ ಪ್ರಯೋಜನವೇನು? ಯಾವ ಬ್ಯಾಂಕಿನಲ್ಲಿ ಗೃಹಸಾಲ ಪಡೆದರೆ ಉತ್ತಮ ಎಂಬುದನ್ನು ಮುಂದೆ ಓದಿ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

ಭಾರತದಲ್ಲಿ ಅತ್ಯಂತ ಕಡಿಮೆ ದರದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮನೆ ಸಾಲ ನೀಡುತ್ತಿದೆ. ಶೇ 9.95 ರ ಬಡ್ಡಿದರ ವಿಧಿಸಲಾಗಿದ್ದು, ನಿರ್ವಹಣಾ ವೆಚ್ಚ(processing fee) ಕೂಡಾ ಕಡಿಮೆ ಇದೆ. 25 ಲಕ್ಷ ರು ವರೆಗಿನ ಸಾಲಕ್ಕೆ ಶೇ 0.125 ಮಾತ್ರ ತಗುಲಲಿದೆ. ಮೊದಲ ಬಾರಿಗೆ ಗೃಹಸಾಲದ ಹೊರುವಾಗ ಎಸ್ ಬಿಐ ಉತ್ತಮ ಆಯ್ಕೆ

ಎಚ್ ಡಿಎಫ್ ಸಿ

ಎಚ್ ಡಿಎಫ್ ಸಿ

ಎಸ್ ಬಿಐಗಿಂತ ಅಧಿಕ ಬಡ್ಡಿದರ(ಶೇ 10.15 ) ಬಯಸುವ ಎಚ್ ಡಿಎಫ್ ಸಿ 30 ಲಕ್ಷ ರು ವರೆಗಿನ ಸಾಲಕ್ಕೆ ನಿರ್ವಹಣೆ ವೆಚ್ಚವಾಗಿ ಶೇ 0.05ರಷ್ಟು ಫೀ ಪಡೆಯುತ್ತಿದೆ. ಸ್ಪರ್ಧಾತ್ಮಕವಾಗಿ ಬೆಲೆ ಏರಿಕೆ ಇಳಿಕೆ ಮಾಡುತ್ತಿದೆ.

ಇಂಡಿಯ ಬುಲ್ಸ್

ಇಂಡಿಯ ಬುಲ್ಸ್

ಇಂಡಿಯಾ ಬುಲ್ಸ್ ನ ಗೃಹಸಾಲ ಬಡ್ಡಿದರ ಶೇ 10.15 ರಷ್ಟಿದೆ. ತಕ್ಷಣವೇ ಸಾಲ ಮಂಜೂರಾಗುತ್ತದೆ ಹಾಊ ಮನೆಗೆ ಸೇವೆ ಲಭ್ಯವಾಗುತ್ತದೆ.ಗ್ರಾಹಕ ಸ್ನೇಹಿ ಸೌಲಭ್ಯ ಇದರಲ್ಲಿ ಲಭ್ಯವಿೆ.

ಯುಬಿಐ ಹಾಗೂ ಇತರೆ ಬ್ಯಾಂಕ್

ಯುಬಿಐ ಹಾಗೂ ಇತರೆ ಬ್ಯಾಂಕ್

ಯುನಿಯನ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ, ಐಡಿಬಿಐ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಗಳ ಗೃಹಸಾಲ ಬಡ್ಡಿದರ ಶೇ 10.25ರಷ್ಟಿದೆ.ಬಹುತೇಕ ಉಳಿದ ಬ್ಯಾಂಕ್ ಗಳ ಬಡ್ಡಿದರ ಸರಾಸರಿ ಒಂದೇ ಆಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+