ವಾರ್ಷಿಕವಾಗಿ 5 ಲಕ್ಷ ರೂ.ಗಳಿಗಿಂತ ಹೆಚ್ಚಿನ ವರಮಾನವಿರುವ ತೆರಿಗೆ ಪಾವತಿದಾರರು ತಮ್ಮ ಆದಾಯ ವಿವರಗಳನ್ನು ವಿದ್ಯುನ್ಮಾನ ರೂಪದಲ್ಲಿ ಸಲ್ಲಿಸುವ ಆವಶ್ಯಕತೆಯಿದೆ. ಹೀಗಾಗಿ ಆನ್ ಲೈನ್ ಮೂಲಕ ತೆರಿಗೆ ಪಾವತಿಗೆ ಅನೇಕರು ಮುಗಿ ಬೀಳುತ್ತಿದ್ದಾರೆ. ಸರ್ಕಾರಿ ಸ್ವಾಮ್ಯದ ಆದಾಯ ತೆರಿಗೆ ಇಲಾಖೆ ವೆಬ್ ಸೈಟ್ ಗೆ ಹೆಚ್ಚು ಜನರು ಭೇಟಿ ನೀಡುವುದರಿಂದ ವೆಬ್ ಟ್ರಾಫಿಕ್ ಹೆಚ್ಚಾಗುವ ಸಂದರ್ಭವಿದೆ.
ಹೀಗಾಗಿ, ಸಾರ್ವಜನಿಕರಿಗೆ ಉಪಯೋಗವಾಗಲು ಆದಾಯ ತೆರಿಗೆ ಇಲಾಖೆ ಕಾಲ್ ಸೆಂಟರ್ ಕೂಡಾ ಚಾಲನೆ ನೀಡಿದೆ. ಆದಾಯ ತೆರಿಗೆ ಪಾವತಿ ಸುಲಭಗೊಳಿಸಲು ಹಾಗೂ ಸಾರ್ವಜನಿಕರಿಗೆ ತೆರಿಗೆ ಕಟ್ಟಲು ಅನುಕೂಲಕರ ಸೇವೆಗಳನ್ನು ಆದಾಯ ತೆರಿಗೆ ಇಲಾಖೆ ಪರಿಚಯಿಸಿದೆ. 'Register for Home Visit' ಹಾಗೂ 'Online Tax Help' ಎಂಬ ಈ ಸೇವೆಗಳು ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಆರಂಭಗೊಂಡಿದೆ.
ಕಳೆದ ವರ್ಷ 10 ಲಕ್ಷ ರೂ. ಮತ್ತು ಅದಕ್ಕಿಂತ ಹೆಚ್ಚು ವಾರ್ಷಿಕ ವರಮಾನ ಇರುವವರಿಗೆ ವಿದ್ಯುನ್ಮಾನ ರೂಪದಲ್ಲಿ ಆದಾಯ ತೆರಿಗೆ ವಿವರಗಳನ್ನು ಸಲ್ಲಿಸುವ ವ್ಯವಸ್ಥೆಯನ್ನು ಜಾರಿಗೆ ತಂದಿತ್ತು. ಆದಾಯ ತೆರಿಗೆ ಇಲಾಖೆ ವೆಬ್ ಸೈಟ್ ಅಲ್ಲದೆ ಇನ್ನೂ ಕೆಲವು ನಂಬಿಕೆಗೆ ಅರ್ಹವಾದ ಮಾನ್ಯತೆ ಪಡೆದ ತೆರಿಗೆ ಪಾವತಿ ಮಾಡಬಲ್ಲ ವೆಬ್ ಸೈಟ್ ಗಳನ್ನು ಸಂಗ್ರಹಿಸಿ ನಿಮಗಾಗಿ ನೀಡುತ್ತಿದ್ದೇವೆ. ಚಿತ್ರಸರಣಿಯಲ್ಲಿ ವೆಬ್ ಸೈಟ್ ಗಳು ಹಾಗೂ ಐಟಿ ರಿಟರ್ನ್ಸ್ ಗೆ ತಗುಲುವ ವೆಚ್ಚಗಳ ವಿವರಗಳನ್ನು ನೀಡಲಾಗಿದೆ.. ಗಮನಿಸಿ...
ಕ್ಲಿಯರ್ ಟ್ಯಾಕ್ಸ್
ಕ್ಲಿಯರ್ ಟ್ಯಾಕ್ಸ್ (http://cleartax.in/) ಆನ್ ಲೈನ್ ಮೂಲಕ ಇ ಪಾವತಿ ಮಾಡಲು ಸರ್ಕಾರದಿಂದ ಮಾನ್ಯತೆ ಪಡೆದಿರುವ ವೆಬ್ ತಾಣ.
* 5 ಹಂತಗಳಲ್ಲಿ ಪಾವತಿ ಸಾಧ್ಯ. ವೈಯಕ್ತಿಕ ಪಾವತಿಗೆ ವಾರ್ಷಿಕವಾಗಿ 249 ರು ಹಾಗೂ ಉದ್ಯಮಿ, ವೃತ್ತಿಪರರಿಗೆ ವಾರ್ಷಿಕ 749 ರು ವೆಚ್ಚ
* ಮಹಿಳೆಯರಿಗೆ ಯಾವುದೇ ಪ್ರೊಸೆಸ್ ಫೀ ಇರುವುದಿಲ್ಲ. ಉಚಿತ ಪಾವತಿ ಸಾಧ್ಯ
* ಡಿಜಿಟಲ್ ಸಟಿಫಿಕೇಟ್ ಗೆ 499 ರು ತಗುಲುತ್ತದೆ. 1 ವರ್ಷ ತನಕ ವ್ಯಾಲಿಡಿಟಿ ಇರುತ್ತದೆ.
ಟ್ಯಾಕ್ಸ್ ಸ್ಲೈಲ್
ಟ್ಯಾಕ್ಸ್ ಸ್ಮೈಲ್(http://www.taxsmile.com/ ) ವೈಯಕ್ತಿಕ, ಎನ್ನಾರೈ ಹಾಗೂ ಕಾರ್ಪೊರೇಟ್ಸ್ ಗಳ ಐಟಿ ರಿಟರ್ನ್ಸ್ ಗೆ ಮುಕ್ತವಾಗಿದೆ. ಸಿಲ್ವರ್, ಗೋಲ್ಡ್, ಪ್ರೀಮಿಯಂ, ಎನ್ನಾರೈ ಪ್ರೀಮಿಯಂ ವಿವಿಧ ಯೋಜನೆ ಲಭ್ಯವಿದೆ..
ಯೋಜನೆಗೆ ತಕ್ಕಂತೆ ಸಿಲ್ವರ್ : 250 ರು + , ಗೋಲ್ಡ್ : 400 ರು +, ಪ್ರೀಮಿಯಂ: 2000 ರು ಮೊತ್ತ ತಗುಲಲಿದೆ. ಎನ್ನಾರೈಗಳಿಗೆ 69 ಯುಎಸ್ ಡಾಲರ್ ಅಥವಾ 3100 ರು ವೆಚ್ಚವಾಗಲಿದೆ
ಟ್ಯಾಕ್ಸ್ ಶಾ
Taxshah(http://www.taxshax.com/) ಸರ್ಕಾರದಿಂದ ಮಾನ್ಯತೆ ಪಡೆದಿರುವ ಈ ವೆಬ್ ಸೈಟ್ ನಲ್ಲಿ 3 ಹಂತಗಳಲ್ಲಿ ಸುಲಭವಾಗಿ ಐಟಿ ರಿಟರ್ನ್ಸ್ ಸಾಧ್ಯ.
ಟ್ಯಾಕ್ಸ್ ಶಾ ಎರಡು ಪ್ಯಾಕೇಜ್ ಗಳಲ್ಲಿ ಲಭ್ಯ. 181 ರು ಕಡಿಮೆ ಬೆಲೆಯಿಂದ 2580 ರು ನ ಫುಲ್ ಪ್ಯಾಕೇಜ್ ಗ್ರಾಹಕರಿಗೆ ನೀಡುತ್ತಿದೆ.
Tax Spanner
Tax Spanner(http://taxspanner.com/) 2009ರಲ್ಲಿ ಮನಿ ಟುಡೇ, 2010ರಲ್ಲಿ ಮಿಂಟ್ ಪತ್ರಿಕೆಯಿಂದ ಬೆಸ್ಟ್ ಆನ್ ಲೈನ್ ತಾಣ ಎಂಬ ಹೆಗ್ಗಳಿಕೆ ಪಡೆದಿದೆ.
ಗ್ರಾಹಕ ಸ್ನೇಹಿ ವೆಬ್ ಸ್ಕ್ರೀನ್, ಐಟಿಆರ್-4ನ ಇ ಫಿಲ್ಲಿಂಗ್ ಸೌಲಭ್ಯ. ಉದ್ಯಮಿ ಹಾಗೂ ವೈಯಕ್ತಿಕ ತೆರಿಗೆ ಪಾವತಿಗೆ ಪ್ರತ್ಯೇಕ ಸೌಲಭ್ಯ ಇದರಲ್ಲಿ ಲಭ್ಯವಿದೆ.
MyITreturn
MyITreturn(https://myitreturn.com/)ಮೈ ಐಟಿ ರಿಟರ್ನ್ ಭಾರತದ ಅತಿದೊಡ್ಡ ಇ ರಿಟರ್ನ್(e-Return Intermediary) ತಾಣವಾಗಿದೆ. ಭಾರತ ಸರ್ಕಾರದ ಮಾನ್ಯತೆ ಪಡೆದಿರುವ ಈ ವೆಬ್ ಸೈಟ್ ದಿನದ 24 ಗಂಟೆ ಕೂಡಾ ಗ್ರಾಹಕರ ಸೇವೆಗೆ ತೆರೆದಿರುತ್ತದೆ. ಎಲ್ಲಿಂದ ಬೇಕಾದರೂ ಯಾವಾಗ ಬೇಕಾದರೂ ತೆರಿಗೆ ಪಾವತಿ ಮಾಡಬಹುದು.
Income Tax India
Income Tax India(https://incometaxindiaefiling.gov.in/e-Filing/)ಆದಾಯ ತೆರಿಗೆ ಇಲಾಖೆಯ ಅಧಿಕೃತ ತಾಣದಲ್ಲಿ ತೆರಿಗೆ ಪಾವತಿ ಮಾಡುವ ವಿವಿಧ ವಿಧಾನಗಳನ್ನು ಕಾಣಬಹುದು. ಹೆಲ್ಪ್ ಲೈನ್ ಗೆ ಕರೆ ಮಾಡಿ ಸಹಾಯ ಪಡೆಯಬಹುದು. ಮಾರ್ಚ್ ತಿಂಗಳಿನಿಂದ 24 X7 ಸಹಾಯವಾಣಿ ಲಭ್ಯವಿರುತ್ತದೆ.


Click it and Unblock the Notifications