ಮೊಬೈಲ್ ಇದ್ದವರಿಗೆ ವೈದ್ಯಕೀಯ ವಿಮೆ - ಹೀಗೊಂದು ಯೋಜನೆಯನ್ನು ಕಾರ್ಯಗತಗೊಳಿಸಲು ಕನ್ನಡಿಗ, ವೈದ್ಯ ದೇವಿ ಶೆಟ್ಟಿ ಅವರು ಪ್ರಸ್ತಾವನೆಯೊಂದನ್ನು ಮುಂದಿಟ್ಟಿದನ್ನು ಇಲ್ಲಿ ಓದಿರಬಹುದು. ಈ ರೀತಿ ಆರೋಗ್ಯ ವಿಮೆ ಎಲ್ಲಾ ಸ್ತರದ ಜನರಿಗೂ ಅವಶ್ಯವಾದ ಯೋಜನೆಯಾಗಿದೆ. ಕೆಲಸದ ಒತ್ತಡ, ಯಾಂತ್ರಿಕೃತ ಬದುಕಿನಿಂದ ದೇಹಾರೋಗ್ಯ ಕೆಡುವುದು ಸಾಮಾನ್ಯ ವಿಷಯವಾಗಿರುವ ಇಂದಿನ ದಿನಗಳಲ್ಲಿ ಆರೋಗ್ಯ ವಿಮೆ ಅತ್ಯವಶ್ಯ.
ಸರ್ಕಾರಿ, ಖಾಸಗಿ ಆರೋಗ್ಯ ವಿಮೆ ವಿವಿಧ ಯೋಜನೆಗಳು ಭರ್ಜರಿ ಕೊಡುಗೆಗಳು ಎಲ್ಲವೂ ಗ್ರಾಹಕರು ಒಂದು ಬಾರಿ ಕನ್ ಫ್ಯೂಸ್ ಮಾಡಬಹುದು. ಅದರಲ್ಲೂ ಆರೋಗ್ಯ ವಿಮೆಗಳಲ್ಲಿ ಯಾವುದು ಉತ್ತಮ, ವಿವಿಧ ವಯೋಮಾನಕ್ಕೆ ತಕ್ಕಂತೆ ಕಡಿಮೆ ದರದಲ್ಲಿ ಲಭ್ಯವಿರುವ ಆರೋಗ್ಯ ವಿಮೆಗಳನ್ನು ಇಲ್ಲಿ ಪಟ್ಟಿ ಮಾಡಿಕೊಡಲಾಗಿದೆ.
ಇಲ್ಲಿ ಪಟ್ಟಿಯಲ್ಲಿ ಕಾಣಿಸಿರುವ ಆರೋಗ್ಯ ವಿಮೆ ಯೋಜನೆಗಳಿಗಿಂತ ಉತ್ತಮವಾದ ಯೋಜನೆಗಳು ಲಭ್ಯವಿರಬಹುದು. ಆದರೆ, ಮಾರುಕಟ್ಟೆಯಲ್ಲಿ ಕಡಿಮೆ ದರ ವ್ಯಾಪ್ತಿಯಲ್ಲಿ ಇಲ್ಲಿರುವ ಯೋಜನೆಗಳು ಉತ್ತಮವಾದ್ದದ್ದು ಎಂದು ಓದಿಕೊಳ್ಳುವುದು. ಹೂಡಿಕೆಗೂ ಮುನ್ನ ಸವಿಸ್ತಾರವಾಗಿ ಯೋಜನೆಯ ಬಗ್ಗೆ ತಿಳಿದುಕೊಳ್ಳುವುದನ್ನು ಮರೆಯಬೇಡಿ
ವಿವಿಧ ವಯೋಮಾನಕ್ಕೆ ತಕ್ಕಂತೆ ಕಡಿಮೆ ವೆಚ್ಚದ ಆರೋಗ್ಯ ವಿಮೆ ಯೋಜನೆಗಳ ಪಟ್ಟಿ ಮುಂದೆ ನೋಡಿ....
20-25 ವರ್ಷ ವಯೋಮಿತಿ
1 ಲಕ್ಷ ಮಿತಿಯ ಆರೋಗ್ಯ ವಿಮೆ ಯೋಜನೆ ಬಯಸುತ್ತಿದ್ದರೆ ರಾಷ್ಟ್ರೀಯ ವಿಮೆ National Insurance ಅನುಕೂಲಕರವಾಗಿದೆ. 2 ಲಕ್ಷ ಮಿತಿಗೆ ಮ್ಯಾಕ್ಸ್ ಬೂಪ ಯೋಜನೆ ಸೂಕ್ತವಾಗಿದೆ. 5 ಲಕ್ಷ ಕವರೇಜ್ ಗೆ ರಿಲಿಗೇರ್ ಕೇರ್ ಉತ್ತಮವಾಗಿದೆ.
26-30 ವರ್ಷ ವಯೋಮಿತಿ
New India Assurance ಆರೋಗ್ಯ ವಿಮೆ ಪ್ರೀಮಿಯಂ ಅತಿ ಕಡಿಮೆ ಇದ್ದು 1,461 ರು ನಷ್ಟಿದೆ. ಮಿಕ್ಕಂತೆ 2 ಲಕ್ಷ ಮಿತಿಗೆ ಭಾರ್ತಿ Axa ಹಾಗೂ 5 ಲಕ್ಷ ರು ಮಿತಿಗೆ ಮ್ಯಾಕ್ಸ್ ಬ್ಯೂಪ ಉತ್ತಮವಾಗಿದೆ.
31-35 ವರ್ಷ ವಯೋಮಿತಿ
ಈ ವಯೋಮಿತಿಗೆ 1 ಲಕ್ಷ ರು ಮಿತಿಗೆ New India Assurance ಉತ್ತಮವಾಗಿದೆ. 2 ಲಕ್ಷ ರು ಮಿತಿಗೆ Bharti Axa ಮಿತವ್ಯಯಿಯಾಗಿದೆ. 5 ಲಕ್ಷ ರು ಕವರೇಜ್ ಗೆ Religare Care ಉತ್ತಮವಾಗಿದೆ.
36-40 ವರ್ಷ ವಯೋಮಿತಿ
ಮೇಲಿನ ವಯೋಮಿತಿಗೆ 1 ಲಕ್ಷ ಮಿತಿಗೆ New India Assurance ಸೂಕ್ತವಾಗಿದೆ. 'ಇದರ ಪ್ರೀಮಿಯಂ ಕೂಡಾ ಕಡಿಮೆಯಾಗಿದ್ದು 1,747 ರು ನಷ್ಟಿದೆ. 2 ಲಕ್ಷ ಮಿತಿಗೆ ಅಪೊಲೊ ಮ್ಯೂನಿಚ್ ಹಾಗೂ 5 ಲಕ್ಷ ಮಿತಿಗೆ ರಿಲಿಗೇರ್ ಕೇರ್ ಬಳಸಬಹುದು.
41-46 ವರ್ಷ ವಯೋಮಿತಿ
ಮೇಲ್ಕಂಡ ವಯೋಮಿತಿಗೆ United India Assurance ಸೂಕ್ತವಾಗಿದ್ದು 1 ಲಕ್ಷ ಮಿತಿಗೆ ಸೂಕ್ತವಾಗಿದೆ. 2 ಲಕ್ಷ ಮಿತಿಗೆ Royal Sundaram ಮಿತವ್ಯಯಿ ಯೋಜನೆಯಾಗಿದೆ. 5 ಲಕ್ಷ ಮಿತಿಗೆ Religare Care ಉತ್ತಮವಾದ ಯೋಜನೆಯಾಗಿದೆ.


Click it and Unblock the Notifications