2011 ರಲ್ಲಿ ಗಗನಕ್ಕೇರಿದ್ದ ಚಿನ್ನದ ಬೆಲೆ ಈ ಎರಡು ವರ್ಷಗಳಲ್ಲಿ ಶೇ. 20ರಷ್ಟು ಬಿದ್ದಿದೆ. ಬಂಗಾರದ ಬೆಲೆ ದಿನೇ ದಿನೇ ಕುಸಿಯುತ್ತಿದೆ. 10 ಗ್ರಾಂಗೆ 26,269 ರು ಕುಸಿದಿರುವ ಕಾಲದಲ್ಲಿ ಚಿನ್ನ ಮೇಲೆ ಹೂಡಿಕೆಗೆ ಗ್ರಾಹಕ ಮುಂದಾಗುತ್ತಾರೆ. ಭಾರತೀಯ ಸ್ಥಳೀಯ ಚಿನಿವಾರಪೇಟೆ ದರಗಳು ಎಂದಿಗೂ ಕೂಡಾ ಅಂತಾರಾಷ್ಟ್ರೀಯ ಮಾರುಕಟ್ಟೆ ಮೇಲೆ ಅವಲಂಬಿತವಾಗಿದೆ.
ಚಿನ್ನದ ETFನತ್ತ ಗಮನ ಹೆಚ್ಚಾಗಿದ್ದು, ಮಾರುಕಟ್ಟೆಯಲ್ಲಿ ದರ ಇಳಿಕೆಗೆ ಕಾರಣವಾಗಿದೆ. ಚಿನ್ನದ ಮೇಲಿನ ಹೂಡಿಕೆ ತನ್ನ ಸುರಕ್ಷಿತ ಕವಚವನ್ನು ಕಳೆದುಕೊಂಡಿದೆ.ಆದರೆ, ಇದು ಚಿನ್ನದ ಮೇಲೆ ಹೂಡಿಕೆಗೆ ಸಕಾಲವೇ? ಇಲ್ಲಿ ಓದಿ . ಚಿನ್ನದ ಮೇಲೆ ಹೂಡಿಕೆಗೆ ಐದಾರು ಸುಲಭ ವಿಧಾನಗಳ ಬಗ್ಗೆ ಇಲ್ಲಿ ಓದಿರುತ್ತೀರಿ.
ಈಗ ಎಸ್ ಬಿಐ ಗೋಲ್ಡ್ ಡಿಫಾಸಿಟ್ ಸ್ಕೀಮ್ ನಲ್ಲಿ ಹೂಡಿಕೆಗೆ ಸಕಾಲವಾಗಿದೆ. ನಿಮ್ಮಲ್ಲಿರುವ ಆಭರಣ, ಚಿನ್ನದ ಬಾರ್ ಗಳನ್ನು ಎಸ್ ಬಿಐಗೆ ನೀಡಿ ಬಡ್ಡಿದರ, ತೆರಿಗೆ ಉಳಿತಾಯ ಮುಂತಾದ ಸೌಲಭ್ಯ ಪಡೆಯಬಹುದಾಗಿದೆ. ಚಿನ್ನದ ಶುದ್ಧತೆ ಆಧಾರದ ಮೇಲೆ ಅಭರಣವನ್ನು ಕರಗಿಸಿ ಸುರಕ್ಷಿತವಾಗಿ ಇರಿಸಲಾಗುತ್ತದೆ. 90 ದಿನದೊಳಗೆ ಚಿನ್ನ ಹೂಡಿಕೆಯ ಪ್ರಮಾಣ ಪತ್ರ ಸಿಗಲಿದೆ.
ಹೂಡಿಕೆಗೆ ತಾತ್ಕಾಲಿಕ ಪ್ರಮಾಣ ಪತ್ರ. ನಿಧಿ ಅವಧಿ ಮೂರು, ನಾಲ್ಕು ಅಥವಾ ಐದು ವರ್ಷದ ಅವಧಿಯಾಗಿದ್ದು, ಅಸಲು ಜೊತೆಗೆ ಒಳ್ಳೆ ಬಡ್ಡಿದರವನ್ನು ನಿರೀಕ್ಷಿಸಬಹುದು. ಎಸ್ ಬಿಐ ಯೋಜನೆಯಲ್ಲಿ ರಿಟರ್ನ್ಸ್ ವೇಳೆ ಶುದ್ಧ ಚಿನ್ನ ಅಥವಾ ಸಮಾನಾಂತರ ನಗದು ಪಡೆಯಬಹುದಾಗಿದೆ. ಎಸ್ ಬಿಐನಲ್ಲಿ ಏಕೆ ಹೂಡಿಕೆ ಮಾಡಬೇಕು ಇಲ್ಲಿ ಓದಿ...
ಎಸ್ ಬಿಐ ಚಿನ್ನದ ಮೇಲೆ ಹೂಡಿಕೆ ಏಕೆ
ಚಿನ್ನದ ಮೇಲೆ ಹೂಡಿಕೆಗೆ ಬಡ್ಡಿದರ : ಸುರಕ್ಷಿತವಾಗಿ ಲಾಕರ್ ನಲ್ಲಿ ಚಿನ್ನ ಇಟ್ಟರೆ ಏನು ರಿರ್ಟರ್ನ್ಸ್ ಸಿಗುವುದಿಲ್ಲ. ಸುಮ್ಮನೆ ಹೀಗೆ ಇಡುವ ಚಿನ್ನದ ಮೇಲೂ ನಿಮಗೆ ಬಡ್ಡಿ ಸಿಗುವಂತಾದರೆ ಎಷ್ಟು ಚೆನ್ನ ಅಲ್ಲವೆ.
ಎಸ್ ಬಿಐ ಚಿನ್ನ ಹೂಡಿಕೆ ಯೋಜನೆ ಮೂಲಕ ನೀವಿದನ್ನು ಸಾಧಿಸಬಹುದು. ಚಿನ್ನದ ಕರೆನ್ಸಿ ಆಧಾರದ ಮೇಲೆ ಬಡ್ಡಿದರ ಲೆಕ್ಕ ಹಾಕಿ ಸಮಾನವಾದ ನಗದು ಹಣ ನೀಡಲಾಗುವುದು.
ಎಸ್ ಬಿಐ ಚಿನ್ನದ ಮೇಲೆ ಹೂಡಿಕೆ ಏಕೆ
ತೆರಿಗೆ ಉಳಿತಾಯ : ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಚಿನ್ನ ಅಥವಾ ಆಭರಣ ಹೊಂದಿದ್ದರೆ ತೆರಿಗೆ(wealth tax) ಪಾವತಿಸಬೇಕಾಗುತ್ತದೆ. ಎಸ್ ಬಿಐ ಚಿನ್ನ ನಿಧಿ ಯೋಜನೆಯಲ್ಲಿ ವೆಲ್ತ್ ತೆರಿಗೆ ಇಲ್ಲ ಮೂಲ ಗಳಿಕೆ ತೆರಿಗೆ ಅಥವಾ ಆದಾಯ ತೆರಿಗೆ ಪಾವತಿಸಬಹುದು.
ಎಸ್ ಬಿಐ ಚಿನ್ನದ ಮೇಲೆ ಹೂಡಿಕೆ ಏಕೆ
ಚಿನ್ನದ ಬೆಲೆ ಏರಿದರೆ ಹೂಡಿಕೆದಾರರಿಗೆ ಲಾಭ: ಚಿನ್ನ ಹೂಡಿಕೆ ಅವಧಿ ಮುಗಿದು ಮೆಚ್ಯೂರ್ ಆದಾಗ ಹಾಲಿ ಚಿನ್ನದ ದರ ದಂತೆ ರಿಟರ್ನ್ಸ್ ಸಿಗುತ್ತದೆ. ಚಿನ್ನದ ದರ ಏರಿಕೆಯಾದರೆ ಗ್ರಾಹಕರಿಗೆ ಲಾಹ. ಇದರ ಜೊತೆಗೆ ಬಡ್ಡಿದರವೂ ಸೇರುತ್ತದೆ.
ಎಸ್ ಬಿಐ ಚಿನ್ನದ ಮೇಲೆ ಹೂಡಿಕೆ ಏಕೆ
ಸಾಲ ಸೌಲಭ್ಯ: ಚಿನ್ನದ ಮೇಲೆ ಶೇ 75ರಷ್ಟು ನೊಟೇಷನ್ ಮೌಲ್ಯದಂತೆ ನಗದು ಸಾಲವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಯಾವುದೇ ಬ್ರ್ಯಾಂಚ್ ನಿಂದ ಪಡೆಯಬಹುದಾಗಿದೆ.
ಎಸ್ ಬಿಐ ಚಿನ್ನದ ಮೇಲೆ ಹೂಡಿಕೆ ಏಕೆ
ಲಾಕರ್ ವೆಚ್ಚವಿಲ್ಲ, ಕಳ್ಳತನದ ಭಯವಿಲ್ಲ:
ಚಿನ್ನ ಹಾಗೂ ಆಭರಣಗಳನ್ನು ಸುರಕ್ಷಿತವಾಗಿ ಲಾಕರ್ ಗಳಲ್ಲಿ ಇರಿಸಲಾಗುವುದು ಇದಕ್ಕೆ ಯಾವುದೇ ಪ್ರತ್ಯೇಕ ವೆಚ್ಚ ತಗುಲುವುದಿಲ್ಲ. ಕಳ್ಳತನ ಭಯವೂ ಇರುವುದಿಲ್ಲ. ಪ್ರಮಾಣ ಪತ್ರವೂ ಭದ್ರವಾಗಿರುತ್ತದೆ.
ಎಸ್ ಬಿಐ ಚಿನ್ನದ ಮೇಲೆ ಹೂಡಿಕೆ ಏಕೆ
ಹೂಡಿಕೆ ನಿರ್ಬಂಧವಿಲ್ಲ: ಗರಿಷ್ಠ ಮಿತಿ ಹೂಡಿಕೆ ನಿರ್ಬಂಧವಿಲ್ಲ. ಕನಿಷ್ಠ ಹೂಡಿಕೆ ಕೂಡಾ ಕೈಗೆಟುಕುವ ಮಿತಿಯಲ್ಲಿದ್ದು 500 ಗ್ರಾಮ್ ನಿಂದ ಆರಂಭಿಸಬಹುದು.


Click it and Unblock the Notifications