ಈ ಸುದ್ದಿ ಮನೆ ಹಿರಿಯರಿಗೆ ತಪ್ಪದೇ ತಿಳಿಸಿ

ಬೆಂಗಳೂರು, ಏ.2: ನಮ್ಮ ಮನೆ ಹಿರಿಯರಿಗೆ ಇಳಿ ವಯಸ್ಸಿನಲ್ಲಿ ಆಸರೆಯಾಗುವುದು ಎಷ್ಟು ಮುಖ್ಯವೋ ಅವರಿಗೆ ಆರ್ಥಿಕ ಭದ್ರತೆ ಒದಗಿಸುವುದು ಅಷ್ಟೇ ಮುಖ್ಯ. ಭಾರತ ಸರ್ಕಾರ ಹಿರಿಯ ನಾಗರಿಕರಿಗೆ ಅನೇಕ ಯೋಜನೆ ಸೌಲಭ್ಯಗಳನ್ನು ಒದಗಿಸುತ್ತಿದೆ.

ವಯೋವೃದ್ಧರ(60 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟವರು) ಯೋಗಕ್ಷೇಮವನ್ನು ಭಾರತದ ಸಂವಿಧಾನದಲ್ಲಿ ಕಡ್ಡಾಯಗೊಳಿಸಲಾಗಿದೆ. ಈ ಬಗ್ಗೆ ಆರ್ಟಿಕಲ್ 41ರಲ್ಲಿ ಕೆಲವು ಸೂಚನೆಗಳನ್ನು ನೀಡಲಾಗಿದೆ. ರಾಜ್ಯ ಸರ್ಕಾರಗಳು ತನ್ನ ಆರ್ಥಿಕ ಸಾಮರ್ಥ್ಯದ ಮಿತಿಯೊಳಗೆ ವೃದ್ಧಾಪ್ಯ ಸಂದರ್ಭ ಒದಗಿರುವ ಪ್ರಜೆಗಳಿಗೆ ಸೂಕ್ತ ಸಹಾಯ ಒದಗಿಸಬೇಕು ಎಂದು ಸೂಚಿಸಲಾಗಿದೆ.

ಅದರಂತೆ ಉತ್ತಮ ಆದಾಯ ಹೊಂದಿರುವ ಮಕ್ಕಳು ತಮ್ಮ ಹೆತ್ತವರನ್ನು ನೋಡಿಕೊಳ್ಳದಿದ್ದಲಿ ಅದನ್ನು ಸೆಕ್ಷನ್ 125ರ ಅಡಿಯಲ್ಲಿ ಅಪರಾಧ ಎಂದು ಪರಿಗಣಿಸಲಾಗುತ್ತದೆ. ಹಿಂದೂ ದತ್ತು ಮತ್ತು ನಿರ್ವಹಣೆ ಕಾಯಿದೆ 1956ರ ಪ್ರಕಾರ ಕೂಡಾ ಇದೇ ರೀತಿ ನಿರ್ದೇಶನ ನೀಡಲಾಗಿದೆ.

ತೆರಿಗೆ ವಿನಾಯತಿ, ಪ್ರವಾಸದಲ್ಲಿ ರಿಯಾಯಿತಿ, ಆರೋಗ್ಯ ಸೌಲಭ್ಯ, ಸೇರಿದಂತೆ ಅನೇಕ ಯೋಜನೆಗಳು, ಸೌಲಭ್ಯಗಳು ಲಭ್ಯವಿದೆ. ಪ್ರತಿ ಬಜೆಟ್ ನಲ್ಲೂ ಹಿರಿಯ ನಾಗರಿಕೆಗೆ ವಿಶೇಷ ಆದ್ಯತೆ ನೀಡಲಾಗುತ್ತದೆ. ಇವುಗಳಲ್ಲಿ ಪ್ರಮುಖವಾದ ಕೆಲವು ಸೌಲಭ್ಯಗಳ ಪಟ್ಟಿ ಇಲ್ಲಿದೆ..

ಆದಾಯ ತೆರಿಗೆ

ಆದಾಯ ತೆರಿಗೆ

ಹಿರಿಯ ನಾಗರಿಕರಿಗೆ(60 ವರ್ಷದಿಂದ 80 ವರ್ಷದೊಳಗೆ)
* 0 to 2,50,000- ತೆರಿಗೆ ಇಲ್ಲ
* 2,50,001 to 5,00,000- 10%
* 5,00,001 to 10,00,000- 20%
* 10,00,000 ಗೂ ಅಧಿಕ- 30%

 

 

ಬಡ್ಡಿದರ

ಬಡ್ಡಿದರ

ಹಿರಿಯ ನಾಗರಿಕರು ಬ್ಯಾಂಕಿನಲ್ಲಿಟ್ಟಿರುವ ನಿಶ್ಚಿತ ಠೇವಣಿ ಮೇಲೆ ಹೆಚ್ಚಿನ ಬಡ್ಡಿದರ(50 bps ತನಕ) ನಿರೀಕ್ಷಿಸಬಹುದು. ಕೆಲವು ಸಂಸ್ಥೆಗಳ ಠೇವಣಿ ಮೇಲೆ ಶೇ 0.50 ರಷ್ಟು ಮಾತ್ರ ನಿರೀಕ್ಷಿಸಲು ಸಾಧ್ಯ

TDS

TDS

15 ಎಚ್ ಅರ್ಜಿ ಸಲ್ಲಿಸುವ ಮೂಲಕ ಹಿರಿಯ ನಾಗರಿಕರು ಆದಾಯ ಗಳಿಕೆ ಹಾಗೂ ಹೂಡಿಕೆ ಮೇಲಿನ tax deducted at source (TDS) ಕಡಿತದಲ್ಲಿ ವಿನಾಯತಿ ಪಡೆಯಬಹುದು.

ವಿಮೆ

ವಿಮೆ

80ಡಿ ವ್ಯಾಪ್ತಿಗೆ ಒಳಪಡುವ ಹಿರಿಯ ನಾಗರಿಕರಿಗೆ ಆರೋಗ್ಯ ವಿಮೆ ಪ್ರೀಮಿಯಂ ಮಿತಿ 20,000 ರು ತನಕ ಸಿಗಲಿದೆ.

ಉದ್ಯಮ

ಉದ್ಯಮ

ಹಿರಿಯ ನಾಗರಿಕರು ಸ್ವಂತ ಉದ್ಯಮಕ್ಕೆ ಇಳಿದರೆ, ಯಾವುದೇ ಹೂಡಿಕೆ ಆದಾಯ ಇಲ್ಲದಿದ್ದರೆ ಅವರಿಗೆ ಅಡ್ವಾನ್ಸ್ ತೆರಿಗೆಯಿಂದ ವಿನಾಯತಿ ಸಿಗಲಿದೆ.

ಅತಿ ಹಿರಿಯ ನಾಗರಿಕರು

ಅತಿ ಹಿರಿಯ ನಾಗರಿಕರು

ಹಿರಿಯ ನಾಗರೀಕರಿಗೆ (80 ವರ್ಷ ಮೇಲ್ಪಟ್ಟವರಿಗೆ) ಆದಾಯ ತೆರಿಗೆ ಮಿತಿ ವಾರ್ಷಿಕ 5 ಲಕ್ಷ ರು ಮುಂದುವರೆಯಲಿದೆ. ಆದಾಯ ಮಿತಿ ದಾಟಿದರೆ 10 ಲಕ್ಷ ರು ತನಕ ಆದಾಯದ ಶೇ 20 ರಷ್ಟು ಮಾತ್ರ ತೆರಿಗೆ ಪಾವತಿಸಬೇಕಾಗುತ್ತದೆ.

ಸಾರಿಗೆ

ಸಾರಿಗೆ

ಭಾರತೀಯ ರೈಲ್ವೆಯಲ್ಲಿ ಎಲ್ಲಾ ಶ್ರೇಣಿಯ ಟಿಕೆಟ್ ದರದ ಮೇಲೆ ಶೇ 30 ರಿಯಾಯಿತಿ ಲಭ್ಯವಿದೆ. ಇದೇ ರೀತಿ ಹಲವು ರಾಜ್ಯಗಳ ರಸ್ತೆ ಸಾರಿಗೆ ಸಂಸ್ಥೆಗಳ ಪ್ರಯಾಣ ದರ ಹಾಗೂ ಮಾಸಿಕ ಬಸ್ ಪಾಸ್ ದರದಲ್ಲೂ ವಿನಾಯತಿ ಇದೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+