ಚಿನ್ನ ಖರೀದಿಗೆ ಚಿನ್ನದಂತಹ 5 ಯೋಜನೆಗಳು

ಬೆಂಗಳೂರು, ಮೇ 28: ಚಿನ್ನದ ಬೆಲೆ ಏರಿಳಿತ ಮುಂದುವರಿದಿದೆ. ಆದರೂ ಗ್ರಾಹಕ ಪರವಾಗಿದ್ದು, ಚಿನ್ನದ ಖರೀದಿಗೆ ಇದು ಸಕಾಲವೆನಿಸಿದೆ. ಕೇಂದ್ರ ಸರಕಾರ ಮೇಲಿಂದ ಮೇಲೆ ಚಿನ್ನದ ಆಮದಿಗೆ ಕಡಿವಾಣ ಹಾಕುತ್ತಿರುವಾಗ ಗ್ರಾಹಕರು ದೇಶಿ ಮಾರುಕಟ್ಟೆಯನ್ನು ಅವಲಂಬಿಸುವುದು ಅನಿವಾರ್ಯವಾಗಿದೆ.

ಉಳಿತಾಯ ಯೋಜನೆಗಳ ಮೂಲಕ ಚಿನ್ನ ಖರೀದಿ ಮಾಡುವುದು ಗ್ರಾಹಕರಿಗೆ ಹೆಚ್ಚು ಆಕರ್ಷಣೀಯವೆನಿಸುತ್ತದೆ. ನಿಗದಿತ ಚಿನ್ನದ ಅಂಗಡಿಯಲ್ಲಿ ನಿಯಮಿತವಾಗಿ ಹಣವನ್ನು ಉಳಿತಾಯ ಮಾಡುತ್ತಾ ಮುಂದೊಂದು ದಿನ ಹಣಕ್ಕೆ ತಕ್ಕ ಪ್ರಮಾಣದಲ್ಲಿ ಚಿನ್ನವನ್ನು ಖರೀದಿ ಮಾಡಬಹುದು.

Gold saving schemes ಹತ್ತಾರು ಇವೆ. ಅವುಗಳಲ್ಲಿ ಆಯ್ದ 5 ಮುಖ್ಯ ಸಂಸ್ಥೆಗಳ ಪರಿಚಯ ನೀಡಲಾಗಿದೆ. ಮಾಡಸಿಕ ಕಂತುಗಳಲ್ಲಿ ಹಣ ಕಟ್ಟುತ್ತಾ ಪೂರ್ವ ನಿಗದಿತ ಅವಧಿ ಮುಕ್ತಾಯವಾಗುತ್ತಿದ್ದಂತೆ ಆ ಮೊತ್ತಕ್ಕೆ ಚಿನ್ನ ಪಡೆಯುವುದೇ Gold saving scheme ಉದ್ದೇಶ. ಕೆಲವು ಪ್ರಮುಖ ಜ್ಯುವೆಲರ್ಸ್ ಸಂಸ್ಥೆಗಳು ಹೀಗಿವೆ.

ಜೋಸ್ ಅಲುಕ್ಕಾಸ್ ಸ್ವರ್ಣನಿಧಿ:

ಜೋಸ್ ಅಲುಕ್ಕಾಸ್ ಸ್ವರ್ಣನಿಧಿ:

ಇದು ಕಾಲೇಜು ವಿದ್ಯಾರ್ಥಿನಿಯರಿಗೆ ಮತ್ತು ಗೃಹಿಣಿಯರಿಗೆ ಭೂಷಣವಾಗಿರುತ್ತದೆ. ಜೋಸ್ ಅಲುಕ್ಕಾಸ್ ಸ್ವರ್ಣನಿಧಿ ಯೋಜನೆಯಡಿ 18 ತಿಂಗಳ ಕಾಲ ಖಾತೆದಾರ ಗ್ರಾಹಕರು ತಮ್ಮ ಖಾತೆಯಲ್ಲಿ ಬಳಿಕ ಅಷ್ಟೂ ಮತ್ತದ ಜತೆಗೆ ಇನ್ನೂ 2 ತಿಂಗಳ ಮೊತ್ತವನ್ನು ಒಟ್ಟು ಮಾಡಿ ಕಂಪನಿಯು BIS 916 Hallmark ಚಿನ್ನವನ್ನು ಚಂದಾದಾರಿಗೆ ಕೊಡಮಾಡುತ್ತದೆ. ಮೊದಲ ಕಂತು ತುಂಬಿದಾಗಲೇ ಒಂದು ಕಂತಿಗೆ ಸಮವಾದ ವಿಶೇಷ ಕೊಡುಗೆಯನ್ನು ನೀಡುತ್ತದೆ.

ಗೀತಾಂಜಲಿ ತಮನ್ನಾ ಯೋಜನೆ:

ಗೀತಾಂಜಲಿ ತಮನ್ನಾ ಯೋಜನೆ:

ಕಂಪನಿಯ ಈ ಯೋಜನೆಯಡಿ ನೀವು ಪ್ರತಿ ಕಂತನ್ನೂ ತುಂಬುತ್ತಾ ಹೋಗಬೇಕು. 12 ಮಾಸಿಕ ಕಂತುಗಳನ್ನು ತುಂಬಿದ ಮೇಲೆ ಅದಕ್ಕೆ ಇನ್ನೂ 2 ತಿಂಗಳ ಮೊತ್ತವನ್ನು ಕಂಪನಿಯೇ ತುಂಬಿಸಿ, ಒಟ್ಟು 14 ಕಂತು ಮೊತ್ತದಲ್ಲಿ ವಜ್ರಾಭರಣ ಖರೀದಿ ಮಾಡಬಹುದು. ನಿಮಗೆ ಚಿನ್ನಾಭರಣ ಬೇಕು ಅಂದರೆ 12 ಕಂತಿನ ಜತೆಗೆ ಕಂಪನಿ ಇನ್ನೊಂದು ತಿಂಗಳ ಮೊತ್ತವನ್ನು ಸೇರಿಸಿ ಚಿನ್ನಾಭರಣ ನೀಡುತ್ತದೆ.

ಪಿಸಿ ಜ್ಯುವೆಲರ್ಸ್ ಕಂಪನಿ ಯೋಜನೆ:

ಪಿಸಿ ಜ್ಯುವೆಲರ್ಸ್ ಕಂಪನಿ ಯೋಜನೆ:

12 ತಿಂಗಳು ನೀವು ಹಣ ತುಂಬಿದರೆ ಕಂಪನಿ ಇನ್ನೆರೆಡು ತಿಂಗಳ ಮೊತ್ತವನ್ನು ತುಂಬುತ್ತದೆ. ಅಂದರೆ ಪ್ರತಿ ತಿಂಗಳೂ 1,000 ರೂ. ನಂತೆ 12 ತಿಂಗಳ ಕಾಲ ತುಂಬಿದರೆ ಕಂಪನಿಯು ಇನ್ನೆರಡು ತಿಂಗಳ ಮೊತ್ತವನ್ನು ಒಟ್ಟುಗೂಡಿಸಿ 12 ಸಾವಿರ ಪ್ಲಸ್ 2 ಸಾವಿರ ಅಂದರೆ 14 ಸಾವಿರ ರೂ. ಮೊತ್ತದ ವಜ್ರ ಅಥವಾ ಚಿನ್ನದ ಆಭರಣವನ್ನು ಚಂದಾದಾರು ಖರೀದಿ ಮಾಡಬಹುದು. ಅಲ್ಲಿಗೆ ವಾರ್ಷಿಕ ಶೇ. 25ರಷ್ಟು ಸಂಪಾದನೆಯಾದಂತಾಗುತ್ತದೆ.

ತಾನಿಶ್ಕ್ ಗೋಲ್ಡನ್ ಹಾರ್ವೆಸ್ಟ್ ಯೋಜನೆ

ತಾನಿಶ್ಕ್ ಗೋಲ್ಡನ್ ಹಾರ್ವೆಸ್ಟ್ ಯೋಜನೆ

ತಾನಿಶ್ಕ್ ಗೋಲ್ಡನ್ ಹಾರ್ವೆಸ್ಟ್ ಯೋಜನೆಯಡಿ 11 ತಿಂಗಳ ಕಾಲ ನಿಗದಿತ ಮೊತ್ತವನ್ನು ಚಂದಾದಾರರು ಭರ್ತಿ ಮಾಡುತ್ತಾ ಹೋಗಬೇಕು. 12ನೆಯ ತಿಂಗಳ ಮೊತ್ತವನ್ನು ತಾನಿಶ್ಕ್ ಕಂಪನಿಯೇ ತುಂಬುತ್ತದೆ. 11ನೇ ತಿಂಗಳು ಮುಗಿಯುತ್ತಿದ್ದಂತೆ 12 ತಿಂಗಳ ಮೊತ್ತಕ್ಕೆ ಬ-ನಿಮಗೆ ಇಷ್ಟವಾಗುವ ಚಿನ್ನಾಭರಣವನ್ನು ಕಂಪನಿಯಲ್ಲಿ ನೀವು ಖರೀದಿಸಬಹುದು.

ಟಿಬಿಜೀ ಕಲ್ಪವೃಕ್ಷ ಯೋಜನೆಯಡಿ

ಟಿಬಿಜೀ ಕಲ್ಪವೃಕ್ಷ ಯೋಜನೆಯಡಿ

22 ಕ್ಯಾರೆಟ್ ವಿಶಿಷ್ಟ ಚಿನ್ನವನ್ನು ನಿಮ್ಮದಾಗಿಸಿಕೊಳ್ಳಬಹುದು. 12, 15 ಮತ್ತು 18 ತಿಂಗಳ ಯೋಜನೆಯಡಿ ಮಾಸಿಕ ಕಂತುಗಳನ್ನು ಭರ್ತಿ ಮಾಡಿದರೆ ಕಂಪನಿಯು ಮುಂದಿನ ಒಂದು ತಿಂಗಳ ಮೊತ್ತವನ್ನು ತಾನೇ ಪಾವತಿಸಿ, ಒಟ್ಟು ಮೊತ್ತಕ್ಕೆ ಚಿನ್ನಾಭರಣ ಖರೀದಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+