
ಎಲ್ ಐಸಿ ಗ್ರಾಹಕರು ಈಗ ತನ್ನ ಯೋಜನೆಯ ಸ್ಥಿತಿ ಗತಿಗಳನ್ನು ಆನ್ ಲೈನ್ ನಲ್ಲೇ ಟ್ರ್ಯಾಕ್ ಮಾಡಬಹುದು. ಎಲ್ ಐಸಿ ಶಾಖೆಗಳಿಗೆ ತೆರಳಿ ಯೋಜನೆಯ ಬಗ್ಗೆ ತಿಳಿಯಲು ಸಮಯದ ಅಭಾವ ಎದುರಿಸುತ್ತಿರುವ ಗ್ರಾಹಕರು ಎಲ್ ಐಸಿ ವೆಬ್ ತಾಣದ ಮೂಲಕ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದಾಗಿದೆ.
ಎಲ್ ಐಸಿ ಯೋಜನೆಯ ಬಗ್ಗೆ ಆನ್ ಲೈನ್ ಅಥವಾ ಎಸ್ ಎಂಎಸ್ ಮೂಲಕ ಮಾಹಿತಿ ಪಡೆಯುವ ವಿಧಾನ ಸರಳವಾಗಿದೆ. ವಿವರ ಇಂತಿದೆ:
ಆನ್ ಲೈನ್ ಮಾಹಿತಿ ಪಡೆಯಲು: ಮೊದಲಿಗೆ ಎಲ್ ಐಸಿ ವೆಬ್ ತಾಣದಲ್ಲಿ ನೊಂದಣಿ ಮಾಡಿಸಿರಬೇಕು. ಹೊಸದಾಗಿ ನೊಂದಣಿ ಮಾಡಿಸಲು ಈ ಲಿಂಕ್ ಕ್ಲಿಕ್ ಮಾಡಿ
ಆನ್ ಲೈನ್ ಮಾಹಿತಿ ಪಡೆಯಲು ಎಲ್ ಐಸಿ ಪಾಲಿಸಿ ಸಂಖ್ಯೆ, ಪ್ರಿಮಿಯಂ ಖಾತೆ, ಹುಟ್ಟಿದ ದಿನಾಂಕ ಹಾಗೂ ನೋಂದಾಯಿತ ಇ ಮೇಲ್ ವಿಳಾಸ ವಿವರಗಳು ಬೇಕಾಗುತ್ತದೆ. ನೀವು ಈಗಾಗಲೇ ನೋಂದಾಯಿತ ಸದಸ್ಯರಾಗಿದ್ದರೆ, ನೇರವಾಗಿ ಈ ಲಿಂಕ್ ಕ್ಲಿಕ್ ಮಾಡಿ ಲಾಗ್ ಇನ್ ಆಗಿ ಮಾಹಿತಿಗಳನ್ನು ಪಡೆಯಬಹುದು.
ಲಾಗ್ ಇನ್ ಆದ ಮೇಲೆ ನಿಮ್ಮ ಪಾಲಿಸಿ ಸಂಖ್ಯೆ ನಮೂದಿಸಿ ಪಾಲಿಸಿ ವಿವರಗಳನ್ನು ಪಡೆಯಬಹುದು. ಪ್ರಿಮಿಯಂ ಕಟ್ಟಬೇಕಾದ ಕೊನೆ ದಿನಾಂಕ ಪಡೆಯಬಹುದು ಹಾಗೂ ಆನ್ ಲೈನ್ ನಲ್ಲೇ ಪ್ರಿಮಿಯಂ ಭರ್ತಿ ಮಾಡಬಹುದು.
ಎಸ್ ಎಂಎಸ್ ಮೂಲಕ ಮಾಹಿತಿ: ನಿಮ್ಮ ಎಲ್ ಐಸಿ ಪಾಲಿಸಿ ಬಗ್ಗೆ ಮಾಹಿತಿ ಪಡೆಯಲು 56677 ಸಂಖ್ಯೆಗೆ SMS ಮಾಡಿ. ಬೋನಸ್, ಪ್ರಿಮಿಯಂ ಮಾಹಿತಿ ಸೇರಿದಂತೆ ಹೆಚ್ಚಿನ ಮಾಹಿತಿ ನಿಮ್ಮ ಬೆರಳ ತುದಿಯಲ್ಲೇ ಲಭ್ಯವಾಗಲಿದೆ. ಎಸ್ ಎಂಎಸ್ ಕಳಿಸುವ ಮಾದರಿ ಕೆಳಗಿನಂತಿದೆ:
ಉದಾಹರಣೆಗೆ ASKLIC ಎಂದು ಕೀ ಮಾಡಿ (ಪಾಲಿಸಿ ನಂಬರ್ ಹಾಕಿ) PREMIUM ಎಂದು ಕೀ ಮಾಡಿ 56677ಗೆ ಕಳುಹಿಸಿ.
ASKLIC (Policy Number) PREMIUM to 56677
Premium: ಯೋಜನೆ ಅನ್ವಯ ಕಟ್ಟಬೇಕಾದ ಪ್ರಿಮಿಯಂ ಮೊತ್ತ
Revival: ನಿಮ್ಮ ಯೋಜನೆ ಸ್ಥಗಿತಗೊಂಡಿದ್ದರೆ, ಪುನಶ್ಚೇತನಗೊಳಿಸಲು ಹಾಗೂ ಕಟ್ಟಬೇಕಾದ ಮೊತ್ತ
Bonus : ಬೋನಸ್ ಮೊತ್ತ
Loan: ಎಷ್ಟೂ ಮೊತ್ತ ಸಾಲ ಸಿಗಲಿದೆ
NOM: ನಾಮಿನೇಷನ್ ಬಗ್ಗೆ ಮಾಹಿತಿ ಸಿಗಲಿದೆ
ಗುಡ್ ರಿಟರ್ನ್ಸ್.ಇನ್


Click it and Unblock the Notifications