
ತೆರಿಗೆ ಉಳಿತಾಯ: ರಾಷ್ಟ್ರೀಯ ಪಿಂಚಣಿ ಯೋಜನೆ(NPS) ಮೂಲಕ ತೆರಿಗೆ ಉಳಿತಾಯವೂ ಸಾಧ್ಯ. ಶೇ 30 ರಷ್ಟು ಉಳಿತಾಯಕ್ಕೆ ನಿಮ್ಮ ಹೂಡಿಕೆ ಸಿಕ್ಕಬೇಕಿದ್ದರೆ 80ccD(2) ನಿಯಮಕ್ಕೆ ಒಳಪಟ್ಟಿರಬೇಕು. ಇದರಿಂದ ಸರಿ ಸುಮಾರು 15,000 ರು ತನಕ ಉಳಿತಾಯ ಸಾಧ್ಯ.
NPS ಯಾರು ನಿರ್ವಹಣೆ ಮಾಡುತ್ತಾರೆ ಎಂಬುದನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಹೊಸ ಪಿಂಚಣಿ ಯೋಜನೆ ಪ್ರಕಾರ ಉದ್ಯೋಗಿ ಹಾಗೂ ಉದ್ಯೋಗದಾತ ಸಂಸ್ಥೆ ಇಬ್ಬರಿಂದಲೂ ಪಿಂಚಣಿ ಯೋಜನೆಗೆ ಇಂತಿಷ್ಟು ಹಣ ಸಂದಾಯವಾಗಲಿದೆ. ಇದು ಆದಾಯ ತೆರಿಗೆ ಅಧಿನಿಯಮ 80 CCD ಅನ್ವಯ ತೆರಿಗೆ ವಿನಾಯತಿಗೆ ಒಳಪಟ್ಟಿರುತ್ತದೆ.
ಆದರೆ, ಇದರ ಮೊತ್ತ 1 ಲಕ್ಷ ರು ದಾಟಿರಬಾರದು. ಪಿಂಚಣಿ ಯೋಜನೆಗೆ 80CCD ಅನ್ವಯ ಉದ್ಯೋಗಿ ಹಾಗೂ ಉದ್ಯೋಗದಾತರ ಜಂಟಿ ಮೊತ್ತ ಲಕ್ಷ ರು ದಾಟಿರಬಾರದು ಎಂಬ ನಿಯಮವಿದೆ. 1 ಲಕ್ಷ ರೂ ದಾಟಿದರೆ ತೆರಿಗೆ ವಿನಾಯತಿಗೆ ಒಳಪಡುವುದಿಲ್ಲ. 1961ರ ಆದಾಯ ತೆರಿಗೆ ಕಾಯಿದೆ ಅನ್ವಯ ಈ ನಿಯಮ ಕಾಲ ಕಾಲಕ್ಕೆ ಅನ್ವಯವಾಗುತ್ತಿರುತ್ತದೆ.
ರಾಷ್ಟ್ರೀಯ ಪಿಂಚಣಿ ಯೋಜನೆ(NPS) ನಿಧಿ ವ್ಯವಸ್ಥಾಪಕರು ನೇರವಾಗಿ ಷೇರುಗಳಲ್ಲಿ ಹೂಡಿಕೆ ಮಾಡಲು ಭಾರತದ ಪಿಂಚಣಿ ನಿಧಿ ನಿಯಂತ್ರಕರು ಇತ್ತೀಚೆಗೆ ಅನುಮತಿ ನೀಡಿದ್ದಾರೆ. ನಿಧಿ ನಿರ್ವಹಣೆ ವೆಚ್ಚ ಕೂಡಾ ಪರಿಷ್ಕರಣೆಗೊಂಡಿದೆ. ಮೊದಲು ಶೇ 0.0009ರಷ್ಟು ಶುಲ್ಕ ವಿಧಿಸಲಾಗುತ್ತಿತ್ತು ಈಗ ನಿಮ್ಮ ಹೂಡಿಕೆಯ ಮೇಲಿನ ನಿರ್ವಹಣಾ ವೆಚ್ಚ ಶೇ 0.25 ಆಗಿದೆ.
ಗುಡ್ ರಿಟರ್ನ್ಸ್ .ಇನ್


Click it and Unblock the Notifications