
ಕೆವೈಸಿ ವಿಧಾನವನ್ನು ಬಲಪಡಿಸಿಕೊಳ್ಳುವ ಉದ್ದೇಶದಿಂದ ಐದು ಲಕ್ಷ. ರೂ.ಗಿಂತ ಮೇಲ್ಪಟ್ಟ ಎಲ್ಲ ಸಾಲ ಪ್ರಸ್ತಾವಗಳಿಗೆ ಎನ್ ಬಿಎಫ್ಸಿ ಪ್ಯಾನ್ ಕಾರ್ಡಿನ ಪ್ರತಿಯನ್ನು ಪಡೆದುಕೊಳ್ಳಬಹುದು. ಪ್ರಸ್ತುತ 5 ಲ.ರೂ.ಗಿಂತ ಮೇಲ್ಪಟ್ಟ ಚಿನ್ನ ಖರೀದಿಗೆ ಮಾತ್ರ ಪ್ಯಾನ್ ಕಡ್ಡಾಯಗೊಳಿಸಲಾಗಿದೆ. ಮುಂದೆ ಹೆಚ್ಚಿನ ಪ್ರಮಾಣದ ಚಿನ್ನ ಖರೀದಿಗೆ ಪ್ಯಾನ್ ಕಾರ್ಡ್ ಕಡ್ಡಾಯಗೊಳಿಸುವ ಸಾಧ್ಯತೆಯೂ ಇದೆ.
ಇನ್ನೂ ತೆರಿಗೆ ವಿನಾಯಿತಿ ಬಯಸುವವರು ಪ್ಯಾನ್ ಕಾರ್ಡ್ ನ ಸಂಪೂರ್ಣ ವಿವರವನ್ನು ನೀಡಬೇಕು. ಇಲ್ಲವಾದರೆ ಆದಾಯದ ಮೂಲದಲ್ಲೇ ಮುರಿದುಕೊಳ್ಳುವ ತೆರಿಗೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿದೆ. ಪ್ಯಾನ್ ಕಾರ್ಡ್ ಯಾವಾಗ ಯಾವಾಗ ಬೇಕಾಗುತ್ತದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ. ಈ ಕೆಳಗಿನ ಸಂದರ್ಭಗಳಲ್ಲಿ ಪ್ಯಾನ್ ಕಾರ್ಡ್ ಜೊತೆಗಿಟ್ಟುಕೊಳ್ಳುವುದು ಕಡ್ಡಾಯ
* ಬ್ಯಾಂಕ್ ಖಾತೆ ಆರಂಭಿಸಲು ಪ್ಯಾನ್ ಕಾರ್ಡ್ ಕಡ್ಡಾಯ.
* 50,000 ರು ಗೂ ಮೇಲ್ಪಟ್ಟ ನಗದನ್ನು ಬ್ಯಾಂಕಿನಲ್ಲಿ ಜಮೆ ಮಾಡಲು
* ಷೇರುಪೇಟೆ ವ್ಯವಹಾರ, ಡಿಮ್ಯಾಡ್ ಹಾಗೂ ಟ್ರೇಡಿಂಗ್ ಖಾತೆ ಆರಂಭಿಸುವಾಗ
* 50,000 ರು ಗೂ ಮೇಲ್ಪಟ್ಟ ಡಿಮ್ಯಾಂಡ್ ಡ್ರಾಫ್ಟ್ ಬಳಸುವಾಗ
* ಚೆಕ್ ಡಿಫಾಸಿಟ್ 50,000 ರು ಮೀರಿದಾಗ
* ಭಾರತದಲ್ಲಿ ಎಲ್ಲೇ ಆದರೂ ಸ್ಥಿರಾಸ್ತಿ ಖರೀದಿಸುವಾಗ
* ಕಾರುಗಳ ಖರೀದಿ ಅಥವಾ ಮಾರಾಟ
* 25,000 ರು ಮೀರಿದ ಪ್ರಯಾಣ ದರ, ನಗದು ಪಾವತಿ ಸಂದರ್ಭದಲ್ಲಿ
* ಆದಾಯ ತೆರಿಗೆ ಇಲಾಖೆಗೆ ಟಿಡಿಎಸ್ ರಿಟರ್ನ್ ಮಾಡುವಾಗ
* ಗೃಹ/ವೈಯಕ್ತಿಕ/ ಇತರೆ ಸಾಲವನ್ನು ಪಡೆಯಲು ಬಯಸಿದಾಗ ಪ್ಯಾನ್ ಕಾರ್ಡ್ ಕಡ್ಡಾಯವಾಗಿ ಬೇಕಾಗುತ್ತದೆ.
ಗುಡ್ ರಿಟರ್ನ್ಸ್.ಇನ್


Click it and Unblock the Notifications