ಕ್ಯಾನ್ಸಲ್ಡ್ ಚೆಕ್ ಗಳು ಎಲ್ಲೆಲ್ಲಿ ಉಪಯೋಗಕ್ಕೆ ಬರುತ್ತವೆ?

ಅವಧಿ ಮೀರಿದ ಅಥವಾ ಕ್ಯಾನ್ಸಲ್ ಆದ ಚೆಕ್ ಗಳು ಕೆಲವೊಂದು ಹಣಕಾಸು ಸಂಬಂಧಿ ಉಪಯೋಗಕ್ಕೆ ಬೇಕಾಗುತ್ತವೆ. ಸಾಲ ತೆಗೆಯಲು ಸಹ ಸಾಧನವಾಗಿ ಸಹಕಾರಿಯಾಗಬಲ್ಲದು.

ಕ್ಯಾನ್ಸಲ್ ಗೊಂಡ ಚೆಕ್ ಅಂದರೆ ಮತ್ತೇನೂ ಅಲ್ಲ. ಚೆಕ್ ಮೇಲೆ ಉದ್ದಕ್ಕೆ 'Cancelled' ಎಂದು ಬರೆದು ಗೆರೆ ಎಳೆಯಲಾಗಿರುತ್ತದೆ. ಈ ಬಗೆಯ ಕ್ಯಾನ್ಸಲ್ಡ್ ಚೆಕ್ ಗಳು ದುರುಪಯೋಗವಾಗುವ ಸಂಭವ ತುಂಬಾ ಕಡಿಮೆ. ಒಂದು ವೇಳೆ ಆರ್ ಟಿ ಜಿಎಸ್ ಉದ್ದೇಶಕ್ಕೆ ಬಳಸುವುದಾದರೆ ಸಕಲ ದಾಖಲೆಗಳನ್ನು ನೀಡಬೇಕಾಗುತ್ತದೆ. ಖಾತೆ ಸಂಖ್ಯೆ, ಹೆಸರು, ಎಮ್ ಐಸಿಆರ್ ಕೋಡ್, ಐಎಫ್ ಎಸ್ ಸಿ ಕೋಡ್ ಎಲ್ಲವನ್ನು ನೀಡಬೇಕಾಗುತ್ತದೆ.[ಭಾರತದಲ್ಲಿ ಸೇವಾ ಶುಲ್ಕ ಲೆಕ್ಕ ಹಾಕುವುದು ಹೇಗೆ?]

ಕ್ಯಾನ್ಸಲ್ಡ್ ಚೆಕ್ ಗಳು  ಎಲ್ಲೆಲ್ಲಿ ಉಪಯೋಗಕ್ಕೆ ಬರುತ್ತವೆ?

ಕೆಲವೊಂದು ವಾಣಿಜ್ಯ ಉದ್ದೇಶಗಳಿಗೆ ಕ್ಯಾನ್ಸಲ್ ಚೆಕ್ ಗಳು ಬೇಕಾಗುತ್ತವೆ. ಅವು ಯಾವವು ಎಂಬುದರ ಮೇಲೆ ಒಂದು ನೋಟ ಹರಿಸೋಣ..
* ಗ್ರಾಹಕರ ಗುರುತಿಗೆ(ಕೆವೈಸಿ): ಕೆವೈಸಿ ಭರ್ತಿ ಮಾಡುವಾಗ ಈ ಬಗೆಯ ಕ್ಯಾನ್ಸಲ್ಡ್ ಚೆಕ್ ಗಳು ನೆರವಿಗೆ ಬರುತ್ತವೆ. ಅಲ್ಲದೇ ಮ್ಯೂಚುವಲ್ ಫಂಡ್ ಮತ್ತು ಷೇರು ಹೂಡಿಕೆಯಲ್ಲೂ ನೆರವಾಗುತ್ತವೆ.

* ಗಣಕೀಕೃತ ಸೇವೆಗಳು(ಇಸಿಎಸ್): ಇದನ್ನು ಸಾಮಾನ್ಯವಾಗಿ ಮ್ಯೂಚುವಲ್ ಫಂಡ್ ಹೂಡಿಕೆ ವೇಳೆ ಲಾಭ ತರುವುದು. ನಿಮ್ಮ ಖಾತೆಯಿಂದ ಅನಗತ್ಯ ಹಣ ಕಡಿತವಾಗದಂತೆ ನೋಡಿಕೊಳ್ಳುವುದು.[ಕಡಿಮೆ ಅವಧಿಗೆ ಹೆಚ್ಚಿನ ರಿಟರ್ನ್ಸ್ ತರುವ 6 ಯೋಜನೆಗಳು]

* ಮಾಸಿಕ ಕಂತು(ಇಎಮ್ ಐ): ಬ್ಯಾಂಕ್ ಗಳು ಕೊಡಮಾಡುವ ಸಾಲಗಳು ಅಂದರೆ ಶಿಕ್ಷಣ, ಗೃಹ, ಕಾರು ಯಾವುದಕ್ಕೆ ಸಂಬಂಧಿಸಿದ ಸಾಲಕ್ಕೂ ಈ ಕ್ಯಾನ್ಸಲ್ಡ್ ಚೆಕ್ ಗಳು ಕೆಲವೊಮ್ಮೆ ಆಧಾರವಾಗುತ್ತದೆ.

* ವಿಮಾ ಯೋಜನೆಗಳು: ನೀವು ಹೊಸ ವಿಮಾ ಯೋಜನೆ ಆರಂಭಿಸಬೇಕೆಂದು ಅಪೇಕ್ಷೆ ಪಟ್ಟಾಗಲೂ ಕ್ಯಾನ್ಸಲ್ಡ್ ಚೆಕ್ ಗಳು ನೆರವಿಗೆ ಬರುತ್ತವೆ. ಎಂಡೊವ್ ಮೆಂಟ್ ಯೋಜನೆ, ಆರೋಗ್ಯ ವಿಮಾ ಸೌಲಭ್ಯ ಪಡೆಯುವಲ್ಲಿಯೂ ಇವು ಸಹಕಾರಿಯಾಗಿವೆ

* ಹೊಸ ಖಾತೆ ತೆರೆಯಲು: ಹೊಸದಾದ ಡಿಮಾಂಡ್ ಖಾತೆ ತೆರೆಯಲು ಇವು ಬೇಕಾಗುತ್ತವೆ. ಉಳಿದ ದಾಖಲೆಗಳೊಂದಿಗೆ ಕ್ಯಾನ್ಸಲ್ಡ್ ಚೆಕ್ ಹಾಜರುಪಡಿಸಿದರೆ ವ್ಯವಹಾರ ಸುಲಭ.

*ಇಪಿಎಫ್ ವಿತ್ ಡ್ರಾ: ನಿಮ್ಮ ಪಿಎಫ್ ಹಣ ಸಂಪೂರ್ಣ ಹೊರಕ್ಕೆ ತೆಗೆಯಲು ನೀವು ಈ ಬಗೆಯ ಚೆಕ್ ಗಳನ್ನು ಆಧಾರವನ್ನಾಗಿ ನೀಡಬಹುದು.

ಆದರೆ ಪ್ರತಿಯೊಬ್ಬರೂ ಕ್ಯಾನ್ಸಲ್ಡ್ ಚೆಕ್ ಗಳ ಕುರಿತಾಗಿ ಎಚ್ಚರಿಕೆ ವಹಿಸಬೇಕಾದ್ದು ಅಗತ್ಯ. ಇದನ್ನು ಬಳಸಿ ಯಾರೂ ನಿಮ್ಮ ಖಾತೆಯಿಂದ ಹಣ ತೆಗೆಯಲೂ ಸಾಧ್ಯವಿಲ್ಲವಾದರೂ ನಿಮ್ಮ ಖಾತೆಯ ಕೆಲ ಮಾಹಿತಿ ಪಡೆದುಕೊಳ್ಳಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+